For Quick Alerts
  ALLOW NOTIFICATIONS  
  For Daily Alerts

  ವಿಜಯಲಕ್ಷ್ಮಿ ಹುಟ್ಟುಹಬ್ಬಕ್ಕೆ 'ದಾಸ'ನ ಸ್ಪೆಷಲ್ ಸರ್ಪ್ರೈಸ್ ಕಹಾನಿ.!

  |
  ದರ್ಶನ ಪತ್ನಿ ಜೊತೆ ಮೊದಲು ನೋಡಿದ ಸಿನಿಮಾ ಇದೇ

  ಅದು 2003ನೇ ಇಸವಿ... ಆಗಷ್ಟೇ ವಿಜಯಲಕ್ಷ್ಮಿ ಜೊತೆಗೆ ಧರ್ಮಸ್ಥಳದಲ್ಲಿ ನಟ ದರ್ಶನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೊಸ ಹೊಸ ಕನಸು ಕಾಣುತ್ತಾ, ಹೊಸ ಜೀವನಕ್ಕೆ ದರ್ಶನ್-ವಿಜಯಲಕ್ಷ್ಮೀ ನಾಂದಿ ಹಾಡಿದ್ದರು.

  ಅವತ್ತು ನವೆಂಬರ್ 11, 2003.. ಮದುವೆ ಆದ್ಮೇಲೆ ಪತಿ ದರ್ಶನ್ ಜೊತೆಗೆ ವಿಜಯಲಕ್ಷ್ಮಿಗೆ ಮೊಟ್ಟ ಮೊದಲ ಜನ್ಮದಿನದ ಸಂಭ್ರಮ. ಈ ಸಡಗರದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ನೋಡಿದ ಸಿನಿಮಾ ಯಾವುದು ಗೊತ್ತಾ.?

  ಮದುವೆ ಆದ್ಮೇಲೆ ಸಾಮಾನ್ಯವಾಗಿ ರೊಮ್ಯಾಂಟಿಕ್ ಸಿನಿಮಾ ನೋಡಿರಬಹುದು ಅಂತ ನೀವು ಭಾವಿಸಬಹುದು. ಆದ್ರೆ, ದರ್ಶನ್ ಮತ್ತು ವಿಜಯಲಕ್ಷ್ಮಿ ವಿಷಯದಲ್ಲಿ ಇದು ಉಲ್ಟಾ. ಮದುವೆ ಆದ್ಮೇಲೆ ಇವರಿಬ್ಬರು ಒಟ್ಟಿಗೆ ಕೂತು ನೋಡಿದ್ದು ಔಟ್ ಅಂಡ್ ಔಟ್ ಮಾಸ್ ಎಂಟರ್ ಟೇನರ್. ಯಾವುದು ಆ ಚಿತ್ರ ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ಪತಿ-ಪತ್ನಿ ನೋಡಿದ ಚಿತ್ರ

  ಪತಿ-ಪತ್ನಿ ನೋಡಿದ ಚಿತ್ರ

  ಮದುವೆ ಬಳಿಕ ಪತ್ನಿ ವಿಜಯಲಕ್ಷ್ಮಿ ಜೊತೆಗೆ ದರ್ಶನ್ ಒಟ್ಟಿಗೆ ಕೂತು ನೋಡಿದ ಸಿನಿಮಾ 'ದಾಸ'. ನವೆಂಬರ್ 11, 2003 ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಜಯಲಕ್ಷ್ಮಿ ಇದ್ದಾಗ, 'ದಾಸ' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಂದು ದರ್ಶನ್ ಫ್ಯಾಮಿಲಿ, ಫ್ರೆಂಡ್ಸ್ ಕೂತು ಮೈಸೂರಿನ ಸರಸ್ವತಿ ಥಿಯೇಟರ್ ನಲ್ಲಿ 'ದಾಸ'ನನ್ನ ಕಣ್ತುಂಬಿಕೊಂಡಿದ್ದರು.

  'ಬಾಸ್': ದರ್ಶನ್ ಸ್ವಂತ ಬ್ರಾಂಡ್ ಗೆ 'ಟೈಟಲ್' ನೀಡಿದ್ದು ಈ ವ್ಯಕ್ತಿ'ಬಾಸ್': ದರ್ಶನ್ ಸ್ವಂತ ಬ್ರಾಂಡ್ ಗೆ 'ಟೈಟಲ್' ನೀಡಿದ್ದು ಈ ವ್ಯಕ್ತಿ

  ನಿರ್ಮಾಪಕ ರಮೇಶ್ ಯಾದವ್ ಏನಂತಾರೆ.?

  ನಿರ್ಮಾಪಕ ರಮೇಶ್ ಯಾದವ್ ಏನಂತಾರೆ.?

  ''ದರ್ಶನ್ ಮದುವೆ ಆದ್ಮೇಲೆ, ಪತ್ನಿ ಜೊತೆ ದರ್ಶನ್ ನೋಡಿದ ಸಿನಿಮಾ 'ದಾಸ'. ಅವತ್ತು ದರ್ಶನ್ ಪತ್ನಿ ಬರ್ತಡೇ ಇತ್ತು. ಆಗ ಸ್ಪೆಷಲ್ ಶೋ ಮಾಡಿದ್ವಿ'' ಎಂದು 'ಫಿಲ್ಮಿಬೀಟ್ ಕನ್ನಡ'ಕ್ಕೆ ತಿಳಿಸಿದ್ದಾರೆ 'ದಾಸ' ನಿರ್ಮಾಪಕ ರಮೇಶ್ ಯಾದವ್.

  ಹುಟ್ಟುಹಬ್ಬದಿಂದ ಅನಾಥಾಶ್ರಮ-ವೃದ್ಧಾಶ್ರಮ ತುಂಬುತ್ತೆ: ದರ್ಶನ್ಹುಟ್ಟುಹಬ್ಬದಿಂದ ಅನಾಥಾಶ್ರಮ-ವೃದ್ಧಾಶ್ರಮ ತುಂಬುತ್ತೆ: ದರ್ಶನ್

  'ದಾಸ' ಟೈಟಲ್ ಫಿಕ್ಸ್ ಆಗಿದ್ದು ಹೇಗೆ.?

  'ದಾಸ' ಟೈಟಲ್ ಫಿಕ್ಸ್ ಆಗಿದ್ದು ಹೇಗೆ.?

  ಇಂದು ದರ್ಶನ್ 'ಅಭಿಮಾನಿಗಳ ದಾಸ' ಅಂತಲೇ ಫೇಮಸ್ ಆಗಿದ್ದಾರೆ. ಟ್ವಿಟ್ಟರ್ ಅಕೌಂಟ್ ನಲ್ಲಿ ದರ್ಶನ್ ಹ್ಯಾಂಡಲ್ 'ದಾಸ ದರ್ಶನ್' ಅಂತಲೇ ಇದೆ. ಅಸಲಿಗೆ, 'ದಾಸ' ಅಂತ ಶೀರ್ಷಿಕೆ ಬಂದಿದ್ದು ಹೇಗೆ ಅಂದ್ರೆ.. ''ಮೆಜೆಸ್ಟಿಕ್' ಚಿತ್ರವನ್ನ ನಾನು ನೋಡಿದ್ದೆ. ಆ ಸಿನಿಮಾದಲ್ಲಿ ದರ್ಶನ್ ಹೆಸರು ದಾಸ. ಸಿನಿಮಾ ಮುಗಿದ ಮೇಲೆ ಸೀದಾ ಹೋಗಿ 'ದಾಸ' ಅಂತಲೇ ಟೈಟಲ್ ರಿಜಿಸ್ಟರ್ ಮಾಡಿಸಿದೆ. ಆಮೇಲೆ, ದರ್ಶನ್ ಗಾಗಿ 'ದಾಸ' ಅಂತಲೇ ಸಿನಿಮಾ ಮಾಡಿದೆ'' ಎನ್ನುತ್ತಾರೆ ನಿರ್ಮಾಪಕ ರಮೇಶ್ ಯಾದವ್.

  ದರ್ಶನ್-ವಿಜಯಲಕ್ಷ್ಮಿ: ಒಂದೊಳ್ಳೆ ಕಾರಣಕ್ಕೆ ಮತ್ತೆ ಸುದ್ದಿಯಾದಾಗ...ದರ್ಶನ್-ವಿಜಯಲಕ್ಷ್ಮಿ: ಒಂದೊಳ್ಳೆ ಕಾರಣಕ್ಕೆ ಮತ್ತೆ ಸುದ್ದಿಯಾದಾಗ...

  ಟೈಟಲ್ ಇಟ್ಟ ಮೇಲೆ ಕಥೆ ಮಾಡಿದ್ದು.!

  ಟೈಟಲ್ ಇಟ್ಟ ಮೇಲೆ ಕಥೆ ಮಾಡಿದ್ದು.!

  ''ಪಿ.ಎನ್.ಸತ್ಯ ಅವರನ್ನ ಮೀಟ್ ಮಾಡಿ, ದರ್ಶನ್ ಗಾಗಿ ಸಿನಿಮಾ ಮಾಡಬೇಕು ಅಂತ ಹೇಳಿದೆ. ಚಿತ್ರಕ್ಕೆ 'ದಾಸ' ಅಂತ ಟೈಟಲ್ ಕೇಳುತ್ತಿದ್ದ ಹಾಗೆ, ಪಿ.ಎನ್.ಸತ್ಯ ನಗಲು ಶುರು ಮಾಡಿದರು. ಯಾಕಂದ್ರೆ, ಅವರ 'ಮೆಜೆಸ್ಟಿಕ್' ಚಿತ್ರದಲ್ಲಿ ದರ್ಶನ್ ಹೆಸರು ದಾಸ'' - ರಮೇಶ್ ಯಾದವ್, ನಿರ್ಮಾಪಕ.

  'ದಾಸ' ಚಿತ್ರದ ಬಜೆಟ್ ಎಷ್ಟು.?

  'ದಾಸ' ಚಿತ್ರದ ಬಜೆಟ್ ಎಷ್ಟು.?

  ''ಪಿ.ಎನ್.ಸತ್ಯ ಹತ್ತಿರ ಒಂದು ಕಥೆ ಇತ್ತು. ತಾಯಿ ಸೆಂಟಿಮೆಂಟ್ ಬಗ್ಗೆ ಒಂದು ಕಥೆ ಹೇಳಿದರು. ಅದು ನನಗೆ ಇಷ್ಟ ಆಯ್ತು. ಕಥೆ ಫೈನಲ್ ಮಾಡಿಕೊಂಡು, ದರ್ಶನ್ ರನ್ನ ಮೀಟ್ ಮಾಡಿದ್ವಿ. ಸಿನಿಮಾ ಸೆಟ್ಟೇರಿತು. 2-3 ಕೋಟಿ ರೂಪಾಯಿ ಬಜೆಟ್ ನಲ್ಲಿ 'ದಾಸ' ಚಿತ್ರ ರೆಡಿ ಆಯ್ತು'' - ರಮೇಶ್ ಯಾದವ್, ನಿರ್ಮಾಪಕ.

  ಶತದಿನೋತ್ಸವ ಆಚರಿಸಿಕೊಂಡ 'ದಾಸ'

  ಶತದಿನೋತ್ಸವ ಆಚರಿಸಿಕೊಂಡ 'ದಾಸ'

  ''ದಾಸ' ಚಿತ್ರದಲ್ಲಿ ದರ್ಶನ್ ಗೆ ಮಾಸ್ ಇಮೇಜ್ ಇತ್ತು. ರಿಲೀಸ್ ಆದಾಗ ಆಲ್ ಏರಿಯಾ ಸೋಲ್ಡ್ ಔಟ್. ಒಳ್ಳೆಯ ರೆಸ್ಪಾನ್ಸ್ ಬಂತು. 'ದಾಸ' 100 ಡೇಸ್ ಓಡ್ತು. ದರ್ಶನ್ ಕೆರಿಯರ್ ಗೆ 'ದಾಸ' ಉತ್ತಮ ಬ್ರೇಕ್ ಕೊಡ್ತು'' ಅಂತಾರೆ ರಮೇಶ್ ಯಾದವ್.

  ದೊಡ್ಡ ತಿರುವು ಕೊಟ್ಟ 'ದಾಸ'

  ದೊಡ್ಡ ತಿರುವು ಕೊಟ್ಟ 'ದಾಸ'

  2003 ರಲ್ಲಿ ಬಿಡುಗಡೆ ಆದ ಚಿತ್ರಗಳ ಪೈಕಿ 'ದಾಸ' ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ದೊಡ್ಡ ಮಟ್ಟದ ನಿರೀಕ್ಷೆ ಇಲ್ಲದೆ ತೆರೆಗೆ ಬಂದ 'ದಾಸ' ಅಲ್ಲಿಯವರೆಗಿನ ದರ್ಶನ್ ಕೆರಿಯರ್ ನಲ್ಲಿ ಬಿಗ್ ಹಿಟ್ ಆಯ್ತು. 'ದಾಸ' ಚಿತ್ರದಿಂದ ದರ್ಶನ್ ವೃತ್ತಿಬದುಕಿಗೆ ಹೊಸ ತಿರುವು ಸಿಕ್ತು. ಇವೆಲ್ಲದರ ಜೊತೆಗೆ ಮದುವೆ ಆದ್ಮೇಲೆ, ಪತ್ನಿ ಜನ್ಮದಿನದಂದು ದರ್ಶನ್ ಮತ್ತು ವಿಜಯಲಕ್ಷ್ಮಿ ಒಟ್ಟಿಗೆ ನೋಡಿದ ಚಿತ್ರ ಎಂಬ ಸೆಂಟಿಮೆಂಟ್ ಕೂಡ ಈ ಚಿತ್ರಕ್ಕಿದೆ. ಹೀಗಾಗಿ, ದರ್ಶನ್ ಮತ್ತು ವಿಜಯಲಕ್ಷ್ಮಿ ಪಾಲಿಗೆ 'ದಾಸ' ಸಿನಿಮಾ ತುಂಬಾನೇ 'ಸ್ಪೆಷಲ್'.

  English summary
  Do you know which is the movie Vijayalakshmi and Darshan watched after getting married.? Read this article to know the answer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X