For Quick Alerts
  ALLOW NOTIFICATIONS  
  For Daily Alerts

  ಅಂದು 600 ರೂ. ಇದ್ದಿದ್ದರೆ ಇರ್ಫಾನ್ ಖಾನ್ ಏನಾಗುತ್ತಿದ್ದರು?: ಅಗಲಿದ ನಟನ ಬದುಕು ಹೀಗಿತ್ತು...

  |

  ಇರ್ಫಾನ್ ಖಾನ್ ಎಂಬ ಅದ್ಭುತ ಪ್ರತಿಭೆಯ ನಟನೆ ನಮ್ಮನ್ನು ಹೇಗೆ ಅಚ್ಚರಿಗೊಳಿಸುತ್ತದೆಯೋ ಹಾಗೆಯೇ ಅವರ ಬದುಕೂ ವಿಸ್ಮಯಕಾರಿ.

  ದೇಶ ಕಂಡ ಅದ್ಭುತ ನಟ Irrfan Khan ಇನ್ನಿಲ್ಲ

  ರಾಜಸ್ಥಾನದ ಜೈಪುರದ ಒಂದು ಸ್ಥಿತಿವಂತ ಮುಸ್ಲಿಂ ಕುಟುಂಬದಲ್ಲಿ 1967ರ ಜನವರಿ 7ರಂದು ಜನಿಸಿದವರು ಇರ್ಫಾನ್. ತಾಯಿ ಸಯೀದಾ ಬೇಗಂ ಖಾನ್, ತಂದೆ ಯಾಸೀನ್ ಅಲಿ ಖಾನ್. ಟೊಂಕ್ ಜಿಲ್ಲೆಯ ಖಜೂರಿಯಾ ಗ್ರಾಮದವರಾದ ತಂದೆ, ಟೈರ್ ವ್ಯಾಪಾರ ಮಾಡುತ್ತಿದ್ದರು.

  ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್

  ಅಂದಹಾಗೆ ಇರ್ಫಾನ್ ಖಾನ್ ಪೂರ್ಣ ಹೆಸರು ಶಹಬ್ಸದಾ ಇರ್ಫಾನ್ ಅಲಿ ಖಾನ್. ಕುಟುಂಬದ ಪರಂಪರೆಯನ್ನು ಸಾರುವ ಶಹಬ್ಸದಾ ಪದವನ್ನು ಅವರು ತಮ್ಮ ಹೆಸರಿನಿಂದ ತೆಗೆದುಹಾಕಿದರು. ಅಷ್ಟೇ ಅಲ್ಲ ತಮ್ಮ ಹೆಸರಿನಲ್ಲಿ Irfanಗೆ ಮತ್ತೊಂದು ಆರ್ ಸೇರಿಸಿ Irrfan ಎಂದು ಬದಲಿಸಿದರು. ಇದಕ್ಕೆ ಬೇರೆ ಯಾವ ಕಾರಣವೂ ಇರಲಿಲ್ಲ. ಅದು ಚೆನ್ನಾಗಿ ಕಾಣಿಸುತ್ತದೆ ಎಂದಷ್ಟೇ ಉದ್ದೇಶವಾಗಿತ್ತು. ಮುಂದೆ ಓದಿ...

  ಕ್ರಿಕೆಟ್‌ ಆಯ್ಕೆಯಾಗಿದ್ದರು

  ಕ್ರಿಕೆಟ್‌ ಆಯ್ಕೆಯಾಗಿದ್ದರು

  ಇರ್ಫಾನ್ ಮತ್ತು ಅವರ ಬಾಲ್ಯದ ಗೆಳೆಯ ಸತೀಶ್ ಶರ್ಮಾ ಇಬ್ಬರೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿಯುಳ್ಳವರಾಗಿದ್ದರು. ಇರ್ಫಾನ್ ಅವರಂತೂ ಕ್ರಿಕೆಟ್‌ನಲ್ಲಿಯೂ ಬದುಕು ಕಟ್ಟಿಕೊಳ್ಳುವ ಬಯಕೆ ಹೊಂದಿದ್ದರು. ಭಾರತದ ಮೊದಲ ದರ್ಜೆ ಕ್ರಿಕೆಟ್‌ಗೆ ಕಾಲಿರಿಸಲು ವೇದಿಕೆಯಾಗಿದ್ದ ಪ್ರತಿಭಾವಂತ ಆಟಗಾರರ 23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟೂರ್ನಿಗೂ ಇರ್ಫಾನ್ ಆಯ್ಕೆಯಾಗಿದ್ದರು.

  ಆಲ್‌ರೌಂಡರ್ ಆಗಿದ್ದ ಇರ್ಫಾನ್

  ಆಲ್‌ರೌಂಡರ್ ಆಗಿದ್ದ ಇರ್ಫಾನ್

  ಆದರೆ ಈ ಟೂರ್ನಿಗೆ ಪ್ರವೇಶ ಪಡೆಯಲು 600 ರೂ. ಶುಲ್ಕ ಕಟ್ಟಬೇಕಿತ್ತು. ಆದರೆ ಇರ್ಫಾನ್ ಬಳಿ ಅಷ್ಟು ಹಣವಿರಲಿಲ್ಲ. 'ನಾನು ಕ್ರಿಕೆಟ್ ಆಡುತ್ತಿದ್ದೆ. ಕ್ರಿಕೆಟರ್ ಆಗಲು ಬಯಸಿದ್ದೆ. ನಾನೊಬ್ಬ ಆಲ್ ರೌಂಡರ್ ಆಗಿದ್ದೆ. ನನ್ನ ಜೈಪುರ ತಂಡದಲ್ಲಿ ನಾನೇ ಕಿರಿಯನಾಗಿದ್ದೆ. ಅದರಲ್ಲಿಯೇ ವೃತ್ತಿಯನ್ನು ಕಂಡುಕೊಳ್ಳಲು ಬಯಸಿದ್ದೆ' ಎಂದು ಅವರು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.

  'ನಾನು ಶರಣಾದೆ': ಇರ್ಫಾನ್ ಖಾನ್ ಕುರಿತಾದ ಭಾವುಕ ಪತ್ರ'ನಾನು ಶರಣಾದೆ': ಇರ್ಫಾನ್ ಖಾನ್ ಕುರಿತಾದ ಭಾವುಕ ಪತ್ರ

  ಅಂದು ದುಡ್ಡು ಇದ್ದಿದ್ದರೆ?

  ಅಂದು ದುಡ್ಡು ಇದ್ದಿದ್ದರೆ?

  ಅಂದು ಜೇಬಲ್ಲಿ ಹಣವಿಲ್ಲದ ಇರ್ಫಾನ್ ಯಾರ ಬಳಿ ದುಡ್ಡು ಕೇಳುವುದೆಂದು ಗೊತ್ತಾಗದೆ ಸುಮ್ಮನಾದರು. ಅದೇ ಅವರ ಕ್ರಿಕೆಟ್ ಬದುಕಿನ ಕನಸಿನ ಅಂತ್ಯದ ದಿನವೂ ಆಯಿತು. ಮತ್ತೆ ಅವರು ಕ್ರಿಕೆಟ್‌ನತ್ತ ಮುಖ ಮಾಡಲಿಲ್ಲ. ಬಹುಶಃ ಅಂದು ಇರ್ಫಾನ್ ಕೈಯಲ್ಲಿ ಹಣವಿದ್ದಿದ್ದರೆ, ಬಹುಶಃ ಅವರು ಇಂದು 'ಮಾಜಿ ಕ್ರಿಕೆಟಿಗ' ಎಂದು ಗುರುತಿಸಿಕೊಳ್ಳುತ್ತಿದ್ದರೇನೋ... ಆದರೆ ಚಿತ್ರರಂಗಕ್ಕೆ ಉಂಟಾಗಿರುತ್ತಿದ್ದ ನಷ್ಟ?

  ಪ್ರಜ್ಞಾಪೂರ್ವಕ ನಿರ್ಧಾರ

  ಪ್ರಜ್ಞಾಪೂರ್ವಕ ನಿರ್ಧಾರ

  'ಕ್ರಿಕೆಟ್ಅನ್ನು ತ್ಯಜಿಸಿದ್ದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಏಕೆಂದರೆ ಏಕೆಂದರೆ ಇಡೀ ದೇಶಕ್ಕೆ ಪ್ರತಿನಿಧಿಸಲು ಇರುವ ಅವಕಾಶ 11 ಜನರಿಗೆ ಮಾತ್ರ. ಆದರೆ ನಟರಿಗೆ ಯಾವುದೇ ಮಿತಿಯಿಲ್ಲ. ನಟನೆಗೆ ವಯಸ್ಸಿನ ಮಿತಿಯೂ ಇಲ್ಲ' ಎಂದು ತಮ್ಮ ನಿರ್ಧಾರ ಸೂಕ್ತವಾಗಿದೆ ಎಂಬುದನ್ನು ವಿವರಿಸಿದ್ದರು.

  ನಟ ಇರ್ಫಾನ್ ಖಾನ್ ವಿಧಿವಶ: ಬಾಲಿವುಡ್ ಕಂಬನಿ ಮಿಡಿದಿದ್ದು ಹೀಗೆನಟ ಇರ್ಫಾನ್ ಖಾನ್ ವಿಧಿವಶ: ಬಾಲಿವುಡ್ ಕಂಬನಿ ಮಿಡಿದಿದ್ದು ಹೀಗೆ

  300 ರೂ ಪಡೆದು ಎನ್‌ಎಸ್‌ಡಿ ಸೇರಿದರು

  300 ರೂ ಪಡೆದು ಎನ್‌ಎಸ್‌ಡಿ ಸೇರಿದರು

  ಕೊನೆಗೆ ಜೈಪುರದಲ್ಲಿ ಎಂಎ ಪೂರೈಸಿದ ಅವರ ತುಡಿತ ನಟನೆಯತ್ತ ಹೊರಳಿತು. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಸೇರಿಕೊಳ್ಳಬೇಕು ಎಂಬ ಬಯಕೆ ಮೂಡಿತು. ಅದಕ್ಕೂ ಹಣ ಬೇಕು. ಇರ್ಫಾನ್ ಕನಸಿನ ಬಗ್ಗೆ ಅರಿವಿದ್ದ ಸಹೋದರಿ ಹೇಗೋ 300 ರೂ ಹೊಂದಿಸಿ ನೀಡಿದರು. 1984ರಲ್ಲಿ ನವದೆಹಲಿಯ ಇರ್ಫಾನ್ ಎನ್‌ಎಸ್‌ಡಿ ಸೇರಿದರು. ಅಲ್ಲಿಂದ ನಂತರ ಇರ್ಫಾನ್ ಬದುಕಿನ ದಾರಿಯೇ ಬದಲಾಯಿತು.

  ಸಿನಿಮಾರಂಗದಲ್ಲಿ ಹೆಣಗಾಟ

  ಸಿನಿಮಾರಂಗದಲ್ಲಿ ಹೆಣಗಾಟ

  ಮುಂಬೈಗೆ ತೆರಳಿದ ಇರ್ಫಾನ್ ಚಾಣಕ್ಯ, ಭಾರತ್ ಏಕ್ ಖೋಜ್, ಸಾರಾ ಜಹಾನ್ ಹಮಾರಾ, ಬನೇಗಿ ಅಪ್ನಿ ಬಾತ್ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದರು. 1988ರಲ್ಲಿ ಸಲಾಂ ಬಾಂಬೆ ಚಿತ್ರದಲ್ಲಿ ಪುಟ್ಟದೊಂದು ಪಾತ್ರ ನಿರ್ವಹಿಸಿದರು. ಆದರೆ ಸಿನಿಮಾ ರಂಗ ಅವರನ್ನು ಅಷ್ಟು ಸುಲಭಕ್ಕೆ ಒಳಗೆ ಬಿಟ್ಟುಕೊಳ್ಳಲಿಲ್ಲ. ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳನ್ನು ನಿರ್ವಹಿಸಿದರು.

  'ದಿ ವಾರಿಯರ್' ಎಂಟ್ರಿ

  'ದಿ ವಾರಿಯರ್' ಎಂಟ್ರಿ

  'ಏಕ್ ಡಾಕ್ಟರ್ ಕಿ ಮೌತ್', 'ಸಚ್ ಎ ಲಾಂಗ್ ಜರ್ನಿ' ಎಂಬಂತಹ ಸಿನಿಮಾಗಳಲ್ಲಿನ ಅವರ ಅಭಿನಯ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಸಿನಿಮಾಗಳು ಬಂದು ಹೋದದ್ದೇ ಗೊತ್ತಾಗಲಿಲ್ಲ. ಅವರಿಗೆ ಯಶಸ್ಸಿನ ಬಾಗಿಲು ತೆರೆದಿದ್ದು ಬ್ರಿಟಿಷ್ ನಿರ್ದೇಶಕ ಆಸಿಫ್ ಕಪಾಡಿಯಾ ಅವರ 'ದಿ ವಾರಿಯರ್', 2001ರಲ್ಲಿ ಅವರಿಗೆ ಯಶಸ್ಸು ನೀಡದೆ ಹೋಗಿದ್ದರೆ ಸಿನಿಮಾ ರಂಗವನ್ನೇ ತೊರೆಯುವ ನಿರ್ಧಾರಕ್ಕೆ ಮುಂದಾಗಿದ್ದರು. ಅಲ್ಲಿಂದ ಇರ್ಫಾನ್ ಸಿನಿಮಾ ಬದುಕು ಉನ್ನತಿಯತ್ತಲೇ ಸಾಗಿತು. ಇರ್ಫಾನ್ ಅವರಿಗಾಗಿಯೇ ಪಾತ್ರಗಳು ಹುಡುಕಿಕೊಂಡು ಬರತೊಡಗಿದವು. ಈ ಪಾತ್ರವನ್ನು ಇರ್ಫಾನ್ ಅವರ ಹೊರತು ಬೇರಾರೂ ಮಾಡಲಾರರು ಎಂದು ಅವರಿಗಾಗಿ ಕಾಯುವ ಸ್ಥಿತಿ ಉಂಟಾಯಿತು.

  ಪ್ರೀತಿಗೆ ಅಡ್ಡಿಯಾಗದ ಧರ್ಮ

  ಪ್ರೀತಿಗೆ ಅಡ್ಡಿಯಾಗದ ಧರ್ಮ

  ರಾಷ್ಟ್ರೀಯ ನಾಟಕ ಶಾಲೆಯಲ್ಲಿಯೇ ಕಲಿತ ಸುತಾಪಾ ಸಿಕ್ದರ್ ಜತೆ 1995ರ ಫೆ. 23ರಂದು ಇರ್ಫಾನ್ ಸಾಂಸಾರಿಕ ಬದುಕಿಗೆ ಕಾಲಿರಿಸಿದರು. ಬರಹಗಾರ್ತಿಯೂ ಆಗಿರುವ ಸುತಾಪಾ, ಬ್ರಾಹ್ಮಣ ಸಮುದಾಯದವರು. ಆದರೆ ಅವರ ಪ್ರೀತಿ ಮತ್ತು ಮದುವೆಗೆ ಧರ್ಮ ಅಡ್ಡಿಯಾಗಲಿಲ್ಲ. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.

  ಇರ್ಫಾನ್ ಕೆಲವು ಪ್ರಮುಖ ಸಿನಿಮಾಗಳು

  ಇರ್ಫಾನ್ ಕೆಲವು ಪ್ರಮುಖ ಸಿನಿಮಾಗಳು

  'ಅಂಗ್ರೇಜಿ ಮೀಡಿಯಂ', 'ಕರ್ವಾನ್', 'ಜುರಾಸಿಕ್ ವರ್ಲ್ಡ್', 'ಪಿಕು', 'ಪಾನ್ ಸಿಂಗ್ ತೋಮರ್', 'ದಿ ಲಂಚ್ ಬಾಕ್ಸ್', 'ಸ್ಲಂ ಡಾಗ್ ಮಿಲಿಯನೇರ್', 'ಲೈಫ್ ಆಫ್ ಪೈ', 'ಇನ್‌ಫೆರ್ನೊ', 'ತಲ್ವಾರ್', ಮುಂತಾದವು ಇರ್ಫಾನ್ ಖಾನ್ ಅಭಿನಯದಲ್ಲಿ ಸದಾ ಸ್ಮರಣೀಯ ಎನಿಸುವ ಚಿತ್ರಗಳು. ಚಿತ್ರರಂಗಕ್ಕೆ ಅವರು ನೀಡಿರುವ ಸೇವೆಗೆ ಪದ್ಮಶ್ರೀ ಗೌರವ ಸಂದಿತು. 1993ರಲ್ಲಿ ಬಿಡುಗಡೆಯಾದ ಜುರಾಸಿಕ್ ಪಾರ್ಕ್ ಸಿನಿಮಾ ನೋಡಲು ಹಣಕ್ಕಾಗಿ ಪರದಾಡುತ್ತಿದ್ದನು, 'ಜುರಾಸಿಕ್ ವರ್ಲ್ಡ್' ಚಿತ್ರದಲ್ಲಿ ನಟಿಸುವಂತಾಯಿತು ಎಂಬುದನ್ನು ಅವರು ನೆನಪಿಸಿಕೊಂಡಿದ್ದರು.

  ಅಪ್ಪನಿಗಾಗಿ ಸಿನಿಮಾ ಮಾಡುವ ಕನಸು

  ಅಪ್ಪನಿಗಾಗಿ ಸಿನಿಮಾ ಮಾಡುವ ಕನಸು

  'ಪಾನ್ ಸಿಂಗ್ ತೋಮರ್' ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾದಾಗ ಇರ್ಫಾನ್ ಭಾವುಕರಾಗಿದ್ದರು. ಚಿತ್ರೀಕರಣದ ಸಂದರ್ಭದಲ್ಲಿಯೂ ಮೂರು ಬಾರಿ ಅವರು ಬಿಕ್ಕಳಿಸಿ ಅತ್ತಿದ್ದರಂತೆ. ಅವರ ಅಳು ಕಂಡು ಚಿತ್ರತಂಡವೇ ಅವಕ್ಕಾಗಿತ್ತು. ಆ ಪಾತ್ರದ ಗತ್ತು ಗಾಂಭೀರ್ಯ ತಮ್ಮ ತಂದೆಯನ್ನು ನೆನಪಿಸಿತ್ತು. ಈ ಸಿನಿಮಾ ನೋಡಲು ಅವರು ಇರಬೇಕಿತ್ತು ಎಂದು ಕಣ್ಣೀರಿಟ್ಟಿದ್ದರು. ಈ ಸಿನಿಮಾ ನೋಡಿದ್ದರೆ ಈ ಗೆಟಪ್‌ನಲ್ಲಿ ಅವರು ನನ್ನನ್ನು ಇಷ್ಟಪಡುತ್ತಿದ್ದರು. ತಂದೆಯ ಬದುಕನ್ನಾಧರಿಸಿ ಸಿನಿಮಾ ಮಾಡಬೇಕು. ನನ್ನ ತಂದೆಯ ನೆನಪಿಗೆ ಸೂಕ್ತ ಗೌರವ ಸಲ್ಲಿಸಲು ಇದಕ್ಕಿಂತ ಬೇರೆ ಉತ್ತಮ ಮಾರ್ಗವಿಲ್ಲ ಎಂದಿದ್ದರು. ತಮ್ಮ ಅನೇಕ ಕನಸುಗಳನ್ನು ಕೈಬಿಡುತ್ತಲೇ ಮಹತ್ತರವಾದುದ್ದನ್ನು ಸಾಧಿಸಿದ್ದ ಇರ್ಫಾನ್, ಈ ಆಸೆಯನ್ನು ಈಡೇರಿಸಿಕೊಳ್ಳಲಾಗದೆ ನಿರ್ಗಮಿಸಿದ್ದಾರೆ.

  English summary
  Read on to know the journey of bollywood actor Irrfan khan. Check out the details on irrfan khan age, life story, film career, awards, achievements & more on kannada oneindia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X