For Quick Alerts
  ALLOW NOTIFICATIONS  
  For Daily Alerts

  ಯಶ್ ಚೋಪ್ರಾ 'ಪಾಕಿಸ್ತಾನ ಪ್ರೀತಿ'ಗೆ ಕಾರಣವೇನು?

  |

  ಇತ್ತೀಚಿಗಷ್ಟೇ ವಿಧಿವಶವಾಗಿರುವ ಬಾಲಿವುಡ್ ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರಿಗೆ ಪಾಕಿಸ್ತಾನದ ಮೇಲೆ ವಿಪರೀತ ಮೋಹವಿತ್ತು ಎನ್ನುವ ಅಂಶ ಇತ್ತೀಚಿಗೆ ಬಹಿರಂಗವಾಗಿದೆ. ಪಾಕಿಸ್ತಾನದ ನಿರ್ದೇಶಕಿ ಇರಾಮ್ ಪರ್ವೀನ್ ಬಿಲಾಲ್, ಯಶ್ ಚೋಪ್ರಾ ಅವರನ್ನು ಆಗಾಗ ಭೇಟಿಯಾಗಲು ಮುಂಬೈಗೆ ಬರುತ್ತಿದ್ದರಂತೆ. ಆ ವೇಳೆ ಅದೆಷ್ಟೇ ಬಿಜಿಯಾಗಿದ್ದರೂ ಯಶ್ ಚೋಪ್ರಾ, ಈ ನಿರ್ದೇಶಕಿಯನ್ನು ಕನಿಷ್ಟ 5 ರಿಂದ 10 ನಿಮಿಷ ಮಾತನಾಡಿಯೇ ಕೆಲಸ ಮುಂದುವರಿಸುತ್ತಿದ್ದರಂತೆ.

  ಐಎಎನ್ ಎಸ್ ಜೊತೆಗಿನ ತಮ್ಮ ಮಾತುಕತೆಯಲ್ಲಿ ಪಾಕಿಸ್ತಾನದ ನಿರ್ದೇಶಕಿ ಇರಾಮ್ ಪರ್ವೀನ್ ಬಿಲಾಲ್ "ನನಗೆ ಮುಂಬೈ ಜೊತೆ ದೀರ್ಘ ಕಾಲದ ಪ್ರೀತಿ, ಅಭಿಮಾನದ ಸಂಬಂಧವಿದೆ. 2004 ರಲ್ಲಿ ನಾನು ಮೊದಲ ಬಾರಿಗೆ ಮುಂಬೈಗೆ ಬಂದಿದ್ದೆ. ನಂತರ ಪ್ರತಿ ಬಾರಿ ಇಲ್ಲಿಗೆ ಬಂದಾಗಲೂ ನಾನು ಅವರನ್ನು ಭೇಟಿಯಾಗದೇ ಹೋಗುತ್ತಿರಲಿಲ್ಲ. ಆದರೆ ಈಗ ಯಶ್ ಜಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಇನ್ನೆಂದೂ ಅವರನ್ನು ನಾನು ಭೇಟಿಯಾಗಲಾರೆ ಎಂಬುದು ನನಗೆ ತೀರಾ ದುಃಖಕರ ಸಂಗತಿ" ಎಂದಿದ್ದಾರೆ.

  ಮುಂದುವರಿದ ಇರಾಮ್ ಪರ್ವೀನ್ ಬಿಲಾಲ್ "ಯಶ್ ಚೋಪ್ರಾ ಅವರು ಹುಟ್ಟಿದ್ದು ಪಾಕಿಸ್ತಾನದ ಲಾಹೋರ್ ನಲ್ಲಿ. ಹೀಗಾಗಿ ಯಾವತ್ತೂ ಅವರು ಪಾಕಿಸ್ತಾನದ ಬಗ್ಗೆ ಪ್ರೀತಿ ಹಾಗೂ ಮೃದು ಧೋರಣೆ ಹೊಂದಿದ್ದರು. ಪ್ರತಿಯೊಬ್ಬರೂ ತಮ್ಮ ಹುಟ್ಟೂರಿನ ಬಗ್ಗೆ ಪ್ರೀತಿ, ಮೋಹ ಹೊಂದಿರುವಂತೆ ಚೋಪ್ರಾ ಕೂಡ ಸಹಜವಾಗಿಯೇ ಲಾಹೋರ್ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರು. 'ವೀರ್ ಝಾರಾ ಚಿತ್ರದ ಬಿಡುಗಡೆ ವೇಳೆ ನಾನು ಮುಂಬೈನಲ್ಲಿದ್ದೆ. ಆಗ ನನಗೆ ನನ್ನ ಮಿತ್ರರೊಬ್ಬರ ಮೂಲಕ ಯಶ್ ಚೋಪ್ರಾ ಪರಿಚಯವಾಯ್ತು.

  ಅವರು ನನ್ನನ್ನು ತಮ್ಮ ಆತ್ಮೀಯರ ಪಟ್ಟಿಯಲ್ಲಿ ಸೇರಿಸಿಕೊಂಡರು. ನಂತರ ಸಾಕಷ್ಟು ಬಾರಿ ನಮ್ಮಿಬ್ಬರ ಭೇಟಿ ನಡೆದಿದೆ. ಜನರು ಯಾವತ್ತೂ ಆಕ್ಟಿವ್ ಆಗಿರಬೇಕೆಂದು ಅವರು ಬಯಸುತ್ತಿದ್ದರು. ರಾಜ್ ಕಪೋರ್ ಶೈಲಿಯಲ್ಲಿ "ಆಟ ನಡೆಯುತ್ತಿರಲೇಬೇಕು..." ಎನ್ನುತ್ತಿದ್ದರು ಯಶ್ ಜಿ. ಅವರು ಈಗ ವಿಧಿವಶರಾಗಿದ್ದಾರೆ. ನನಗೆ ಅವರ ಕುಟುಂಬದಲ್ಲಿ ಬೇರೆ ಯಾರೊಬ್ಬರ ಪರಿಚಯವಿಲ್ಲ. ಆದರೂ ನಾನು ಹೋಗಿ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  Pakistani director Iram Parveen Bilal revealed filmmaker Yash Chopra's soft corner for Pakistan.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X