Just In
Don't Miss!
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- News
ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬೇಡಿಕೆ ಹೆಚ್ಚಿದಂತೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳ
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರಲ್ಲಿ ಅತಿ ಹೆಚ್ಚು ಬಳಕೆಯಾದ ಸಿನಿಮಾ ಹ್ಯಾಷ್‌ಟ್ಯಾಗ್ ಯಾವುದು?
2020ನೇ ವರ್ಷ ಸಿನಿಮಾ ಇಂಡಸ್ಟ್ರಿಗೆ ಖುಷಿ ಕೊಡಲಿಲ್ಲ. ಕೊರೊನಾ ವೈರಸ್ ಕಾರಣದಿಂದ ಏಳೆಂಟು ತಿಂಗಳು ಚಿತ್ರರಂಗ ಸ್ತಬ್ದವಾಗಿತ್ತು. ಶೂಟಿಂಗ್ ನಿಂತಿತ್ತು. ಚಿತ್ರಮಂದಿರಗಳು ಪ್ರದರ್ಶನ ಸ್ಥಗಿತಗೊಳಿಸಿತ್ತು. ಕಲಾವಿದರು ಮೇಕಪ್ ಹಾಕದೆ ಮನೆಯಲ್ಲಿ ಕುಳಿತಿದ್ದರು.
ಇಂತಹ ಕಷ್ಟದ ಸಂದರ್ಭದಲ್ಲೂ ಕೆಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾದವು. ಕೆಲವು ಸಿನಿಮಾಗಳು ಶೂಟಿಂಗ್, ಸಾಂಗ್, ಫಸ್ಟ್ ಲುಕ್ ಎನ್ನುವ ವಿಚಾರಗಳಿಂದ ಸುದ್ದಿಯಲ್ಲಿದ್ದವು. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಆ ಚಿತ್ರಗಳಿಗೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್ ಹೆಚ್ಚು ಚರ್ಚೆಯಲ್ಲಿತ್ತು. ಹಾಗಾದ್ರೆ, ಕೊರೊನಾ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಾದ ಸಿನಿಮಾ ಹ್ಯಾಷ್‌ಟ್ಯಾಗ್ ಯಾವುದು? ಮುಂದೆ ಓದಿ....
2020 ಕನ್ನಡ ಚಿತ್ರರಂಗ; ಕೊರೊನಾ ವರ್ಷದಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು

ಮೂರನೇ ಸ್ಥಾನದಲ್ಲಿ ಸರಿಲೇರು ನೀಕೆವ್ವರು
2020ನೇ ವರ್ಷದ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಬಳಕೆಯಾದ ಸಿನಿಮಾ ಹ್ಯಾಷ್‌ಟ್ಯಾಗ್ ಪಟ್ಟಿಯಲ್ಲಿ ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು ಚಿತ್ರದ #SarileruNeekevvaru ಹ್ಯಾಷ್‌ಟ್ಯಾಗ್ ಮೂರನೇ ಸ್ಥಾನದಲ್ಲಿದೆ. ಜನವರಿ 11, 2020 ರಂದು ಈ ಸಿನಿಮಾ ತೆರೆಕಂಡಿತ್ತು. ಚಿತ್ರ ಬಾಕ್ಸ್ ಆಫೀಸ್ ಹಾಗೂ ವಿಮರ್ಶಾತ್ಮಕವಾಗಿಯೂ ಹಿಟ್ ಆಗಿತ್ತು.

ಎರಡನೇ ಸ್ಥಾನದಲ್ಲಿ ಸೂರ್ಯ
2020ರಲ್ಲಿ ತೆರೆಕಂಡು ದೊಡ್ಡ ಮಟ್ಟದ ಸಕ್ಸಸ್ ಕಂಡ ಮತ್ತೊಂದು ಚಿತ್ರ ಸೂರರೈ ಪೊಟ್ರು. ತಮಿಳು ನಟ ಸೂರ್ಯ ಅಭಿನಯದ ಈ ಚಿತ್ರದ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ #SooraraiPottru ಈ ವರ್ಷ ಅತಿ ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
2020ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ 26 ಸ್ಯಾಂಡಲ್‌ವುಡ್ ತಾರೆಯರು

ಮೊದಲನೇ ಸ್ಥಾನದಲ್ಲಿ ಸುಶಾಂತ್
ಸಿನಿಮಾ ಜಗತ್ತಿನಲ್ಲಿ ಈ ವರ್ಷ ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್ ಪಟ್ಟಿಯಲ್ಲಿ ಸುಶಾಂತ್ ಸಿಂಗ್ ನಟನೆಯ ದಿಲ್ ಬೇಚಾರಾ (#DilBechara) ಹ್ಯಾಷ್‌ಟ್ಯಾಗ್ ಮೊದಲನೇ ಸ್ಥಾನದಲ್ಲಿದೆ. ಸುಶಾಂತ್ ಸಾವಿನ ಬಳಿಕ ಆನ್‌ಲೈನ್‌ನಲ್ಲಿ ಈ ಸಿನಿಮಾ ತೆರೆಕಂಡಿತ್ತು. ಇದು ಸುಶಾಂತ್ ಕಾಣಿಸಿಕೊಂಡಿದ್ದ ಕೊನೆಯ ಚಿತ್ರ.

ಈ ವರ್ಷ ತೆರೆಕಂಡ ಚಿತ್ರಗಳು ಮಾತ್ರ
ಅಂದ್ಹಾಗೆ, 2020ನೇ ವರ್ಷದಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಮಾತ್ರ ಈ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಜನವರಿ 1 ರಿಂದ ನವೆಂಬರ್ 15ವರೆಗೂ ತೆರೆಕಂಡ ಚಿತ್ರಗಳಿಗೆ ಸಂಬಂಧಿಸಿದ ಹ್ಯಾಷ್‌ಟ್ಯಾಗ್ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಸುಶಾಂತ್ ಸಿಂಗ್ ಸಿನಿಮಾನೇ ಮೊದಲ ಸ್ಥಾನದಲ್ಲಿದೆ.