For Quick Alerts
  ALLOW NOTIFICATIONS  
  For Daily Alerts

  2019ರಲ್ಲಿ ಭಾರತೀಯ ಚಿತ್ರರಂಗದ ಆದಾಯ ಎಷ್ಟು?: ಚಿತ್ರೋದ್ಯಮದ ಪ್ರಗತಿಯ ವರದಿ

  |

  ಭಾರತೀಯ ಮನರಂಜನಾ ಉದ್ಯಮ ಕೊರೊನಾ ವೈರಸ್ ಹೊಡೆತದಿಂದ ತತ್ತರಿಸಿದೆ. ಈ ವರ್ಷ ಎರಡು ತಿಂಗಳು ಮಾತ್ರ ಸಿನಿಮಾಗಳು ಪ್ರದರ್ಶನ ಕಂಡಿರಲಿಲ್ಲ. ಚಿತ್ರೀಕರಣಗಳು ಸ್ಥಗಿತಗೊಂಡಿರುವುದರಿಂದ ಮತ್ತು ಸದ್ಯದ ಸ್ಥಿತಿಯಲ್ಲಿ ಸಿನಿಮಾಗಳ ಬಿಡುಗಡೆ ಸಾಧ್ಯ ಇಲ್ಲದಿರುವುದರಿಂದ ಈ ಬಾರಿ ಚಿತ್ರೋದ್ಯಮದ ಆದಾಯ ಗಳಿಕೆ ನೆಲಕಚ್ಚುವ ಸಾಧ್ಯತೆಯೇ ಹೆಚ್ಚು. ಇದರಿಂದ ಭಾರತೀಯ ಚಿತ್ರರಂಗ ಭಾರಿ ನಷ್ಟಕ್ಕೆ ಒಳಗಾಗುವ ಅಪಾಯದಲ್ಲಿದೆ.

  2019ರಲ್ಲಿ ಭಾರತೀಯ ಚಿತ್ರರಂಗ ಉತ್ತಮ ಬೆಳವಣಿಗೆ ಕಂಡಿದೆ. 2018ಕ್ಕೆ ಹೋಲಿಸಿದರೆ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಇತರೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಉತ್ತಮ ಗಳಿಕೆ ಕಂಡಿವೆ. ಹಾಗೆಯೇ ಸಿನಿಮಾ ತಯಾರಿಕೆಯೂ ಹೆಚ್ಚಾಗಿದೆ. ಎಫ್‌ಐಸಿಸಿಐ (ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ) ಬಿಡುಗಡೆ ಮಾಡಿರುವ ವರದಿಯಲ್ಲಿ 2019ರಲ್ಲಿ ಭಾರತೀಯ ಮನರಂಜನಾ ಉದ್ಯಮ ಕಂಡಿರುವ ಪ್ರಗತಿಯನ್ನು ವಿವರಿಸಲಾಗಿದೆ. ಮುಂದೆ ಓದಿ...

  ಒಟ್ಟಾರೆ ಮನರಂಜನಾ ಉದ್ಯಮ ಪ್ರಗತಿ

  ಒಟ್ಟಾರೆ ಮನರಂಜನಾ ಉದ್ಯಮ ಪ್ರಗತಿ

  ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮ 2019ರಲ್ಲಿ 1.82 ಟ್ರಿಲಿಯನ್ ರೂಪಾಯಿ ಆದಾಯಕ್ಕೆ ಮುಟ್ಟಿದ್ದು, 2018ಕ್ಕೆ ಹೋಲಿಸಿದರೆ ಶೇ 9ರಷ್ಟು ಒಟ್ಟಾರೆ ಬೆಳವಣಿಗೆ ಕಂಡಿದೆ. ಅದರಲ್ಲಿ ಚಿತ್ರರಂಗ ಶೇ 10ರಷ್ಟು ಪ್ರಗತಿಯೊಂದಿಗೆ 191 ಬಿಲಿಯನ್ ರೂ. ಗಳಿಕೆ ಮಾಡಿದೆ.

  2019ರಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ ಎಷ್ಟು ಗೊತ್ತೇ?: ಇಲ್ಲಿದೆ ಮಾಹಿತಿ2019ರಲ್ಲಿ ಕನ್ನಡ ಚಿತ್ರರಂಗದ ಬೆಳವಣಿಗೆ ಎಷ್ಟು ಗೊತ್ತೇ?: ಇಲ್ಲಿದೆ ಮಾಹಿತಿ

  ಹಿಂದಿ ಚಿತ್ರರಂಗ

  ಹಿಂದಿ ಚಿತ್ರರಂಗ

  ಹಿಂದಿ ಚಿತ್ರೋದ್ಯಮ 49.5 ಬಿಲಿಯನ್ ರೂ ಒಟ್ಟು ಗಲ್ಲಾ ಪೆಟ್ಟಿಗೆ ಗಳಿಕೆ ಕಂಡಿದ್ದು, ದೇಶಿ ಸಿನಿಮಾಗಳು 115 ಬಿಲಿಯನ್ ರೂ. ಆದಾಯ ಸಂಗ್ರಹಿಸಿದೆ. ಸೂಪರ್ ಸ್ಟಾರ್‌ಗಳ ಸಿನಿಮಾಗಳು ಹೊರದೇಶದಲ್ಲಿ ದೊಡ್ಡ ಹಿಟ್ ಆಗದಿದ್ದರೂ ಶೇ 10ರಷ್ಟು ಚಿತ್ರಮಂದಿರ ಆದಾಯದ ಕುಸಿತದೊಂದಿಗೆ 27 ಬಿಲಿಯನ್ ರೂ. ಗಳಿಕೆ ಕಂಡಿದೆ.

  ಸಿನಿಮಾಗಳ ಗಳಿಕೆ

  ಸಿನಿಮಾಗಳ ಗಳಿಕೆ

  2019ರಲ್ಲಿ ಒಟ್ಟು 17 ಹಿಂದಿ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದವು. ಆರು ಸಿನಿಮಾಗಳು 200ಕೋಟಿ ರೂ,ಗೂ ಅಧಿಕ ಗಳಿಕೆ ಸಾಧಿಸಿದ್ದವು. ಹಾಲಿವುಡ್‌ನ ನಾಲ್ಕು ಸಿನಿಮಾಗಳು ಭಾರತದಲ್ಲಿ 100 ಕೋಟಿ ಕ್ಲಬ್ ತಲುಪಿದ್ದರೆ, ಒಂದು ಸಿನಿಮಾ 400 ಕೋಟಿ ರೂ. ಗಳಿಕೆ ಮಾಡಿದೆ.

  ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳುಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳು

  ಕನ್ನಡ ಚಿತ್ರರಂಗ

  ಕನ್ನಡ ಚಿತ್ರರಂಗ

  2019ರಲ್ಲಿ 223 ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದು, ಶೇ 36ರಷ್ಟು ಆದಾಯ ಬೆಳವಣಿಗೆಯನ್ನು ಕಂಡಿದೆ. 2018ರಲ್ಲಿ 3.8 ಬಿಲಿಯನ್ ರೂ. ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದರೆ, 2019ರಲ್ಲಿ 5.2 ಬಿಲಿಯನ್ ರೂ. ಗಳಿಕೆ ಕಂಡಿದೆ.

  ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್

  ತೆಲುಗು ಸಿನಿಮಾ

  ತೆಲುಗು ಸಿನಿಮಾ

  ತೆಲುಗಿನಲ್ಲಿ 2019ರಲ್ಲಿ 263 ಚಿತ್ರಗಳು ಬಿಡುಗಡೆಯಾಗಿವೆ. 2018ರಲ್ಲಿ 238 ಸಿನಿಮಾಗಳು ತೆರೆ ಕಂಡಿದ್ದವು. ಹಾಗೆಯೇ ಕಳೆದ ವರ್ಷ ಟಾಲಿವುಡ್ 14 ಬಿಲಿಯನ್ ಬಾಕ್ಸಾಫೀಸ್ ಗಳಿಕೆ ಕಂಡಿದೆ. 2018ಕ್ಕೆ ಹೋಲಿಸಿದರೆ 1.4%ರಷ್ಟು ಪ್ರಗತಿ ಉಂಟಾಗಿದೆ.

  ಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟಬಾಲಿವುಡ್ ಸುರಸುಂದರ ರಿಶಿ ಕಪೂರ್ ಸಿನಿಮಾ ಯಾನದ ಹಿನ್ನೋಟ

  ತಮಿಳು ಚಿತ್ರರಂಗ

  ತಮಿಳು ಚಿತ್ರರಂಗ

  ತಮಿಳಿನಲ್ಲಿ ಕನ್ನಡ ಮತ್ತು ತೆಲುಗಿಗೆ ಹೋಲಿಸಿದರೆ ಕಡಿಮೆ ಸಿನಿಮಾಗಳು ತೆರೆ ಕಂಡಿದ್ದವು. 2019ರಲ್ಲಿ ಕೇವಲ 215 ಚಿತ್ರಗಳು ಬಿಡುಗಡೆಯಾಗಿದ್ದವು. 2018ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾಗಳ ಸಂಖ್ಯೆ 243. ಆದರೆ ಬಾಕ್ಸಾಫೀಸ್ ಗಳಿಕೆಯಲ್ಲಿ ಶೇ 13.8ರಷ್ಟು ಪ್ರಗತಿಯಾಗಿದೆ. ಕಾಲಿವುಡ್ ಕಳೆದ ವರ್ಷ 14.6 ಬಿಲಿಯನ್ ರೂ. ಆದಾಯ ಕಂಡಿದೆ.

  English summary
  FICCI report on Indian entertainment industry growth and revenue in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X