Don't Miss!
- News
ಇಂಡಿಯಾ ಗೇಟ್ ಮುಂದಿನ ಹುತಾತ್ಮರ ಸ್ಮರಣಾ ಚಿಹ್ನೆ ಸ್ಥಳಾಂತರ
- Technology
ಮೂರು ಹೊಸ JioFi ರೀಚಾರ್ಜ್ ಪ್ಲ್ಯಾನ್ ಲಾಂಚ್: ಏನೆಲ್ಲಾ ಪ್ರಯೋಜನಗಳು ಲಭ್ಯ?
- Education
CUK Recruitment 2022 : 61 ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಮೇ.28: ಕಚ್ಚಾತೈಲ ದರ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊರೊನಾ ವೈರಸ್‌ಗೆ ತುತ್ತಾಗಿದ್ದ ಭಾರತೀಯ ಸಿನಿ ಸೆಲೆಬ್ರಿಟಿಗಳ ಪಟ್ಟಿ
2020ನೇ ವರ್ಷದಲ್ಲಿ ಅನಿರೀಕ್ಷಿತವಾಗಿ ಪತ್ತೆಯಾದ ಕೊರೊನಾ ವೈರಸ್ ಇಡೀ ಜಗತ್ತಿಗೆ ಸಂಕಷ್ಟ ತಂದೊಡ್ಡಿತ್ತು. ಆರಂಭದ ದಿನಗಳಲ್ಲಿ ಈ ವೈರಸ್ ಮಹಾಮಾರಿಯಂತೆ ಕಂಡಿತ್ತು. ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದ ಈ ಸೋಂಕು ಭಾರಿ ಆತಂಕ ಸೃಷ್ಟಿಸಿತ್ತು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ಅನೇಕರು ಕೊರೊನಾ ಸೋಂಕಿಗೆ ತುತ್ತಾದರು.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದವರಲ್ಲಿ ಕೆಲವು ಮೃತಪಟ್ಟರು. ಬಹುತೇಕರು ಸೋಂಕಿನಿಂದ ಆರಾಮಾಗಿ ಚೇತರಿಸಿಕೊಂಡರು. ಸಿನಿಮಾ ಇಂಡಸ್ಟ್ರಿಯ ಯಾವೆಲ್ಲ ಸೆಲೆಬ್ರೆಟಿಗಳಿಗೆ ಕೊರೊನಾ ವೈರಸ್ ಅಂಟಿಕೊಂಡಿತ್ತು ಎಂದು ತಿಳಿಸುವ ವಿಶೇಷ ವರದಿ ಇದಾಗಿದೆ. ಯಾರ್ ಯಾರಿಗೆ ಕೊರೊನಾ ತಗುಲಿತ್ತು ಎಂದು ಪಟ್ಟಿ ಮಾಡಲಾಗಿದೆ. ಮುಂದೆ ಓದಿ...

ನಟಿ ರಕುಲ್ ಪ್ರೀತ್ ಸಿಂಗ್‌ಗೆ ಕೊರೊನಾ
ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್‌ಗೆ ಕೊರೊನಾ ವೈರಸ್ ತಗುಲಿದ್ದು, ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಈ ಕುರಿತು ಸ್ವತಃ ರಕುಲ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ''ಆರೋಗ್ಯವಾಗಿದ್ದೇನೆ, ವಿಶ್ರಾಂತಿ ಪಡೆಯುತ್ತಿದ್ದೇನೆ'' ಎಂದು ತಿಳಿಸಿದ್ದರು. ಈಗ ರಕುಲ್‌ಗೆ ನೆಗಿಟಿವ್ ಬಂದಿದೆ.
2021ರಲ್ಲಿ
ಧೂಳೆಬ್ಬಿಸಲು
ಸಿದ್ಧವಾಗಿದೆ
ಬಹುನಿರೀಕ್ಷೆಯ
ಚಿತ್ರಗಳು

ಕೃತಿ ಸನೊನ್ ಗೆ ಕೊರೊನಾ
ಬಾಲಿವುಡ್ ನ ಖ್ಯಾತ ನಟಿ ಕೃತಿ ಸನೊನ್ ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ರಾಜ್ ಕುಮಾರ್ ರಾವ್ ನಾಯಕನಾಗಿ ನಟಿಸುತ್ತಿರುವ ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಸಿನಿಮಾದ ಚಿತ್ರೀಕರಣ ಚಂಡೀಗಢದಲ್ಲಿ ನಡೆಯುತ್ತಿತ್ತು. ಈಗ ಸೋಂಕಿನಿಂದ ನಟಿ ಗುಣಮುಖರಾಗಿದ್ದಾರೆ.

ತಮಿಳು ನಟ ಶರತ್ ಕುಮಾರ್‌ಗೆ ಕೊರೊನಾ
ಮಿಳು ಚಿತ್ರರಂಗದ ಹಿರಿಯ ನಟ ಶರತ್ ಕುಮಾರ್ ಅವರಿಗೆ ಕೊರೊನಾ ವೈರಸ್ ತಗುಲಿದೆ ಎಂಬ ವಿಚಾರವನ್ನು ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದರು. ಶರತ್ ಕುಮಾರ್ ಅವರಿಗೆ ಕೊರೊನಾ ರೋಗದ ಯಾವುದೇ ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದಾರೆ ಎಂದು ರಾಧಿಕಾ ಮಾಹಿತಿ ನೀಡಿದ್ದರು.
2020:
ಈ
ವರ್ಷದ
ಟಾಪ್
5
ಕನ್ನಡ
ಹಾಡುಗಳು
ಇವು

ಮೇಘನಾ ರಾಜ್ ಕುಟುಂಬಕ್ಕೆ ಸೋಂಕು
ಹಿರಿಯ ನಟಿ ಪ್ರಮೀಳಾ ಜೋಷಾಯ್, ಪತಿ ಸುಂದರ್ ರಾಜ್, ಮಗಳು ಮೇಘನಾ ರಾಜ್ ಹಾಗೂ ಚಿರು ಸರ್ಜಾ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ವರುಣ್ ಧವನ್, ನೀತು ಕಪೂರ್ ಕೊರೊನಾ
ಹಿಂದಿ ಸಿನಿಮಾ 'ಜುಗ್ ಜುಗ್ ಜಿಯೋ' ಚಿತ್ರೀಕರಣ ಸೆಟ್‌ನಲ್ಲಿ ನಟ ವರುಣ್ ಧವನ್ ಮತ್ತು ನೀತು ಕಪೂರ್ ಕೊರೊನಾ ತಗುಲಿತ್ತು, ಚಂಡೀಘಡದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಬಳಿಕ ಶೂಟಿಂಗ್ ನಿಲ್ಲಿಸಲಾಯಿತು.

ಸನ್ನಿ ಡಿಯೋಲ್ ಗೆ ಕೊರೊನಾ
ಖ್ಯಾತ ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ನಂತರ ಮನೆಯಲ್ಲಿ ಕ್ವಾರಂಟೈನ್ ಆಗಿ ಗುಣಮುಖರಾದರು.

ತೆಲುಗು ರಾಜಶೇಖರ್‌ಗೆ ಕೊರೊನಾ
ತೆಲುಗಿನ ಖ್ಯಾತ ನಾಯಕ ನಟ ರಾಜಶೇಖರ್‌ಗೆ ಕೊರೊನಾ ಸೋಂಕು ತಗುಲಿತ್ತು. ನಂತರ ರಾಜಶೇಖರ್ ಪತ್ನಿ ಜೀವಿತಾ, ಮಕ್ಕಳಾದ ಶಿವಾನಿ ಮತ್ತು ಶಿವಾತ್ಮಿಕ ಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ಗೊತ್ತಾಗಿತ್ತು. ಈಗ ಎಲ್ಲವೂ ಗುಣಮುಖರಾಗಿದ್ದಾರೆ.

ಪೃಥ್ವಿರಾಜ್ ಸುಕುಮಾರನ್‌ಗೆ ಕೊರೊನಾ
ಮಲಯಾಳಂ ಯುವ ನಟ ಪೃಥ್ವಿರಾಜ್ ಸುಕುಮಾರನ್‌ಗೆ ಕೊರೊನಾ ಪಾಸಿಟಿವ್ ಆಗಿತ್ತು. 'ಜನಗಣಮನ' ಚಿತ್ರದ ಚಿತ್ರೀಕರಣ ವೇಳೆ ರೋಗಲಕ್ಷಣಗಳು ಇಲ್ಲದೇ ಹೋದರು ಸೋಂಕು ತಗುಲಿರುವುದು ಖಚಿತವಾಗಿತ್ತು. ಆ ಬಳಿಕ ಗುಣಮುಖರಾಗಿ ಶೂಟಿಂಗ್ ಆರಂಭಿಸಿದ್ದರು.

ಸಿಂಗೀತಂ ಶ್ರೀನಿವಾಸ್ ರಾವ್‌ಗೆ ಕೊರೊನಾ
ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹಿರಿಯ ನಿರ್ದೇಶಕರಲ್ಲಿ ಸಿಂಗೀತಂ ಶ್ರೀನಿವಾಸ್ ರಾವ್ ಗೆ ಸೆಪ್ಟೆಂಬರ್ ತಿಂಗಳಲ್ಲಿ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಅದಾದ ಬಳಿಕ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರು.

ಮೆಗಾಸ್ಟಾರ್ ಹಾಗೂ ಕುಟುಂಬಕ್ಕೆ!
ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬುಗೆ ಕೊರೊನಾ ತಗುಲಿತ್ತು. ನಂತರ ಚೇತರಿಸಿಕೊಂಡರು. ಸ್ವಲ್ಪ ದಿನಗಳ ನಂತರ ಚಿರಂಜೀವಿಗೆ ಸೋಂಕು ತಗುಲಿದೆ ಎಂದು ಸುದ್ದಿಯಾಯಿತು. ಆಮೇಲೆ ಅದು ಸುಳ್ಳು ವರದಿ ಎಂದು ಹೇಳಿದರು. ಈಗ ರಾಮ್ ಚರಣ್ ತೇಜಗೆ ಸೋಂಕು ದೃಢವಾಗಿದೆ.

ಶರ್ಮಿಳಾ ಮಾಂಡ್ರೆಗೆ ಕೊರೊನಾ
ಕನ್ನಡ ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ''ಎಲ್ಲರಿಗೂ ನಮಸ್ಕಾರ....ನನಗೆ ಮತ್ತು ನನ್ನ ಕುಟುಂಬದ ಕೆಲವರಿಗೆ ಕೊರೊನಾ ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ. ಹಾಗಾಗಿ, ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದೇವೆ'' ಎಂದು ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದರು. ನಂತರ ಕೊರೊನಾದಿಂದ ಚೇತರಿಸಿಕೊಂಡಿದ್ದರು.

ಜೆನಿಲಿಯಾಗೂ ಕೊರೊನಾ
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಪ್ರತಿಭಾವಂತ ನಟಿ ಜೆನಿಲಿಯಾ ಅವರಿಗೆ ಆಗಸ್ಟ್ ತಿಂಗಳಲ್ಲಿ ಕೊರೊನಾ ವೈರಸ್ ತಗುಲಿತ್ತು. ನಂತರ ಮೂರು ವಾರಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಅಂತಿಮವಾಗಿ ಕೊರೊನಾದಿಂದ ಗುಣಮುಖರಾಗಿದ್ದರು.

ಎಸ್‌ಪಿಬಿಗೂ ಸೋಂಕು ತಗುಲಿತ್ತು
ಗಾನ ಗಂಧರ್ವ, ದಿವಂಗತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಆ ನಂತರವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಎರಡು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಕ ಬದುಕಿ ಬರಲಿಲ್ಲ. ಆದ್ರೆ, ಕೊರೊನಾದಿಂದ ಮೃತಪಟ್ಟಿಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ.

ರಾಜಮೌಳಿ ಕುಟುಂಬಕ್ಕೆ ಕೊರೊನಾ
ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ರಾಜಮೌಳಿಗೆ ಕೊರೊನಾ ಸೋಂಕು ತಗುಲಿತ್ತು. ರಾಜಮೌಳಿ ಜೊತೆಗೆ ಅವರ ಕುಟುಂಬ ಸದಸ್ಯರೂ ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಬಳಿಕ ಎಲ್ಲರೂ ಗುಣಮುಖರಾದರು.

ಸುಮಲತಾ ಅಂಬರೀಶ್‌ಗೆ ಸೋಂಕು
ಮಂಡ್ಯ ಸಂಸದೆ ಹಾಗು ಹಿರಿಯ ನಟಿ ಸುಮಲತಾ ಅಂಬರೀಶ್ ಅವರಿಗೂ ಕೊರೊನಾ ಸೋಂಕು ದೃಢವಾಗಿತ್ತು. ಮಂಡ್ಯದಲ್ಲಿ ಹೆಚ್ಚು ಸಂಚರಿಸಿದ್ದ ಸಂಸದೆ ನಂತರ ಮನೆಯಲ್ಲಿ ಕ್ವಾರಂಟೈನ್ ಆಗಿ ಗುಣಮುಖರಾಗಿದ್ದರು.

ಅಮಿತಾಭ್ ಬಚ್ಚನ್ ಕುಟುಂಬ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಕುಟುಂಬದಲ್ಲಿ ಹೆಚ್ಚು ಮಂದಿಗೆ ಕೊರೊನಾ ತಗುಲಿತ್ತು. ಅಮಿತಾಭ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಹಾಗೂ ಮಗಳು ಆರಾಧ್ಯಳಿಗೂ ಸೋಂಕು ತಗುಲಿತ್ತು. ಬಳಿಕ ಎಲ್ಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು.

ಧ್ರುವ ಸರ್ಜಾ ಮತ್ತು ಪತ್ನಿಗೆ ಕೊರೊನಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸರ್ಜಾಗೂ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ, ಇಬ್ಬರು ವೈದ್ಯರ ಸಲಹೆ ಮೆರೆಗೆ ಕ್ವಾರಂಟೈನ್‌ಗೆ ಒಳಗಾಗಿದ್ದರು. ಸೂಕ್ತ ಚಿಕಿತ್ಸೆ ಪಡೆದ ಬಳಿಕ ಕೊರೊನಾ ನೆಗಿಟಿವ್ ಬಂದಿತ್ತು.

ಅರ್ಜುನ್ ಸರ್ಜಾ ಪುತ್ರಿಗೆ ಕೊರೊನಾ
ನಟಿ ಮತ್ತು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾಗೂ ಕೊರೊನಾ ಪಾಸಿಟಿವ್ ಆಗಿತ್ತು. ನಂತರ ಕ್ವಾರಂಟೈನ್ ಆಗಿ ಕೊವಿಡ್‌ನಿಂದ ಗುಣಮುಖರಾದರು.

ಬಂಡ್ಲ ಗಣೇಶ್‌ಗೆ ಕೊರೊನಾ
'ಗಬ್ಬರ್ ಸಿಂಗ್', 'ಬಾದ್‌ಶಾ'ದಂತಹಾ ಹಿಟ್ ಸಿನಿಮಾಗಳನ್ನು ನೀಡಿರುವ ತೆಲುಗು ನಿರ್ಮಾಪಕ, ನಟ ಬಂಡ್ಲ ಗಣೇಶ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ನಂತರ ಸೋಂಕಿನಿಂದ ಚೇತರಿಸಿಕೊಂಡರು.

ನಿರ್ಮಾಪಕ ಸಂದೇಶ್ ನಾಗರಾಜ್‌ಗೆ ಕೊರೊನಾ
ಕನ್ನಡ ಸಿನಿಮಾ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರ ಕುಟುಂಬ ಮೈಸೂರಿನಲ್ಲಿ ಕ್ವಾರಂಟೈನ್ ಆಗಿದ್ದರು. ನಂತರ ಮೈಸೂರಿನಲ್ಲಿಯೇ ಕ್ವಾರಂಟೈನ್ ಆಗಿ ಗುಣಮುಖರಾದರು.

ಕನಿಕಾ ಕಪೂರ್‌ಗೆ ಕೊರೊನಾ
ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಕೊರೊನಾ ಸೋಂಕು ತಗುಲಿದ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿತ್ತು. ಲಂಡನ್‌ನಿಂದ ಭಾರತಕ್ಕೆ ಬಂದಿದ್ದ ಗಾಯಕಿ ಕ್ವಾರಂಟೈನ್ ಆಗದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆ ಪಾರ್ಟಿಯಲ್ಲಿ ದೇಶದ ಪ್ರಮುಖ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಪಾರ್ಟಿ ನಡೆದ ಕೆಲವೇ ದಿನಗಳಲ್ಲಿ ಕನಿಕಾಗೆ ಸೋಂಕು ದೃಢಪಟ್ಟಿತ್ತು. ನಂತರ ಚೇತರಿಕೆ ಕಂಡರು.