For Quick Alerts
  ALLOW NOTIFICATIONS  
  For Daily Alerts

  ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್

  |

  ಭಾರತೀಯ ಚಿತ್ರರಂಗ ದುಃಖದಲ್ಲಿದೆ. ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ಅಗಲುವಿಕೆಯ ನೋವು ಎಲ್ಲರನ್ನೂ ಕಾಡುತ್ತಿದೆ. ತಮ್ಮ ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದವರು ಇರ್ಫಾನ್ ಖಾನ್. ನಾಯಕ ನಟನಾಗಿ, ಪೋಷಕನಟನಾಗಿ ಇರ್ಫಾನ್ ಹಿಂದಿ ಮಾತ್ರವಲ್ಲದೆ, ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  ದೇಶ ಕಂಡ ಅದ್ಭುತ ನಟ Irrfan Khan ಇನ್ನಿಲ್ಲ

  ಬಾಲಿವುಡ್ ಸಿನಿಮಾಗಳಲ್ಲಿ ಸತತವಾಗಿ ಬಿಜಿಯಾಗಿರುತ್ತಿದ್ದ ಅವರಿಗೆ ಇತರೆ ಭಾಷೆಗಳಿಂದ ಆಫರ್‌ಗಳು ಬಂದರೂ ನಟಿಸುವ ಸಮಯ ಸಿಕ್ಕಿರಲಿಲ್ಲ. ತಮ್ಮ ದೇಹವನ್ನು ಮತ್ತೆ ಮತ್ತೆ ಹೈರಾಣಾಗಿಸುತ್ತಿದ್ದ ಕ್ಯಾನ್ಸರ್‌ನಿಂದಾಗಿ ಚಿತ್ರರಂಗದಿಂದ ವಿರಾಮ ಪಡೆದುಕೊಂಡವರು, ಉತ್ಸಾಹದಿಂದ ಮರುಪ್ರವೇಶ ಮಾಡಿದ್ದರು. ತಾವು ಒಪ್ಪಿಕೊಂಡಿದ್ದ ಸಿನಿಮಾಗಳನ್ನೆಲ್ಲ ಮುಗಿಸಿದ್ದರು. ಆದರೆ ಬೇರೆ ಭಾಷೆಗಳಲ್ಲಿ ನಟಿಸಬೇಕೆಂಬ ಆಸೆ ಕೈಗೂಡಲಿಲ್ಲ. ಅವರನ್ನು ಕನ್ನಡಕ್ಕೆ ಕರೆತರಬೇಕೆಂಬ ಬಯಕೆ ಹೊಂದಿದ್ದ ಕನ್ನಡದ ನಿರ್ದೇಶಕರೊಬ್ಬರ ಪ್ರಯತ್ನವೂ ಫಲಿಸಲಿಲ್ಲ. ಮುಂದೆ ಓದಿ...

  ನಟ ಇರ್ಫಾನ್ ಖಾನ್ ವಿಧಿವಶ: ಬಾಲಿವುಡ್ ಕಂಬನಿ ಮಿಡಿದಿದ್ದು ಹೀಗೆ

  ನಾಗತಿಹಳ್ಳಿ ಪ್ರಯತ್ನ

  ನಾಗತಿಹಳ್ಳಿ ಪ್ರಯತ್ನ

  ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ಅವರನ್ನು ಕನ್ನಡ ಚಿತ್ರರಂಗಕ್ಕೂ ಕರೆತಂದವರು ಖ್ಯಾತ ನಿರ್ದೇಸಕ ನಾಗತಿಹಳ್ಳಿ ಚಂದ್ರಶೇಖರ್. 'ಅಮೃತಧಾರೆ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದರು. ಹಾಗೆಯೇ ಇರ್ಫಾನ್ ಖಾನ್ ಅವರನ್ನೂ ಕನ್ನಡಕ್ಕೆ ಕರೆತರಲು ನಾಗತಿಹಳ್ಳಿ ಬಯಸಿದ್ದರು. ಆದರೆ ಅವರ ಕನಸು ನನಸಾಗಲಿಲ್ಲ.

  ಕಥೆ ಮೆಚ್ಚಿದ್ದ ಇರ್ಫಾನ್

  ಕಥೆ ಮೆಚ್ಚಿದ್ದ ಇರ್ಫಾನ್

  ಇರ್ಫಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುವಂತಹ ಕಥೆಯೊಂದನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ಮುಂದಿರಿಸಿದ್ದರು. ಕಥೆಯನ್ನು ಇರ್ಫಾನ್ ಖಾನ್ ಮೆಚ್ಚಿಕೊಂಡಿದ್ದರು ಕೂಡ. ಆದರೆ ಅನಾರೋಗ್ಯ ಕಾರಣದಿಂದ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಇರುವ ಸಿನಿಮಾಗಳನ್ನು ಮುಗಿಸಲು ಆದ್ಯತೆ ನೀಡುತ್ತೇನೆ ಎಂದಿದ್ದರು. ಹೀಗಾಗಿ ಆ ಚಿತ್ರ ಸೆಟ್ಟೇರಲೇ ಇಲ್ಲ.

  ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ನಟ ಇರ್ಫಾನ್ ಖಾನ್

  ಬಾಹ್ಯಾಕಾಶದ ಕಥೆಗೆ ಇರ್ಫಾನ್ ನಾಯಕ

  ಬಾಹ್ಯಾಕಾಶದ ಕಥೆಗೆ ಇರ್ಫಾನ್ ನಾಯಕ

  ಬಾಹ್ಯಾಕಾಶದ ಕುರಿತಾದ ಕಥೆಯೊಂದನ್ನು ರೂಪಿಸಿದ್ದೆ. ಅದಕ್ಕಾಗಿ ಕೆನಡಾದಲ್ಲಿ ಸಿಜೆ ವರ್ಕ್‌ಗಳನ್ನೂ ಮಾಡಿಸಿದ್ದೆ. ಹಾಲಿವುಡ್‌ಗೆ ಭೇಟಿ ನೀಡಿ ಸಿನಿಮಾ ನಿರ್ಮಾಣದ ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದೆ. ಇದು ಹೆಚ್ಚು ಬಜೆಟ್ ಬೇಡುವ ಸಿನಿಮಾ. ದೊಡ್ಡ ಸ್ಟಾರ್‌ಗಳಲ್ಲದೆ ಹೊಸಬರನ್ನು ಹಾಕಿಕೊಂಡು ಮಾಡಲು ನಿರ್ಮಾಪಕರು ಮುಂದಾಗುವುದಿಲ್ಲ. ಹೀಗಾಗಿ ಈ ಚಿತ್ರಕ್ಕೆ ಸ್ಟಾರ್ ನಟ ಬೇಕಿತ್ತು. ಪ್ರಮುಖ ಪಾತ್ರಕ್ಕೆ ಇರ್ಫಾನ್ ಖಾನ್ ಅವರೇ ಸೂಕ್ತ ಎನಿಸಿತ್ತು ಎಂದು 'ಫಿಲ್ಮಿಬೀಟ್‌'ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.

  ಇರ್ಫಾನ್ ಖಾನ್ ಭೇಟಿ

  ಇರ್ಫಾನ್ ಖಾನ್ ಭೇಟಿ

  ಈ ಸಿನಿಮಾವನ್ನು ಬಹುಭಾಷೆಯಲ್ಲಿ ತರಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಇರ್ಫಾನ್ ಖಾನ್ ಅವರನ್ನು ಸಂಪರ್ಕಿಸಲು ಹಲವು ರೀತಿ ಪ್ರಯತ್ನಿಸಿದ್ದೆ. ಕೊನೆಗೆ ಗಾಂಧಿವಾದಿ ಪ್ರಸನ್ನ ಮತ್ತು ಇರ್ಫಾನ್ ಖಾನ್ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಒಟ್ಟಿಗೆ ಕಲಿತವರು ಎನ್ನುವುದು ತಿಳಿಯಿತು. ಅವರ ಮೂಲಕ ಇರ್ಫಾನ್ ಅವರನ್ನು ಭೇಟಿ ಮಾಡಿದ್ದೆ ಎಂದು ವಿವರಿಸಿದರು. ಇದೆಲ್ಲವೂ ನಡೆದಿದ್ದು ಐದು ವರ್ಷಗಳ ಹಿಂದೆ.

  ಆರೋಗ್ಯ ಸರಿಯಿಲ್ಲ, ಬೇಡ ಎಂದಿದ್ದ ಇರ್ಫಾನ್

  ಆರೋಗ್ಯ ಸರಿಯಿಲ್ಲ, ಬೇಡ ಎಂದಿದ್ದ ಇರ್ಫಾನ್

  ನಾಗತಿಹಳ್ಳಿ ವಿವರಿಸಿದ ಕಥೆಯನ್ನು ಇರ್ಫಾನ್ ಖಾನ್ ಇಷ್ಟಪಟ್ಟಿದ್ದರು. ಆದರೆ ಅವರಲ್ಲಿ ಆಗಲೇ ಅನಾರೋಗ್ಯ ಸಮಸ್ಯೆ ಆರಂಭವಾಗಿತ್ತು. ಅದರ ಕುರಿತು ಅವರು ಇನ್ನೂ ಬಹಿರಂಗಪಡಿಸಿರಲಿಲ್ಲ. 'ನನಗೂ ಬೇರೆ ಬೇರೆ ಭಾಷೆಗಳಲ್ಲಿ ನಟಿಸಬೇಕು ಎಂಬ ಬಯಕೆ ಇದೆ. ಆದರೆ ನನಗೆ ಈಗ ಆರೋಗ್ಯ ಸರಿಯಿಲ್ಲ. ಮುಂದೇನಾಗುವುದೋ ಗೊತ್ತಿಲ್ಲ. ಇರುವ ಸಿನಿಮಾಗಳನ್ನು ಮುಗಿಸಬೇಕಿದೆ. ಹೊಸ ಸಿನಿಮಾಗಳನ್ನು ಮಾಡುತ್ತಿಲ್ಲ' ಎಂದು ಇರ್ಫಾನ್ ತಿಳಿಸಿದ್ದರು.

  ನಿಧನದ ಸುದ್ದಿ ಕೇಳಿ ನೆನಪಾಯಿತು

  ನಿಧನದ ಸುದ್ದಿ ಕೇಳಿ ನೆನಪಾಯಿತು

  'ನಾನು ಈ ಸಿನಿಮಾ ಹಾಗೂ ಇರ್ಫಾನ್ ಅವರನ್ನು ಭೇಟಿ ಮಾಡಿದ ಮಾಹಿತಿಯನ್ನು ಎಲ್ಲಿಯೂ ಹೊರಗೆಡವಿರಲಿಲ್ಲ. ಏಕೆಂದರೆ ಇರ್ಫಾನ್ ಅವರ ಆರೋಗ್ಯ ಸಮಸ್ಯೆ ಬಗ್ಗೆ ನಾನು ಹೇಳುವಂತಿರಲಿಲ್ಲ. ಹೀಗಾಗಿ ಆ ಪ್ರಾಜೆಕ್ಟ್ ಅನ್ನು ಅಲ್ಲಿಯೇ ನಿಲ್ಲಿಸಿದೆ. ಅವರ ಅಗಲುವಿಕೆಯ ಸುದ್ದಿ ಕೇಳಿ ಅದೆಲ್ಲ ನೆನಪಾಯಿತು' ಎಂದು ನಾಗತಿಹಳ್ಳಿ ವಿವರಿಸಿದರು. ಇರ್ಫಾನ್ ತಮ್ಮ ಅನಾರೋಗ್ಯದ ಕುರಿತು 2018ರಲ್ಲಿ ಮಾಹಿತಿ ನೀಡಿದ್ದರು.

  ಮಂಗಳಗ್ರಹ-ಭೂಮಿಯ ಸಂಬಂಧ

  ಮಂಗಳಗ್ರಹ-ಭೂಮಿಯ ಸಂಬಂಧ

  'ಭೂಮಿ ಮತ್ತು ಮಂಗಳಗ್ರಹದ ನಡುವಿನ ಸಂಬಂಧದ ಕುರಿತಾದ ಚಿತ್ರವಿದು. ಅಲೆಮಾರಿ ಮನೋಭಾವದ ನನಗೆ ಮಂಗಳಗ್ರಹಕ್ಕೆ ಮನುಷ್ಯ ಹೋದರೆ ಏನಾಗುತ್ತದೆ ಎಂಬ ಪರಿಕಲ್ಪನೆಯೊಂದಿಗೆ ಸಿನಿಮಾ ಮಾಡಲು ಹೊರಟಿದ್ದೆ. ಹಿಂದಿಯಲ್ಲಿ ಬಳಿಕ 'ಮಿಷನ್ ಬಾಲಿವುಡ್' ಎಂಬ ಸಿನಿಮಾ ಬಂತು. ಆದರೆ ನನ್ನ ಸಿನಿಮಾಕ್ಕೂ ಅದಕ್ಕೂ ಸಂಬಂಧವಿಲ್ಲ' ಎಂದ ನಾಗತಿಹಳ್ಳಿ, ಅದ್ಭುತ ನಟನ ಅಗಲುವಿಕೆಗೆ ಸಂತಾಪ ವ್ಯಕ್ತಪಡಿಸಿದರು.

  English summary
  Kannada director Nagathihalli Chandrashekar has once contacted bollywood actor Irrfan Khan to his new movie. But due to health issues Irrfan couldn't do that.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X