For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ರಥದ ಚಕ್ರಗಳಾದ ಅಸಿಸ್ಟೆಂಟ್ ಡೈರೆಕ್ಟರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

  |

  ಸಿನಿಮಾ ಒಂದು ರಥವೆಂದು ಕಲ್ಪಿಸಿಕೊಳ್ಳುವುದಾದರೆ ಅದು ಮುಂದೆ ಚಲಿಸಲು ಅವಶ್ಯಕವಾದ ಚಕ್ರಗಳು ಸಹಾಯಕ ನಿರ್ದೇಶಕರು. ಸಹಾಯಕ ನಿರ್ದೇಶಕರಿಲ್ಲದೆ ಸಿನಿಮಾ ಪೂರ್ಣವಾಗದು. ಸಿನಿಮಾ ಚಿತ್ರೀಕರಣದ ಯಾನ ಸುಗಮವಾಗಿ ಸಾಗಬೇಕಾದರೆ ವಾಹನಕ್ಕೆ ಚಕ್ರಗಳಂತೆ ಸಹಾಕ ನಿರ್ದೇಶಕರಿರಲೇ ಬೇಕು.

  ಆದರೆ ಸಿನಿಮಾ ಒಂದು ಬಿಡುಗಡೆಯಾದಾಗ ಕಾಣುವುದು ನಟ-ನಟಿಯರು, ಪೋಸ್ಟರ್‌ಗಳಲ್ಲಿ ನಿರ್ದೇಶಕರು, ನಿರ್ಮಾಪಕರ ಹೆಸರು ಆದರೆ ಸಿನಿಮಾ ಪ್ರಾರಂಭದಿಂದ ಅಂತ್ಯದ ವರೆಗೂ ಜೊತೆಗಿದ್ದು, ಹಗಲು-ರಾತ್ರಿಗಳನ್ನು ಒಂದು ಮಾಡಿ ದುಡಿದ ಸಹಾಯಕ ನಿರ್ದೇಶಕರು ಅನಾಮಿಕರಾಗಿಯೇ ಉಳಿದುಬಿಡುತ್ತಾರೆ.

  ನಿಜವಾದ ರೌಡಿಗಳನ್ನು ಸಿನಿಮಾದಲ್ಲಿ ಹಾಕಿಕೊಂಡು ಪ್ರೇಮ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ!

  ಇಂಥಹಾ ಸಹಾಯಕ ನಿರ್ದೇಶಕರ ಕಾರ್ಯವ್ಯಾಪ್ತಿ, ಅವರ ಜೀವನ, ಸುಖ-ದುಖಃ, ಸಿನಿಮಾ ಕನಸುಗಳು, ಆಸೆಗಳು, ಅವರ ಒಳ-ಹೊರಗುಗಳನ್ನು ಓದುಗರಿಗೆ ಕಟ್ಟಿಕೊಡುವ ಪ್ರಯತ್ನವನ್ನು 'ಕನ್ನಡ ಫಿಲ್ಮೀಬೀಟ್' ಮಾಡುತ್ತಿದೆ. ಸರಣಿಯ ಮೊದಲ ಲೇಖನದಲ್ಲಿ ಸಹಾಯಕ ನಿರ್ದೇಶಕನ ಕಾರ್ಯವ್ಯಾಪ್ತಿ, ಸೆಟ್‌ನಲ್ಲಿ ಆತನ ಜವಾಬ್ದಾರಿಗಳ ಬಗ್ಗೆ ವಿವರಿಸಲಾಗಿದೆ.

  ಅಂಬರೀಶ್ ನಟಿಸಬೇಕಿದ್ದ 'ಬಂಧನ' ಚಿತ್ರ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ?

  ಕತೆ ಕಟ್ಟುವಾಗಲೇ ಬೇಕು ಸಹಾಯಕ ನಿರ್ದೇಶಕ

  ಕತೆ ಕಟ್ಟುವಾಗಲೇ ಬೇಕು ಸಹಾಯಕ ನಿರ್ದೇಶಕ

  ಕತೆಯೊಂದು ಹೊಳೆದಾಗಲೇ ಸಹಾಯಕ ನಿರ್ದೇಶಕನ ಅವಶ್ಯಕತೆ ಬರುತ್ತದೆ. ನಿರ್ದೇಶಕನ ಆಫೀಸ್‌ನಲ್ಲಿ ಸಹಾಯಕ ನಿರ್ದೇಶಕರನ್ನು ಗುಡ್ಡೆ ಹಾಕಿಕೊಂಡು ಕತೆಯ ಎಳೆಯನ್ನು ಹಿಂಜಿ-ಹಿಂಜಿ ಚಿತ್ರಕತೆ ಮಾಡುತ್ತಾನೆ ನಿರ್ದೇಶಕ. ಕೆಲವು ಪ್ರಕರಣಗಳಲ್ಲಿ ನಿರ್ದೇಶಕ ಮೊದಲೇ ಚಿತ್ರಕತೆ ಬರೆದುಕೊಂಡಿರುತ್ತಾನೆ.

  ನಟ-ನಟಿಯರ ಆಯ್ಕೆಯಲ್ಲೂ ಸಾಥ್

  ನಟ-ನಟಿಯರ ಆಯ್ಕೆಯಲ್ಲೂ ಸಾಥ್

  ಚಿತ್ರಕತೆಯ ನಂತರ ನಟ-ನಟಿಯರನ್ನು ವಿಶೇಷವಾಗಿ ಪೋಷಕ ಪಾತ್ರಗಳ ನಟ-ನಟಿಯರನ್ನು ಗುರುತಿಸುವುದು, ನಟ-ನಟಿಯರ ಶೆಡ್ಯೂಲ್ ಅನ್ನು ಅಂತಿಮಗೊಳಿಸುವುದು. ಚಿತ್ರೀಕರಣಕ್ಕೆ ಬೇಕಾದ ವಸ್ತುಗಳನ್ನು ಪಟ್ಟಿ ಮಾಡುವುದು, ಚಿತ್ರಕತೆ, ಸಂಭಾಷಣೆಗಳನ್ನು ಫೈನ್ ಟ್ಯೂನ್ ಗೊಳಿಸುವುದು ಇತರೆ ಕಾಗದ ಕೆಲಸಗಳನ್ನು ಸಹಾಯಕ ನಿರ್ದೇಶಕರು ಮಾಡುತ್ತಾರೆ. ಇವರೆಲ್ಲರ ಮೇಲ್ವಿಚಾರಕನಾಗಿ ನಿರ್ದೇಶಕ ಇರುತ್ತಾನೆ.

  ಅನುಮೋದನೆ ಪಡೆವ ಕೆಲಸ ಸಹಾಯಕ ನಿರ್ದೇಶಕರದ್ದೇ

  ಅನುಮೋದನೆ ಪಡೆವ ಕೆಲಸ ಸಹಾಯಕ ನಿರ್ದೇಶಕರದ್ದೇ

  ನಂತರದ್ದು ಶೂಟಿಂಗ್ ಸ್ಥಳಗಳ ಆಯ್ಕೆ ಮತ್ತು ಅಗತ್ಯವಿದ್ದಲ್ಲಿ ಪರ್ಮೀಶನ್ ತೆಗೆದುಕೊಳ್ಳುವುದು. ಶೂಟಿಂಗ್ ಸ್ಪಾಟ್‌ಗಳ ಆಯ್ಕೆ ಬಹುತೇಕವಾಗಿ ನಿರ್ದೇಶಕರೇ ಮಾಡುತ್ತಾರೆ, ಇದರಲ್ಲಿ ಸಹಾಯಕ ನಿರ್ದೇಶಕರ ಕಾರ್ಯ ತುಸು ಕಡಿಮೆ. ಶೂಟಿಂಗ್ ಮಾಡಲು ಅನುಮೋದನೆ ಪಡೆದುಕೊಳ್ಳಲು ಓಡಾಡುವ ಕಾರ್ಯ ಬಹುತೇಕ ಸಹಾಯಕ ನಿರ್ದೇಶಕರೇ ಮಾಡಬೇಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ನಿರ್ಮಾಪಕರ ಕಡೆಯವರು ಅಥವಾ ಮ್ಯಾನೇಜರ್ ಈ ಕಾರ್ಯ ಮಾಡುತ್ತಾರೆ.

  ಚಿತ್ರೀಕರಣ ಪ್ರಾರಂಭವಾದ ಮೇಲೆ ಬಿಡುವೇ ಇಲ್ಲ

  ಚಿತ್ರೀಕರಣ ಪ್ರಾರಂಭವಾದ ಮೇಲೆ ಬಿಡುವೇ ಇಲ್ಲ

  ಸಿನಿಮಾ ಚಿತ್ರೀಕರಣ ಪ್ರಾರಂಭವಾದ ಮೇಲೆ ಸಹಾಯಕ ನಿರ್ದೇಶಕರಿಗೆ ಬಿಡುವೆಂಬುದೇ ಇರುವುದಿಲ್ಲ. ಸೆಟ್‌ನಲ್ಲಿ ಅವರು ಎಲ್ಲವೂ ಆಗಿರುತ್ತಾರೆ. ಸೆಟ್‌ನಲ್ಲಿ ಅವರು ನಿರ್ವಹಿಸುವ ಜವಾಬ್ದಾರಿಗಳ ಪಟ್ಟಿ ಬಹಳ ದೊಡ್ಡದು. ಅದನ್ನು ಚರ್ಚಿಸಲು ಪ್ರತ್ಯೇಕ ಲೇಖನದ ಅಗತ್ಯವಿದೆ.

  ಮುಂದುವರೆಯುವುದು.....

  English summary
  Assistant director basically keeps track of everything that's happening in connection to the film production. Read on to know about their life, roles and responsibilities.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X