»   » ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಡ ವಿಶೇಷತೆಗಳಿವು..

ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಡ ವಿಶೇಷತೆಗಳಿವು..

Posted By:
Subscribe to Filmibeat Kannada

ಮೇ 8 ರಂದು ಬಾಲಿವುಡ್ ನಟಿ ಸೋನಂ ಕಪೂರ್ ವೈವಾಹಿಕ ಬದುಕಿಗೆ ಕಾಲಿಟ್ಟರು. ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆಗೆ ಹೊಸ ಬಾಳಿಗೆ ಸೋನಂ ಕಪೂರ್ ನಾಂದಿ ಹಾಡಿದರು.

ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಶೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಶಿಲ್ಪಾ ಶೆಟ್ಟಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಹಿರಿಯ ನಟಿ ರೇಖಾ, ರಾಣಿ ಮುಖರ್ಜಿ, ಕರಣ್ ಜೋಹರ್, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ನ ಖ್ಯಾತನಾಮರು ಸೋನಂ ಕಪೂರ್-ಆನಂದ್ ಅಹುಜಾ ಮದುವೆಯಲ್ಲಿ ಭಾಗವಹಿಸಿದರು.

ಮುಂಬೈನ 'ದಿ ಲೀಲಾ' ಹೋಟೆಲ್ ನಲ್ಲಿ ಸೋನಂ ಕಪೂರ್-ಆನಂದ್ ಅಹುಜಾ ರಿಸೆಪ್ಷನ್ ಪಾರ್ಟಿ ನಡೆಯಿತು. ಈ ಆರತಕ್ಷತೆ ಕಾರ್ಯಕ್ರಮ ಹಲವು ವಿಶೇಷತೆಗಳು ಹಾಗೂ ಅದ್ಭುತಗಳಿಗೆ ಸಾಕ್ಷಿ ಆಯಿತು. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿರಿ...

ಬೋನಿ ಕಪೂರ್ ಮಕ್ಕಳ ಸಂತಸ.!

ಬೋನಿ ಕಪೂರ್ ರವರ ಇಬ್ಬರು ಪತ್ನಿಯರು ಬದುಕಿದ್ದಾಗ ನಾಲ್ಕು ಮಕ್ಕಳು ಒಟ್ಟಿಗೆ ಸೇರಿದ್ರೋ, ಇಲ್ವೋ. ಆದ್ರೆ, ಈಗ ನಾಲ್ವರೂ ಒಂದಾಗಿ, ಒಗ್ಗಟ್ಟಾಗಿ ಖುಷಿ ಖುಷಿಯಿಂದ ಇದ್ದಾರೆ. ಅದಕ್ಕೆ ಸಾಕ್ಷಿ ಸೋನಂ ಕಪೂರ್-ಆನಂದ್ ಅಹುಜಾ ಆರತಕ್ಷತೆಯಲ್ಲಿ ತೆಗೆದ ಈ ಫೋಟೋ.

ಸೋನಂ ಕಪೂರ್ ಮದುವೆಗೆ 'ಈ' ನಟಿಯರೆಲ್ಲ ಯಾಕೆ ಹೋಗ್ಲಿಲ್ಲ.?

ಗರ್ಲ್ ಫ್ರೆಂಡ್ ಜೊತೆಗೆ ಬಂದ ವರುಣ್ ಧವನ್

ಸೋನಂ ಕಪೂರ್ ಆರತಕ್ಷತೆಯಲ್ಲಿ ನಡೆದ ಮತ್ತೊಂದು ಅಚ್ಚರಿ ಅಂದ್ರೆ ಇದೇ.! ಬಾಲಿವುಡ್ ನಟ ವರುಣ್ ಧವನ್ ತಮ್ಮ ಗರ್ಲ್ ಫ್ರೆಂಡ್ ನತಾಶಾ ದಲಾಲ್ ಕೈ ಹಿಡಿದುಕೊಂಡೇ ರಿಸೆಪ್ಷನ್ ಪಾರ್ಟಿಗೆ ಆಗಮಿಸಿದರು.

ಸೋನಂ ಕಪೂರ್ ಮದುವೆಯಲ್ಲಿ ಗಮನ ಸೆಳೆದ ಮಾಜಿ ಪ್ರೇಮಿಗಳು

ಸಲ್ಮಾನ್ ರನ್ನ ಅವಾಯ್ಡ್ ಮಾಡಿದ ಐಶ್ವರ್ಯ

ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಮಾಜಿ ಪ್ರೇಮಿಗಳು. ಸೋನಂ ಕಪೂರ್ ಆರತಕ್ಷತೆಯಲ್ಲಿ ಮಾಜಿ ಪ್ರೇಮಿಗಳು ಒಂದೇ ಸೂರಿನಡಿ ಬಂದರು. ಆದ್ರೆ, ಇಡೀ ರಿಸೆಪ್ಷನ್ ಪಾರ್ಟಿಯಲ್ಲಿ ಸಲ್ಮಾನ್ ರನ್ನ ಐಶ್ವರ್ಯ ರೈ ಅವಾಯ್ಡ್ ಮಾಡಿದರು.

ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರು

ಆಲಿಯಾ-ರಣ್ಬೀರ್ ಮಧ್ಯೆ ಏನಿದೆ, ಏನಿಲ್ಲ.?

ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಈ ನಡುವೆ ಸೋನಂ ಕಪೂರ್ ಆರತಕ್ಷತೆಯಲ್ಲಿ ರಣ್ಬೀರ್ ಹಾಗೂ ಆಲಿಯಾ ಒಟ್ಟಿಗೆ ಎಂಟ್ರಿ ಕೊಟ್ಟು ಗಾಸಿಪ್ ಪಂಡಿತರ ಬಾಯಿಗೆ ಆಹಾರವಾಗಿದ್ದಾರೆ.

ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರ ತಕಧಿಮಿತಾ.!

ಶಾರುಖ್, ಸಲ್ಮಾನ್, ರಣ್ವೀರ್ ಡ್ಯಾನ್ಸ್ ಧಮಾಕಾ

ಸೋನಂ ಕಪೂರ್-ಆನಂದ್ ಅಹುಜಾ ರಿಸೆಪ್ಷನ್ ಪಾರ್ಟಿಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ರಣ್ವೀರ್ ಸಿಂಗ್ ಹಾಗೂ ಅನಿಲ್ ಕಪೂರ್ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

English summary
Read the article to know about Wonders that happened in Sonam Kapoor's wedding reception.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X