ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು?
ಅಮೆರಿಕಾದ ನಿಯತಕಾಲಿಕೆ ಫೋರ್ಬ್ಸ್ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಬಿಡುಗಡೆ ಮಾಡಿದ್ದು, ವಿಶ್ವದ ನಂಬರ್.1 ನಟ ಯಾರು ಎಂಬುದು ಬಹಿರಂಗವಾಗಿದೆ.
ಹಾಲಿವುಡ್ ನಟ ವಾಲ್ಬರ್ಗ್ 435 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಫೋರ್ಬ್ಸ್ ಪಟ್ಟಿಯಲ್ಲಿ ಬಾಲಿವುಡ್ ನ ಮೂರು ನಟರು ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

244 ಕೋಟಿ ರೂಪಾಯಿ ಆದಾಯ ಪಡೆಯುವ ಶಾರೂಖ್ ಖಾನ್ 8ನೇ ಸ್ಥಾನದಲ್ಲಿದ್ರೆ, 237 ಕೋಟಿ ರೂಪಾಯಿ ಆದಾಯದೊಂದಿಗೆ ನಟ ಸಲ್ಮಾನ್ ಖಾನ್ 9ನೇ ಸ್ಥಾನ ಹಾಗೂ 227 ಕೋಟಿ ರೂಪಾಯಿ ಆದಾಯದೊಂದಿಗೆ ಅಕ್ಷಯ್ ಕುಮಾರ್ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನುಳಿದಂತೆ ಟಾಪ್-5 ನಟರ ಸಾಲಿನಲ್ಲಿ ಡ್ವೇನ್ ಜಾನ್ಸನ್, ವಿನ್ ಡೀಸೆಲ್, ಆಡಮ್ ಸ್ಯಾಂಡ್ಲರ್ ಮತ್ತು ಜಾಕಿ ಚಾನ್ ಇದ್ದಾರೆ. ಆದ್ರೆ, ಅಮೀರ್ ಖಾನ್, ಅಮಿತಾಬ್ ಬಚ್ಚನ್, ದಿಪೀಕಾ ಪಡುಕೊಣೆ ಈ ಪಟ್ಟಿಯಲ್ಲಿ ಸ್ಥಾನ ಪಡೆಯದೆ ಇರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡಿದೆ.


Click it and Unblock the Notifications











