For Quick Alerts
  ALLOW NOTIFICATIONS  
  For Daily Alerts

  KGF 2 Ticket Price : 'ಕೆಜಿಎಫ್ ಚಾಪ್ಟರ್ 2' ಬಲು ದುಬಾರಿ, ಗಗನಕ್ಕೇರಿದ ಟಿಕೆಟ್ ಬೆಲೆ

  |

  'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಇನ್ನೆರಡು ದಿನ ಕಳೆದರೆ, 'ಕೆಜಿಎಫ್ 2' ಗ್ರ್ಯಾಂಡ್‌ ಆಗಿ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಇದೇ ವೇಳೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಉಳಿದ ಬಿಗ್ ಬಜೆಟ್ ಚಿತ್ರದಂತೆ ದುಬಾರಿ ಎನಿಸುತ್ತಿದೆ.

  'ಕೆಜಿಎಫ್ ಚಾಪ್ಟರ್ 2' ಸಿನಿಮಾ ನೋಡಲು ಮೂರ್ನಾಲ್ಕು ವರ್ಷಗಳಿಂದ ಜನರು ಕಾದು ಕೂತಿದ್ದರು. ಕೊನೆಗೂ ಆ ಸಿನಿಮಾ ಬಿಡುಗಡೆಯಾಗುತ್ತಿದೆ ಅನ್ನುವಾಗಲೇ ಟಿಕೆಟ್ ಬೆಲೆ ಏರಿಕೆಯಾಗಿದೆ. ಥಿಯೇಟರ್‌ಗಳಲ್ಲಿ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿದೆ. ಆದರೂ, ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಹಾಗಿದ್ದರೆ, ಎಲ್ಲೆಲ್ಲಿ? ಎಷ್ಟೆಷ್ಟು? ಬೆಲೆ ಏರಿಕೆಯಾಗಿದೆ ಅನ್ನುವುದರ ಡಿಟೈಲ್ಸ್ ಇಲ್ಲಿದೆ.

  KGF 2 Sultha Song: ಕೆಜಿಎಫ್ 2, 3ನೇ ಹಾಡಿಗೆ ಮುಹೂರ್ತ ಫಿಕ್ಸ್!KGF 2 Sultha Song: ಕೆಜಿಎಫ್ 2, 3ನೇ ಹಾಡಿಗೆ ಮುಹೂರ್ತ ಫಿಕ್ಸ್!

  ಬೆಂಗಳೂರಿನಲ್ಲಿ ಟಿಕೆಟ್ ಬೆಲೆ 2 ಸಾವಿರ

  ಬೆಂಗಳೂರಿನಲ್ಲಿ ಟಿಕೆಟ್ ಬೆಲೆ 2 ಸಾವಿರ

  'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಅಭಿಮಾನಿಗಳಿಗಾಗಿಯೇ ಫ್ಯಾನ್ ಶೋಗಳನ್ನು ಹೆಚ್ಚು ಮಾಡುತ್ತಿದ್ದಾರೆ. ರಾತ್ರಿ ಒಂದೂವರೆಯಿಂದಲೇ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಾಡು ಮಾಡಲಾಗಿದೆ. ಬೆಂಗಳೂರಿನಲ್ಲಿ ಮೊದಲ ಶೋ ಸ್ವಾಗತ್ ಶಂಕರ್‌ನಾಗ್ ಚಿತ್ರಮಂದಿರದಲ್ಲಿದೆ. ಇಲ್ಲಿ ರಾತ್ರಿ 1.30ರ ಶೋ ಹಾಗೂ ಬೆಳಗ್ಗೆ 5.30ರ ಶೋಗೆ ಒಂದು ಟಿಕೆಟ್ ಬೆಲೆ ಬರೋಬ್ಬರಿ 2000 ರೂಪಾಯಿ ಆಗಿದೆ. ಈ ಚಿತ್ರಮಂದಿರದಲ್ಲಿ ಎಲ್‌ಇಡಿ ಸ್ಕ್ರೀನ್ ಇದ್ದು, ಗೋಲ್ಡನ್ ರಿಕೈನರ್ ಸೀಟಿಗೆ 2 ಸಾವಿರ ಬೆಲೆ ನಿಗದಿ ಮಾಡಲಾಗಿದೆ. ಹಾಗೆ ಗೋಲ್ಡ್ ಕ್ಲಾಸ್‌ಗೆ 1200 ರೂ. ಸಿಲ್ವರ್ ಹಾಗೂ ಲಂಜರ್‌ಗೆ 800ರೂ.ಗಳನ್ನು ನಿಗದಿ ಮಾಡಲಾಗಿದೆ.

  ಬೆಂಗಳೂರಿನಲ್ಲಿ ಟಿಕೆಟ್ ಬೆಲೆ 200ರಿಂದ 2 ಸಾವಿರ

  ಬೆಂಗಳೂರಿನಲ್ಲಿ ಟಿಕೆಟ್ ಬೆಲೆ 200ರಿಂದ 2 ಸಾವಿರ

  ಬೆಂಗಳೂರಿನಲ್ಲಿ 'ಕೆಜಿಎಫ್ 2' ಭಯಂಕರ ದುಬಾರಿ ಎನಿಸಿದೆ. ಶಂಕರ್‌ನಾಗ್ ಚಿತ್ರಮಂದಿರದಲ್ಲಿ 2 ಸಾವಿರದಿಂದ 200ರೂವರೆಗೂ ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ. ಬೆಂಗಳೂರಿನ ಬಹುತೇಕ ಸಿಂಗಲ್ ಸ್ಕ್ರೀನ್‌ಗಳಲ್ಲಿ ಬುಕಿಂಗ್ ಓಪನ್ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ 200 ರೂ. ಟಿಕೆಟ್ ದರವಿದೆ. ಇಲ್ಲಿಂದ ಆರಂಭವಾಗಿ 250, 300, 350, 400, 600, 700, 800, ಹೀಗೆ ಒಂದೊಂದು ಥಿಯೇಟರ್‌ನಲ್ಲಿ ಒಂದೊಂದು ಶೋಗೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿದೆ.

  ಬೇರೆ ಜಿಲ್ಲೆಗಳಲ್ಲಿ ಎಷ್ಟು ಟಿಕೆಟ್ ದರ

  ಬೇರೆ ಜಿಲ್ಲೆಗಳಲ್ಲಿ ಎಷ್ಟು ಟಿಕೆಟ್ ದರ

  ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಸಿನಿಮಾ ಟಿಕೆಟ್ ದರ ಗಗನಕ್ಕೇರಿದೆ. ಮೈಸೂರು, ಮಂಗಳೂರು ಕಡೆಗಳಲ್ಲೂ ಸಿನಿಮಾದ ಟಿಕೆಟ್ ಕೊಚ್ಚ ಏರಿಕೆಯಾಗಿದ್ದರೂ, ರೀಸನೆಬಲ್ ಅಂತ ಅನಿಸುತ್ತಿದೆ. ಮೈಸೂರು ಹಾಗೂ ಮಂಗಳೂರಿನಲ್ಲಿ 250 ರೂಪಾಯಿಯಿಂದ 300ರೂ. ವರೆಗೂ ಟಿಕೆಟ್ ದರವಿದೆ ಎಂದು ವರದಿಯಾಗಿದೆ.

  ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಆಗಿಲ್ಲ

  ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಆಗಿಲ್ಲ

  ಇದು ಕೇವಲ ಸಿಂಗಲ್‌ ಸ್ಕ್ರೀನ್‌ನಲ್ಲಿ ಟಿಕೆಟ್ ದರದ ಪಟ್ಟಿ. ಆದರೆ, ಇನ್ನೂ ಮಲ್ಟಿಪ್ಲೆಕ್ಸ್‌ನಲ್ಲಿ ಬುಕಿಂಗ್ ಓಪನ್ ಆಗಬೇಕಿದೆ. ಐನಾಕ್ಸ್, ಪಿವಿಆರ್ ಹಾಗೂ ಸಿನಿಪೊಲಿಸ್‌ ಅಂತ ಮಲ್ಟಿಪ್ಲೆಕ್ಸ್‌ನಲ್ಲಿ ಇನ್ನೂ ಬುಕಿಂಗ್ ಆರಂಭ ಆಗಿಲ್ಲ. ಹೀಗಾಗಿ ಇವರು ಎಷ್ಟು ದರವನ್ನುನಿಗದಿ ಮಾಡುತ್ತಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಸಿಂಗಲ್ ಸ್ಕ್ರೀನ್‌ನಲ್ಲೇ ದರ ಹೆಚ್ಚಾದರೆ, ಇನ್ನೂ ಮಲ್ಟಿಪ್ಲೆಕ್ಸ್‌ನಲ್ಲಿ ಎಷ್ಟಾಗಬಹುದು ಎಂಬ ಅಂದಾಜು ಇನ್ನೂ ಸಿಕ್ಕಿಲ್ಲ.

  ಫಸ್ಟ್ ಕಲೆಕ್ಷನ್ ಹೆಚ್ಚಾಗಬಹುದು

  ಫಸ್ಟ್ ಕಲೆಕ್ಷನ್ ಹೆಚ್ಚಾಗಬಹುದು

  ಮೊದಲ ದಿನ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್ ದರ ಏರಿಕೆ ಆಗಿದ್ದರಿಂದ ಗಳಿಕೆಯಲ್ಲೂ ಏರಿಕೆ ಕಾಣಲಿದೆ. ಮೊದಲ ದಿನವೇ ದಾಖಲೆ ಬರೆಯುವ ಸಾಧ್ಯತೆ ಇದೆ. ಆದರೆ, ಕರ್ನಾಟಕದಂತಯೇ ಆಂಧ್ರದಲ್ಲೂ ಸಿನಿಮಾ ಟಿಕೆಟ್ ಬೆರೆ ಏರಿಕೆಗೆ ಅವಕಾಶ ಕೊಟ್ಟರೆ, RRR ದಾಖಲೆ ಮುರಿದರೂ ಅಚ್ಚರಿಯಿಲ್ಲ. ಆದರೆ, ಇದು ಜನ ಸಾಮಾನ್ಯರಿಗೆ ದುಬಾರಿ ಎನಿಸಲಿದೆ. ಹೀಗಿದ್ದರೂ, 'ಕೆಜಿಎಫ್ 2' ಸಿನಿಮಾ ನೋಡಲು ಜನರು ಮುಗಿಬೀಳುತ್ತಿದ್ದಾರೆ.

  English summary
  KGF Chapter 2 Movie Ticket Rates in Different Cities of Karnataka. Know more.
  Wednesday, April 13, 2022, 9:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X