twitter
    For Quick Alerts
    ALLOW NOTIFICATIONS  
    For Daily Alerts

    ಬೋಲ್ಡ್ ನಟಿ ರಂಭಾಗೆ 46ನೇ ಹುಟ್ಟುಹಬ್ಬ: ಇಂದ್ರ ಗೆದ್ದ ನಟಿ ಈಗೇನು ಮಾಡುತ್ತಿದ್ದಾರೆ?

    |

    90ರ ದಶಕದ ಸಿನಿ ಪ್ರಿಯರಿಗೆ ರಂಭಾ ಪರಿಚಯ ಇಲ್ಲದೆ ಇರಲು ಸಾಧ್ಯವೇ ಇಲ್ಲ. ಅಂದಿನ ಕಾಲಕ್ಕೆ ರಂಭಾ ಬೋಲ್ಡ್ ಅಂಡ್ ಗ್ಲಾಮರಸ್‌ ನಟಿಯಾಗಿ ಗುರುತಿಸಿಕೊಂಡಿದ್ದರು. ಗ್ಲಾಮರಸ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಕೇವಲ ದಕ್ಷಿಣ ಭಾರತದ ಸಿನಿಮಾಗಳಲ್ಲಷ್ಟೇ ನಟಿಸಿಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ, ಬೋಜ್‌ಪುರಿ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಕನ್ನಡದ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿ ಕನ್ನಡದ ನಟಿಯೇ ಆಗಿದ್ದಾರೆ. ಜಗ್ಗೇಶ್, ಶಿವರಾಜ್‌ಕುಮಾರ್, ರವಿಚಂದ್ರನ್, ದರ್ಶನ್, ಉಪೇಂದ್ರ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ರಂಭಾ ಪರಭಾಷೆಯ ನಟಿಯೆಂಬ ಭಾವನೆ ಕನ್ನಡಿಗರಿಗೆ ಬಂದೇ ಇಲ್ಲ.

    ಮೂರನೇ ಮಗುವಿಗೆ ಜನ್ಮ ನೀಡಿದ ಬಹುಭಾಷಾ ನಟಿ ರಂಭಾಮೂರನೇ ಮಗುವಿಗೆ ಜನ್ಮ ನೀಡಿದ ಬಹುಭಾಷಾ ನಟಿ ರಂಭಾ

    ಬಹುಭಾಷಾ ನಟಿ ರಂಭಾ ಇಂದು ( ಜೂನ್ 05) ಹುಟ್ಟುಹಬ್ಬವನ್ನು ಆಚರಿಸಿಕೊಳ್ಲುತ್ತಿದ್ದಾರೆ. 46ನೇ ವರುಷಕ್ಕೆ ಕಾಲಿಟ್ಟಿರುವ ನಟಿ ಸದ್ಯ ಸಿನಿಮಾದಿಂದ ದೂರ ಉಳಿದಿದ್ದು, ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. 2010ರಲ್ಲಿ ಇಂದ್ರ ಕುಮಾರ್ ಪದ್ಮನಾಭನ್ ಎಂಬುವವರನ್ನು ವಿವಾಹವಾಗಿದ್ದ ನಟಿ ಬಿಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಹಲವು ಯಶಸ್ಸಿ ಸಿನಿಮಾಗಳನ್ನು ನೀಡಿರುವ ನಟಿಯ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿಗಳು ಇಲ್ಲಿವೆ.

    3ನೇ ಮಗುವಿಗೆ ತಾಯಿಯಾದ ರಂಭಾ: ಅದ್ಧೂರಿಯಾಗಿತ್ತು ಸೀಮಂತ ಶಾಸ್ತ್ರ3ನೇ ಮಗುವಿಗೆ ತಾಯಿಯಾದ ರಂಭಾ: ಅದ್ಧೂರಿಯಾಗಿತ್ತು ಸೀಮಂತ ಶಾಸ್ತ್ರ

    ರಂಭಾ ಮೂಲ ಹೆಸರು ಬೇರೆ?

    ರಂಭಾ ಮೂಲ ಹೆಸರು ಬೇರೆ?

    ರಂಭಾ ಹುಟ್ಟೂರು ಆಂಧ್ರ ಪ್ರದೇಶದ ವಿಜಯವಾಡ. ತೆಲುಗು ಕುಟುಂಬದಲ್ಲಿ ಜನಿಸಿದ ನಟಿಯ ಅಸಲಿ ಹೆಸರು ವಿಜಯಲಕ್ಷ್ಮಿ ಯೇಡಿ. ಆದರೆ, ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ರಂಭಾ ಎಂದು ಬದಲಾಯಿಸಿಕೊಂಡರು. ರಂಭಾ ಶಾಲೆಯ ಕಾರ್ಯಕ್ರಮವೊಂದರಲ್ಲಿ ಅಮ್ಮವರು ಎಂಬ ಪಾತ್ರ ಮಾಡಿದ್ದರು. ಆಗ ರಂಭಾ 7ನೇ ತರಗತಿ ವಿದ್ಯಾರ್ಥಿ. ಈಕೆ ನೋಡಿ ಮಲಯಾಳಂ ನಿರ್ದೇಶಕ ಹರಿಹರನ್ 'ಸರ್ಗಂ' ಎಂಬ ಸಿನಿಮಾಗೆ ಅವಕಾಶ ನೀಡಿದ್ದರು. ಸಿನಿಮಾಗೆ ಕಾಲಿಟ್ಟ ಬಳಿಕ ಅಮೃತಾ ಎಂದು ಹೆಸರು ಬದಲಿಸಿಕೊಂಡಿದ್ದರು. ಆ ಬಳಿಕ ರಂಭಾ ಎಂದು ಮತ್ತೆ ಹೆಸರು ಬದಲಿಸಿಕೊಂಡಿದ್ದರು.

    15ನೇ ವರ್ಷಕ್ಕೆ ಚಿತ್ರರಂಗಕ್ಕೆ ಎಂಟ್ರಿ

    15ನೇ ವರ್ಷಕ್ಕೆ ಚಿತ್ರರಂಗಕ್ಕೆ ಎಂಟ್ರಿ

    ರಂಭಾಗೆ ಅವಕಾಶಗಳು ಒಂದರ ಹಿಂದೊಂದು ಹರಿದು ಬರುತ್ತಿದ್ದವು. ಈ ಕಾರಣಕ್ಕೆ ಬಹುಭಾಷಾ ನಟಿ 15ನೇ ವರ್ಷಕ್ಕೆ ಶಿಕ್ಷಣಕ್ಕೆ ಗುಡ್‌ ಬೈ ಹೇಳಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. 1992ರ ಬಳಿಕ ಸಿನಿಮಾಗಳಲ್ಲಿ ರಂಭಾ ಬ್ಯುಸಿಯಾದರು.

    ರಂಭಾ ಕನ್ನಡ ಸಿನಿಮಾಗಳ್ಯಾವುವು?

    ರಂಭಾ ಕನ್ನಡ ಸಿನಿಮಾಗಳ್ಯಾವುವು?

    ನಟಿ ರಂಭಾ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸರ್ವರ್ ಸೊಮಣ್ಣ' ರಂಭಾ ನಟಿಸಿದ ಮೊದಲ ಕನ್ನಡ ಸಿನಿಮಾ, 'ಕೆಂಪಯ್ಯ ಐಪಿಎಸ್', 'ಓ ಪ್ರೇಮವೇ', 'ಪಾಂಚಾಲಿ', 'ಭಾವ ಬಾಮೈದ', 'ಸಾಹುಕಾರ', 'ಪಾಂಡುರಂಗ ವಿಠಲ', 'ಗಂಡುಗಲಿ ಕುಮಾರರಾಮ', 'ಅನಾಥರು' ಅಂತಹ ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ದಿವ್ಯ ಭಾರತಿ ಹಾಗಿದ್ದರು ರಂಭಾ

    ದಿವ್ಯ ಭಾರತಿ ಹಾಗಿದ್ದರು ರಂಭಾ

    ರಂಭಾ ದಕ್ಷಿಣದ ಸಿನಿಮಾಗಳ ಜೊತೆ ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಜುಡ್ವ' ಸಿನಿಮಾಗೆ ಸಲ್ಮಾನ್ ಖಾನ್‌ಗೆ ನಾಯಕಿಯಾಗಿದ್ದರು. ಬಳಿಕ ಸಲ್ಮಾನ್ ಖಾನ್ ಜೊತೆ 'ಬಂಧನ್' ಅನ್ನುವ ಸಿನಿಮಾದಲ್ಲೂ ನಟಿಸಿದ್ದರು. ಈ ವೇಳೆ ಬಾಲಿವುಡ್ ಮಂದಿ ರಂಭಾರನ್ನು ದಿವ್ಯ ಭಾರತಿಗೆ ಹೋಲಿಸಲಾಗಿತ್ತು.

    ಇಂದ್ರ ಪದ್ಮನಾಭನ್ ಜೊತೆ ರಂಭಾ ವಿವಾಹ

    ಇಂದ್ರ ಪದ್ಮನಾಭನ್ ಜೊತೆ ರಂಭಾ ವಿವಾಹ

    ಸಿನಿಮಾಗಳಲ್ಲಿ ಇನ್ನೂ ನಟಿಸುತ್ತಿರುವಾಗಲೇ ರಂಭಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಭಾರತೀಯ ಮೂಲದ ಕೆನಡಾ ಉದ್ಯಮಿ ಇಂದ್ರ ಕುಮಾರ್ ಪದ್ಮನಾಭನ್ ಎಂಬುವವರನ್ನು ವಿವಾಹವಾದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗುವಿದ್ದಾನೆ.

    ರಂಭಾ ಕೌಟುಂಬಿಕ ಜೀವನದಲ್ಲಿ ಕಲಹ

    ರಂಭಾ ಕೌಟುಂಬಿಕ ಜೀವನದಲ್ಲಿ ಕಲಹ

    ನಟಿ ರಂಭಾ ವೈವಾಹಿಕ ಜೀವನದಲ್ಲಿ ಕಲಹವಿತ್ತು. ಈ ಕಾರಣಕ್ಕೆ ರಂಭಾ 2017ರಲ್ಲಿ ಭಾರತಕ್ಕೆ ಮರಳಿದ್ದರು. ಪತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ 2017ರಿಂದ 2020ರವರೆಗೂ ಮತ್ತೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಆದ್ರೀಗ ಇಬ್ಬರೂ ಭಿನ್ನಪ್ರಾಯ ಮರೆತು ಮತ್ತೆ ಒಂದಾಗಿದ್ದಾರೆ.

    English summary
    Actress Rambha 46th Birthday: Interesting Facts About Her Biography And Life Style, Know More.
    Monday, June 6, 2022, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X