Don't Miss!
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರ ಬಾಕ್ಸಾಫೀಸ್‌ನಲ್ಲಿ ಭಾರತದ ಟಾಪ್ 5 ಸಿನಿಮಾಗಳು ಇವೆನೇ: ಈ ಲಿಸ್ಟ್‌ನಲ್ಲಿರೋ ಕನ್ನಡ ಚಿತ್ರಗಳೆಷ್ಟು?
ಇತ್ತೀಚೆಗಿನ ದಿನಗಳಲ್ಲಿ ಭಾರತೀಯ ಸಿನಿಮಾಗಳು ಬದಲಾಗುತ್ತಿವೆ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡುವ ಬಾಲಿವುಡ್ ಸಿನಿಮಾಗಳು ಈ ಬಾರಿನೂ ಸೋತಿದೆ. ದಕ್ಷಿಣ ಭಾರತೀಯ ಚಿತ್ರರಂಗ ಮೆಗಾಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವಲ್ಲಿ ಮತ್ತೆ ಯಶಸ್ವಿಯಾಗಿವೆ.
2022ರಲ್ಲಿ ಭಾರತೀಯ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡಿವೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಅಚ್ಚರಿ ಮೂಡಿಸಿವೆ. 'RRR', 'ಕೆಜಿಎಫ್ 2', 'ಕಾಂತಾರ', 'ಬ್ರಹ್ಮಾಸ್ತ್ರ,' 'ಭೂಲ್ ಭುಲಯ್ಯ 2' ಸೇರಿದಂತೆ ಹಲವು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ.
ಕರ್ನಾಟಕದಲ್ಲಿ
'ಕಾಂತಾರ'
ರಾಕಿ
ಭಾಯ್‌ಯ
'ಕೆಜಿಎಫ್
2'
ಸಿನಿಮಾವನ್ನು
ಹಿಂದಿಕ್ಕಿದ್ದು
ಹೇಗೆ?
ಭಾರತದ 5 ಪ್ರಮುಖ ಚಿತ್ರರಂಗದಲ್ಲಿ 2022ರಲ್ಲಿ ಗೆದ್ದು ಗೆದ್ದುಗೆ ಏರಿದ್ದು ಸ್ಯಾಂಡಲ್‌ವುಡ್. 'ಲವ್ ಮಾಕ್ಟೇಲ್ 2'ನಿಂದ ಆರಂಭ ಆಗಿದ್ದು, ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ರಿಲೀಸ್ ಆಗಿದ್ದ 'ಕೆಜಿಎಫ್ 2','ಜೇಮ್ಸ್', '777 ಚಾರ್ಲಿ', 'ವಿಕ್ರಾಂತ್ ರೋಣ', 'ಕಾಂತಾರ', 'ಗಾಳಿಪಟ 2' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಹಾಗಿದ್ದರೆ, 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತದ 5 ಸಿನಿಮಾಗಳು ಬಾಕ್ಸಾಫೀಸ್ ರಿಪೋರ್ಟ್ ಏನು? ಅನ್ನೋದನ್ನು ನೋಡಿ.

ಕೆಜಿಎಫ್ 2
ರಾಕಿಭಾಯ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಕೆಜಿಎಫ್ 2'. ಈ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನೇ ಬದಲಿಸಿತ್ತು. ನಿರ್ದೇಶನ, ಅಭಿನಯ, ಛಾಯಾಗ್ರಹಣ ಎಲ್ಲವನ್ನೂ ಪ್ರೇಕ್ಷಕರು ಮೆಚ್ಚಿಕೊಂಡಾಡಿದ್ದರು. ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್ ಅನ್ನೇ ಕೊಳ್ಳೆ ಹೊಡೆದಿತ್ತು. 'ಕೆಜಿಎಫ್ 2' ವಿಶ್ವದಾದ್ಯಂತ ಸುಮಾರು 1230 ಕೋಟಿ ರೂ. ಕಲೆ ಹಾಕುವ ಮೂಲಕ 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಟಾಪ್ 1 ನಲ್ಲಿದೆ.

RRR
ರಾಜಮೌಳಿಯ RRR ಸಿನಿಮಾ ಇನ್ನೂ ಸದ್ದು ಮಾಡುತ್ತಲೇ ಇದೆ. ಜಕ್ಕಣ್ಣ ದೇಶ-ವಿದೇಶಗಳಲ್ಲಿ ಇನ್ನೂ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಲೇ ಇದ್ದಾರೆ. ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಂದೇ ಸಿನಿಮಾಗೆ ಕರೆತಂದಿದ್ದರು. RRR ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸುಮಾರು 1144 ಕೋಟಿ ರೂ ಕಲೆ ಹಾಕಿತ್ತು. ಇದು ಅತೀ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾಗಳಲ್ಲಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದೆ.

ಪೊನ್ನಿಯನ್ ಸೆಲ್ವನ್ 1
ಮಣಿರತ್ನಂ ನಿರ್ದೇಶನದ ಮೆಗಾ ಐತಿಹಾಸಿಕ ಸಿನಿಮಾ 'ಪೊನ್ನಿಯನ್ ಸೆಲ್ವನ್ 1'. ಚೋಳ ಸಾಮ್ರಾಜ್ಯದ ಕಥೆಯನ್ನು ತೆರೆ ಮೇಲೆ ತಂದಿ ಮಣಿರತ್ನಂ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರೀಕ್ಷಿಸಿದಷ್ಟು ಸದ್ದು ಮಾಡಿರಲಿಲ್ಲ. ಆದರೆ, ತಮಿಳುನಾಡಿನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಐಶ್ವರ್ಯಾ ರೈ ಬಚ್ಚನ್, ವಿಕ್ರಂ, ಜಯಂ ರವಿ, ತ್ರಿಶಾ, ಕಾರ್ತಿ, ಶೋಭಿತಾ ಧುಲಿಪಲಾ ನಟಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.

'ವಿಕ್ರಂ'
ಕಮಲ್ ಹಾಸನ್ ಕರಿಯರ್‌ಗೆ ಮತ್ತೊಂದು ಬ್ಲಾಕ್‌ಬಸ್ಟರ್ ಕೊಟ್ಟ ಸಿನಿಮಾ 'ವಿಕ್ರಂ'. ಕಮಲ್ ಹಾಸನ್, ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ನಟಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಬರೋಬ್ಬರಿ 426 ಕೋಟಿ ರೂ. ಸಿನಿಮಾದ ಕಥೆ, ಕಮಲ್ ಹಾಸನ್ ನಟನೆ, ಲೋಕೇಶ್ ಕನಗರಾಜ್ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿತ್ತು. ಇದು 4ನೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ.

ಕಾಂತಾರ
ಭಾರತದಲ್ಲಿ ಈ ವರ್ಷ ಸಂಚಲನ ಸೃಷ್ಟಿಸಿದ್ದ ಸಿನಿಮಾ 'ಕಾಂತಾರ'. ರಿಷಬ್ ಶೆಟ್ಟಿಗೆ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಕೊಟ್ಟಿದ್ದು ಇದೇ ಸಿನಿಮಾ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅಭಿನಯದ ಈ ಸಿನಿಮಾ ಮೊದಲು ಕನ್ನಡದಲ್ಲಿ ತೆರೆಕಂಡು ಬಳಿಕ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಇದು ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು, ಸುಮಾರು 406 ಕೋಟಿ ರೂ. ಎಲ್ಲಾ ಸಿನಿಮಾಗಳಿಗೂ ಹೋಲಿಸಿದರೆ, 'ಕಾಂತಾರ' ಅತೀ ಹೆಚ್ಚು ಲಾಭ ಪಡೆದ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗೇ ಹೆಚ್ಚು ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.