twitter
    For Quick Alerts
    ALLOW NOTIFICATIONS  
    For Daily Alerts

    'ಗಂಧದ ಗುಡಿ' ಡಾ.ರಾಜ್‌ಕುಮಾರ್‌ 150ನೇ ಸಿನಿಮಾ: ಈ ಚಿತ್ರಕ್ಕೆ ಸಿಕ್ಕಿದ್ದ ಸಂಭಾವನೆ ಎಷ್ಟು?

    |

    ವಿಭಿನ್ನ ಸಿನಿಮಾಗಳ ಹರಿಕಾರರು ಸ್ಯಾಂಡಲ್‌ವುಡ್ ಮಂದಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಇದು ಇಂದಿನ ಮಾತಲ್ಲ. ಹಿಂದಿನಿಂದಲೂ ಕನ್ನಡದ ಫಿಲ್ಮ್‌ಮೇಕರ್ಸ್‌ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಗೆದ್ದಿದ್ದಾರೆ. ಅಂತಹ ಪ್ರಯತ್ನಗಳ ಫಲವೇ 'ಗಂಧದ ಗುಡಿ'.

    'ಗಂಧದ ಗುಡಿ' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ಸಿನಿಮಾ. ಈ ಸಿನಿಮಾ ಯಶಸ್ಸು ಎಲ್ಲಾ ಚಿತ್ರರಂಗದ ಮಗನ ಸೆಳೆದಿತ್ತು. 'ಗಂಧದ ಗುಡಿ' ಸ್ಟೋರಿಗೆ, ಅಣ್ಣಾವ್ರ ಅಭಿನಯಕ್ಕೆ ಮನಸೋತಿದ್ದರು.

    ಅಪ್ಪು ಕೊನೆಯ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 'ಗಂಧದ ಗುಡಿ' ಪ್ರೀಮಿಯರ್ ಶೂ ಟಿಕೆಟ್ ಸೋಲ್ಡ್ ಔಟ್!ಅಪ್ಪು ಕೊನೆಯ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 'ಗಂಧದ ಗುಡಿ' ಪ್ರೀಮಿಯರ್ ಶೂ ಟಿಕೆಟ್ ಸೋಲ್ಡ್ ಔಟ್!

    1973ರಲ್ಲಿ ತೆರೆಕಂಡಿದ್ದ 'ಗಂಧದ ಗುಡಿ' ಸಿನಿಮಾ ಹಿಂದಿ, ತೆಲುಗು, ಮಲಯಾಳಂ ಚಿತ್ರರಂಗದ ಸಿನಿಮಾ ಮಂದಿಯ ನಿದ್ದೆ ಕೆಡಿಸಿತ್ತು. ಅಂದು ಅಣ್ಣಾವ್ರ ಸಿನಿಮಾ ಥಿಯೇಟರ್‌ನಲ್ಲಿ ಎಬ್ಬಿಸಿದ್ದ ಹವಾ ಕಂಡು ಬೆರಗಾಗಿದ್ದರು. ಆದರೆ, ಬಾಕ್ಸಾಫೀಸ್‌ ಅನ್ನೇ ಅಲ್ಲಾಡಿಸಿದ್ದ ಈ ಸಿನಿಮಾಗಾಗಿ ಅಣ್ಣಾವ್ರಿಗೆ ಸಿಕ್ಕ ಸಂಭಾವನೆ ಕೇಳಿದರೆ ನೀವು ಶಾಕ್ ಆಗಬಹುದು. ಸಂಭಾವನೆ ಎಷ್ಟು ಅಂತ ತಿಳಿಯಲು ಮುಂದೆ ಓದಿ.

    ಅಣ್ಣಾವ್ರ 150ನೇ ಸಿನಿಮಾ 'ಗಂಧದ ಗುಡಿ'

    ಅಣ್ಣಾವ್ರ 150ನೇ ಸಿನಿಮಾ 'ಗಂಧದ ಗುಡಿ'

    49 ವರ್ಷಗಳ ಹಿಂದೆ ಕನ್ನಡ ಚಿತ್ರರಂಗ ಗತಿಯನ್ನೇ ಬದಲಿಸಿದ ಸಿನಿಮಾ 'ಗಂಧದ ಗುಡಿ'. ಎಂ ಪಿ ಶಂಕರ್ ನಿರ್ಮಸಿದ್ದ ಈ ಸಿನಿಮಾ ಹಲವು ಕಾರಣಗಳಿಗೆ ಇಂದಿಗೂ ಜನಪ್ರಿಯ. ಇನ್ನೂ 50 ವರ್ಷಗಳಾದರೂ ಈ ಸಿನಿಮಾ ಜನಮಾನಸದಿಂದ ಮರೆಯಾಗುವ ಮಾತೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ಡಾ.ರಾಜ್‌ಕುಮಾರ್ ನಟಿಸಿದ 150ನೇ ಸಿನಿಮಾ ಆಗಿತ್ತು. ಇದು ಡಾ.ರಾಜ್‌ಕುಮಾರ್ ವೃತ್ತಿ ಬದುಕಿನ ಮೈಲಿಗಲ್ಲು. ಕಾಡಿನ ಹಿನ್ನೆಲೆಯುಳ್ಳ ಸಿನಿಮಾ ಅದಾಗಲೇ ಬಂದಿದ್ದರೂ, ಕಾಡನ್ನು ಉಳಿಸುವ ಸಂದೇಶ ಹೊತ್ತು ಕಮರ್ಷಿಯಲ್ ಟಚ್ ಕೊಟ್ಟ ಉದಾಹರಣೆಗಳಿರಲಿಲ್ಲ. ಅದಕ್ಕೆ ಅಣ್ಣಾವ್ರ 'ಗಂಧದ ಗುಡಿ' ದೇಶಾದ್ಯಂತ ಜನರ ಗಮನ ಸೆಳೆದಿತ್ತು.

    ಡಾ.ರಾಜ್-ಡಾ.ವಿಷ್ಣು ಜೋಡಿಯ ಏಕೈಕ ಸಿನಿಮಾ

    ಡಾ.ರಾಜ್-ಡಾ.ವಿಷ್ಣು ಜೋಡಿಯ ಏಕೈಕ ಸಿನಿಮಾ

    ಆಗತಾನೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸಾಹಸ ಸಿಂಹ ಉದಯೋನ್ಮುಕ ನಟನಾಗಿ ಮಿಂಚುತ್ತಿದ್ದರು. 'ಗಂಧದ ಗುಡಿ' ಸಿನಿಮಾದಲ್ಲಿ ಅಣ್ಣಾವ್ರು ಫಾರೆಸ್ಟ್ ಆಫೀಸರ್ ಆಗಿ ಕಂಡಿದ್ದರೆ. ಇನ್ನೊಂದು ಕಡೆ ಸಾಹಸ ಸಿಂಹ ಖಳನಾಯಕನಾಗಿ ನಟಿಸಿದ್ದರು. ದುರಾದೃಷ್ಟವಶಾತ್ ಕ್ಲೈಮ್ಯಾಕ್ಸ್‌ನಲ್ಲಿ ನಡೆದ 'ಗನ್ ಘಟನೆ' ಇಬ್ಬರನ್ನು ದೂರ ಮಾಡಿದ್ದರು. ಅಲ್ಲಿಂದ ಈ ಜೋಡಿ ಮತ್ತೆ ಒಂದಾಗಲೇ ಇಲ್ಲ.

    150ನೇ ಸಿನಿಮಾಗೆ ಡಾ.ರಾಜ್‌ ಪಡೆದ ಸಂಭಾವನೆ ಎಷ್ಟು?

    150ನೇ ಸಿನಿಮಾಗೆ ಡಾ.ರಾಜ್‌ ಪಡೆದ ಸಂಭಾವನೆ ಎಷ್ಟು?

    "ಅದಾಗಲೇ ಡಾ.ರಾಜ್‌ಕುಮಾರ್ ಸೂಪರ್‌ಸ್ಟಾರ್ ಆಗಿದ್ದರು. ತಮ್ಮ ವೃತ್ತಿ ಬದುಕಿನ 150ನೇ ಸಿನಿಮಾದ ಗಡಿ ತಲುಪಿದ್ದರು. ಆದರೆ, ಸಂಭಾವನೆ ಮಾತ್ರ ಅಷ್ಟಕ್ಕಷ್ಟೇ ಇತ್ತು. ಈ ಚಿತ್ರಕ್ಕೆ ಅಣ್ಣಾವ್ರಿಗೆ ಸಿಕ್ಕ ಸಂಭಾವನೆ 44 ಸಾವಿರ ರೂಪಾಯಿ. ಈ ಮಾತನ್ನು ಕಸ್ತೂರಿ ನಿವಾಸ ಮರುಬಿಡುಗಡೆಯಾದ ವೇಳೆ ರಾಘವೇಂದ್ರ ರಾಜ್‌ಕುಮಾರ್ ಮಾಧ್ಯಮದವರ ಮುಂದೆ ಹೇಳಿದ್ದರು. ಆದರೆ ಇದು ಅಂದು ಎಲ್ಲೂ ದಾಖಲಾಗಿಲ್ಲ" ಎಂದು ಚಿತ್ರರಂಗದ ಗಣ್ಯರೊಬ್ಬರು ನೆನಪಿಸಿಕೊಂಡಿದ್ದಾರೆ.

    'ಗಂಧದ ಗುಡಿ'ಯಿಂದ ಹೊಸ ಇತಿಹಾಸ?

    'ಗಂಧದ ಗುಡಿ'ಯಿಂದ ಹೊಸ ಇತಿಹಾಸ?

    ಪುನೀತ್‌ ರಾಜ್‌ಕುಮಾರ್ ಮತ್ತೊಮ್ಮೆ 'ಗಂಧದ ಗುಡಿ'ಯನ್ನು ತಮ್ಮದೇ ದೃಷ್ಟಿಯಲ್ಲಿ ತೆರೆಮೇಲೆ ತರಲು ಹೊರಟಿದ್ದರು. ಕರ್ನಾಟಕದ ಪ್ರಕೃತಿ ಸಮೃದ್ಧಿಯನ್ನು ದೃಶ್ಯ ರೂಪದಲ್ಲಿ ಬಿಂಬಿಸಲು ಸಜ್ಜಾಗಿದ್ದರು. ಇದು ಇನ್ನುಎರಡು ದಿನಗಳಲ್ಲಿ ಕನ್ನಡಿಗರ ಕಣ್ಮುಂದೆ ಬರುತ್ತೆ. ಅಪ್ಪು ಒಬ್ಬ ನಟನಾಗಿ ಅಲ್ಲದೆ ಪುನೀತ್ ರಾಜ್‌ಕುಮಾರ್ ಆಗಿಯೇ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪನಂತೆಯೇ ಮತ್ತೊಂದು ಕನ್ನಡಿಗರಿಗೆ, ವಿಶ್ವಕ್ಕೆ 'ಗಂಧದ ಗುಡಿ'ಯ ಪರಿಚಯ ಮಾಡಿಸಲು ಹೊರಡಿಸಿದ್ದಾರೆ.

    English summary
    Dr.Rajkumar Remuneration For Gandhada Gudi Movie Released In 1973, Know More.
    Wednesday, October 26, 2022, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X