twitter
    For Quick Alerts
    ALLOW NOTIFICATIONS  
    For Daily Alerts

    Doddamma Of KGF 2 : ಕೆಜಿಎಫ್ 2' ಸಿನಿಮಾದ 'ದೊಡ್ಡಮ್ಮ'ನ ಬಗ್ಗೆ ನಿಮಗೆಷ್ಟು ಗೊತ್ತು? ಇದು ಸಾಮಾನ್ಯ ಗನ್ ಅಲ್ಲ

    |

    'ಕೆಜಿಎಫ್ 2' ಸಿನಿಮಾದಲ್ಲಿ ಹಲವು ನೆನಪುಳಿವ ಸೀನ್‌ಗಳಿವೆ. ರಾಕಿ ಭಾಯ್ ಎಂಟ್ರಿ, ಅಧೀರ ಎಂಟ್ರಿ, ಇನಾಯತ್ ಖಲೀಲ್‌ಗೆ ರಾಕಿ ಭಾಯ್ ಗನ್ ತೋರಿಸುವ ಸೀನ್ ಇನ್ನೂ ಹಲವು ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ಸೀನ್‌ಗಳಿವೆ ಅದರಲ್ಲಿ ಪ್ರಮುಖವಾದುದು ರಾಕಿ ಭಾಯ್ ಒಂದು ಚಿನ್ನದ ತುಣುಕಿಗಾಗಿ ಪೊಲೀಸ್ ಸ್ಟೇಶನ್‌ಗೆ ನುಗ್ಗಿ ಅದನ್ನು ಧ್ವಂಸ ಮಾಡುವ ಸೀನ್.

    ವ್ಯಾನ್ ಒಂದರಿಂದ ದೊಡ್ಡ ಬಂದೂಕನ್ನು ತೆಗೆದು ಅದರ ಒಂದೊಂದೆ ಪಾರ್ಟ್‌ಗಳನ್ನು ಅಸೆಂಬಲ್ ಮಾಡಿ ಫೈರಿಂಗ್ ಆರಂಭಿಸುವ ರಾಕಿ ಭಾಯ್ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿಬಿಡುತ್ತಾನೆ. ಬಳಿಕ ಆ ದೊಡ್ಡ ಬಂದೂಕಿನ ನಳಿಕೆಯಿಂದ ಸ್ಟೈಲ್ ಆಗಿ ಸಿಗರೇಟು ಹೊತ್ತಿಸಿಕೊಳ್ಳುತ್ತಾನೆ.

    KGF 2 Records: 4 ದಿನಗಳಲ್ಲಿ 'ಕೆಜಿಎಫ್ 2' ಸೃಷ್ಟಿಸಿದ ದಾಖಲೆಗಳ ಪಟ್ಟಿ ಹೇಗಿದೆ ನೋಡಿ? KGF 2 Records: 4 ದಿನಗಳಲ್ಲಿ 'ಕೆಜಿಎಫ್ 2' ಸೃಷ್ಟಿಸಿದ ದಾಖಲೆಗಳ ಪಟ್ಟಿ ಹೇಗಿದೆ ನೋಡಿ?

    ಆ ದೃಶ್ಯದಲ್ಲಿ ರಾಕಿ ಭಾಯ್ ಬಳಸುವ ಆ ದೈತ್ಯಾಕಾರದ ಬಂದೂಕಿಗೆ ಸಿನಿಮಾದಲ್ಲಿ 'ದೊಡ್ಡಮ್ಮ' ಎಂದು ಕರೆಯಲಾಗಿದೆ. ಆದರೆ ನಿಜವಾಗಿಯೂ ಆ ಬಂದೂಕಿನ ಹೆಸರು 'ಎಂ1919'. ಇದು ಸಾಮಾನ್ಯ ಬಂದೂಕಲ್ಲ, 'ರಾಕ್ಷಸ ಬಂದೂಕು'. ಸಿನಿಮಾದಲ್ಲಿ ಆ ಬಂದೂಕು ಬಳಸಿ ರಾಕಿಭಾಯ್ ಮಾಡಿರುವ ವಿಧ್ವಂಸಕ್ಕಿಂತಲೂ ದೊಡ್ಡ ಮಟ್ಟದ ವಿಧ್ವಂಸವನ್ನು ಮಾಡಬಲ್ಲ ಕೆಪ್ಯಾಸಿಟಿ ಇರುವ ಬಂದೂಕದು!

    KGF 2 Day 4 Box Office Collection: 4 ದಿನಗಳಲ್ಲೇ ಅತಿ ಹೆಚ್ಚು ಗಳಿಕೆ ಕಂಡ ವಿಶ್ವದ 2ನೇ ಚಿತ್ರ 'ಕೆಜಿಎಫ್ 2'KGF 2 Day 4 Box Office Collection: 4 ದಿನಗಳಲ್ಲೇ ಅತಿ ಹೆಚ್ಚು ಗಳಿಕೆ ಕಂಡ ವಿಶ್ವದ 2ನೇ ಚಿತ್ರ 'ಕೆಜಿಎಫ್ 2'

    ಮೊದಲ ಬಳಕೆ ಯಾವಾಗ?

    ಮೊದಲ ಬಳಕೆ ಯಾವಾಗ?

    1917 ರಲ್ಲಿ ಅಮೆರಿಕದ ಜಾನ್ ಮೋಸೆಸ್ ಬ್ರೌನಿಂಗ್ ಎಂಬಾತ ಈ ಮಷಿನ್ ಗನ್ ಅನ್ನು ಅಭಿವೃದ್ಧಿಪಡಿಸಿದ. ಸತತ ಶೂಟಿಂಗ್‌ನಿಂದಾಗಿ ಈ ಬಂದೂಕು ಅತಿಯಾಗಿ ಬಿಸಿಯಾಗುತ್ತಿದ್ದ ಕಾರಣ ಇದಕ್ಕೆ ವಾಟರ್ ಕೂಲರ್ ಪದ್ಧತಿಯನ್ನು ಅಳವಡಿಸಲಾಗಿತ್ತು, ಇದರಿಂದಾಗಿ ಇದು ಬಹಳ ಭಾರ ಹಾಗೂ ಒಂದೆಡೆ ಮಾತ್ರವೇ ಸ್ಥಿತವಾಗಿಟ್ಟು ಬಳಸಬೇಕಾಗಿತ್ತು. ಬಳಿಕ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಏರ್ ಕೂಲರ್ ವ್ಯವಸ್ಥೆಯನ್ನು ಅಳವಡಿಸಲಾಯಿತು. ಆ ಬಳಿಕ ಈ ಬಂದೂಕು ಬಹಳ ಜನಪ್ರಿಯವಾಯಿತು. ಸೈನಿಕರು ಇದನ್ನು ಒಂದೆಡೆಯಿಂದ ಮತ್ತೊಂದೆಡೆ ಹೊತ್ತು ಸಾಗಲು ಅನುಕೂಲವಾಯಿತು. ಅದೇ ಮಾದರಿಯ ಬಂದೂಕನ್ನು 'ಕೆಜಿಎಫ್ 2' ನಲ್ಲಿ ಬಳಸಲಾಗಿದೆ.

    'ಕೆಜಿಎಫ್ 2'ನಲ್ಲಿರುವುದು ಸುಧಾರಿತ ಆವೃತ್ತಿ

    'ಕೆಜಿಎಫ್ 2'ನಲ್ಲಿರುವುದು ಸುಧಾರಿತ ಆವೃತ್ತಿ

    'ಕೆಜಿಎಫ್ 2' ಸಿನಿಮಾದಲ್ಲಿ ತೋರಿಸಲಾಗಿರುವ 'ದೊಡ್ಡಮ್ಮ' ಎಂ1919 ನ ಸುಧಾರಿತ ಆವೃತಿ. ಮೂಲ ಎಂ1919 ಬಂದೂಕಿನಲ್ಲಿ ಸಾಮಾನ್ಯ ಬಂದೂಕಿಗಿರುವಂತೆ ಟ್ರಿಗರ್ ಇರುತ್ತದೆ. ಆದರೆ 'ಕೆಜಿಎಫ್ 2' ನಲ್ಲಿ ರಾಕಿ ಭಾಯ್ ಬಳಸಿರುವ ಬಂದೂಕಿಗೆ ಟ್ರಿಗರ್ ಇಲ್ಲ ಬದಲಿಗೆ ಹ್ಯಾಂಡಲ್ ಇದ್ದು, ತೋರುಬೆರಳನಿಂದ ಅದುಮುವ ಟ್ರಿಗರ್ ಬದಲಿಗೆ ಹೆಬ್ಬೆರಳಿನಿಂದ ಅದುಮುವ ಟ್ರಿಗರ್‌ ಇದೆ. ಈ ರೀತಿಯ ಬಂದೂಕುಗಳು ಎಂ1919 ಸಾಲಿನ ಸುಧಾರಿತ ಆವೃತ್ತಿಗಳಾಗಿವೆ. ಇವನ್ನು ಬ್ರೋವಿಂಗ್ ಫುಲ್ ಆಟೋ ಎಂದು ಸಹ ಕರೆಯುವುದುಂಟು. ಎಂ1919 ನಲ್ಲಿ A1; A2; A3; A4; A5; A6; M37, AN/M2 ಹೆಸರಿನ ವೇರಿಯೆಂಟ್‌ಗಳಿವೆ. ಒಂದೊಂದರ ಗುಣಮಟ್ಟ, ಶಕ್ತಿ, ಸಾಮರ್ಥ್ಯ ಭಿನ್ನ. ಆದರೆ ಈ ಎಲ್ಲ ಮಷಿನ್ ಗನ್‌ಗಳ ಕಾರ್ಯವಿಧಾನ ಒಂದೇ ರೀತಿ.

    ವೇಗ, ಸಾಮರ್ಥ್ಯ ಎಂಥಹದ್ದು?

    ವೇಗ, ಸಾಮರ್ಥ್ಯ ಎಂಥಹದ್ದು?

    ಎಂ1919 ಮಷಿನ್ ಗನ್‌ ಒಂದು ನಿಮಿಷಕ್ಕೆ ಸರಾಸರಿ 400-600 ಗುಂಡುಗಳನ್ನು ಹಾರಿಸಬಲ್ಲದು. ವೇಗದ ವಿಷಯದಲ್ಲಿ ಒಂದೊಂದು ವೇರಿಯೆಂಟ್‌ಗೆ ಒಂದೊಂದು ರೀತಿಯ ಕ್ಷಮತೆ ಇದೆ. ಎಂ1919 ನ AN/M2 ವೇರಿಯೆಂಟ್‌ಗಳು ನಿಮಿಷವೊಂದಕ್ಕೆ 1200 ರಿಂದ 1500 ಗುಂಡುಗಳನ್ನು ಹಾರಿಸಬಲ್ಲದು. ಈ ಬಂದೂಕಿನ ಮಜಲ್ ವೆಲಾಸಿಟಿ, ಅಂದರೆ ಗುಂಡು ಹಾರುವ ವೇಗ ಒಂದು ಸೆಕೆಂಟ್‌ಗೆ 2800 ಅಡಿ. ಅಂದರೆ ಟ್ರಿಗರ್ ಒತ್ತಿದ ತಕ್ಷಣ ಬಂದೂಕಿನ ಗುಂಡು ಸೆಕೆಂಡ್‌ಗೆ 2800 ಅಡಿ ವೇಗದಲ್ಲಿ ಹೊರನುಗ್ಗುತ್ತದೆ, ಮೀಟರ್‌ ಲೆಕ್ಕದಲ್ಲಾದರೆ ಒಂದು ಸೆಕೆಂಟ್‌ಗೆ 853 ಮೀಟರ್. ಈ ಬಂದೂಕಿನಿಂದ ಹಾರಿಸಲ್ಪಟ್ಟ ಗುಂಡು ಬರೋಬ್ಬರಿ ಒಂದೂವರೆ ಕಿಲೋ ಮೀಟರ್ ಟ್ರಾವೆಲ್ ಮಾಡುತ್ತದೆ. ಅಂದರೆ, ಸರಿಯಾದ ಗುರಿ ಹೊಂದಿರುವ ವ್ಯಕ್ತಿ, ಒಂದೂವರೆ ಕಿ.ಮೀ ದೂರದಲ್ಲಿರುವ ಗುರಿಯನ್ನು ಸಹ ಈ ಬಂದೂಕಿನಿಂದ ಸುಲಭವಾಗಿ ಹೊಡೆದುರುಳಿಸಬಲ್ಲ.

    ಈ ಬಂದೂಕಿನ ಶಕ್ತಿ ಸಾಮಾನ್ಯದ್ದಲ್ಲ

    ಈ ಬಂದೂಕಿನ ಶಕ್ತಿ ಸಾಮಾನ್ಯದ್ದಲ್ಲ

    ಎಂ1919 ಶಕ್ತಿ ಸಾಮಾನ್ಯದ್ದಲ್ಲ. ಮಾಮೂಲಿ ಬಂದೂಕಿನ ಹಾಗೂ ಕೆಲವು ಮಷಿನ್ ಗನ್‌ನ ಗುಂಡು ತಗುಲಿದರೆ ಗಾಯವಾಗುತ್ತದೆ. ಆದರೆ ಎಂ1919 ನಿಂದ ಹೊರಬಂದ ಗುಂಡು ವ್ಯಕ್ತಿಗೆ ತಗುಲಿದರೆ ದೇಹ ಛಿದ್ರವೇ ಸರಿ. ಗುಂಡು ತಗುಲಿದ ವ್ಯಕ್ತಿಯ ದೇಹ ಮೀಟರ್‌ ಗಟ್ಟಲೆ ಹಾರಿ ಬೀಳುತ್ತದೆ, ದೇಹದ ಒಳಗಿನ ಭಾಗ ಹೊರಗೆ ಬಂದು ಬಿಡುತ್ತವೆ. ಈ ಬಂದೂಕನ್ನು ಮೇಲೆ ಹಾರುವ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲು ಸಹ ಬಳಲಾಗುತ್ತದೆ. ಹೆಲಿಕಾಪ್ಟರ್, ಯುದ್ಧ ವಿಮಾನಗಳನ್ನು ಸಹ ಸುಲಭವಾಗಿ ಹೊಡೆದುರಿಳಿಸುವ ಶಕ್ತಿ ಈ ರಾಕ್ಷಸ ಮಷಿನ್ ಗನ್‌ಗಿದೆ.

    ಹಲವು ಯುದ್ಧಗಳಲ್ಲಿ ಇದರ ಉಪಯೋಗ ಆಗಿದೆ

    ಹಲವು ಯುದ್ಧಗಳಲ್ಲಿ ಇದರ ಉಪಯೋಗ ಆಗಿದೆ

    ಈ ಬಂದೂಕಿನ ಉಪಯೋಗ ಈವರೆಗೆ ಹಲವಾರು ಯುದ್ಧಗಳಲ್ಲಿ ಆಗಿದೆ. ಈಗಲೂ ಆಗುತ್ತಿದೆ. ಮೊದಲಿಗೆ ಈ ಮಷಿನ್‌ ಗನ್‌ನ ಉಪಯೋಗ ಆಗಿದ್ದು ಎರಡನೇ ವಿಶ್ವಯುದ್ಧದಲ್ಲಿ. ನಂತರ ಚೀನಾದ ಅಂತರ್ಯುದ್ಧ, ಕೊರಿಯಾ ಯುದ್ಧ, ಮೊದಲ ಇಂಡೊನೇಷಿಯಾ ಯುದ್ಧ, 1958 ರ ಲೆಬನಾನ್ ಬಿಕ್ಕಟ್ಟು, ಕ್ಯೂಬಾ ಕ್ರಾಂತಿ, ಅಲ್ಜೇರಿಯಾ ಯುದ್ಧ, ಗ್ರೀಕ್ ಆಂತರಿಕ ಯುದ್ಧ, ವಿಯೇಟ್ನಾಂ ಯುದ್ಧ, ಕಾಂಬೊಡಿಯಾ ಸಿವಿಲ್ ವಾರ್, ರೊಡೇಷಿಯನ್ ಬುಶ್ ವಾರ್, ಲೆಬನಾನ್ ಯುದ್ಧ, ದಕ್ಷಿಣ ಆಫ್ರಿಕಾ ಗಡಿ ಯುದ್ಧ ಇನ್ನು ಹಲವು ಯುದ್ಧಗಳಲ್ಲಿ ಇದನ್ನು ಬಳಸಲಾಗಿದೆ. ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧದಲ್ಲಿಯೂ ಇದನ್ನು ಬಳಸಲಾಗುತ್ತಿದೆ.

    English summary
    KGF 2 Machine gun: Here ate the Interesting Things to Know About Machine Gun Used In KGF Chapter 2 Movie.
    Monday, April 18, 2022, 16:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X