For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾ ಅಕಾಲಿಕ ಸಾವು: ಜಾತಕ ದೋಷದ ಬಗ್ಗೆ ಜೋತಿಷಿ ಅಮ್ಮಣ್ಣಾಯ ಹೇಳಿದ್ದೇನು?

  By ಫಿಲಂ ಡೆಸ್ಕ್
  |

  ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಮೂಡಿಸಿರುವ ಆಘಾತ ಸಣ್ಣದೇನಲ್ಲ. ಚಿತ್ರರಂಗ ಮಾತ್ರವಲ್ಲ, ಜನಸಾಮಾನ್ಯರನ್ನೂ ಈ ಅಗಲಿಕೆ ತೀವ್ರವಾಗಿ ಕಾಡುತ್ತಿದೆ. ಚಿರಂಜೀವಿ ಸರ್ಜಾ ಅಗಲಿಕೆಯ ಬೆನ್ನಲ್ಲೇ ನಟ ಜಗ್ಗೇಶ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದರು.

  ದರ್ಶನ್ ಸಿನಿಮಾ ಶೀರ್ಷಿಕೆಯನ್ನು ತನ್ನ ಸಿನಿಮಾಗೆ ಇಟ್ಟ ಅನುಷ್ಕಾ ಶರ್ಮಾ | Anushka Sharma | Bul Bul

  ತನ್ನ ಹಾಗೂ ಮೇಘನಾ ಮದುವೆಗೆ ಸಹಾಯ ಮಾಡುವಂತೆ ಚಿರಂಜೀವಿ ಸರ್ಜಾ ಫೋನ್ ಮಾಡಿ ಕೇಳಿದ್ದರು. ಹಾಗಾಗಿ ಚಿರಂಜೀವಿ ಹಾಗೂ ಮೇಘನಾ ರಾಜ್ ಅವರ ಜಾತಕವನ್ನು ಖ್ಯಾತ ಜೋತಿಷಿಯಾದ ಪ್ರಕಾಶ್ ಅಮ್ಮಣ್ಣಾಯ ಅವರ ಬಳಿ ತೆಗೆದುಕೊಂಡು ಹೋಗಿ ತೋರಿಸಿದ್ದೆ. ಜಾತಕದಲ್ಲಿ ಅಷ್ಟಮ ಕುಜ ದೋಷವಿದೆ. ಇದನ್ನು ಪರಿಹಾರ ಮಾಡಿಸಿಕೊಳ್ಳಬೇಕು. ಪೂಜೆ ಮಾಡಿಸಿ ಪರಿಹಾರ ಮಾಡಿಸಿಕೊಳ್ಳಿ ಎಂಬುದಾಗಿ ಜೋತಿಷಿ ಪ್ರಕಾಶ್ ಅಮ್ಮಣ್ಣಾಯ ಸೂಚಿಸಿದ್ದರು. ಆದರೆ ನಂತರ ಪರಿಹಾರ ಮಾಡಿಸಿದ್ದರೇ ಎಂಬುದು ತಿಳಿದಿರಲಿಲ್ಲ ಎಂದು ಜಗ್ಗೇಶ್ ಹೇಳಿದ್ದರು. ಇದರ ಬಗ್ಗೆ ಸ್ವತಃ ಜೋತಿಷಿ ಪ್ರಕಾಶ್ ಅಮ್ಮಣ್ಣಾಯ 'ಫಿಲ್ಮಿ ಬೀಟ್' ಜತೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ದೋಷ ಕಂಡುಬಂದಿತ್ತು

  ದೋಷ ಕಂಡುಬಂದಿತ್ತು

  ಚಿರಂಜೀವಿ ಮತ್ತು ಮೇಘನಾ ಅವರ ಜಾತಕಗಳನ್ನು ನನ್ನ ಬಳಿ ತಂದಿದ್ದರು. ಅದರಲ್ಲಿ ದೋಷ ಇತ್ತು. ವಿಚ್ಚೇದನ ಯೋಗ ಇರುವುದು ಗೊತ್ತಾಗಿತ್ತು. ವಿಚ್ಚೇದನ ಯೋಗ ಎಂದರೆ ಡೈವೋರ್ಸ್ ಆಗಬಹುದು ಅಥವಾ ಗಂಡನ ಸಾವು ಅಥವಾ ಹೇಗೆ ಬೇಕಾದರೂ ಆಗಬಹುದು. ಅಂದರೆ ಗಂಡ ಮತ್ತು ಹೆಂಡತಿ ದೂರವಾಗುವುದು ಖಚಿತ. ನನಗೂ ಮೊದಲು ಯಾರೋ ಜೋತಿಷಿ ಹೇಳಿದ್ದರಂತೆ, ಈ ಜಾತಕಗಳು ಹೊಂದಲು ಸಾಧ್ಯವೇ ಇಲ್ಲ ಎಂದು. ಆಗ ಇವರು ಮದುವೆಯನ್ನು ನಿಲ್ಲಿಸಿದ್ದರಂತೆ.

  ಚಿರು ಸಾವಿಗೆ ಕಾರಣವಾಯ್ತಾ ಜಾತಕ ದೋಷ? ಜೋತಿಷಿ ಹೇಳಿದ ಕಥೆ ಬಿಚ್ಚಿಟ್ಟ ಜಗ್ಗೇಶ್

  ಪರಿಹಾರ ಮಾಡಲು ಸೂಚಿಸಿದ್ದೆ

  ಪರಿಹಾರ ಮಾಡಲು ಸೂಚಿಸಿದ್ದೆ

  ಬಳಿಕ ಇದರ ಬಗ್ಗೆ ಜಗ್ಗೇಶ್ ನನಗೆ ಹೇಳಿದರು. ನನ್ನನ್ನು ಕೇಳಿ ಪರಿಹಾರ ಸೂಚಿಸಬೇಕು ಎಂದಿದ್ದರು. ಅರ್ಜುನ್ ಸರ್ಜಾ ಕೂಡ ನನ್ನ ಬಳಿ ಮಾತನಾಡಿದ್ದರು. ಜಾತಕದಲ್ಲಿ ಇಂತಹ ದೋಷ ಇದೆ. ಪರಿಹಾರ ಮಾಡಿಕೊಡಿ. ದಿವ್ಯಬಲ ಉಂಟು. ಪರಿಹಾರ ಮಾಡಿಕೊಟ್ಟರೆ ಮದುವೆಯಾಗಲು ಅಡ್ಡಿಯಿಲ್ಲ ಎಂದಿದ್ದೆ. 'ಮದುವೆ ನಂತರ ಏನೂ ಸಮಸ್ಯೆ ಬರುವುದಿಲ್ಲವೇ?' ಎಂದು ಅರ್ಜುನ್ ಸರ್ಜಾ ಕೇಳಿದ್ದರು. ಇಲ್ಲ ನೀವು ಪರಿಹಾರ ಮಾಡಿಕೊಟ್ಟರೆ ಸಾಕು. ನನ್ನ ಬಳಿಯೇ ಕೇಳಬಹುದು. ನಾನೇ ಪರಿಹಾರ ಮಾಡುತ್ತೇನೆ. ಜಾತಕ ದೋಷವನ್ನು ಸೂಚಿಸುತ್ತದೆ. ನಿವಾರಣೆ ಮಾಡಿಕೊಂಡರೆ ಮುಗಿಯಿತು ಎಂದಿದ್ದೆ.

  ಮದುವೆ ದಿನಾಂಕಗಳನ್ನೂ ನೀಡಿದ್ದೆ

  ಮದುವೆ ದಿನಾಂಕಗಳನ್ನೂ ನೀಡಿದ್ದೆ

  ದೋಷವಿಲ್ಲದೆ ಜಾತಕವೇ ಇಲ್ಲ. ಶೀತ ಜ್ವರ ಬಂದರೆ, ಔಷಧ ಮಾಡಿಕೊಳ್ಳುತ್ತೇವೆ. ಅದನ್ನು ಹಾಗೆಯೇ ಬಿಟ್ಟರೆ ಕಾಯಿಲೆಗೆ ತಿರುಗಬಹುದು. ಜಾತಕದ ದೋಷ ಕೂಡ ಈ ರೀತಿಯಲ್ಲಿ ಇರುವಂಥದ್ದು. ಅವರು ಅದಕ್ಕೆ ಒಪ್ಪಿಕೊಂಡರು. ಮದುವೆಯ ದಿನಾಂಕ ಕೂಡ ಕೇಳಿದ್ದರು. ಮೂರು ನಾಲ್ಕು ದಿನಾಂಕ ಕೊಟ್ಟಿದ್ದೆ. ಯಾವ ದಿನಾಂಕ ಆಯ್ಕೆ ಮಾಡಿಕೊಂಡರೋ ಗೊತ್ತಿಲ್ಲ. ಆಹ್ವಾನ ಪತ್ರಿಕೆ ಕಳಿಸುತ್ತೇನೆ ಎಂದಿದ್ದರು. ಕಳಿಸಿದರೂ ನನ್ನಿಂದ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ. ಆಮೇಲೆ ಏನಾಯ್ತೋ ಗೊತ್ತಿಲ್ಲ. ಅವರ ಮದುವೆಯಾದದ್ದು ಗೊತ್ತು. ಜಗ್ಗೇಶ್ ಮದುವೆ ಫೋಟೊಗಳನ್ನೆಲ್ಲ ಕಳಿಸಿದ್ದರು.

  ಚಿರು ಇನ್ನಿಲ್ಲ ಎಂಬ ಕಹಿ ಸಂಗತಿಯನ್ನು ವೈದ್ಯರು ಮೊದಲು ತಿಳಿಸಿದ್ದು ಈ ನಿರ್ದೇಶಕರಿಗೆ...

  ಜಗ್ಗೇಶ್ ಫೋನ್ ಮಾಡಿ ಹೇಳಿದ್ದರು

  ಜಗ್ಗೇಶ್ ಫೋನ್ ಮಾಡಿ ಹೇಳಿದ್ದರು

  ಬಳಿಕ ಆ ಸಂಗತಿಯನ್ನು ನಾನು ಮರೆತೇ ಬಿಟ್ಟಿದ್ದೆ. ನನ್ನ ಮೂಲಕವೇ ಪರಿಹಾರ ಇತ್ಯಾದಿ ಕಾರ್ಯ ನಡೆದಿದ್ದರೆ ಜಾತಕ ನನ್ನ ಮನಸಲ್ಲಿ ಫೀಡ್ ಆಗಿರುತ್ತಿತ್ತು. ಅದನ್ನು ಅಲ್ಲಿಗೇ ಬಿಟ್ಟಿದ್ದೆ. ಜಗ್ಗೇಶ್ ಫೋನ್ ಮಾಡಿ ಈ ಘಟನೆ ಬಗ್ಗೆ ಮಾತನಾಡಿದರು. ಹೀಗೆಲ್ಲ ಆಯ್ತು, ಅವರು ಪರಿಹಾರ ಮಾಡಿಸಿಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ. ಹೇಗಾಯ್ತು ಎಂದೆಲ್ಲ ವಿಚಾರಿಸಿದರು.

  ದೋಷ ಕಂಡಾಗ ಪರಿಹಾರ ಮಾಡಿಕೊಳ್ಳಬೇಕು. ಅಥವಾ ಪರಿಹಾರ ಸರಿಯಿಲ್ಲದೆ ಇದ್ದರೂ ಹೀಗೆ ಆಗುತ್ತದೆ ಎಂದು ಜಗ್ಗೇಶ್ ಅವರಿಗೆ ವಿವರಿಸಿದೆ. ಕುಜ ದೋಷ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಇಲ್ಲದಿದ್ದರೆ ಅಷ್ಟು ಆರೋಗ್ಯವಂತರಾಗಿರುವವರು ಹಾಗೆ ಮರಣ ಹೊಂದುವುದಿಲ್ಲ. ಆ ಕುಟುಂಬ ಈಗ ಬಹಳ ದುಃಖದಲ್ಲಿದೆ. ನನಗೂ ಈ ಘಟನೆ ನೋವು ತಂದಿದೆ.

  ಕುಜ ದೋಷಕ್ಕೆ ಪರಿಹಾರವೇನು?

  ಕುಜ ದೋಷಕ್ಕೆ ಪರಿಹಾರವೇನು?

  ಕುಜ ಶಾಂತಿಗೆ ಕುಜ ಶಾಂತಿ ಹೋಮ, ಕುಂಭ ವಿವಾಹ ಮಾಡಲಾಗುತ್ತದೆ. ಎರಡನೆಯದು ವಿಷ್ಣು ವಿವಾಹ ಎನ್ನುತ್ತಾರೆ. ವಿಷ್ಣುವಿಗೆ ತಾಳಿ ಕಟ್ಟುವುದು. ನಂತರ ಅದನ್ನು ವಿಭಜನೆ ಮಾಡುವುದು. ವಿಚ್ಚೇದನ ಮಾಡಿ ಮಡಿಕೆಯನ್ನು ಒಡೆದು ತಾಳಿಯನ್ನು ಕಿತ್ತುಹಾಕಿ ಮಾಡುವುದು. ಅಲ್ಲಿಗೆ ಒಂದು ವಿಚ್ಚೇದನದ ಕಾರ್ಯ ಮುಗಿದಂತೆ ಆಗುತ್ತದೆ. ಮುಂದೆ ಅವರವರ ಕ್ರಮ ಹೇಗೆ ಇರುತ್ತದೆಯೋ ಹಾಗೆ ವಿವಾಹ ಮಾಡಲಾಗುತ್ತದೆ. ಇದು ಷೋಡಶ ಸಂಸ್ಕಾರಗಳಲ್ಲಿ ಬರುತ್ತದೆ.

  'ಇರುವುದೆಲ್ಲವ ಬಿಟ್ಟು...': ಚಿರು ಸಾವಿನ ಬೆನ್ನಲ್ಲೇ ಹೃದಯ ಕಲಕುವ ಘಟನೆ ಹಂಚಿಕೊಂಡ ಕವಿರಾಜ್

  ಭಂಗ ಯೋಗಗಳಿದ್ದರೆ ಆ ಭಂಗ ಯೋಗಗಳನ್ನು ಸರಿಪಡಿಸಲು ಮಾರ್ಗಗಳಿವೆ. ನನ್ನ ಅನುಭವದಲ್ಲಿ ಎಷ್ಟೋ ಜನರಿಗೆ ಒಳ್ಳೆಯದಾಗಿದೆ. ಹತ್ತಾರು ಕಡೆ ವಿಫಲವಾದರೆ ನಾವು ಇಂತಹ ಪರಿಹಾರ ಹೇಳುವುದಿಲ್ಲ. ಇಲ್ಲಿ ಯಶಸ್ವಿಯಾದರೆ ಆಗಬಹುದು ಬೇರೆ ಕಡೆಯೂ ಯಶಸ್ವಿಯಾಗುತ್ತದೆ. ವೈದ್ಯರು ರೆಕಮೆಂಡೆಡ್ ಔಷಧಿ ಇದ್ದಾಗ ಎರಡು ಜನರಿಗೆ ಕೊಟ್ಟು ನೋಡುತ್ತಾರೆ. ಅದು ಫಲಿಸದೆ ಇದ್ದರೆ ಬಳಿಕ ಮೂರನೇಯವರಿಗೆ ಅದನ್ನು ನೀಡುವುದಿಲ್ಲ. ಬೇರೆ ಔಷಧ ಸಲಹೆ ಮಾಡುತ್ತಾರೆ. ಅದೂ ಒಂದು ರೀತಿ ಪರಿಹಾರ.

  ಜಾತಕ ನೆನಪಾಗುತ್ತಿಲ್ಲ

  ಜಾತಕ ನೆನಪಾಗುತ್ತಿಲ್ಲ

  ಎರಡೂ ಜಾತಕಗಳನ್ನು ಈಗ ಮತ್ತೆ ನೋಡಿದರೆ ಇಂಥದ್ದರಲ್ಲಿಯೇ ಸಮಸ್ಯೆ ಇತ್ತು ಎನ್ನುವುದು ನೆನಪಾಗಬಹುದು. ನನಗೆ ಜಾತಕದ ನೆನಪು ಇಲ್ಲ. ಸುಮಾರು ಎರಡು ವರ್ಷಹಿಂದೆ ಅವರು ಬಂದಿದ್ದು. 2018ರ ಆರಂಭದಲ್ಲಿ ಎಂದೆನಿಸುತ್ತದೆ. ಇದು ಪ್ರೇಮ ಪ್ರಕರಣ. ಮತ್ತೊಮ್ಮೆ ಇದು ಆಗುವುದಿಲ್ಲ ಎಂದು ಬಂದರೂ ಏನು ಮಾಡುತ್ತೀರಿ? ಎಂದು ಕೇಳಿದ್ದೆ. ಪರಿಹಾರವೇ ಮಾರ್ಗ ಎಂದು ತಿಳಿಸಿದ್ದೆ.

  ಪರಿಹಾರ ಮಾಡಿಕೊಡುವುದಾಗಿ ತಿಳಿಸಿದ್ದೆ

  ಪರಿಹಾರ ಮಾಡಿಕೊಡುವುದಾಗಿ ತಿಳಿಸಿದ್ದೆ

  ಮದುವೆಯ ದಿನಾಂಕಗಳನ್ನೇ ಕೇಳಿದ್ದಾಗ ಎರಡು ಮೂರು ದಿನಾಂಕಗಳನ್ನು ಕೊಟ್ಟಿದ್ದೆ. ಅವರು ಬೇರೆ ಜೋತಿಷಿಗಳನ್ನು ಕೇಳಿದ್ದಾಗ ಅವರು ಆ ದಿನಾಂಕ ಬೇಡ, ಬೇರೆ ಮುಹೂರ್ತ ಇರಲಿ ಎಂದು ಸಲಹೆ ನೀಡಿದ್ದರಂತೆ. ಅದಕ್ಕೆ ನಿಮ್ಮ ಇಷ್ಟ ಮೂರನೇ ಅಭಿಪ್ರಾಯ ಪಡೆದುಕೊಳ್ಳಿ. ನನ್ನದೇನೂ ಸಮಸ್ಯೆ ಇಲ್ಲ ಎಂದಿದ್ದೆ. ಒಮ್ಮೆ ನಾನು ಬೆಂಗಳೂರಿಗೆ ಬಂದಿದ್ದಾಗ ಕೂಡ ನಾನು ಅವರಿಗೆ ಫೋನ್ ಮಾಡಿದ್ದೆ. ಪರಿಹಾರ ಮಾಡುವುದಿದ್ದರೆ ಎರಡು ದಿನ ಬೆಂಗಳೂರಲ್ಲಿ ಇದ್ದೇನೆ. ಬೇಕಾದರೆ ಬಂದು ಪರಿಹಾರ ಮಾಡಿಕೊಡುತ್ತೇನೆ ಎಂದಿದ್ದೆ. ಅವರು ಬಿಜಿಯಾಗಿದ್ದರಿಂದ ಪುರುಸೊತ್ತಿಲ್ಲ ಎಂದಿದ್ದರು. ತಿಳಿಸುವುದು ನನ್ನ ಕರ್ತವ್ಯವಾಗಿದ್ದರಿಂದ ತಿಳಿಸಿದ್ದೆ.

  ಮದುವೆ ಸಂಪ್ರದಾಯ ಯಾವುದು?

  ಮದುವೆ ಸಂಪ್ರದಾಯ ಯಾವುದು?

  ಕ್ರೈಸ್ತ ಸಂಪ್ರದಾಯ ಮತ್ತು ಹಿಂದೂ ಸಂಪ್ರದಾಯದಂತೆ ಎರಡು ಬಾರಿ ಮದುವೆಯಾದರು. ಇದರಲ್ಲಿ ಅಡ್ಡಿಯಿಲ್ಲ. ಕ್ರಿಶ್ಚಿಯನ್ ಸಂಪ್ರದಾಯ ಕೊನೆಗೆ ಆಗಬೇಕು. ಹಿಂದೂ ಸಂಪ್ರದಾಯ ನಂತರ ಆಗಬೇಕು ಎಂದಿದ್ದರು. ಅದು ಒಳ್ಳೆಯದಲ್ಲ. ಕ್ರಿಶ್ಚಿಯನ್ ಸಂಪ್ರದಾಯದ್ದು ಮದುವೆಯಲ್ಲ. ಅದು ಎಂಗೇಜ್ಮೆಂಟ್. ನಮ್ಮ ಮದುವೆ ಸಂಪ್ರದಾಯ ಇಲ್ಲ. ಇದರಲ್ಲಿ ಹಾಗಲ್ಲ. ಇದು ಪ್ರತಿಜ್ಞಾವಿಧಿ ಸ್ವೀಕರಿಸುವುದು. ಹಿಂದೂ ಸಂಪ್ರದಾಯದ ಮದುವೆ ಕಾನ್ಸೆಪ್ಟ್ ಬೇರೆ. ಆ ವಿಚಾರವಾಗಿ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಎಂಗೇಜ್ಮೆಂಟ್ ಮಾಡಿಕಳ್ಳಿ ನಂತರ ಒಂದು ದಿನ ನೋಡಿ ಮದುವೆ ಮಾಡಿಸಿ ಎಂದಿದ್ದೆ ಎಂದು ವಿವರಿಸಿದರು.

  ಪರಿಹಾರ ಮಾಡದಿದ್ದರೆ ಬೆಳೆಯುತ್ತದೆ

  ಪರಿಹಾರ ಮಾಡದಿದ್ದರೆ ಬೆಳೆಯುತ್ತದೆ

  ಸಾಮಾನ್ಯವಾಗಿ ಜಾತಕಗಳು ಹಾಗೂ ದೋಷಗಳ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಮತ್ತಷ್ಟು ವಿವರಣೆ ನೀಡಿದರು. ಕುಟುಂಬದಲ್ಲಿ ದೋಷಗಳಿದ್ದಾಗ ಮದುವೆಯಂತಹ ಸಂದರ್ಭ ಬಂದಾಗ ದೋಷ ಏಳುತ್ತದೆ. ಅದಕ್ಕೆ ಪರಿಹಾರ ಮಾಡಿಕೊಳ್ಳಬೇಕು. ಮತ್ತೆ ಮತ್ತೆ ತಪ್ಪು ಮಾಡಿದಾಗ ಆ ದೋಷ ದೊಡ್ಡದಾಗುತ್ತಾ ಹೋಗುತ್ತದೆ. ಪರಿಹಾರವಿಲ್ಲ ಎಂದು ಆಗುತ್ತದೆ. ಒಂದು ಕುಟುಂಬಕ್ಕೆ ಒಮ್ಮೆ ದೋಷ ಬಂದರೆ ಅದು ನಿವಾರಣೆಯಾಗುವವರೆಗೆ ಮತ್ತೆ ಮತ್ತೆ ಮುಂದಿನ ಪೀಳಿಗೆಗಳಿಗೂ ಬರುತ್ತಲೇ ಇರುತ್ತದೆ. ಅದನ್ನು ಅವರು ಮಾಡಿಕೊಡಬೇಕು.

  ದೋಷ ಬೆಳೆದ ಮೇಲೆ ಅದಕ್ಕೆ ಜಾತಕ ಸಾಕಾಗುವುದಿಲ್ಲ. ಪ್ರಶ್ನಾ ಚಿಂತನೆಯೇ ನಡೆಯಬೇಕು. ಆರೂಢ ಪ್ರಶ್ನೆಯಲ್ಲಿಟ್ಟು ದೋಷ ಏನೆಂದು ಕಂಡುಹಿಡಿಯಬೇಕು. ನಂತರ ಪರಿಹಾರ ಮಾಡಬೇಕು. ಇದರಿಂದ ಪರಿಹಾರದ ಖರ್ಚೂ ಜಾಸ್ತಿ ಆಗುತ್ತದೆ. ಪೀಳಿಗೆ ಬೆಳೆಯಬೇಕಲ್ಲ. ಮತ್ತೆ ಅಲ್ಲಿ ದೋಷಗಳು ಮುಂದುವರಿಯಬಹುದು.

  ದೋಷ ಬರುವುದು ತಂದೆಯ ಕಡೆಯಿಂದ

  ದೋಷ ಬರುವುದು ತಂದೆಯ ಕಡೆಯಿಂದ

  ಜೀನ್ಸ್ ಬರುವುದು ತಂದೆಯಿಂದ ಬರುವುದು. ತಾಯಿಯಿಂದ ಗುಣಗಳು ಬರುತ್ತದೆ. ತಾಯಿ ಕಡೆಯಿಂದ ಗುಣಗಳು ಬರಬಹುದು, ದೋಷಗಳು ಬರುವುದಿಲ್ಲ. ಜಾತಕದಿಂದ ನಾವು ಈ ಕುಟುಂಬದಲ್ಲಿ ದೋಷ ಉಂಟು ಎಂಬುದನ್ನು ತಿಳಿಯಬಹುದು. ಅದು ಯಾವ ಸ್ವರೂಪದಲ್ಲಿ ಉಂಟು ಎಂದು ತಿಳಿಯಲು ಪ್ರಶ್ನಾ ಚಿಂತನಾ ನಡೆಯಬೇಕು. ಪ್ರಸಕ್ತ ವಿದ್ಯಮಾನಗಳು ಹೇಗುಂಟು ಎಂದು ಗೊತ್ತಾಗುತ್ತದೆ. ಜಾತಕ ಹುಟ್ಟುವಾಗಿನ ಸ್ಥಿತಿಗತಿಯನ್ನು ಹೇಳುತ್ತದೆ. ಹೀಗೆ ನಿನ್ನ ಕುಟುಂಬ ಇತ್ತು. ಇಷ್ಟು ದೋಷಗ್ರಸ್ತವಾಗಿತ್ತು ಎಂದು ಜಾತಕದಿಂದ ಗೊತ್ತಾಗುತ್ತದೆ. ಅದರ ಸ್ವರೂಪ ಈಗ ಹೇಗಿದೆ ಎನ್ನುವುದು ತಿಳಿಯುತ್ತದೆ.

  ಸತ್ಕಾರ್ಯ ಮಾಡಿದಾಗ ಕಡಿಮೆಯಾಗುತ್ತದೆ

  ಸತ್ಕಾರ್ಯ ಮಾಡಿದಾಗ ಕಡಿಮೆಯಾಗುತ್ತದೆ

  ಮನುಷ್ಯ ಅನೇಕ ಸತ್ಕಾರ್ಯ ಮಾಡುತ್ತಾ ಹೋದರೆ ದೋಷಗಳು ಕಡಿಮೆಯಾಗುತ್ತಾ ಹೋಗುತ್ತದೆ. ಪಾಪಕಾರ್ಯ ಮಾಡುತ್ತಾ ಹೋದರೆ ದೋಷಗಳು ಜಾಸ್ತಿಯಾಗುತ್ತಾ ಹೋಗುತ್ತದೆ. ಹಾಗಾಗಿ ಪ್ರಶ್ನೆ ಇಡಬೇಕು. ದೋಷ ಪರಿಹಾರ ಮಾಡಿದ್ದಾರೋ ಇಲ್ಲವೋ, ಮಾಡಿದ್ದರೂ ಅದು ಸರಿಯಾಗದೆ ಇದ್ದಾಗ ಕ್ಷಮೆ ಇರುತ್ತದೆ ದೇವರದ್ದು. ಏಕೆಂದರೆ ಅದರ ಕ್ರಮಗಳು ಅವರಿಗೆ ಗೊತ್ತಿರುವುದಿಲ್ಲ. ಸಮಸ್ಯೆ ಎದುರಾದಾಗ ಇಂತಹ ಸಂದರ್ಭದಲ್ಲಿ ಸಮಯ ಸಿಗುತ್ತದೆ. ಆಗ ಮತ್ತೆ ಪ್ರಶ್ನೆ ಕೇಳಿದರೆ ಪರಿಹಾರ ಸರಿಯಾಗಿ ಆಗಿಲ್ಲ, ಸರಿಮಾಡಿಕೊಳ್ಳಿ ಎಂಬುದು ಬರುತ್ತದೆ.

  ಎಲ್ಲವೂ ಅಷ್ಟೇ. ವೈದ್ಯರು ಔಷಧಿ ಕೊಟ್ಟಾಗ ಅದನ್ನು ತೆಗೆದುಕೊಳ್ಳದೆ ಇದ್ದರೆ ತಕ್ಷಣ ಅಪಾಯ ಬರುತ್ತದೆ. ಡಾಕ್ಟರ್ ಕೊಟ್ಟ ಔಷಧ ಪರಿಣಾಮಕಾರಿಯಾಗದೆ ಇದ್ದಾಗ ಸ್ವಲ್ಪ ಸಮಯ ಸಿಗುತ್ತದೆ. ಆಗ ಮತ್ತೆ ಬೇರೆ ಔಷಧಕ್ಕೆ ವೈದ್ಯರು ಸಲಹೆ ಕೊಡುತ್ತಾರೆ. ಔಷಧ ಕೊಡುತ್ತೇವೆ ಪರಿಶೀಲಿಸಿಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ.

  ಆಯಸ್ಸು ನಮ್ಮ ಕೈಯಲ್ಲಷ್ಟೇ ಇರುವುದಿಲ್ಲ

  ಆಯಸ್ಸು ನಮ್ಮ ಕೈಯಲ್ಲಷ್ಟೇ ಇರುವುದಿಲ್ಲ

  ಕುಜ ದೋಷ ಎಂದರೆ ನನ್ನ ಆಯುಷ್ಯ ನಾನು ಮಾತ್ರ ಕಾಪಾಡಿಕೊಳ್ಳುವುದಲ್ಲ. ಇನ್ನೊಬ್ಬರ ಬಳಿಯೂ ಇದೆ. ನನ್ನ ಮೇಲೆ ನಂಬಿಕೆ ಇರಿಸಿ ಏನನ್ನಾದರೂ ಕೇಳಿದಾಗ ನಾನು ಕೊಡೊಲ್ಲ ಎಂದರೆ ನಿಮಗೆ ಘಾತ ಆಗುತ್ತದೆ. ಹಾಗೆಯೇ ಗಂಡ ಹೆಂಡತಿ ನಿತ್ಯ ಒಟ್ಟಿಗೆ ಇರುವವರು ಇಬ್ಬರೂ ಒಬ್ಬರಿಗೊಬ್ಬರು ಘಾತ ಮಾಡಿದರೆ ಅಥವಾ ನೋವು ಮಾಡಿದರೆ ವರ್ಷ ವರ್ಷ ಆಯಸ್ಸು ಕ್ಷೀಣವಾಗುತ್ತಾ ಹೋಗುತ್ತದೆ. ನಿಂದನೆ ನೋವು ಮಾಡಬಾರದು. ಅದರಿಂದ ಅವರ ಸಾವಿಗೆ ನಾವು ಕಾರಣವಾಗುತ್ತೇವೆ.

  ಎರಡೂ ಜಾತಕಗಳಲ್ಲಿ ಸಮಾನ ದೋಷಗಳಿದ್ದಾಗ ಅಷ್ಟು ಸುಲಭಕ್ಕೆ ಸಮಸ್ಯೆಗಳಾಗೊಲ್ಲ. ಒಬ್ಬರ ಜಾತಕ ಗಟ್ಟಿಯಾಗಿದ್ದು, ಇನ್ನೊಬ್ಬರದು ದುರ್ಬಲವಾಗಿದ್ದರೆ ಹೊಡೆತ ಜಾಸ್ತಿ. ಜಾತಕ ಎನ್ನುವುದು ಡಿಎನ್‌ಎ ಇದ್ದಂತೆ. ಹುಟ್ಟಿನಿಂದ ನಿಮ್ಮ ಗುಣ ಹೀಗೆಯೇ ಎಂದು ಗುರುತಿಸಬಹುದು. ಹಾಗೆಯೇ ದೋಷಗಳಿವೆ ಎಂಬುದನ್ನೂ ಕಂಡುಕೊಳ್ಳಬಹುದು ಎಂದು ವಿವರಿಸಿದರು.

  English summary
  Famous astrologer Prakash Ammannaya talked about the Kuja Dosha in the horoscope of Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X