Don't Miss!
- Sports
ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವರ್ಷ ವಿವಾಹ ಬಂಧನಕ್ಕೆ ಸಿಲುಕಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳಿವರು
ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಚಿನ್ನದಂಥಹಾ ವರ್ಷವಾಗಿದ್ದ 2022 ಮುಗಿಯುತ್ತಾ ಬಂದಿದೆ. ಕೆಲವೇ ದಿನಗಳಲ್ಲಿ 2022 ಮರೆಯಾಗಿ 2023 ಬರಲಿದೆ.
ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹಲವು ಬದಲಾವಣೆಗಳಾಗಿವೆ. ಬಹುತೇಕ ಒಳ್ಳೆಯ ಬದಲಾವಣೆಗಳೇ. 2020, 2021 ರಲ್ಲಿ ಕೋವಿಡ್ ಕಾರಣಕ್ಕೆ ತತ್ತರಿಸಿದ್ದ ಕನ್ನಡ ಚಿತ್ರರಂಗಕ್ಕೆ 2022 ಅದ್ಭುತ ಬೆಳೆಯನ್ನೇ ಬೆಳೆದುಕೊಟ್ಟಿದೆ.
ಸಿನಿಮಾಗಳ ವಿಷಯಗಳ ಹೊರತಾಗಿ ಹಲವು ಸೆಲೆಬ್ರಿಟಿಗಳಿಗೂ ಸಹ ಈ ವರ್ಷ ಶುಭ ವರ್ಷವೇ. ಏಕೆಂದರೆ ಹಲವು ಸಿನಿಮಾ ಹಾಗೂ ಟಿವಿ ಸೆಲೆಬ್ರಿಟಿಗಳು ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2022 ರಲ್ಲಿ ಮದುವೆಯಾದ ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

ಶುಭಾ ಪೂಂಜಾ ಮದುವೆ
ವರ್ಷದ ಆರಂಭದಲ್ಲಿಯೇ ಕನ್ನಡದ ನಟಿ ಶುಭಾ ಪೂಂಜಾ ಅವರು ದಾಂಪತ್ಯಕ್ಕೆ ಕಾಲಿರಿಸಿದರು. ತಮ್ಮ ಬಹು ಸಮಯದ ಗೆಳೆಯ ಸುಮಂತ್ ಮಹಾಬಲ ಅವರನ್ನು ಜನವರಿ 05 ರಂದು ವಿವಾಹವಾದರು. ಸರಳವಾಗಿ ಈ ವಿವಾಹ ಕಾರ್ಯಕ್ರಮ ನೆರವೇರಿತು. ಆದರೆ ಮದುವೆ ಬಳಿಕ ಶುಭಾ ಪೂಂಜಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ನಟಿ ತೇಜಸ್ವಿನಿ ಪ್ರಕಾಶ್ ಮದುವೆ
ಕಿರುತೆರೆ ಹಾಗೂ ಕೆಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿರುವ ನಟಿ ತೇಜಸ್ವಿನಿ ಪ್ರಕಾಶ್ ತಮ್ಮ ಗೆಳೆಯ ಫಲಿ ವರ್ಮಾ ನದೀಮ್‌ಪಳ್ಳಿ ಅವರೊಟ್ಟಿಗೆ ಮಾರ್ಚ್ ತಿಂಗಳಲ್ಲಿ ವಿವಾಹವಾದರು. ನಟಿ ಕಾರುಣ್ಯಾ ರಾಮ್ ಸೇರಿದಂತೆ ಕನ್ನಡ ಸಿನಿಮಾ ಹಾಗೂ ಟಿವಿ ಲೋಕದ ಕೆಲ ಸೆಲೆಬ್ರಿಟಿಗಳು ಇವರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂದಹಾಗೆ ವಿನಯಾ ಪ್ರಕಾಶ್ ಅವರ ಪುತ್ರಿ ತೇಜಸ್ವಿನಿ ಪ್ರಕಾಶ್.

ಚಿನ್ನು ರಶ್ಮಿಕಾ ಪ್ರಭಾಕರ್ ವಿವಾಹ
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಪಾತ್ರದ ಮೂಲಕ ಮನೆ ಮಾತಾಗಿದ್ದ ರಶ್ಮಿ ಪ್ರಭಾಕರ್ ಏಪ್ರಿಲ್ ತಿಂಗಳಲ್ಲಿ ನಿಖಿಲ್ ಎಂಬುವರೊಟ್ಟಿಗೆ ವಿವಾಹವಾಗಿದ್ದಾರೆ. ಬೆಂಗಳೂರಿನ ಕನ್ವೆಶನ್ ಸೆಂಟರ್ ಒಂದರಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಕಲ್ಯಾಣ ನಡೆದಿದ್ದು, ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಶಾಸ್ತ್ರೋತ್ತವಾಗಿ ವಿವಾಹ ಕಾರ್ಯ ಜರುಗಿತು.

ನಿಕ್ಕಿ ಗಲ್ರಾನಿ-ಆದಿ ಪಿನಿಶೆಟ್ಟಿ
ಸಂಜನಾ ಗಲ್ರಾನಿ ಸಹೋದರಿ, ಸ್ವತಃ ನಟಿಯಾಗಿರುವ ನಿಕ್ಕಿ ಗಲ್ರಾನಿ, ತೆಲುಗಿನ ಜನಪ್ರಿಯ ನಟ ಆದಿ ಪಿನಿಶೆಟ್ಟಿ ಅವರೊಟ್ಟಿಗೆ ಮೇ 18 ರಂದು ವಿವಾಹವಾದರು. ಆದಿ ಪಿನಿಶೆಟ್ಟಿ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟ. 'ರಂಗಸ್ಥಳಂ', 'ಸರೈನೋಡು', 'ಯೂ ಟರ್ನ್' ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಕ್ಕಿ ಗಲ್ರಾನಿ ಸಹ ತೆಲುಗು ಚಿತ್ರರಂಗದಲ್ಲಿಯೇ ನೆಲೆಗೊಳ್ಳಲು ಯತ್ನಿಸುತ್ತಿದ್ದಾರೆ.

ರವಿಚಂದ್ರನ್ ಪುತ್ರ ಮನೊರಂಜನ್ ವಿವಾಹ
ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಈ ವರ್ಷ ಅದ್ದೂರಿ ಶುಭ ಕಾರ್ಯ ನಡೆಯಿತು. ರವಿಚಂದ್ರನ್ ಪುತ್ರ ಮನೊರಂಜನ್ ಈ ವರ್ಷ ವಿವಾಹವಾದರು. ಆಗಸ್ಟ್ 20 ಹಾಗೂ 21 ರಂದು ಎರಡು ದಿನ ಅದ್ಧೂರಿಯಾಗಿ ಮನೊರಂಜನ್ ವಿವಾಹ ಕಾರ್ಯ ನೆರವೇರಿತು. ಯಶ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ರವಿಚಂದ್ರನ್ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೊರಂಜನ್ ವಿವಾಹವಾದ ಯುವತಿಯ ಹೆಸರು ಸಂಗೀತ.

ಅದಿತಿ ಪ್ರಭುದೇವ್ ವಿವಾಹ
ಕನ್ನಡದ ನಟಿ ಅದಿತಿ ಪ್ರಭುದೇವ್ ನವೆಂಬರ್ 28 ರಂದು ಹಸೆಮಣೆಗೆ ಕಾಲಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅದಿತಿ ಹಾಗೂ ಉದ್ಯಮಿ ಯಶಸ್ ಎಂಬುವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೆಲವು ದಿನಗಳ ಹಿಂದಷ್ಟೆ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಇವರ ಮದುವೆಗೆ ಕನ್ನಡ ಚಿತ್ರರಂಗದ ಹಲವು ಜನಪ್ರಿಯ ನಟ-ನಟಿಯರು ಭಾಗವಹಿಸಿದ್ದರು.