For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಟ್ಟ 'ಸಂಸ್ಕಾರ' ಚಿತ್ರಕ್ಕೆ 50 ವರ್ಷ

  |

  ಭಾರತದ ವಿವಿಧ ಭಾಷೆಗಳಲ್ಲಿ ಸಿನಿಮಾ ನಿರ್ಮಾಣದ ಪ್ರಯತ್ನಗಳು ಶುರುವಾದ ಸಂದರ್ಭದಲ್ಲಿ ಕನ್ನಡದಲ್ಲಿಯೂ ಸಿನಿಮಾ ಮಾಡುವ ಹೋರಾಟಗಳು ನಡೆದಿದ್ದವು. ಪೌರಾಣಿಕ, ಸಾಮಾಜಿಕ ವಸ್ತುಗಳನ್ನು ಒಳಗೊಂಡ ಸಿನಿಮಾಗಳನ್ನು ಮಾಡುತ್ತಿದ್ದ ಕನ್ನಡ ಚಿತ್ರರಂಗ ಕಾದಂಬರಿ ಆಧಾರಿತ ಚಿತ್ರಗಳತ್ತ ಹೊರಳಿತ್ತು. ಆದರೆ ಅವೆಲ್ಲವೂ ಕಮರ್ಷಿಯಲ್ ಗುಣವನ್ನು ಹೊಂದಿದ್ದವು.

  ಬಿಗ್ ಬಾಸ್ ದಿವಾಕರ್ ವಿರುದ್ಧ ದೂರು ಕೊಡಲು ಮುಂದಾದ ಅಹೋರಾತ್ರ..?

  ಚಿತ್ರರಂಗ ಕಲಾತ್ಮಕ ಚಿತ್ರಗಳ ಪರಂಪರೆಯನ್ನು ಹುಟ್ಟುಹಾಕಿದ್ದು 70ರ ದಶಕದಲ್ಲಿ. ಕನ್ನಡದಲ್ಲಿ ಆ ಸಂದರ್ಭದಲ್ಲಿ ಸೃಷ್ಟಿಯಾದ ಚಿತ್ರಗಳು ಪರಭಾಷೆಯ ಚಿತ್ರರಂಗಗಳಲ್ಲಿಯೂ ಅಚ್ಚರಿ ಮೂಡಿಸಿದ್ದವು. ಕಲಾತ್ಮಕ ಹಾಗೂ ಗುಣಮಟ್ಟದ ಚಿತ್ರಗಳು ಕನ್ನಡ ಚಿತ್ರರಂಗದ ಪರಂಪರೆಯ ದಿಕ್ಕನ್ನು ಬದಲಿಸಿತ್ತು. ಅದರಲ್ಲಿ ನಮ್ಮ ಚಿತ್ರರಂಗಕ್ಕೆ ಖ್ಯಾತಿ ತಂದುಕೊಟ್ಟಿದ್ದು 'ಸಂಸ್ಕಾರ' ಚಿತ್ರ.

  ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿದ ಅಪರೂಪದ ಚಿತ್ರ ಸಂಸ್ಕಾರ

  ಸುವರ್ಣ ಸಂಭ್ರಮ

  ಸುವರ್ಣ ಸಂಭ್ರಮ

  ಕನ್ನಡಕ್ಕೆ ಮೊದಲ 'ಸ್ವರ್ಣ ಕಮಲ' ಪ್ರಶಸ್ತಿ ತಂದುಕೊಟ್ಟ ಚಿತ್ರ ಸಂಸ್ಕಾರ. ಈ ಚಿತ್ರ ಬಿಡುಗಡೆಯಾಗಿದ್ದು 1970ರ ಮೇ 13ರಂದು. ಅಂದರೆ ಸರಿಯಾಗಿ 50 ವರ್ಷಗಳ ಹಿಂದೆ. ಕನ್ನಡ ಚಿತ್ರರಂಗದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದ ಚಿತ್ರಕ್ಕೆ ಇಂದು ಸುವರ್ಣ ಸಂಭ್ರಮ. ಕೇವಲ 90 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿಯೂ ಭರ್ಜರಿ ಲಾಭ ಗಳಿಸಿತ್ತು.

  ಸಂಸ್ಕಾರ ಕಾದಂಬರಿ

  ಸಂಸ್ಕಾರ ಕಾದಂಬರಿ

  ಯು.ಆರ್. ಅನಂತಮೂರ್ತಿ ಕಾದಂಬರಿ 'ಸಂಸ್ಕಾರ' ಆಧಾರಿತ ಅದೇ ಹೆಸರಿನ ಚಿತ್ರವನ್ನು ಪಟ್ಟಾಭಿರಾಮ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿದ್ದರು. ಗಿರೀಶ್ ಕಾರ್ನಾಡ್, ಸ್ನೇಹಲತಾ ರೆಡ್ಡಿ, ಪಿ. ಲಂಕೇಶ್, ಜಯರಾಮ್, ಬಿ.ಎಸ್. ರಾಮರಾವ್, ಲಕ್ಷ್ಮಣರಾವ್ ಮುಂತಾದವರು ನಟಿಸಿದ್ದರು.

  ಸ್ವರ್ಣ ಕಮಲ ಗೆದ್ದ 'ಸಂಸ್ಕಾರ' ಚಿತ್ರದ ಮೇಕಿಂಗ್

  ಸೆನ್ಸಾರ್ ಬೋರ್ಡ್ ನಿಷೇಧ

  ಸೆನ್ಸಾರ್ ಬೋರ್ಡ್ ನಿಷೇಧ

  ಒಂದು ಜಾತಿಯ ಭಾವನೆಗಳನ್ನು ಕೆರಳಿಸುವಂತಹ ಹಾಗೂ ಇತರೆ ವಿವಾದಾತ್ಮಕ ಸಂಗತಿಗಳು ಚಿತ್ರದಲ್ಲಿವೆ ಎಂಬ ಆಕ್ಷೇಪ ವ್ಯಕ್ತಪಡಿಸಿ ಮದ್ರಾಸ್ ಸೆನ್ಸಾರ್ ಬೋರ್ಡ್, ಚಿತ್ರದ ಮೇಲೆ ನಿಷೇಧ ಹೇರಿತು. ಕೊನೆಗೆ ಸಚಿವಾಲಯದ ಮೊರೆ ಹೋಗಿ ನಿಷೇಧ ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಹೀಗೆ ಸರ್ಕಾರಿ ಸಂಸ್ಥೆಯಿಂದ ನಿಷೇಧಕ್ಕೆ ಒಳಗಾಗಿದ್ದ ಸಿನಿಮಾವೊಂದು ಸರ್ಕಾರದಿಂದಲೇ ಪ್ರಶಸ್ತಿಗಳನ್ನು ಪಡೆದುಕೊಂಡಿತು.

  ಹಲವು ಪ್ರಶಸ್ತಿಗಳು

  ಹಲವು ಪ್ರಶಸ್ತಿಗಳು

  1970-71ರ ಅತ್ಯುತ್ತಮ ಚಿತ್ರವೆಂದು ಸ್ವರ್ಣ ಕಮಲ ರಾಷ್ಟ್ರಪ್ರಶಸ್ತಿ, ನಿರ್ದೇಶಕ ಪಟ್ಟಾಭಿರಾಮ ರೆಡ್ಡಿ ಅವರಿಗೆ ರಜತ ಕಮಲ ಪ್ರಶಸ್ತಿ, ಅಷ್ಟೇ ಅಲ್ಲದೆ ಎರಡನೆಯ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ಪೋಷಕ ನಟ ಎಂಬ ನಾಲ್ಕು ರಾಜ್ಯ ಪ್ರಶಸ್ತಿಗಳು ಕೂಡ ಒಲಿದವು. 1972ರ ಲೊಕಾನೋ ಚಿತ್ರೋತ್ಸವದಲ್ಲಿಯೂ ಪ್ರಶಸ್ತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು.

  English summary
  National award winner movie Samskara's 50 years anniversary. Pattabhirama Reddy directed movie was released on May 13, 1970.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X