Just In
Don't Miss!
- Sports
ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ಗೆ ಅದೃಷ್ಟವಶಾತ್ ಅರ್ಹತೆ ಪಡೆದ ಪಿವಿ ಸಿಂಧು!
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಎಲೆಕ್ಟ್ರಿಕ್ ಕಾರ್ ಆಗಿ ಮಾಡಿಫೈಗೊಂಡ ಮಾರುತಿ ಸುಜುಕಿ ಡಿಜೈರ್
- News
ಅರ್ನಬ್ಗೆ ದಾಳಿ ಬಗ್ಗೆ ಗೌಪ್ಯ ಮಾಹಿತಿ ಸಿಗಲು ಮೋದಿಯೇ ಕಾರಣ; ರಾಹುಲ್ ಗಾಂಧಿ
- Finance
ಷೇರುಪೇಟೆ: ಸೆನ್ಸೆಕ್ಸ್ 530 ಪಾಯಿಂಟ್ಸ್ ಕುಸಿತ, ನಿಫ್ಟಿ 133 ಪಾಯಿಂಟ್ಸ್ ಇಳಿಕೆ
- Lifestyle
ಗಣರಾಜ್ಯೋತ್ಸವ 2021: ದೇಶದ ನಾಯಕರ ಸ್ಪೂರ್ತಿದಾಯಕ ನುಡಿಮುತ್ತುಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020; ಕೊರೊನಾ ವರ್ಷದಲ್ಲೂ ಗಮನ ಸೆಳೆದ ಕನ್ನಡದ ಸಿನಿಮಾಗಳಿವು
2020...ಈ ವರ್ಷದಲ್ಲಿ ಸಿನಿ ಜಗತ್ತಿಗೆ ಸಿಕ್ಕಿರುವುದೇ ಕಡಿಮೆ ಸಮಯ. ಕೊರೊನಾದಿಂದ ಬಹುತೇಕ ತಿಂಗಳು ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಮನೆಯಲ್ಲೇ ಕೂರುವಂತಾಗಿತ್ತು. ಈ ವರ್ಷ ಜನವರಿಯಿಂದ ಮಾರ್ಚ್ ತಿಂಗಳ ಮಧ್ಯದ ವರೆಗೆ ರಿಲೀಸ್ ಆದ ಸಿನಿಮಾಗಳಲ್ಲಿ ಕೆಲವು ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿವೆ.
ಕಡಿಮೆ ಅವಧಿಯಲ್ಲೂ ಕನ್ನಡದಲ್ಲಿ ಈ ಬಾರಿ ಉತ್ತಮ ಸಿನಿಮಾಗಳು ರಿಲೀಸ್ ಆಗಿವೆ. ಬಾಕ್ಸ್ ಆಫೀಸ್ ಲೂಟಿ ಮಾಡದಿದ್ದರೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಲವ್ ಮಾಕ್ಟೇಲ್, ದಿಯಾ, ಶಿವಾಜಿ ಸೂರತ್ಕಲ್, ಪಾಪ್ ಕಾರ್ನ್ ಮಂಕಿ ಟೈಗರ್ ಹೀಗೆ ಕೆಲವು ಸಿನಿಮಾಗಳು ಈ ವರ್ಷ ಗಮನ ಸೆಳೆದ ಸಿನಿಮಾಗಳ ಲಿಸ್ಟ್ ನಲ್ಲಿದೆ. ಈ ಬಗ್ಗೆ ಒಂದು ವಿವರ ಇಲ್ಲಿದೆ..
2020 ಕನ್ನಡ ಚಿತ್ರರಂಗ; ಕೊರೊನಾ ವರ್ಷದಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು

'ಲವ್ ಮಾಕ್ ಟೇಲ್' ಸಿನಿಮಾ
ಈ ವರ್ಷ ರಿಲೀಸ್ ರಿಲೀಸ್ ಆದ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಚಿತ್ರಗಳಲ್ಲಿ ಲವ್ ಮಾಕ್ಟೇಲ್ ಸಿನಿಮಾ ಕೂಡ ಒಂದು. ಜನವರಿ ತಿಂಗಳ ಕೊನೆಯಲ್ಲಿ ಬಂದ 'ಲವ್ ಮಾಕ್ ಟೇಲ್' ಸಿನಿಮಾ ಮಲಗಿದ್ದ ಚಿತ್ರರಂಗವನ್ನು ಬಡಿದೆಬ್ಬಿಸಿತ್ತು. ಈ ವರ್ಷದ ಪ್ರಾರಂಭ ಚಿತ್ರರಂಗಕ್ಕೆ ಉತ್ತಮ ವರ್ಷವೇ ಆಗಿತ್ತು. ಲವ್ ಮಾಕ್ ಟೇಲ್ ಸಿನಿಮಾ ರಿಲೀಸ್ ಆದ ಮೊದಲು ಚಿತ್ರಮಂದಿರಗಳು ಸಿಗದೆ ಪರದಾಡುತ್ತಿದ್ದ ಚಿತ್ರತಂಡ ಕೊನೆಗೆ ಪ್ರೇಕ್ಷಕರು ಸಿನಿಮಾ ಒಪ್ಪಿಕೊಂಡ ಬಳಿಕ ಅದ್ಭುತ ಪ್ರದರ್ಶನ ಕಂಡಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಿಂಚಿದ್ದಾರೆ.

ಜಂಟಲ್ ಮ್ಯಾನ್
ಈ ವರ್ಷ ಗಮನ ಸೆಳೆದ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಸಿನಿಮಾ ಕೂಡ ಒಂದು. ಫೆಬ್ರವರಿ 7ರಂದು ತೆರೆಗೆ ಬಂದ ಈ ಸಿನಿಮಾ, ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡದಿದ್ದರೂ, ಗಾಂಧಿನಗರದ ಗಲ್ಲಿಯಲ್ಲಿ ಸದ್ದು ಮಾಡಿತ್ತು. ಚಿತ್ರದ ಹಾಡುಗಳು ಗಾನಪ್ರಿಯರ ಹೃದಯ ಗೆದ್ದಿವೆ.

ದಿಯಾ ಸಿನಿಮಾ
ಈ ವರ್ಷ ಚಿತ್ರಪ್ರಿಯರ ಗಮನ ಸೆಳೆದ ಸಿನಿಮಾಗಳಲ್ಲಿ ದಿಯಾ ಸಿನಿಮಾ ಕೂಡ ಒಂದು. ಕೆ.ಎಸ್ ಅಶೋಕ್ ನಿರ್ದೇೆಶನದ ದಿಯಾ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗಿದೆ. ಖುಷಿ ರವಿ, ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ರಿಲೀಸ್ ಆದ ಸಮಯದಲ್ಲಿ ಚಿತ್ರಮಂದಿರಗಳು ಸಿಗದೆ ಪರದಾಡಿದ್ದ ಸಿನಿಮಾತಂಡ, ಬಳಿಕ ಚಿತ್ರಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ಆದರೆ ಅಷ್ಟರಲ್ಲೇ ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಪ್ರದರ್ಶನ ನಿಲ್ಲಿಸಬೇಕಾಯಿತು.

ಪಾಪ್ ಕಾರ್ನ್ ಮಂಕಿ ಟೈಗರ್
ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಪಾಪ್ ಕಾರ್ನ್ ಮಂಕಿ ಟೈಗರ್ ಸಹ ಈ ವರ್ಷ ಗಮನ ಸೆಳೆದ ಸಿನಿಮಾಗಳ ಲಿಸ್ಟ್ ನಲ್ಲಿದೆ. ಸೂಪರ್ ಹಿಟ್ ಟಗರು ಸಿನಿಮಾ ಬಳಿಕ ಸೂರಿ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ. ಈ ಸಹ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಪ್ರದರ್ಶನ ರದ್ದು ಮಾಡಬೇಕಾಯಿತು.

ಶಿವಾಜಿ ಸೂರತ್ಕಲ್ ಸಿನಿಮಾ
ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾ ಈ ವರ್ಷ ಗಮನ ಸೆಳೆದ ಸಿನಿಮಾಳಲ್ಲಿ ಒಂದಾಗಿದೆ. ಮಿಸ್ಟರಿ ಥ್ರಿಲ್ಲರ್ ಸಿನಿಮಾಗೆ ಅಭಿಮಾನಿಗಳು ಫಿದಾ ಆಗಿದ್ದರು. ಆಕಾಶ್ ಶ್ರೀವತ್ಸ ಸಾರಥ್ಯದಲ್ಲಿ ಬಂದ ಈ ಸಿನಿಮಾ ಸಹ ಫೆಬ್ರವರಿ 21ರಂದು ರಿಲೀಸ್ ಆಗಿದೆ. ಆದರೆ ಸ್ವಲ್ಪ ದಿನಗಳಲ್ಲೇ ಲಾಕ್ ಡೌನ್ ಆದ ಕಾರಣ ಸಿನಿಮಾ ಪ್ರದರ್ಶನ ನಿಲ್ಲಿಸಬೇಕಾಯಿತು.

ಆಕ್ಟ್ 1978 ಸಿನಿಮಾ
ಲಾಕ್ ಡೌನ್ ಬಳಿಕ ಬಂದ ಸಿನಿಮಾ ಆಕ್ಟ್ 1978. ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿ ಆಕ್ಟ್ 1978 ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಾರಥ್ಯದಲ್ಲಿ ಬಂದ ಈ ಸಿನಿಮಾದಲ್ಲಿ ನಟಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಾಯಾಬಜಾರ್ ಮತ್ತು ದ್ರೋಣ, ನಾನು ಮತ್ತು ಗುಂಡ
ಅಲ್ಪಾವಧಿಯಲ್ಲೇ ಬಂದ ಸಿನಿಮಾಗಳಲ್ಲಿ ಮಾಯಾಬಜಾರ್, ದ್ರೋಣ ಮತ್ತು ನಾನು ಮತ್ತು ಗುಂಡ ಸಿನಿಮಾಗಳು ಸಹ ಇವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಬಂದ ಮಾಯಾಬಜಾರ್ ಸಿನಿಮಾದಲ್ಲಿ ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು. ಇನ್ನು ಈ ವರ್ಷ ತೆರೆಗೆ ಬಂದ ಸ್ಟಾರ್ ಸಿನಿಮಾಗಳಲ್ಲಿ ದ್ರೋಣ ಕೂಡ ಒಂದು. ಆದರೆ ಈ ಸಿನಿಮಾ ಬಂದಷ್ಟೆ ವೇಗದಲ್ಲಿ ಚಿತ್ರಮಂದಿರದಿಂದ ಮಾಯವಾಯಿತು. ಇನ್ನು ನಾನು ಮತ್ತು ಗುಂಡ ಸಿನಿಮಾ ಸದ್ದು ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿದೆ.

ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳು
ಲಾಕ್ ಡೌನ್ ಆದ ಬಳಿಕ ಸಿನಿಮಾಗಳನ್ನು ಹೇಗೆ ಪ್ರೇಕ್ಷಕರಿಗೆ ತಲುಪಿಸುವುದು ಎಂದು ಯೋಚಿಸಿದ್ದ ಸಮಯದಲ್ಲಿ ನಿರ್ಮಾಪಕರಿಗೆ ಹೊಳೆದ ದಾರಿ ಒಟಿಟಿ. ಲಾಕ್ ಬಳಿಕ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಅನೇಕ ಸಿನಿಮಾಗಳು ಆನ್ ಲೈನ್ ನಲ್ಲಿ ರಿಲೀಸ್ ಆಗಿವೆ. ಕನ್ನಡದಲ್ಲಿ ಒಟಿಟಿಯಲ್ಲಿ ರಿಲೀಸ್ ಆದ ಮೊದಲ ಸಿನಿಮಾ ಲಾ. ಆದರೆ ಈ ಸಿನಿಮಾ ನಿರೀಕ್ಷೆಯ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಇನ್ನೂ ಫ್ರೆಂಚ್ ಬಿರಿಯಾನಿ ಮತ್ತು ಭೀಮಸೇನ ನಳಮಹಾರಾಜ ಸಿನಿಮಾಗಳು ತಕ್ಕಮಟ್ಟಿಗೆ ಸದ್ದು ಮಾಡಿದೆ.