For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಡ್ಯಾನ್ಸ್ ಮಾಸ್ಟರ್ ಗಣೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

  |
  ಖ್ಯಾತ ಕೊರಿಯಾಗ್ರಫರ್ ವಿರುದ್ಧ ಪೊಲೀಸ್ ಕಂಪ್ಲೇಂಟ್ | GANESH | POLICE | FIR | FILMIBEAT KANNADA

  ಬಾಲಿವುಡ್ನಲ್ಲಿ ಮೀಟೂ ಪ್ರಕರಣ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಸುದ್ದಿಯಾಗಿದ್ದರು. ನಟಿ ತನುಶ್ರೀ ದತ್ತಾ ಹಿರಿಯ ನಟ ನಾನಾ ಪಾಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.'

  ಈ ಸಂದರ್ಭದಲ್ಲಿ ತನುಶ್ರೀ ದತ್ತಾ ಮಾಡಿದ್ದ ಆರೋಪದ ಬಗ್ಗೆ ಗಣೇಶ್ ಆಚಾರ್ಯ ಮಾತನಾಡಿದ್ದರು. ತನುಶ್ರೀ ಹೇಳುತ್ತಿರುವುದು ಸುಳ್ಳು ಎಂದಿದ್ದರು. ಇದೀಗ, ಸ್ವತಃ ಗಣೇಶ್ ಆಚಾರ್ಯ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಸುತ್ತಿಕೊಂಡಿದೆ.

  ನೃತ್ಯ ಸಂಯೋಜಕಿಯೊಬ್ಬರು ಗಣೇಶ್ ಆಚಾರ್ಯ ಮೇಲೆ ಪೊಲೀಸ್ ದೂರು ನೀಡಿದ್ದಾರೆ. ಅಷ್ಟಕ್ಕೂ, ಬಾಲಿವುಡ್ ಸ್ಟಾರ್ ನೃತ್ಯ ನಿರ್ದೇಶಕನ ಮೇಲೆ ಕೇಳಿ ಬಂದಿರುವ ಆರೋಪ ಏನು? ಯಾರು ಆಕೆ? ಮುಂದೆ ಓದಿ....

  ಅಶ್ಲೀಲ ವಿಡಿಯೋ ನೋಡಲು ಒತ್ತಾಯ

  ಅಶ್ಲೀಲ ವಿಡಿಯೋ ನೋಡಲು ಒತ್ತಾಯ

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಇಂಟ್ರೋ ಹಾಡಿಗೆ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ ಮಾಡಿದ್ದರು. ಈ ಮೂಲಕ ಸ್ಯಾಂಡಲ್ ವುಡ್ಗೂ ಪರಿಚಯವಾಗಿದ್ದರು ಬಾಲಿವುಡ್ ಡ್ಯಾನ್ಸ್ ಮಾಸ್ಟರ್. ಇದೀಗ, ಈ ಮಾಸ್ಟರ್ ಮೇಲೆ ಕಿರುಕುಳದ ಆರೋಪ ಬಂದಿದೆ. 'ವಯಸ್ಕರ ವಿಡಿಯೋಗಳನ್ನು ನೋಡಿ ಎಂದು ಒತ್ತಾಯ ಮಾಡುತ್ತಿದ್ದರು' ಎಂದು 33 ವರ್ಷದ ಮಹಿಳೆ ದೂರಿದ್ದಾರೆ.

  'ಪೈಲ್ವಾನ್' ಸುದೀಪ್ ಗೆ ಸ್ಟೆಪ್ ಹೇಳಿಕೊಡಲು ಬಂದ ಬಾಲಿವುಡ್ ಡ್ಯಾನ್ಸ್ ಮಾಸ್ಟರ್.!'ಪೈಲ್ವಾನ್' ಸುದೀಪ್ ಗೆ ಸ್ಟೆಪ್ ಹೇಳಿಕೊಡಲು ಬಂದ ಬಾಲಿವುಡ್ ಡ್ಯಾನ್ಸ್ ಮಾಸ್ಟರ್.!

  ದೂರಿನಲ್ಲಿ ಏನಿದೆ?

  ದೂರಿನಲ್ಲಿ ಏನಿದೆ?

  ಈ ಕುರಿತು ಮಹಾರಾಷ್ಟ್ರದ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಜೊತೆಗೆ ಮಹಿಳಾ ಆಯೋಗದಲ್ಲೂ ದೂರು ನೀಡಿದ್ದಾರೆ. ಈ ದೂರಿನಲ್ಲಿ ''ಗಣೇಶ್ ಆಚಾರ್ಯ ನನ್ನ ಬಳಿ ಅಶ್ಲೀಲ ವಿಡಿಯೋ ನೋಡು ಎಂದು ಒತ್ತಾಯಿಸುತ್ತಿದ್ದರು ಮತ್ತು ತನಗೆ ಬರುವ ಆದಾಯದಲ್ಲಿ ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು'' ಎಂದು ಉಲ್ಲೇಖಿಸಿದ್ದಾರೆ.

  ಸದಸ್ಯತ್ವ ರದ್ದುಗೊಳಿಸಿದ್ದ ಆರೋಪ

  ಸದಸ್ಯತ್ವ ರದ್ದುಗೊಳಿಸಿದ್ದ ಆರೋಪ

  ತನ್ನ ಬೇಡಿಕೆಗೆ ಮಣಿಯದ ಆಕೆಯ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನವನ್ನು ಗಣೇಶ್ ಆಚಾರ್ಯ ಮಾಡಿದ್ದಾರೆ ಎಂದು ದೂರಿದ್ದಾಳೆ. ನೃತ್ಯ ಸಂಯೋಜಕ ಸಂಘದಲ್ಲಿ ಸದಸ್ಯತ್ವ ರದ್ದು ಮಾಡಿಸಿದ್ದಾರೆ. ಬೇರೆ ನೃತ್ಯ ಸಂಯೋಜಕರಿಗೆ ಪತ್ರದ ಮೂಲಕ ''ಆಕೆಯನ್ನು ಕೆಲಸಕ್ಕೆ ಕರೆದುಕೊಳ್ಳಬೇಡಿ ಎಂದು ಸೂಚಿಸಿದ್ದಾರೆ'' ಎಂದು ಕೂಡ ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

  ಡ್ಯಾನ್ಸರ್ ದುರುಪಯೋಗ ಪಡಿಸಿಕೊಂಡ ಆರೋಪ

  ಡ್ಯಾನ್ಸರ್ ದುರುಪಯೋಗ ಪಡಿಸಿಕೊಂಡ ಆರೋಪ

  ಈ ಹಿಂದೆ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಗಣೇಶ್ ಆಚಾರ್ಯ ವಿರುದ್ಧ ಕಿಡಿ ಕಾರಿದ್ದರು. 'ತಮ್ಮ ನೃತ್ಯಗಾರರನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಡ್ಯಾನ್ಸ್ ಅಸೋಸಿಯೇಷನ್ ನಲ್ಲಿರುವ ತಮ್ಮ ಸ್ಥಾನವನ್ನು ಬಳಸಿಕೊಂಡು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

  English summary
  Woman choreographer has filed complaint against Ganesh Acharya. she said that he forcing her to watch adult videos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X