For Quick Alerts
  ALLOW NOTIFICATIONS  
  For Daily Alerts

  ಪುನೀತ್ ಬಯೋಪಿಕ್ ಸುಳಿವು ಕೊಟ್ಟ ಸಂತೋಷ್ ಆನಂದ್‌ರಾಮ್

  |

  ಅಪ್ಪು ಅಗಲಿಕೆ ಬಳಿಕ ಅಭಿಮಾನಿಗಳ ನೋವು ಇಂಗುತ್ತಲೇ ಇಲ್ಲ. ಪ್ರತಿ ದಿನ ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್‌ರನ್ನು ಜೀವಂತವಾಗಿ ಇಡಲು ಪ್ರಯತ್ನಿಸುತ್ತಲೇ ಇದ್ದಾರೆ. ಅಭಿಮಾನಿಗಳೇ ನಿರ್ದೇಶಕರ ಬಳಿ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾರೆ. ಪುನೀತ್‌ ಜೊತೆ ಸಿನಿಮಾ ಮಾಡಿರುವ ನಿರ್ದೇಶಕರಿಗೆ ಒಂದೊಂದು ಸಲಹೆ ನೀಡುತ್ತಿದ್ದಾರೆ.

  ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವಿನಲ್ಲೇ ರಾಜ್ಯಾದ್ಯಂತ ಪ್ರತಿದಿನ ಒಂದೊಂದು ಕಾರ್ಯಕ್ರಮ ನಡೆಯುತ್ತಿದೆ. ನೇತ್ರದಾನ, ಅನ್ನದಾನದಿಂದ ಹಿಡಿದು ಇಂದು( ನವೆಂಬರ್ 21) ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸೈಕಲ್ ಜಾಥವನ್ನು ಅಪ್ಪುಗೆ ಗೌರವ ಸೂಚಿಸುವ ಅಂಗವಾಗಿಯೇ ಮಾಡಿಕೊಳ್ಳಲಾಗಿತ್ತು. ಆದರೆ, ಅಪ್ಪು ಅಭಿಮಾನಿಗಳು ಸಂತೋಷ ಆನಂದ್‌ರಾಮ್‌ ಮುಂದೆ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾರೆ. ಈ ಬಾರಿ ಪುನೀತ್ ರಾಜ್‌ ಕುಮಾರ್ ಬಯೋಪಿಕ್ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಂತೋಷ್ ಆನಂದ್‌ರಾಮ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

  ಪುನೀತ್ ಆತ್ಮಚರಿತ್ರೆ ಸುಳಿವು ನೀಡಿದ ನಿರ್ದೇಶಕ

  ಪುನೀತ್ ಆತ್ಮಚರಿತ್ರೆ ಸುಳಿವು ನೀಡಿದ ನಿರ್ದೇಶಕ

  ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬಳಿ ಅಭಿಮಾನಿಗಳು ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಪುನೀತ್‌ ಅಗಲಿದ ಬಳಿಕವೂ ಜೀವಂತವಾಗಿ ಇಡುವುದಕ್ಕೆ ನೂರೆಂಟು ಯೋಜನೆಗಳನ್ನು ಅಭಿಮಾನಿಗಳೇ ಹಾಕಿಕೊಂಡಿದ್ದಾರೆ. ಇದೇ ವೇಳೆ ಅಪ್ಪು ಬಯೋಪಿಕ್ ಮಾಡುವಂತೆ ಪುನೀತ್ ಫ್ಯಾನ್ಸ್ ನಿರ್ದೇಶಕ ಸಂತೋಷ್ ಆನಂದ್‌ರಾಮ್ಎದುರು ಬೇಡಿಕೆ ಇಟ್ಟಿದ್ದರು. ಅದಕ್ಕೆ ಸಂತೋಷ್ ಪಾಸಿಟಿವ್ ಆಗಿ ಮಾತಾಡಿದ್ದಾರೆ.

  ಅಪ್ಪು ಆತ್ಮಚರಿತ್ರೆಗೆ ಸಂತೋಷ್ ಶತಪ್ರಯತ್ನ

  ಸ್ಯಾಂಡಲ್‌ವುಡ್ ಪವರ್​ ಸ್ಟಾರ್​ ಅಭಿಮಾನಿ ನಿರ್ದೇಶಕ ಸಂತೋಷ್​ ಆನಂದ್​ ರಾಮ್ ಎದುರು ಇಟ್ಟ ಬೇಡಿಕೆ ಒಂದೆರಡಲ್ಲ. ಅವರೆಲ್ಲರಿಗೂ ಸಮಾಧಾನದಿಂದಲೇ ಉತ್ತರಿಸುತ್ತಿದ್ದಾರೆ. ಈಗ ಅಭಿಮಾನಿಯೊಬ್ಬ ಅಪ್ಪು ಬಯೋಪಿಕ್ ಮಾಡುವಂತೆ ಮನವಿ ಮಾಡ ಬೆನ್ನಲ್ಲೇ ಆತ್ಮಚರಿತ್ರೆ ಬಗ್ಗೆ ಚಿಂತಿಸುತ್ತಿದ್ದಾರೆ. " ಪುನೀತ್ ರಾಜ್‌ಕುಮಾರ್ ಅವರನ್ನು ನೀವು ಹತ್ತಿರದಿಂದ ನೋಡಿದ್ದೀರಿ. ಹೀಗಾಗಿ ದಯವಿಟ್ಟು ಪುನೀತ್ ಆತ್ಮಚರಿತ್ರೆಯನ್ನು ತೆರ ಮೇಲೆ ತಗೆದುಕೊಂಡು ಬನ್ನಿ" ಎಂದು ಮನವಿ ಮಾಡಿದ್ದರು. ಅದಕ್ಕೆ ಪುನೀತ್ ಐಡಿಯಾವನ್ನು ತೆರೆಮೇಲೆ ತರಲು ಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಪುನೀತ್ ಬಯೋಪಿಕ್ ಮಾಡುವ ಸೂಚನೆಯನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ನೀಡಿದ್ದಾರೆ.

  ಸಂತೋಷ್ ಮುಂದೆ ನೂರೆಂಟು ಬೇಡಿಕೆ

  ಸಂತೋಷ್ ಮುಂದೆ ನೂರೆಂಟು ಬೇಡಿಕೆ

  ರಾಜಕುಮಾರ ಹಾಗೂ ಯುವರತ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಸಂತೋಷ್ ಆನಂದ್‌ರಾಮ್ ಪವರ್‌ಸ್ಟಾರ್ ಜೊತೆ ಹೆಚ್ಚು ಸಮಯ ಕಳೆದಿದ್ದಾರೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಅವ್ರೊಂದಿಗೆ ತೀರಾ ಹತ್ತಿರದ ಒಡನಾಟವಿದೆ. ಹೀಗಾಗಿ ನೂರೆಂಟು ಬೇಡಿಕೆಗಳನ್ನು ಇಡುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಕೊನೆಯ ಪುತ್ರ ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡಿ. ಅವರಲ್ಲೇ ಪುನೀತ್ ರಾಜ್‌ಕುಮಾರ್ ಅವರನ್ನು ಕಾಣುತ್ತೇವೆ ಎಂದು ಬೇಡಿಕೆ ಇಟ್ಟಿದ್ದರು. ಮತ್ತೊಬ್ಬರು ವರ್ಷಕ್ಕೊಂದು ಹಾಡು ಮಾಡಿ ಕೊಡಿ, ಅದೇ ನಮ್ಮ ಅಭಿಮಾನದ ಗೀತೆಯಾಗಿರುತ್ತೆ ಎಂದು ಹೇಳಿದ್ದಾರೆ.

  ಪುನೀತ್ ಬಯೋಪಿಕ್ ಯಾವಾಗ?

  ಪುನೀತ್ ಬಯೋಪಿಕ್ ಯಾವಾಗ?

  ಸಂತೋಷ್ ಆನಂದ್‌ರಾಮ್ ಸದ್ಯ ನವರಸ ನಾಯಕ ನಟಿಸುತ್ತಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಆರಂಭ ಆಗಿದೆ. ಹೀಗಾಗಿ ರಾಘವೇಂದ್ರ ಸ್ಟೋರ್ಸ್ ಮುಗಿದ ಬಳಿಕ ಪುನೀತ್ ಆತ್ಮಚರಿತ್ರೆ ಬಗ್ಗೆ ಚಿಂತಿಸಬಹುದು ಎನ್ನಲಾಗುತ್ತಿದೆ. ಆದರೆ, ಪುನೀತ್ ಬಯೋಪಿಕ್ ನಿರ್ದೇಶಿಸಲು ಕುಟುಂಬದ ಅನುಮತಿಯೂ ಮುಖ್ಯ. ಹೀಗಾಗಿ ಅಪ್ಪು ಬಯೋಪಿಕ್‌ಗೆ ಗ್ರೀನ್ ಸಿಗ್ನಲ್ ಸಿಕ್ಕರೆ, ಅವರ ಒಪ್ಪಿಗೆ ಪಡೆದು, ಸಂಶೋಧನೆ ಮಾಡಿ ಸಿನಿಮಾ ಮಾಡಲು ಸಾಕಷ್ಟು ಸಮಯ ಹಿಡಿಯಬಹುದು.

  English summary
  Puneeth Rajkumar fans forcing director Santhosh Ananddram to bring Appu's bio pic on silver screen. Director responded that his will try my level best to bring this idea on screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X