For Quick Alerts
  ALLOW NOTIFICATIONS  
  For Daily Alerts

  'ನಾನು ಸತ್ತಿಲ್ಲ, ಸೋತಿದ್ದೀನಿ ಅಷ್ಟೇ': ಬೆನ್ನಿಗೆ ಚೂರಿಹಾಕಿದವರ ಕುರಿತು ಲೂಸ್ ಮಾದ ಯೋಗಿ ಹೇಳಿದ್ದೇನು?

  |

  ಸತತ ಸೋಲು, ನಂಬಿಕೆ ದ್ರೋಹದ ಹೊಡೆತ, ಅವಮಾನಗಳಿಂದ ಕುಗ್ಗಿ ಹೋಗಿದ್ದ ನಟ ಲೂಸ್ ಮಾದ ಯೋಗಿ ತಮ್ಮಲ್ಲ ನೋವು, ಹತಾಶೆಗಳಿಂದ ಮೈಕೊಡವಿ ನಿಲ್ಲುವ ಸೂಚನೆ ನೀಡಿದ್ದಾರೆ. ತಮ್ಮ ಸಿನಿಮಾ ಬದುಕು ಆರಂಭವಾದ ರೀತಿ, ಮೊದಲ ಚಿತ್ರದಿಂದಲೇ ಗೆಲುವು ಮತ್ತು ಹೆಸರು ಪಡೆದ ಬಗೆ, ಅದರ ಮೂಲಕ ತಾವು ನಾಯಕ ನಟನಾಗಿ ಬೆಳೆದಿದ್ದನ್ನು ಅವರು ಹಂಚಿಕೊಂಡಿದ್ದರು.

  ಹಾಗೆಯೆ ಗೆಲುವನ ಖುಷಿಯಲ್ಲಿದ್ದಾಗಲೇ ತಮ್ಮ ಸಿನಿಮಾಗಳು ಸೋಲು ಕಾಣಲು ಆರಂಭವಾಗಿದ್ದು, ಕೆಟ್ಟ ಸಿನಿಮಾಗಳನ್ನು ಮಾಡಿ ಸಾಲದ ಹೊರೆಗೆ ಸಿಲುಕಿದ್ದು, ಆ ಸಾಲ ತೀರಿಸಲೆಂದೇ ಸಿಕ್ಕ ಸಿನಿಮಾಗಳಲ್ಲಿ ನಟಿಸಿದ್ದು, ಕೊನೆಗೆ ಜತೆಗಿದ್ದರಿಂದಲೇ ನಿಂದನೆ, ಅವಮಾನಗಳನ್ನು ಅನುಭವಿಸಿದ್ದು, ಇವೆಲ್ಲವನ್ನೂ ಅವರು ಹೇಳಿಕೊಂಡಿದ್ದಾರೆ. ಅವರ ಮಾತುಗಳ ಮುಂದುವರಿದ ಭಾಗ ಇಲ್ಲಿದೆ.

  ಲೂಸ್ ಮಾದ ಯೋಗಿ ಬಿಚ್ಚಿಟ್ಟ ಸಿನಿಮಾ ಪಯಣದ ಸಿಹಿ-ಕಹಿ ಕಥೆಲೂಸ್ ಮಾದ ಯೋಗಿ ಬಿಚ್ಚಿಟ್ಟ ಸಿನಿಮಾ ಪಯಣದ ಸಿಹಿ-ಕಹಿ ಕಥೆ

  ಅಂಬಾರಿ ಏರಿದಾಗ...

  ಅಂಬಾರಿ ಏರಿದಾಗ...

  'ನಂದ ಲವ್ಸ್ ನಂದಿತಾ' ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದ್ದು. ಅದು ಸೂಪರ್ ಹಿಟ್. ಮುಂದೆ ಪೆಟ್ರೋಲ್ ಪ್ರಸನ್ನ, ಎ.ಪಿ. ಅರ್ಜುನ್ ಅವರನ್ನು ಕರೆದುಕೊಂಡು ಬಂದರು. 'ಅಂಬಾರಿ' ಕಥೆ ಹೇಳುವಾಗ ಕ್ಲೈಮ್ಯಾಕ್ಸ್‌ನಲ್ಲಿ ನಾವು ಅಕ್ಷರಶಃ ಅಳುತ್ತಿದ್ದೆವು. ಅಷ್ಟು ಚೆಂದ ಕಥೆ ಹೇಳಿದ್ದರು. 'ಅಂಬಾರಿ' ಸಿನಿಮಾಕ್ಕೆ ಮೊದಲ ಅವಾರ್ಡ್ ಸಿಕ್ಕಿದಾಗ ನನಗೆ 17 ವರ್ಷ. ಇಡೀ ಭಾರತದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ಬೆಸ್ಟ್ ಹೀರೋ ಎಂಬ ರಾಜ್ಯ ಪ್ರಶಸ್ತಿ ಪಡೆದ ನಟ ಇತಿಹಾಸದಲ್ಲೇ ಇಲ್ಲ. ಅದರ ಬಗ್ಗೆ ಹೆಮ್ಮೆ ಇದೆ.

  ಸೋಲುಗಳು ನೀಡಿದ ಹೊಡೆತ

  ಸೋಲುಗಳು ನೀಡಿದ ಹೊಡೆತ

  'ಅಂಬಾರಿ' ರಿಲೀಸ್ ಅದರ ಬಳಿಕ ನಾಲ್ಕೈದು ಸಿನಿಮಾ ಹಿಟ್ ಆದವು. 'ದೇವದಾಸ್' ಎಂಬ ಸಿನಿಮಾ ಮೊದಲ ಸೋಲು ಕಂಡಿದ್ದು. ನಾನು ಮಾಡಿದ ಅತಿಕೆಟ್ಟ ಸಿನಿಮಾ ಅದು. ಅದಾದ ಬಳಿಕ ತುಂಬಾ ಇಷ್ಟಪಟ್ಟು ಮಾಡಿದ ಸಿನಿಮಾ 'ಸಿದ್ಲಿಂಗು' ಒಳ್ಳೆ ಹೆಸರು ಬಂತು. ಅದರ ಬಳಿಕ ಹೋಮ್ ಬ್ಯಾನರ್‌ನಲ್ಲೇ 'ಯಕ್ಷ' ಸಿನಿಮಾ ಮಾಡಿದೆವು. ಅಪ್ಪ ಆ ಸಿನಿಮಾ ಯಾಕೆ ಮಾಡಿದರು ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆಯೇ ಆಗಿ ಉಳಿದಿದೆ. ಈ ಸಿನಿಮಾ ಬೇಡ ನಮಗೆ ನಂಬಿಕೆ ಇಲ್ಲ ಎಂದು ಎಷ್ಟು ಹೇಳಿದರೂ ಅಪ್ಪ ನಿರ್ಧಾರ ಬದಲಿಸಲಿಲ್ಲ. 8 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದೆವು.

  ಇನ್ನೂ ಸಾಲದಿಂದ ಹೊರ ಬರಲು ಆಗಿಲ್ಲ

  ಇನ್ನೂ ಸಾಲದಿಂದ ಹೊರ ಬರಲು ಆಗಿಲ್ಲ

  ಆ ಸಿನಿಮಾ ಮುಕ್ಕಾಲು ಭಾಗ ನೋಡಿ ಟೆರೇಸ್‌ಗೆ ಹೋದೆ. ನನಗೆ ಮಾತುಗಳನ್ನು ಕೇಳಿಸಿಕೊಳ್ಳು ಆಗಲಿಲ್ಲ. ಮಾಡಿದರೆ ಒಳ್ಳೆ ಸಿನಿಮಾ ಮಾಡಿ ಇಂಥಹವರನ್ನು ಕರೆಸಬೇಕು. ಯಾಕಿಂತ ಕೆಟ್ಟ ಸಿನಿಮಾಕ್ಕೆ ನಾನಾ ಪಾಟೇಕರ್, ಅತುಲ್ ಕುಲಕರ್ಣಿ ಅವರಂತಹ ನಟರನ್ನು ಕರೆಸಿದ್ದಾರಲ್ಲ ಎಂದು ಹಿಂದೆ ಮುಂದೆ, ಅಕ್ಕ-ಪಕ್ಕ ಕುಳಿತವರೇ ಮಾತಾಡಿದರು. ತುಂಬಾ ಅವಮಾನವಾಯ್ತು. ಆ ಸಿನಿಮಾ ಮಾಡಿ ಎಂಟು ವರ್ಷ ಕಳೆದರೂ ಇನ್ನೂ ಸಾಲದ ಸುಳಿಯಿಂದ ಹೊರಬರಲು ಆಗಿಲ್ಲ.

  ಕಷ್ಟದಲ್ಲಿದ್ದಾಗ ಯಾರೂ ಬರಲಿಲ್ಲ

  ಕಷ್ಟದಲ್ಲಿದ್ದಾಗ ಯಾರೂ ಬರಲಿಲ್ಲ

  ದುನಿಯಾ ಸಿನಿಮಾ ಸೂಪರ್ ಹಿಟ್ ಆದಾಗ ಅಪ್ಪ ಚೆನ್ನಾಗಿ ಕಾಸು ಸಂಪಾದನೆ ಮಾಡಿದರು. ಚಿತ್ರ ಪಾರ್ಟ್ನರ್ಸ್‌ಗೂ ಹಣ ನೀಡಿದರು. ಸೂರಿ ಸರ್‌ಗೆ 50 ಲಕ್ಷ ಬೆಲೆ ಬಾಳುವ ಮನೆ ಕೊಡಿಸಿದರು. ಆ ಸಿನಿಮಾ ಮಾಡಿದ ಎಲ್ಲರಿಗೂ ಲೈಫ್ ಸಿಕ್ಕಿತು. ಆದರೆ ಸಿನಿಮಾ ಮಾಡಿದ್ದ ನಿರ್ಮಾಪಕನಿಗೆ ತುಂಬಾ ಹೊಡೆತ ಬಿದ್ದಾಗ, ಯಾರಲ್ಲಿಯೂ ಆ ನಿರ್ಮಾಪಕನ ಜತೆಗೆ ನಿಂತು ನಾವೆಲ್ಲ ಸೇರಿ ಸಿನಿಮಾ ಮಾಡೋಣ, ಸಹಾಯ ಮಾಡೋಣ ಎಂಬ ಮಾತು ಬರಲಿಲ್ಲ. ಮುಂದೆ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ.

  ಲೂಸ್ ಮಾದ ಯೋಗಿ- ಅದಿತಿ ಪ್ರಭುದೇವಗೆ ಇಷ್ಟು ವಯಸ್ಸಾಯ್ತಾ?ಲೂಸ್ ಮಾದ ಯೋಗಿ- ಅದಿತಿ ಪ್ರಭುದೇವಗೆ ಇಷ್ಟು ವಯಸ್ಸಾಯ್ತಾ?

  ಏಕವಚನದಲ್ಲಿ ಮಾತಾಡಿದರು

  ಏಕವಚನದಲ್ಲಿ ಮಾತಾಡಿದರು

  ಇದಾದ ಬಳಿಕ ಸಿನಿಮಾಗಳನ್ನು ಒಪ್ಪಿಕೊಳ್ಳಲೇಬೇಕು. ಸಿನಿಮಾ ಕಥೆ ಚೆನ್ನಾಗಿರಲಿ, ಇಲ್ಲದೆ ಇರಲಿ. ಇಷ್ಟವಿಲ್ಲದಿರಲಿ ಒಪ್ಪಿಕೊಳ್ಳಲೇಬೇಕು. ಸಾಲ ತೀರಿಸಬೇಕಲ್ಲ. ಬೆಳಗಿನ ಜಾವ ಐದೂವರೆಗೆ ಒಲೆ ಹಚ್ಚಿದರೆ ರಾತ್ರಿ ಎರಡು ಗಂಟೆಗೆ ಆರುತ್ತಿದ್ದ ಮನೆ ನಮ್ಮದು. ಅಂತಹ ಮನೆಯಲ್ಲಿ ಎಲ್ಲ ಫೇಡ್ ಆಗಲು ಶುರುವಾಗುತ್ತದೆ. ನನ್ನನ್ನು ಅಪ್ಪನನ್ನು 'ಬನ್ನಿ ಹೋಗಿ' ಎಂದು ಮಾತಾಡೋರು 'ಬಾರೋ ಹೋಗೋ' ಎನ್ನಲು ಆಗುತ್ತದೆ. ಆ ಸಂದರ್ಭದಲ್ಲಿ ನನ್ನ ಜತೆಗಿದ್ದವರಿಗೆ ಅವರೆಲ್ಲ ಈಗ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ನಾನು ನೋಡುತ್ತಲೇ ಇದ್ದೇನೆ. ಬೆಳೀಲಿ ಖುಷಿಯೇ ನಮಗೆ. ನಮ್ಮ ಜತೆಯಲ್ಲಿ ಇದ್ದವರು ಬೆಳೆದಿದ್ದಾರೆ ಎಂಬ ಖುಷಿಯಾಗುತ್ತದೆ. ಬೆಳೆದು ಹೋದಾಗ ಸಪೋರ್ಟ್ ಮಾಡಿದವರನ್ನು ಸ್ವಲ್ಪ ನೆನಪಿಸಿಕೊಳ್ಳಿ. ಬೇರೇನೂ ಸಪೋರ್ಟ್ ಮಾಡದೆ ಇದ್ದರೂ ಪರವಾಗಿಲ್ಲ. ಮಾರಲ್ ಸಪೋರ್ಟ್ ಬೇಕು. ನಮ್ಮವರಲ್ಲಿ ಕೃತಜ್ಞತಾ ಭಾವ ಕಡಿಮೆಯೇ. ಕೆಲವರಿಗೆ ಇಲ್ಲವೇ ಇಲ್ಲ ಎನ್ನಬಹುದು.

  ಉಪಯೋಗಿಸಿ ಬಿಟ್ಟು ಬಿಡುತ್ತಾರೆ

  ಉಪಯೋಗಿಸಿ ಬಿಟ್ಟು ಬಿಡುತ್ತಾರೆ

  ಸಿಕ್ಕಾಪಟ್ಟೆ ಅತ್ತಿದ್ದೇನೆ. ನಾನು ಅಪ್ಪ ಅಮ್ಮನ ಮುಂದೆ, ಹೆಂಡತಿ ಮುಂದೆ ಒಂದೆರಡು ಸಲ ಅತ್ತಿರಬಹದು. ನನ್ನ ರೂಮ್ ದಿಂಬು, ಫ್ಯಾನ್, ಗೋಡೆಗಳಿಗೆ ಮಾತ್ರ ಗೊತ್ತು ನಾನೆಷ್ಟು ಅತ್ತಿದ್ದೀನಿ, ನೊಂದಿದ್ದೀನಿ ಎನ್ನುವದು. ಕೆಲವು ಸಲ ಗೆದ್ದರೆ ಮಾತ್ರ ಜನ ಇರುತ್ತಾರೆ ಅನಿಸುತ್ತಿತ್ತು. ಅದು ಖಂಡಿತವಾಗಿಯೂ ನಿಜ. ಗೆಲುವು ನಿನ್ನ ಬಳಿ ಇಲ್ಲ ಎಂದರೆ ಒಬ್ಬೊಬ್ಬರೇ ದೂರವಾಗುತ್ತಾ ಹೊಗಯತ್ತಾರೆ. ತುಂಬಾ ಕೆಟ್ಟತನ ಜನರದ್ದು. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಉಪಯೋಗಿಸಿಕೊಂಡು ಬಿಟ್ಟುಬಿಡುತ್ತಾರೆ. ಆಮೇಲೆ ಬದುಕುತ್ತಿದ್ದಾನಾ ಸಾಯುತ್ತಿದ್ದಾನಾ ಯಾರೂ ನೋಡಲು ಬರೊಲ್ಲ. ನರಳುವುದನ್ನು ನೋಡುತ್ತಾರೆಯೇ ಹೊರತು ಬಂದು ಸಹಾಯ ಮಾಡಲು ಮುಂದಾಗೊಲ್ಲ.

  ಪಟಾಕಿ ಹೊಡೆಯಲು ಯಾರೂ ಬರಲಿಲ್ಲ

  ಪಟಾಕಿ ಹೊಡೆಯಲು ಯಾರೂ ಬರಲಿಲ್ಲ

  ನನನಗೆ ಎರಡೂ ತರಹದ ಫ್ರೆಂಡ್ಸ್ ಇದ್ದಾರೆ. ಮನೆಯಿಂದ ಆಚೆ ಹೋಗುತ್ತೇನೆ ಎಂದರೆ ಒಂದೊಂದು ಜೇಬಲ್ಲಿ ಒಂದು ಲಕ್ಷ ಇಟ್ಟುಕೊಂಡು ಹೋಗುತ್ತಿದ್ದೆ. ಫ್ರೆಂಡ್ಸ್ ಚೆನ್ನಾಗಿ ಇರಬೇಕು ಎಂದು. ಆ ಫ್ರೆಂಡ್ಸೇ ಬಿಟ್ಟುಹೋದರು. ದೀಪಾವಳಿಗೆ ಮೂಟೆ ಮೂಟೆ ಪಟಾಕಿ ತರುತ್ತಿದ್ದೆವು. ಅಷ್ಟು ಜನ ಇರುತ್ತಿದ್ದರು. ನಾನು ಹೊಡೆಯುತ್ತಿದ್ದದ್ದು ಒಂದೇ ಪಟಾಕಿ. ಆದರೆ ಹಬ್ಬಕ್ಕೆ ಬರುವುದು ಇರಲಿ, ಕಾಲ್ ಮಾಡಿ ವಿಷ್ ಕೂಡ ಮಾಡಲಿಲ್ಲ. ಹತ್ತು ನಿಮಿಷ ಮನೆಯವರ ಮುಂದೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದೇನೆ. ನನ್ನ ನೋಡಿ ಅವರಿಬ್ಬರೂ ಅಳಲು ಶುರುಮಾಡಿದ್ದರು. ಆಗ ನಾವು ಜತೆಗಿದ್ದೇವೆ ಎಂದು ಬಂದವರು ಇದೇ ಬಾಲ್ಯದ ಗೆಳೆಯರು. ಆಗ ಅರ್ಥ ಆಯ್ತು ಯಾವ ಸ್ನೇಹಿತರಿಗೆ ವ್ಯಾಲ್ಯೂ ಕೊಡಬೇಕು ಎಂದು.

  ನನ್ನನ್ನು ನಾನೇ ಹಾಳು ಮಾಡಿಕೊಂಡೆ

  ನನ್ನನ್ನು ನಾನೇ ಹಾಳು ಮಾಡಿಕೊಂಡೆ

  ಮಾತುಗಳು ಕೇಳಲು ಶುರುವಾಯ್ತು. ಯೋಗಿಗೆ ಮಾರ್ಕೆಟ್ ಇಲ್ಲ. ಅವನಿಗ್ಯಾಕೆ ಸಿನಿಮಾ ಮಾಡ್ತೀರಾ. ಅವನಿಗೆ ಫ್ಯಾನ್ಸೇ ಇಲ್ಲ ಎಂದು. ಒಂದು ವರ್ಷ ಕಲಿಬಾರದ ಚಟ ಕಲಿತು ಆ ಒಂದು ಡಿಪ್ರೆಷನ್‌ನಿಂದ ಹೊರಬರಲು ಮಾಡಬಾರದ ಅನಿಷ್ಟಗಳನ್ನು ಮಾಡಿ ನನ್ನ ಹೆಲ್ತ್ ಹಾಳಾಯಿತು. ಆಸ್ಪತ್ರೆಗೆ ಅಡ್ಮಿಟ್ ಆದೆ. ಆಪರೇಷನ್ ಆಯ್ತ ಅದರಿಂದ ಹೊರಬಂದಾಗ 'ಮೂರನೇಯವರ ಮಾತಿಗೆ ಏಕೆ ತಲೆಕಡೆಸಿಕೊಳ್ತೀಯ' ಎನ್ನುವುದು ಮನಸಿಗೆ ಬಂತು. ಯಾರ್ಯಾರೋ ನಿನ್ ಜಾಗಕ್ಕೆ ಬಂದು ಪೊಸಿಷನ್ ತಗೋತಾರೆ ಬಿಡಬೇಡ ಎಂದೆನಿಸಿತು. ಆಗ ಮಾಡಿದ ಸಿನಿಮಾ 'ಯೋಗಿ ದುನಿಯಾ'. ದೊಡ್ಡ ಹಿಟ್ ಆಗದಿದ್ದರೂ ಆವರೇಜ್ ಆಯ್ತು. ಯೋಗಿ ವಾಪಸ್ ಬರ್ತಾನೆ ಇದ್ದಾನೆ ಎಂದು ತೋರಿಸಲು ಮಾಡಿದ ಸಿನಿಮಾ.

  ಅವನು ಸೋತಿದ್ದಾನೆ, ಸತ್ತಿಲ್ಲ

  ಅವನು ಸೋತಿದ್ದಾನೆ, ಸತ್ತಿಲ್ಲ

  ನಮ್ಮಲ್ಲಿ ಸೋತರೆ ಅವನು ಸತ್ತೋದ ಎಂದು ಟ್ರೀಟ್ ಮಾಡ್ತಾರೆ. ವಾಸ್ತವವಾಗಿ ಅವರಿಗೆ ಗೊತ್ತಿಲ್ಲ, ಅವನು ಬರಿ ಸೋತಿದ್ದಾನೆ ಎಂದು, ಸತ್ತಿಲ್ಲ ಅವನು. ಯಾವನು ಗೆದ್ದು ಸೋತು ಮತ್ತೆ ಮೇಲೆ ಬರುತ್ತಾನಲ್ಲ ಆಗ ಅವನನ್ನು ಯಾರೂ ಹಿಡಿಯೋಕಾಗಲ್ಲ, ಕಿತ್ತುಕೊಳ್ಳಲೂ ಆಗೊಲ್ಲ. ಕುರುಡನನ್ನು ಕುರುಡ ಕುರುಡ ಎಂದಾಗ ಬೇಜಾರಾಗುತ್ತಾನೆ ಅದೇ ಕುರುಡನನ್ನು ನೋಡಲು ಚೆನ್ನಾಗಿದ್ದೀಯ ಎಂದರೆ ಖುಷಿ ಪಡ್ತಾನೆ. ಅದನ್ನು ಇಲ್ಯಾರೂ ಮಾಡೊಲ್ಲ. ನಿಮಗೆ ನೋವಿದೆ ಎಂದಾಗ ಅದನ್ನು ಚುಚ್ಚಿ ಚುಚ್ಚಿ ಹೇಳಿ ಹೇಳಿ ನೋವು ಮಾಡೇಬಿಡಬೇಕು ಎಂದು ಇಲ್ಲಿ ಒಂದಷ್ಟು ಜನಕ್ಕೆ ಇದೆ..

  ಕೋಪ ಬರುತ್ತದೆ

  ಕೋಪ ಬರುತ್ತದೆ

  ಸೋಲು ಕೊನೆ ಅಲ್ಲವೇ ಅಲ್ಲ. ಅದಕ್ಕೂ ದಾಟಿದ ಜೀವನ ಇದೆ. ಕಲಿಯೋದೂ ತುಂಬಾ ಇದೆ. ಹಿಟ್ ಆಗುತ್ತಿದ್ದರೆ ಸಿನಿಮಾಗಳು ಬರುತ್ತವೆ. ಎರಡು ಮೂರು ಸಿನಿಮಾ ಸೋತಾಗ ನಿಮ್ಮನ್ನು ಹಾಕಿಕೊಂಡು ಸಿನಿಮಾ ಮಾಡೊಲ್ಲ. ಏಕೆಂದರೆ ನಿಮ್ಮ ಮತ್ತೊಬ್ಬ ಒಳ್ಳೆ ಸಿನಿಮಾ ಕೊಟ್ಟಿರುತ್ತಾನೆ. ಅವನ ಹತ್ತಿರ ಸಿನಿಮಾ ಮಾಡಬೇಕು. ಅದು ತಪ್ಪಲ್ಲ. ಆದರೆ ಕಾಸು ಹಾಕದೇ ಮಾತಾಡ್ತಾರಲ್ಲ, ಅವನಿಗೆ ಮಾರ್ಕೆಟ್ ಇಲ್ಲ, ಫ್ಯಾನ್ಸ್ ಇಲ್ಲ. ಅವನ ಸಿನಿಮಾಗಳೆಲ್ಲ ಮಲಗಿಬಿಟ್ಟಿವೆ ಎಂದು, ಅಂತಹವರ ಮೇಲೆ ಕೋಪ ಬರುತ್ತದೆ. ಅವರನ್ನು ಉಗಿದು ಅಟ್ಟಬೇಕು. ಆ ಕೆಲಸವನ್ನು ಯಾರೂ ಮಾಡುತ್ತಿಲ್ಲ.

  ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಇದೆ

  ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಇದೆ

  ತುಂಬಾ ಏರಿಳಿತ ನೋಡಿದ್ದೇನೆ. ಈಗ ವಾಪಸ್ ಬಂದು ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಏಳು ಸಿನಿಮಾಗಳಿಗೆ ಸಹಿ ಮಾಡಿದ್ದೇನೆ. ಮತ್ತೆ ಸಿನಿಮಾ ಕೆರಿಯರ್ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಇದೆ. ಸಾಹಿತ್ಯ ಬಗ್ಗೆ ಹೇಳಲೇಬೇಕು. ಏನೇ ತಂಟೆ ತಲೆಹರಟೆ ಮಾಡಿದರೂ ಸಹಿಸಿಕೊಂಡು ಜೀವನ ನಡೆಸುತ್ತಿದ್ದಾಳೆ. ಅವಳ ರೀತಿ ಹೆಂಡತಿ ಸಿಕ್ಕಿರೋದು ಅದೃಷ್ಟ. ಮುದ್ದಾದ ಮಗಳು ಶ್ರೀನಿಕಾಳನ್ನು ಕೊಟ್ಟಿದ್ದಾಳೆ. ಇಬ್ಬರು ಜತೆಗಿದ್ದರೆ ಅಷ್ಟೇ ಸಾಕು. ಕೋಟಿ ದುಡಿ, ಕೋಟಿ ಕಳಿ ಅದು ಬೇರೆ. ಸಂಸಾರ ಚೆನ್ನಾಗಿ ನೋಡಿಕೊಳ್ತೀಯಾ, ಖುಷಿಯಾಗಿರುತ್ತೀಯಾ? ಅದು ಜೀವನ. ಬಹಳ ಖುಷಿ ಇದೆ. ನನ್ನ ಬೆನ್ನಲ್ಲಿ ನಿಂತು ಸಪೋರ್ಟ್ ಮಾಡಿದವರಿಗೆ ಥ್ಯಾಂಕ್ಸ್. ಬೆನ್ನಲ್ಲಿ ಚೂರಿ ಚುಚ್ಚಿದವರಿಗೂ ತುಂಬಾ ಥ್ಯಾಂಕ್ಸ್. ಅವರಿಗೆ ಒಂದೊಂದು ಲೆಕ್ಕ ಇದೆ. ಖಂಡಿತಾ ಮತ್ತೆ ಬರ್ತೀನಿ.

  English summary
  Loose Mada Yogi (Yogesh) says, many people thinks i am died. But i want to tell them, i have lost but not finished. I will come back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X