For Quick Alerts
  ALLOW NOTIFICATIONS  
  For Daily Alerts

  ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳು

  |

  ಇರ್ಫಾನ್ ಖಾನ್ ಅಗಲುವಿಕೆಯಿಂದ ಬಾಲಿವುಡ್‌ನಲ್ಲಿ ನಿರ್ವಾತ ನಿರ್ಮಾಣವಾಗಿದೆ. ಆಕ್ಷನ್, ಥ್ರಿಲ್ಲರ್, ಕಾಮಿಡಿ, ಫ್ಯಾಮಿಲಿ ಡ್ರಾಮಾ, ರೊಮ್ಯಾನ್ಸ್ ಹೀಗೆ ಇರ್ಫಾನ್ ಎಲ್ಲ ಬಗೆಯ ಸಿನಿಮಾಗಳಲ್ಲಿಯೂ ನಟಿಸಿದವರು. ಯಾವ ಪಾತ್ರವೂ ಅವರಿಗೆ ಹೊಂದಿಕೆಯಾಗುವುದಿಲ್ಲ ಎನ್ನುವಂತಿಲ್ಲ. ಕಣ್ಣುಗಳಲ್ಲಿಯೇ ಮಾತನಾಡುವ, ಇಡೀ ದೃಶ್ಯವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅವರದ್ದಾಗಿತ್ತು.

  ಇರ್ಫಾನ್ ಖಾನ್ 'ನ್ಯೂರೊಎಂಡ್ರೊಕ್ರೈನ್ ಟ್ಯೂಮರ್'ನಿಂದ ಬಳಲುತ್ತಿದ್ದಾರೆ | Filmibeat Kannada

  ಈ ಕಾರಣದಿಂದಲೇ ಇರ್ಫಾನ್ ಹಾಲಿವುಡ್‌ಗೂ ಕಾಲಿರಿಸಿ ಅಲ್ಲಿಯೂ ಮೆಚ್ಚುಗೆ ಗಳಿಸಿದರು. ಟಾಮ್ ಹಾಂಕ್ಸ್, ಆಂಜೆಲಿನಾ ಜೋಲಿಯಂತಹ ಹಾಲಿವುಡ್ ತಾರೆಯರು ಕೂಡ ಇರ್ಫಾನ್ ಮನೋಜ್ಞ ಅಭಿನಯ ಕಂಡು ಬೆರಗಾಗಿದ್ದರು. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇರ್ಫಾನ್, ಕೆಲವು ಸಣ್ಣಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಿದೆ.

  ಅಂದು 600 ರೂ. ಇದ್ದಿದ್ದರೆ ಇರ್ಫಾನ್ ಖಾನ್ ಏನಾಗುತ್ತಿದ್ದರು?: ಅಗಲಿದ ನಟನ ಬದುಕು ಹೀಗಿತ್ತು...

  ಇರ್ಫಾನ್ ಅವರ ಅಮೋಘ ಅಭಿನಯದಲ್ಲಿ ಅತ್ಯುತ್ತಮ ಎನ್ನಬಹುದಾದ ಅನೇಕ ಸಿನಿಮಾಗಳಿವೆ. ಅವುಗಳಲ್ಲಿ ಕೆಲವು ಅಂತರ್ಜಾಲದಲ್ಲಿ ವೀಕ್ಷಿಸಲು ಸುಲಭವಾಗಿ ಸಿಗುತ್ತಿವೆ. ಯೂಟ್ಯೂಬ್ ಮತ್ತು ಓಟಿಟಿ ಪ್ಲಾಟ್‌ ಫಾರ್ಮ್‌ಗಳಲ್ಲಿ ಲಭ್ಯವಿರುವ, ಇರ್ಫಾನ್ ಖಾನ್ ಅವರ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.

  ಪಾನ್ ಸಿಂಗ್ ತೋಮರ್

  ಪಾನ್ ಸಿಂಗ್ ತೋಮರ್

  2012ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ತಿಗ್ಮನ್ಶು ಧುಲಿಯಾ ನಿರ್ದೇಶಿಸಿದ್ದರು. ಈ ಚಿತ್ರದ ಅಭಿನಯಕ್ಕೆ ಇರ್ಫಾನ್ ಖಾನ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಭಾರತೀಯ ಸೇನೆಯ ಸ್ಟೀಪಲ್ ಚೇಸ್ ರನ್ನರ್ ಕೌಟುಂಬಿಕ ಕಾರಣಗಳಿಂದ ಡಕಾಯಿತನಾಗಿ ಬದಲಾಗುವ ಈ ಸಿನಿಮಾ ಈಗ ನೆಟ್ ಫ್ಲಿಕ್ಸ್‌ನಲ್ಲಿ ಲಭ್ಯ.

  ದಿ ಲಂಚ್ ಬಾಕ್ಸ್

  ದಿ ಲಂಚ್ ಬಾಕ್ಸ್

  ಇರ್ಫಾನ್ ಖಾನ್ ಇದರಲ್ಲಿ ಸಾಜನ್ ಫರ್ನಾಂಡಿಸ್ ಎಂಬ ವಿಧುರನ ಪಾತ್ರದಲ್ಲಿ ನಟಿಸಿದ್ದರು. ಒಂದೇ ತೆರನಾದ ಜೀವನಶೈಲಿ ಹೊಂದಿದ್ದ ಅವರು ಆಕಸ್ಮಿಕವಾಗಿ ಬದಲಾದ ಲಂಚ್ ಬಾಕ್ಸ್ ಮೂಲಕ ಸಿಕ್ಕ ಪತ್ರದಿಂದ ಮಹಿಳೆಯೊಬ್ಬರೊಂದಿಗೆ ಮಧುರ ಸಂಬಂಧ ಬೆಳೆಸಿಕೊಳ್ಳುವುದು ಈ ಚಿತ್ರದ ಕಥೆ. ಈ ಚಿತ್ರವನ್ನು ನೆಟ್ ಫ್ಲಿಕ್ಸ್‌ನಲ್ಲಿ ನೋಡಬಹುದು.

  ಅಗಲಿದ ನಟ ಇರ್ಫಾನ್ ಖಾನ್ ಆಡಿದ ಕೊನೆಯ ಮಾತುಗಳಿವು

  ಅಂಗ್ರೇಜಿ ಮೀಡಿಯಂ

  ಅಂಗ್ರೇಜಿ ಮೀಡಿಯಂ

  ಇರ್ಫಾನ್ ಖಾನ್ ತೆರೆಯ ಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾ. 2020ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಚಿತ್ರೀಕರಣದ ವೇಳೆ ಇರ್ಫಾನ್ ಖಾನ್ ಆರೋಗ್ಯ ಬಹಳ ಕ್ಷೀಣಿಸಿತ್ತು. ದೀಪಿಕಾ ದೊಬ್ರಿಯಲ್, ಕರೀನಾ ಕಪೂರ್, ಡಿಂಪಲ್ ಕಪಾಡಿಯಾ ಮುಂತಾದವರು ನಟಿಸಿದ್ದ ಈ ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯ.

  ಮಕ್ಬೂಲ್

  ಮಕ್ಬೂಲ್

  ಇರ್ಫಾನ್ ಖಾನ್ ಅವರ ಆರಂಭದ ಹಿಟ್ ಚಿತ್ರಗಳಲ್ಲಿ ಮಕ್ಬೂಲ್ ಒಂದು. ವಿಶಾಲ್ ಭಾರದ್ವಾಜ್ ನಿರ್ದೇಶನದ ಚಿತ್ರದಲ್ಲಿ ತಬು, ಪಂಕಜ್ ಕಪೂರ್, ನಸೀರುದ್ದೀನ್ ಶಾ, ಓಮ್ ಪುರಿ ನಟಿಸಿದ್ದರು. ವಿಲಿಯಂ ಶೇಕ್ ಸ್ಪಿಯರ್ ಬರೆದ ಮ್ಯಾಕ್ ಬೆತ್ ನಾಟಕದ ಅಳವಡಿಕೆ. ಇದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸಿಗಲಿದೆ.

  ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್

  ತಲ್ವಾರ್

  ತಲ್ವಾರ್

  ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರ 2008ರಲ್ಲಿ ನೋಯ್ಡಾದಲ್ಲಿ ನಡೆದ ಡಬಲ್ ಮರ್ಡರ್ ನೈಜ ಘಟನೆಯನ್ನು ಆಧರಿಸಿದ ಚಿತ್ರ. ಇದರಲ್ಲಿ ಸಾಲ್ವ್ ಆಗದ ಕೇಸ್‌ಅನ್ನು ತನಿಖೆ ನಡೆಸಲು ನಿಯೋಜನೆಗೊಳ್ಳುವ ಪೊಲೀಸ್ ಪಾತ್ರದಲ್ಲಿ ಇರ್ಫಾನ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕೊಂಕಣಾ ಸೇನ್ ಶರ್ಮಾ, ನೀರಜ್ ಕಬಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ನೆಟ್ ಫ್ಲಿಕ್ಸ್ ಮತ್ತು ಡಿಸ್ನಿ ಹಾಟ್ ಸ್ಟಾರ್ ಎರಡರಲ್ಲಿಯೂ ನೋಡಬಹುದು.

  ಲೈಫ್ ಆಫ್ ಪೈ

  ಲೈಫ್ ಆಫ್ ಪೈ

  ಆಂಗ್ ಲೀ ನಿರ್ದೇಶನದ ಈ ಚಿತ್ರ ಇರ್ಫಾನ್ ಖಾನ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಖ್ಯಾತಿ ತಂದುಕೊಟ್ಟಿತು. 2012ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಇರ್ಫಾನ್, ವಯಸ್ಕ ಪೈ ಪಟೇಲ್ ಪಾತ್ರದಲ್ಲಿದ್ದರು. ತಬು, ಸೂರಜ್ ಶರ್ಮಾ ಮತ್ತು ಆದಿಲ್ ಹುಸೇನ್ ನಟಿಸಿದ ಚಿತ್ರ ಯೂಟ್ಯೂಬ್‌ನಲ್ಲಿ ಸಿಗಲಿದೆ.

  ಹಾಸಿಲ್

  ಹಾಸಿಲ್

  ತಗ್ಮನ್ಶು ಧುಲಿಯಾ ನಿರ್ದೇಶನದ ಹಾಸಿಲ್ ಸಿನಿಮಾವು ವಿದ್ಯಾರ್ಥಿ ರಾಜಕೀಯದ ಹಿನ್ನೆಲೆಯ ಕುರಿತಾದ ಚಿತ್ರ. ಇರ್ಫಾನ್ ಇದರಲ್ಲಿ ರಣ್ ವಿಜಯ್ ಸಿಂಗ್ ಪಾತ್ರದಲ್ಲಿ ನೆಗೆಟಿವ್ ಛಾಯೆಯಲ್ಲಿ ಅಭಿನಯಿಸಿದ್ದರು. ಜಿಮ್ಮಿ ಶೆರ್ಗಿಲ್ ಮತ್ತು ಹರ್ಷಿತಾ ಭಟ್ ನಟಿಸಿದ್ದರು. ಈ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

  ಖರೀಬ್ ಖರೀಬ್ ಸಿಂಗಲ್

  ಖರೀಬ್ ಖರೀಬ್ ಸಿಂಗಲ್

  2017ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಇರ್ಫಾನ್ ಮತ್ತು ದಕ್ಷಿಣ ಭಾರತದ ನಟಿ ಪಾರ್ವತಿ ನಟಿಸಿದ್ದರು. ತನುಜಾ ಚಂದ್ರ ನಿರ್ದೇಶನದ ಚಿತ್ರದಲ್ಲಿ ಇಡೀ ದೇಶವನ್ನು ಜಯ ಎಂಬಾಕೆಯೊಂದಿಗೆ ಸುತ್ತುವ ಯೋಗಿಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ನೆಟ್ ಫ್ಲಿಕ್ಸ್‌ನಲ್ಲಿ ಲಭ್ಯ.

  ಡಿ ಡೇ

  ಡಿ ಡೇ

  2013ರಲ್ಲಿ ಬಿಡುಗಡೆಯಾದ ಡಿ ಡೇ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸಿದ್ದರು. ಇದರಲ್ಲಿ ಇರ್ಫಾನ್ ವಾಲಿ ಖಾನ್ ಎಂಬ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದರು. ದಾವೂದ್ ಇಬ್ರಾಹಿಂ ಕುರಿತಾದ ಕಥೆಯಲ್ಲಿ, ಆತನಿಗಾಗಿ ಹುಡುಕಾಡುವ ಪಾತ್ರ ಅವರದ್ದು. ರಿಷಿ ಕಪೂರ್, ಅರ್ಜುನ್ ರಾಂಪಾಲ್, ಶ್ರುತಿ ಹಾಸನ್ ಮುಂತಾದವರು ನಟಿಸಿದ್ದ ಸಿನಿಮಾವನ್ನು ಅಮೇಜಾನ್ ಪ್ರೈಮ್ ವಿಡಿಯೋ ಹಾಗೂ ಸೋನಿ ಲಿವ್‌ನಲ್ಲಿ ವೀಕ್ಷಿಸಬಹುದು.

  ಹಿಂದಿ ಮೀಡಿಯಂ

  ಹಿಂದಿ ಮೀಡಿಯಂ

  2017ರ ಹಿಂದಿ ಮೀಡಿಯಂ ಸಿನಿಮಾ ಇರ್ಫಾನ್ ಖಾನ್ ಅವರ ಅತ್ಯಂತ ದೊಡ್ಡ ಕಮರ್ಷಿಯಲ್ ಹಿಟ್ ಸಿನಿಮಾಗಳಲ್ಲಿ ಒಂದು. ಸಾಕೇತ್ ಚೌಧರಿ ನಿರ್ದೇಶನದ ಕಾಮಿಡಿ ಸಿನಿಮಾದಲ್ಲಿ, ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬಯಸುವ ಬಿಜಿನೆಸ್ ಮ್ಯಾನ್‌ನ ಪಾತ್ರದಲ್ಲಿ ಇರ್ಫಾನ್ ನಟಿಸಿದ್ದರು. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿಗುತ್ತದೆ.

  ಪಿಕು

  ಪಿಕು

  ಶೂಜಿತ್ ಸರ್ಕಾರ್ ನಿರ್ದೇಶನದ ಚಿತ್ರದಲ್ಲಿ ಇರ್ಫಾನ್ ಜತೆಗೆ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದರು. ಕ್ಯಾಬ್ ಸರ್ವೀಸ್ ಮಾಲೀಕ ರಾಣಾ ಎಂಬ ಪಾತ್ರದಲ್ಲಿ ಇರ್ಫಾನ್ ಕಾಣಿಸಿಕೊಂಡಿದ್ದರು. ದೆಹಲಿಯಿಂದ ಕೋಲ್ಕತ್ತಾಗೆ ರೋಡ್ ಟ್ರಿಪ್ ಹೊರಟ ತಂದೆ ಮತ್ತು ಮಗಳ ನಡುವೆ ಸಿಲುಕಿಕೊಂಡ ಪಾತ್ರ ನಿಭಾಯಿಸಿದ್ದರು. ಈ ಸಿನಿಮಾ ಸೋನಿ ಲಿವ್‌ನಲ್ಲಿ ಲಭ್ಯ.

  ಲೈಫ್ ಇನ್ ಎ ಮೆಟ್ರೋ

  ಲೈಫ್ ಇನ್ ಎ ಮೆಟ್ರೋ

  ಅನುರಾಗ್ ಬಸು ನಿರ್ದೇಶನದ 2007ರ ಲೈಫ್ ಇನ್ ಮೆಟ್ರೋ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ಕೊಂಕಣಾ ಸೇನ್ ಶರ್ಮಾ, ಶರ್ಮನ್ ಜೋಷಿ, ಶೈನಿ ಅಹುಜಾ, ಧರ್ಮೇಂದ್ರ ನಟಿಸಿದ್ದರು. ಮಾಂಟಿ ಎಂಬ ಪಾತ್ರದಲ್ಲಿ ಇರ್ಫಾನ್, ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಶ್ರುತಿ (ಕೊಂಕಣಾ) ಅವರನ್ನು ಭೇಟಿ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಇರ್ಫಾನ್ ತಮ್ಮ ಹಾಸ್ಯಗಾರಿಕೆಯ ಕೌಶಲ ಪ್ರದರ್ಶಿಸಿದ್ದರು. ಇದು ನೆಟ್ ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಸಿಗುತ್ತದೆ.

  ಬ್ಲ್ಯಾಕ್ ಮೇಲ್

  ಬ್ಲ್ಯಾಕ್ ಮೇಲ್

  ದೇವ್ ಎಂಬ ಪಾತ್ರದಲ್ಲಿ ಇರ್ಫಾನ್ ನಟಿಸಿದ್ದ ಸಿನಿಮಾ ಬ್ಲ್ಯಾಕ್ ಮೇಲ್. ಅಭಿನಯ್ ಡಿಯೋ ನಿರ್ದೇಶನದ ಸಿನಿಮಾದಲ್ಲಿ, ದೇವ್ ಪಾತ್ರ ತನ್ನ ಪತ್ನಿ ತಮಗೆ ಮೋಸ ಮಾಡುತ್ತಿರುವುದನ್ನು ಕಂಡುಕೊಳ್ಳುತ್ತಾರೆ. ಅಲ್ಲಿಂದ ಪತ್ನಿಯ ಬಾಯ್ ಫ್ರೆಂಡ್‌ನನ್ನು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಪತ್ನಿಯನ್ನು ವಾಪಸ್ ಪಡೆದುಕೊಳ್ಳಲು ದೇವ್ ನಿರ್ಧರಿಸುತ್ತದೆ. ತಮಾಷೆಯಾಗಿ ಕಥೆಯನ್ನು ಹೇಳುವ ಚಿತ್ರವಿದು. ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯ.

  ಖೂನ್ ಮಾಫಿ

  ಖೂನ್ ಮಾಫಿ

  ವಿಶಾಲ್ ಭಾರದ್ವಾಜ್ ನಿರ್ದೇಶನದ ಖೂನ್ ಮಾಫಿಯಲ್ಲಿ ಇರ್ಫಾನ್ ಖಾನ್ ಸುಸಾನ್ ಎಂಬಾಕೆಯ ಮೂರನೇ ಗಂಡ ಹಾಗೂ ರೊಮ್ಯಾಂಟಿಕ್ ಕವಿಯಾಗಿ ನಟಿಸಿದ್ದಾರೆ. ಹಗಲಿನ ವೇಳೆ ಹೆಂಡತಿಯನ್ನು ಪ್ರೀತಿಸುವ, ರೊಮ್ಯಾಂಟಿಕ್ ಆಗಿರುವ ವ್ಯಕ್ತಿ, ರಾತ್ರಿಯಾಗುತ್ತಿದ್ದಂತೆಯೇ ಆಕೆಗೆ ಕಿರುಕುಳ ನೀಡುತ್ತಾನೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ, ಇರ್ಫಾನ್‌ಗೆ ಜತೆಯಾಗಿದ್ದಾರೆ. ಇದನ್ನು ನೆಟ್ ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.

  ಕಾರ್ವಾನ್

  ಕಾರ್ವಾನ್

  ಆಕಾಶ್ ಖುರಾನಾ ನಿರ್ದೇಶನದ ಕಾರ್ವಾನ್, ಇರ್ಫಾನ್ ಖಾನ್ ಅವರಲ್ಲಿ ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಕ್ಯಾನ್ಸರ್ ಇರುವುದು ಪತ್ತೆಯಾದ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಿತ್ತು. ದುಲ್ಕರ್ ಸಲ್ಮಾನ್ ಹಾಗೂ ಮಿಥಿಲಾ ಪಾಲ್ಕರ್ ನಟೆನಿಯ ಚಿತ್ರ, ರಸ್ತೆ ಪಯಣದ ತಿಳಿ ಹಾಸ್ಯದ ಕಥೆ ಹೊಂದಿದೆ. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ.

  English summary
  Demised bollywood actor Irrfan Khan starred in number of movies. You can watch his some best movies on online. Here is the list of 15 movies available on online.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X