twitter
    For Quick Alerts
    ALLOW NOTIFICATIONS  
    For Daily Alerts

    ನವರಸಗಳ ನಾಯಕ ಬೋಜರಾಜ ವಾಮಂಜೂರು ತುಳುನಾಡಿನ ಜನರ ಮನಗೆದ್ದ ಕಾಮಿಡಿಯನ್

    By ಪೂರ್ವ
    |

    ಕೋಸ್ಟಲ್‌ವುಡ್‌ನ ಬಹುಮುಖ ಪ್ರತಿಭೆ, ನವರಸಗಳ ನಾಯಕನೆಂದೆ ಪ್ರಸಿದ್ಧಿ ಪಡೆದ ಬೋಜರಾಜ ವಾಮಂಜೂರು ಕಾಮಿಡಿಯ ಮೂಲಕ ತುಳುನಾಡಿನ ಜನರನ್ನು ನಕ್ಕುನಗಿಸುವಲ್ಲಿ ಸೈ ಎನಿಸಿಕೊಂಡ ನಟ. ಎಲ್ಲರೊಂದಿಗೆ ಬೆರೆತು ಎಲ್ಲರನ್ನು ನಗಿಸುವ ಇವರು ಜೀವನದಲ್ಲಿ ಅನೇಕ ನೋವು ಉಂಡವರು. ಎಲ್ಲರ ಜೀವನದಲ್ಲೂ ಸಿಹಿ ಕಹಿಗಳಿದ್ದದ್ದೇ ಆದರೆ ಭೋಜರಾಜ್ ವಾಮಂಜೂರು ಕಹಿವುಂಡು ಸಿಹಿ ಹಂಚಿದವರು.

    ಅಳಿಸುವುದಕ್ಕೂ ಸೈ, ನಗಿಸುವುದಕ್ಕೂ ಸೈ ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡುತ್ತಾರೆ ಬೋಜರಾಜ ವಾಮಂಜೂರು. ಅನೇಕ ತುಳು ನಾಟಕಗಳಲ್ಲಿ ಇವರು ಮಿಂಚಿದ್ದಾರೆ. 30 ವರ್ಷಗಳ ಹಿಂದೆ ಯಕ್ಷಗಾನ ನಡೆಯುತ್ತಿರುತ್ತದೆ ಆ ವೇಳೆ ಯಕ್ಷಗಾನದ ಚೆಂಡೆಯ ಶಬ್ಧಕ್ಕೆ ಮನಸೋತ ಭೋಜರಾಜ್ ಯಕ್ಷಗಾನದಲ್ಲಿ ಬಣ್ಣ ಹಚ್ಚಲು ಶುರು ಮಾಡಿದರು. ದೇವಾಸ್ಥಾನದಲ್ಲಿ ಪ್ರತಿ ವರ್ಷ ಯಕ್ಷಗಾನ ನಡೆಯುತ್ತಿತ್ತು. ದೇವಸ್ಥಾನ ಮನೆಯ ಪಕ್ಕವೇ ಇದ್ದ ಕಾರಣ ಚೆಂಡೆಯ ಶಬ್ಧ ಕೇಳುತ್ತಿತ್ತು. ಇದನ್ನು ಆಲಿಸುತ್ತಿತ್ತಲೇ ಬೆಳೆದ ಭೋಜರಾಜ್‌ಗೆ ಸಹಜವಾಗಿಯೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಯಿತು.

    ಭೋಜರಾಜ್ ಅವರು ಬಹುಮುಖ ಪ್ರತಿಭೆ

    ಭೋಜರಾಜ್ ಅವರು ಬಹುಮುಖ ಪ್ರತಿಭೆ

    ಆರಂಭದಲ್ಲಿ ಯಕ್ಷಗಾನದಲ್ಲಿ ಬಣ್ಣ ಹಚ್ಚುವ ಅವಕಾಶ ಬಂದಾಗ ನಿರಾಕರಿಸಿದ್ದು ಇವರು, ಆ ನಂತರ ಹತ್ತಿರದವರ ಒತ್ತಾಸೆಯ ಮೇರೆಗೆ ಬಣ್ಣ ಹಚ್ಚಿದರು. ಆ ನಂತರ ಬಣ್ಣವೇ ಅವರ ಬದುಕಾಯಿತು. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಹಾಗೆಯೇ ಭೋಜರಾಜ್ ಮಾಡದ ಪಾತ್ರಗಳಿಲ್ಲ ಎನ್ನಬಹುದು. ನಟನೆ ಮಾತ್ರವೇ ಅಲ್ಲದೆ ಹಾಡು ಹಾಡುತ್ತಾರೆ, ವಾದ್ಯ ನುಡಿಸುತ್ತಾರೆ ಸಹ. ಯಕ್ಷಗಾನದಲ್ಲಿ ಸಕ್ರಿಯರಾಗಿದ್ದ ಭೊಜರಾಜ್ ಬಳಿಕ ಗಾಳಿಗೆ 'ತೆಕ್ಕಿನ ತುಡರ್' ಎಂಬ ನಾಟಕದ ಮೂಲಕ ರಂಗ ಭೂಮಿಗೆ ಪ್ರವೇಶ ಮಾಡಿದರು.

    ತುಳು ಪದ್ಯಗಳ ರಚನೆ

    ತುಳು ಪದ್ಯಗಳ ರಚನೆ

    ನಟನೆ ಮಾತ್ರವೇ ಅಲ್ಲದೆ ಸಾಹಿತ್ಯದಲ್ಲಿಯೂ ಆಸಕ್ತಿಯುಳ್ಳ ಭೋಜರಾಜ್ ತುಳು ಪದ್ಯಗಳ ರಚನೆ ಸಹ ಮಾಡಿದ್ದಾರೆ. ''ತಾಯಿಯ ಅಣ್ಣ ಯಕ್ಷಗಾನ ಮಾಡುತ್ತಿದ್ದರು, ಭೋಜರಾಜ್ ಅವರ ತಾಯಿ ಸಣ್ಣ ವಯಸ್ಸಿನಲ್ಲಿಯೇ ಪ್ರೋತ್ಸಾಹವನ್ನು ನೀಡಿದ ಕಾರಣ ಇಷ್ಟರವರೆಗೆ ಬೆಳೆಯಲು ಸಾಧ್ಯವಾಯಿತು'' ಎಂದು ವಿನಮ್ರತೆಯಿಂದ ಭೋಜರಾಜ್ ಹೇಳುತ್ತಾರೆ. ಹಲವಾರು ನಾಟಗಳಲ್ಲಿ ನಟಿಸಿದ ಬಳಿಕ 'ಕಡಲ ಮಗೆ' ಎಂಬ ಚಿತ್ರದ ಮೂಲಕ ಭೋಜರಾಜ್ ವಾಮಂಜೂರ್ ಕೋಸ್ಟಲ್‌ವುಡ್‌ಗೆ ಎಂಟ್ರಿ ನೀಡಿದರು. ಅವಕಾಶ ನೀಡಿದ್ದು ವಿಜಯ ಕುಮಾರ್ ಕೋಡಿಯಲ್ ಬೈಲ್ ಅವಕಾಶವನ್ನು ನೀಡಿದರು. ನಾಟಕಗಳಲ್ಲಿ ಅವಕಾಶವನ್ನು ಮಾಡಿಕೊಟ್ಟಿರುವುದು ದೇವದಾಸ್ ಕಾಪಿಕಾಡ್ ಎಂದು ನೆನಪಿಸಿಕೊಳ್ಳುತ್ತಾರೆ ಭೊಜರಾಜ್.

    ಒಡೆಯ ಚಿತ್ರದಲ್ಲಿ ಕಾಣಿಸಿಕೊಂಡ ಬೋಜರಾಜ್

    ಒಡೆಯ ಚಿತ್ರದಲ್ಲಿ ಕಾಣಿಸಿಕೊಂಡ ಬೋಜರಾಜ್

    ಶಾಂತರಾಮ್ ಕಲ್ಲಡ್ಕ ಇವರು ಭೋಜರಾಜ್ ಅವರ ಮೊದಲ ಗುರುಗಳು. ಸಂಜೆ 10 ಗಂಟೆಗೆ ಶುರುವಾದ ನಾಟಕ ಬೆಳಗ್ಗಿನ ಜಾವದ ವರೆಗೆ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎರಡುವರೆ ಗಂಟೆ ಮಾತ್ರ ನಾಟಕ ಇರುತ್ತದೆ. ಆಗಿನ ಕಾಲದಲ್ಲಿ ಮಾಡಿದ ನಾಟಕಗಳ ಪಾತ್ರಗಳನ್ನು ಮರೆಯಲು ಸಾಧ್ಯವೇ ಇಲ್ಲಾಂತ ಭೋಜರಾಜ್ ಹಳೆಯ ನೆನಪುಗಳಿಗೆ ಜಾರುತ್ತಾರೆ.

    ದರ್ಶನ್ ನಟನೆಯ 'ಒಡೆಯ' ಸಿನಿಮಾದಲ್ಲಿ ನಟಿಸಿದ್ದಾರೆ

    ದರ್ಶನ್ ನಟನೆಯ 'ಒಡೆಯ' ಸಿನಿಮಾದಲ್ಲಿ ನಟಿಸಿದ್ದಾರೆ

    ''ಇತ್ತೀಚಿನ ದಿನಗಳಲ್ಲಿ ಜನರಿಗೆ ಸಮಯವಿಲ್ಲ, ಯಾರೂ ನೋಡುವವರಿಲ್ಲ, 80% ರಷ್ಟು ಕಾಮಿಡಿ ಬೇಕೇಬೇಕು ಹಾಗಾದರೆ ಮಾತ್ರ ನಾಟಕ ಕ್ಲಿಕ್ ಆಗುತ್ತದೆ ಇಲ್ಲವಾದರೇ ನಾಟಕವನ್ನು ನೋಡಲು ಜನ ಅಷ್ಟಾಗಿ ಬರುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬೋಜರಾಜ್ ಅವರು ಅತೀ ಹೆಚ್ಚಾಗಿ ಚಲನಚಿತ್ರದಲ್ಲಿ ತೊಡಗಿಸಿಕೊಳ್ಳಲು ಹಪಹಪಿಸುತ್ತಿದ್ದಾರೆ. ದರ್ಶನ್ ಅಭಿನಯದ 'ಒಡೆಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಹಾಗೆಯೇ ಅನೇಕ ಕನ್ನಡ ಸಿನಿಮಾದಲ್ಲಿ ಇವರು ಅಭಿನಯಿಸಿದ್ದಾರೆ. ಇನ್ನಷ್ಟು ಸಿನಿಮಾಗಳಲ್ಲಿ ಬೋಜರಾಜ್ ಅಭಿನಯಿಸಲಿ ಎಂಬುವುದೇ ನಮ್ಮ ಆಶಯ.

    English summary
    Bojaraj Vamnjuru life style He is a Tulu theatre artist. Performed in Tulu movies also.
    Saturday, June 18, 2022, 20:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X