Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ವೀನ್ ಆಫ್ ಮೆಲೋಡಿ' ಲತಾ ಮಂಗೇಶ್ಕರ್ 7 ದಶಕದ ಗಾಯನ ಯಾನದ ಮೆಲುಕು
ಭಾರತ ರತ್ನ ಲತಾ ಮಂಗೇಶ್ಕರ್ ಅಗಲಿಕ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಮಧುರ ಕಂಠದಿಂದಲೇ ಸಂಗೀತ ಪ್ರಿಯರಿಗೆ ಆತ್ಮೀಯರಾಗದ್ದ ಲತಾ ಮಂಗೇಶ್ಕರ್ ಜೀವನವೇ ಒಂದು ಸಿನಿಮಾ. ಲತಾ ಮಂಗೇಶ್ಕರ್ ಧ್ವನಿಯನ್ನು ಪ್ರೀತಿಸದವರು ಇಡೀ ಪ್ರಪಂಚದಲ್ಲಿಯೇ ಯಾರೂ ಇಲ್ಲ. ಲತಾ ಮಂಗೇಶ್ಕರ್ ಮೈಕ್ ಮುಂದೆ ನಿಂತರೆ ಆ ಹಾಡು ಜನರಿಷ್ಟು ಇಷ್ಟ ಆಗೇ ಆಗುತ್ತೆ ಅನ್ನುವ ನಂಬಿಕೆ ಇರುತ್ತಿತ್ತು. ಒಂದೆರಡು ದಶಕ ಅಲ್ಲ. ಬರೋಬ್ಬರಿ ಏಳು ದಶಕ ತಮ್ಮ ಗಾಯನದಿಂದಲೇ ಸಂಗೀತ ಪ್ರಿಯರನ್ನು ರಂಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್.
ಲತಾ ಮಂಗೇಶ್ಕರ್ ಇಡೀ ಕುಟುಂಬವೇ ಕಲಾಸೇವೆ ಮಾಡಿದೆ. ಲತಾ ಅವರ ತಂದೆ ದೀನನಾಥ್ ಮಂಗೇಶ್ಕರ್ ಕಲಾಕಾರರಾಗಿದ್ದವರು. ಲತಾ ಮಂಗೇಶ್ಕರ್ ಸೋದರಿ ಆಶಾ ಭೋಸ್ಲೆ, ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್, ಸೋದರ ಹೃದಯನಾಥ್ ಮಂಗೇಶ್ಕರ್ ಕೂಡ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಕೇವಲ ಸಂಗೀತಕ್ಕಾಗಿಯೇ ತಮ್ಮ ಜೀವನವನ್ನು ಲತಾ ಮಂಗೇಶ್ಕರ್ ಮುಡಿಪಿಟ್ಟಿದ್ದರು. ಸಾವಿರಕ್ಕೂ ಹೆಚ್ಚು ಹಿಂದಿ ಸಿನಿಮಾಗಳಿಗೆ ಹಾಡಿರುವ ಲತಾ ಮಂಗೇಶ್ಕರ್, ಅತೀ ಹೆಚ್ಚು ಗೌರವಿಸುವ ಭಾರತದ ಗಾಯಕಿ.

ಮಧ್ಯ ಪ್ರದೇಶದಲ್ಲಿ ಲತಾ ಜನನ
ಲತಾ ಮಂಗೇಶ್ಕರ್ ಮರಾಠಿ ಕುಟುಂಬಕ್ಕೆ ಸೇರಿದ್ದರೂ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ್ದರು. ಸೆಪ್ಟೆಂಬರ್ 28, 1929ರಲ್ಲಿ ಇಂದೋರ್‌ನಲ್ಲಿ ಲತಾ ಮಂಗೇಶ್ಕರ್ ಜನನ. ಇವರ ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಹಾಗೂ ತಾಯಿ ಸೇವಂತಿ. ಲತಾ ಮಂಗೇಶ್ಕರ್ ತಂದೆ ಮರಾಠಿ ನಾಟಕಗಳಲ್ಲಿ ನಟಿಸುತ್ತಿದ್ದರು. ರಂಗಭೂಮಿ ಕ್ಷೇತ್ರದಲ್ಲಿ ಲತಾ ಮಂಗೇಶ್ಕರ್ ತಂದೆಗೆ ಬಹಳಷ್ಟು ಗೌರವವಿತ್ತು. ಇವರನ್ನು ಮಾಸ್ಟರ್ ದೀನನಾಥ್ ಅಂತಲೇ ಕರೆಯುತ್ತಿದ್ದರು.

ಲತಾ ಮೂಲ ಹೆಸರು ಹೇಮಾ
ಲತಾ ಮಂಗೇಶ್ಕರ್ ಹುಟ್ಟಿದಾಗ ಇಟ್ಟಿದ್ದ ಹೆಸರು ಹೇಮಾ. ಬಳಿಕ ಅವರ ತಂದೆ ದೀನನಾಥ್ ಮಂಗೇಶ್ಕರ್ ಮಗಳ ಹೆಸರು ಹೇಮಾದಿಂದ ಲತಾ ಎಂದು ಬದಲಾಯಿಸಿದ್ದರು. ಲತಾ ಮಂಗೇಶ್ಕರ್ ತಂದೆ ದೀನನಾಥ್ ಅವರ ಪ್ರಸಿದ್ಧ ನಾಟಕ 'ಭಾವ್ ಬಂದನ್'ನ ಒಂದು ಪಾತ್ರದ ಹೆಸರು ಲತಿಕಾ. ಇದು ಪಾತ್ರ ದೀನನಾಥ್ ಮಂಗೇಶ್ಕರ್ ಅವರಿಗೆ ತುಂಬಾನೇ ಇಷ್ಟ ಆಗಿತ್ತು. ಈ ಕಾರಣಕ್ಕೆ ಮಗಳ ಹೆಸರನ್ನು ಲತಾ ಎಂದು ಬದಲಾಯಿಸಿದ್ದರು.

13ನೇ ವಯಸ್ಸಿನ ಗಾಯನ
ಲತಾ ಮಂಗೇಶ್ಕರ್ ಕುಟುಂಬಕ್ಕೆ ರಂಗಭೂಮಿ ಹಿನ್ನೆಲೆಯಿದ್ದಿದ್ದರಿಂದ ಬಾಲ್ಯದಿಂದಲೇ ಸಂಗೀತ ಅಭ್ಯಾಸ ನಡೆಯುತ್ತಿತ್ತು. ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಅವರೇ ಲತಾ ಮಂಗೇಶ್ಕರ್ ಅವರ ಮೊದಲ ಗುರು. ಲತಾ ಮಂಗೇಶ್ಕರ್ 5 ವರ್ಷವಿದ್ದಾಗಲೇ ತಂದೆಯ ಸಂಗೀತ ಭರಿತ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹೀಗಾಗಿ ನಿಧಾನವಾಗಿ ಸಂಗೀತದ ಕಡೆ ವಾಲಿದ್ದರು. 13ನೇ ವಯಸ್ಸಿನಲ್ಲಿಯೇ ವಸಂತ್ ಜೊಗ್ಲೇಕರ್ ಅವರ ಮರಾಠಿ ಸಿನಿಮಾ 'ಕಿತಿ ಹಸಾಲ್' ಎಂಬ ಸಿನಿಮಾಗೆ ಹಾಡಿದ್ದರು. ಇಲ್ಲಿಂದ ಲತಾ ಮಂಗೇಶ್ಕರ್ ಗಾಯನ ಯಾನ ಆರಂಭ. ಲತಾ ಮಂಗೇಶ್ಕರ್ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ಇರದೇ ಹೋದರೂ, ವಿದ್ಯಾಭ್ಯಾಸವೊಂದೇ ಮುಖ್ಯವಲ್ಲವೆಂದು ತಮ್ಮ ಹಾಡುಗಳಿಂದಲೇ ಸಾಬೀತು ಮಾಡಿದ್ದಾರೆ.

ತಂದೆ ನಿಧನದ ಬಳಿಕ ಲತಾ ಮಂಗೇಶ್ಕರ್ ಗಾಯನ
1942ರಲ್ಲಿ ಲತಾ ಮಂಗೇಶ್ಕರ್ ತಂದೆ ದೀನನಾಥ್ ಮಂಗೇಶ್ಕರ್ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನ ಹೊಂದಿದ್ದರು. ಆ ವೇಳೆ ಮಂಗೇಶ್ಕರ್ ಕುಟುಂಬಕ್ಕೆ ಹತ್ತಿರವಾಗಿದ್ದ 'ನವಯುಗ್ ಚಿತ್ರಪತ್ ಮೂವೀ ಕಂಪನಿ'ಯ ಮಾಲೀಕ ಮಾಸ್ಟರ್ ವಿನಾಯಕ್ ಇವರ ಕುಟುಂಬಕ್ಕೆ ಆಸರೆಯಾಗಿದ್ದರು. ಇವರಿಂದಲೇ ಲತಾ ಮಂಗೇಶ್ಕರ್ ಗಾಯನ ವೃತ್ತಿಯನ್ನು ಆರಂಭ ಮಾಡಿದ್ದರು. ವಸಂತ್ ಜೊಗ್ಲೇಕರ್ ಅವರ ಮರಾಠಿ ಸಿನಿಮಾ 'ಕಿತಿ ಹಸಾಲ್' ಎಂಬ ಸಿನಿಮಾದಲ್ಲಿ ಹಾಡಿದ್ದರೂ, ಆ ಹಾಡನ್ನು ಸಿನಿಮಾದಿಂದ ಕಿತ್ತೆಸೆಯಲಾಗಿತ್ತು.

1943ರಲ್ಲಿ ಮೊದಲ ಹಿಂದಿ ಹಾಡು
ಮಾಸ್ಟರ್ ವಿನಾಯಕ್ ಲತಾ ಮಂಗೇಶ್ಕರ್‌ಗೆ ಮರಾಠಿ ಸಿನಿಮಾ 'ಫಾಹಿಲಿ ಮಂಗಲಾ ಗೌರ್' ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದರು. ಇದೇ ಸಿನಿಮಾ ಒಂದು ಹಾಡನ್ನು ಹಾಡಿದ್ದರು. 1943ರಲ್ಲಿ ತೆರೆಕಂಡ ಮರಾಠಿ ಸಿನಿಮಾ 'ಗಜಾಭಾವು'ವಿನಲ್ಲಿ "ಮಾತಾ ಏಕ್ ಸಪೋಟ್ ಕಿ ದುನಿಯಾ ಬದಲ್ ದೆ ತು" ಎಂಬ ಹಾಡನ್ನು ಹಾಡಿದ್ದರು. ಲತಾ ಮಂಗೇಶ್ಕರ್ ಹಾಡಿದ ಮೊದಲ ಹಿಂದಿ ಹಾಡು. ಬಳಿಕ ಲತಾ ಮಂಗೇಶ್ಕರ್ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯೇ ಲತಾ ಮಂಗೇಶ್ಕರ್ ಕ್ಲಾಸಿಕಲ್ ಹಿಂದೂಸ್ತಾನಿ ಸಂಗೀತವನ್ನು ಉಸ್ತಾದ್ ಅಮನ್ ಅಲಿ ಖಾನ್ ಅವರ ಬಳಿ ಅಭ್ಯಾಸ ಮಾಡಿದರು.

ನಟನೆಯಲ್ಲೂ ಆಸಕ್ತಿ ಇತ್ತು
ಲತಾ ಮಂಗೇಶ್ಕರ್ ಅವರಿಗೆ ಸಿನಿಮಾದ ಜೊತೆ ಜೊತೆಗೆ ನಟಯಲ್ಲೂ ಆಸಕ್ತಿ ಇತ್ತು. ಮಾಸ್ಟರ್ ವಿನಾಯಕ್ 1945ರಲ್ಲಿ ನಿರ್ದೇಶಿಸಿದ್ದ ಮೊದಲ ಹಿಂದಿ ಸಿನಿಮಾ 'ಬಡಿ ಮಾ' ಸಿನಿಮಾದಲ್ಲಿ ಲತಾ ಮಂಗೇಶ್ಕರ್ ಹಾಗೂ ಆಶಾ ಬೋಸ್ಲೆ ಇಬ್ಬರೂ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದರು. ಆರಂಭದಲ್ಲಿ ನಟಯಲ್ಲಿಯೇ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಆದರೆ, ನಿಧಾನವಾಗಿ ಸಂಗೀತ ಕ್ಷೇತ್ರದ ಕಡೆ ಮುಖ ಮಾಡಿದ್ದರು.

ಲತಾ ಧ್ವನಿಯನ್ನೇ ತಿರಸ್ಕರಿಸಿದ್ದರು
ಮಾಸ್ಟರ್ ವಿನಾಯಕ್ ನಿಧನದ ಬಳಿಕ ಲತಾ ಮಂಗೇಶ್ಕರ್ ಅವರನ್ನು ಸಂಗೀತ ನಿರ್ದೇಶಕ ಗುಲಾಮ್ ಹೈದರ್ ನಿರ್ಮಾಪಕ ಶಶಧರ್ ಮುಖರ್ಜಿ ಅವರಿಗೆ ಪರಿಚಯಿಸಿದ್ದರು. ಅವರು ಲತಾ ಮಂಗೇಶ್ಕರ್ ಧ್ವನಿಯನ್ನು ಕೇಳಿ ತುಂಬಾನೇ ತೆಳ್ಳಗಿನ ಧ್ವನಿ ಎಂದು ತಿರಸ್ಕರಿಸಿದ್ದರು. ಲತಾ ಅವರ ಧ್ವನಿಯನ್ನು ತಿರಸ್ಕರಿಸಿದ ನಿರ್ಮಾಪಕರು ಬಳಿಕ ಅವರ ಕಾಲಿಗೆ ಬಿದ್ದು ತಮ್ಮ ಸಿನಿಮಾದಲ್ಲಿ ಹಾಡುವಂತೆ ಕೇಳಿಕೊಂಡಿದ್ದರು. 1948ರಲ್ಲಿ ಸಂಗೀತ ನಿರ್ದೇಶಕ ಗುಲಾಮ್ ಹೈದರ್ 'ಮಜ್ಬೂರ್' ಚಿತ್ರದಲ್ಲಿ ದಿಲ್ ಮೇರಾ ತೋಡ, ಮುಜೆ ಕಹಿ ಕ ನಾ ಛೋಡಾ" ಎಂದು ಹಾಡನ್ನು ಲತಾ ಮಂಗೇಶ್ಕರ್ ಅವರಿಗೆ ನೀಡಿದ್ದರು. ಇದೇ ಹಾಡು ಲತಾ ಮಂಗೇಶ್ಕರ್ ಅವರ ಬದುಕನ್ನೇ ಬದಲಿಸಿಬಿಟ್ಟಿತ್ತು. ತನ್ನ 84ನೇ ಹುಟ್ಟುಹಬ್ಬದ ದಿನ ಲತಾ ಮಂಗೇಶ್ಕರ್ ಸಂದರ್ಶನವೊಂದರಲ್ಲಿ "ಗುಲಾಮ್ ಹೈದರ್ ನಿಜವಾದ ಗಾಡ್ ಫಾದರ್" ಎಂದು ಹೇಳಿದ್ದರು.

5 ದಶಕ ಬಿಡುವಿಲ್ಲದೆ ಗಾಯನ
ಮೊದಲ ಹಿಟ್ ಹಾಡು ಸಿಕ್ಕಿದ ದಿನದಿಂದ ಲತಾ ಮಂಗೇಶ್ಕರ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 1950ರಿಂದ ಲತಾ ಮಂಗೇಶ್ಕರ್‌ಗೆ ಹಿಂದಿ ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಾಗಿತ್ತು. 50ರ ದಶಕದಿಂದ 90ರ ದಶಕದವರೆಗೂ ಲತಾ ಮಂಗೇಶ್ಕರ್ ನಾನ್ ಸ್ಟಾಪ್ ಹಾಡುಗಳನ್ನು ಹಾಡಿದ್ದಾರೆ. ಆ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಸೂಪರ್. ಒಂದೊಂದು ಒಂದೊಂದು ರೀತಿಯ ದಾಖಲೆಗಳನ್ನೇ ಬರೆದಿತ್ತು.

ಸಂಗೀತ ನಿರ್ದೇಶಕಿ, ನಿರ್ಮಾಪಕಿಯೂ ಹೌದು
ಲತಾ ಮಂಗೇಶ್ಕರ್ ಕೇವಲ ಗಾಯಕಿಯಷ್ಟೇ ಅಲ್ಲ. ಸಂಗೀತ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. 60ರ ದಶಕದಲ್ಲಿ 'ರಾಮ್ ರಾಮ್ ಪವ್ಹಾನ' ಸಿನಿಮಾಗೆ ಮೊದಲ ಸಂಗೀತ ನಿರ್ದೇಶನ. ಸುಮಾರು 5 ಸಿನಿಮಾಗಳಿಗೆ ಸಂಗೀತ ನೀಡಿದ್ದರು. 'ಸಧಿ ಮನಸೆ' ಚಿತ್ರ ಸಂಗೀತಕ್ಕೆ ಲತಾ ಮಂಗೇಶ್ಕರ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿ ಕೂಡ ಸಿಕ್ಕಿದೆ. ಇದರೊಂದಿಗೆ ಸುಮಾರು ನಾಲ್ಕು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ, ಭಾರತ ರತ್ನ ಪ್ರಶಸ್ತಿ
ಏಳು ದಶಕ ಲತಾ ಮಂಗೇಶ್ಕರ್ ಸಿನಿಮಾಗಳಿಗೆ ಹಾಡಿದ್ದಾರೆ. ಇವರ ಧ್ವನಿಗೆ ಮರುಳಾಗದವೇ ಇಲ್ಲ. ಸುಮಾರು 30 ಸಾವಿರ ಬರೀ ಹಿಂದಿ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ 1974ರಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಕಾರಣಕ್ಕೆ ಗಿನ್ನಿಸ್ ಬಕ್‌ನಲ್ಲಿ ಇವರ ಹೆಸರು ದಾಖಲಾಗಿದೆ. ಲತಾ ಮಂಗೇಶ್ಕರ್ ಅವರು ಸಿನಿಮಾ ರಂಗಕ್ಕೆ ನೀಡಿದ ಸಾಧನೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಫ್ರಾನ್ಸ್ ಅತೀ ಉನ್ನತ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ 2001ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಿಲಾಗಿದೆ.