For Quick Alerts
  ALLOW NOTIFICATIONS  
  For Daily Alerts

  ಸಾವಿರಾರು ಜನರಿಗೆ ಸಹಾಯ ಮಾಡುತ್ತಿರುವ ನಿಜ ಜೀವನದ ಹೀರೋ ಸೋನು ಸೂದ್ ಆಸ್ತಿ ಎಷ್ಟು?

  |

  ರೀಲ್ ಲೈಫ್‌ನಲ್ಲಿ ಖಳನಾಯಕರಾಗಿರುವ ಸೋನು ಸೂದ್, ನಿಜ ಬದುಕಿನಲ್ಲಿ ಸಾವಿರಾರು ಜನರ ಪಾಲಿಗೆ ಹೀರೋ ಆಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ನಗರಗಳಲ್ಲಿ ದುಡಿಮೆ, ಆಹಾರವಿಲ್ಲದೆ ಅತ್ತ ಊರಿಗೂ ಹೋಗಲಾಗದೆ ಪರದಾಡುತ್ತಿದ್ದ ವಲಸಿಗರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡುವ ಮೂಲಕ ಸೋನು, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂದಹಾಗೆ ಇಂದು (ಜುಲೈ 30) ಅವರ ಜನ್ಮದಿನ.

  ಲಾಕ್ ಡೌನ್ ಮುಕ್ತಾಯವಾದ ಬಳಿಕವೂ ಸೋನು ಸಮಾಜಸೇವೆ ಮುಂದುವರಿದಿದೆ. ದೇಶದ ಯಾವುದೋ ಮೂಲೆಯಲ್ಲಿನ ಮನಕಲಕುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ಮುಂಬೈನಲ್ಲಿರುವ ಸೋನು ಹೃದಯ ಕರಗುತ್ತದೆ. ಆ ವ್ಯಕ್ತಿಗಳನ್ನು ಹುಡುಕಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಹೀಗೆ ಈ ಮೂರು ತಿಂಗಳ ಅವಧಿಯಲ್ಲಿ ಸೋನು ಸೂದ್, ಕೋಟಿಗಟ್ಟಲೆ ಹಣವನ್ನು ಜನರಿಗೆ ನೆರವು ನೀಡಲು ವ್ಯಯಿಸಿದ್ದಾರೆ.

  ವಲಸೆ ಕಾರ್ಮಿಕರಿಗೆ ಕೆಲಸ ಕೊಡಿಸಲು ಮುಂದಾದ ನಟ ಸೋನು ಸೂದ್

  ಸಿನಿಮಾವೊಂದಕ್ಕೆ ಹೆಚ್ಚು ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಹೀರೋಗಳು ಮಾಡದ ಕೆಲಸವನ್ನು ಸೋನು ಮಾಡುತ್ತಿದ್ದಾರೆ. ಹಾಗಾದರೆ ಸೋನು ಸೋದ್ ಅವರ ಆಸ್ತಿ ಎಷ್ಟು? ಅವರು ಸಿನಿಮಾಗಳಿಂದ ಅಷ್ಟೊಂದು ಸಂಪಾದನೆ ಮಾಡಿದ್ದಾರೆಯೇ? ಮುಂದೆ ಓದಿ...

  ತಮಿಳು ಚಿತ್ರದ ಮೂಲಕ ಪದಾರ್ಪಣೆ

  ತಮಿಳು ಚಿತ್ರದ ಮೂಲಕ ಪದಾರ್ಪಣೆ

  ಪಂಜಾಬ್‌ನ ಮೋಗಾದಲ್ಲಿ ಜನಿಸಿದ ಸೋನು ಸೂದ್, ಜುಲೈ 30ರಂದು 47ನೇ ವಯಸ್ಸಿಗೆ (ಜುಲೈ 30, 1973) ಕಾಲಿರಿಸಿದ್ದಾರೆ. ಉತ್ತರ ಭಾರತದವರಾದರೂ ಸೋನು ಸೂದ್ ಪ್ರತಿಭೆಗೆ ಅವಕಾಶ ನೀಡಿದ್ದು ದಕ್ಷಿಣ ಭಾರತ. 1999ರಲ್ಲಿ ತಮಿಳಿನ ಕಳಾಜಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದರು. ಅದರ ಜತೆಯಲ್ಲಿ ಅವರು ನೆಂಜಿನಿಲೆ ಎಂಬ ಚಿತ್ರದಲ್ಲಿಯೂ ನಟಿಸಿದರು.

  ಬ್ರೇಕ್ ನೀಡಿದ ಅರುಂಧತಿ

  ಬ್ರೇಕ್ ನೀಡಿದ ಅರುಂಧತಿ

  ಕನ್ನಡದ 'ವಿಷ್ಣುವರ್ಧನ' ಮತ್ತು 'ಕುರುಕ್ಷೇತ್ರ' ಚಿತ್ರಗಳಲ್ಲಿಯೂ ಸೋನು ನಟಿಸಿದ್ದಾರೆ. ತಮಿಳಿನ ಬಳಿಕ ಅನೇಕ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ, ಅವರಲ್ಲಿನ ಪ್ರತಿಭೆಯನ್ನು ಗುರುತಿಸುವಂತೆ ಮಾಡಿದ್ದು, ಕೋಡಿ ರಾಮಕೃಷ್ಣ ನಿರ್ದೇಶನದ 2009ರ ಚಿತ್ರ 'ಅರುಂಧತಿ'. ನಂತರ ಸೋನುಗೆ ಖಳನಾಯಕನ ಪಾತ್ರಗಳು ಒಂದರ ಮೇಲೊಂದು ಬರತೊಡಗಿದವು.

  ಬಡ ರೈತನ ಕುಟುಂಬಕ್ಕೆ ಸೋನು ಸೂದ್ ನೆರವು: ಟ್ರ್ಯಾಕ್ಟರ್ ಗಿಫ್ಟ್ ನೀಡಿದ ನಟ

  ಒಟ್ಟು ಸಂಪತ್ತಿನ ಮೌಲ್ಯ

  ಒಟ್ಟು ಸಂಪತ್ತಿನ ಮೌಲ್ಯ

  ಚಿತ್ರರಂಗದಲ್ಲಿ ಸುಮಾರು 21 ವರ್ಷಗಳಿಂದ ಇರುವ ಸೋನು, ಸಿನಿಮಾವೊಂದಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಬಹುಬೇಡಿಕೆಯ ಖಳನಾಯಕ ಪಾತ್ರಧಾರಿಗಳಲ್ಲಿ ಒಬ್ಬರಾಗಿರುವ ಸೋನು, ತಮ್ಮ ದುಡಿಮೆ ಹಣವನ್ನು ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿದ್ದಾರೆ. ಪ್ರಸ್ತುತ ಅವರ ಒಟ್ಟಾರೆ ಸಂಪತ್ತಿನ ಮೌಲ್ಯ ಸುಮಾರು 130 ಕೋಟಿ ರೂ. ಇದೆ ಎನ್ನಲಾಗಿದೆ. ತಮ್ಮ ದುಡಿಮೆಯ ಹಣದಲ್ಲಿ ಅವರು ಈಗ 10 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಿನಿಯೋಗಿಸಿದ್ದಾರೆ.

  ತಂದೆ ಹೆಸರಲ್ಲಿ ನಿರ್ಮಾಣ ಸಂಸ್ಥೆ

  ತಂದೆ ಹೆಸರಲ್ಲಿ ನಿರ್ಮಾಣ ಸಂಸ್ಥೆ

  2016ರ ಜೂನ್‌ನಲ್ಲಿ ಸೋನು, ತಂದೆ ಶಕ್ತಿ ಸಾಗರ್ ಸೂದ್ ಹೆಸರಿನಲ್ಲಿ 'ಶಕ್ತಿ ಸಾಗರ್ ಪ್ರೊಡಕ್ಷನ್ಸ್' ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಅದೇ ವರ್ಷ ಫೆಬ್ರವರಿಯಲ್ಲಿ ಅವರ ತಂದೆ ನಿಧನರಾಗಿದ್ದರು. ಅವರ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ '2 ಇನ್ 1' ಚಿತ್ರದ ಪೋಸ್ಟರ್‌ಅನ್ನು ಖ್ಯಾತ ನಟ ಜಾಕಿಚಾನ್ ಬಿಡುಗಡೆ ಮಾಡಿದ್ದರು.

  ಕೊರೊನಾ ಸಂಕಷ್ಟ: ಪೊಲೀಸರ ನೆರವಿಗೆ ಬಂದ ಸೋನು ಸೂದ್

  ಶಕ್ತಿ ಸಾಗರ್ ಹೋಟೆಲ್

  ಶಕ್ತಿ ಸಾಗರ್ ಹೋಟೆಲ್

  ಮುಂಬೈನ ಜುಹುದಲ್ಲಿ ಇಸ್ಕಾನ್ ಸಮೀಪ ಸೋನು ಸೂದ್ ಕುಟುಂಬದ ಮಾಲೀಕತ್ವದ ಶಕ್ತಿ ಸಾಗರ್ ಎಂಬ ಹೋಟೆಲ್ ಇದೆ. ಈ ಹೋಟೆಲ್‌ಅನ್ನು ಕೂಡ ಸೋನು ಸೂದ್, ಕೊರೊನಾ ವೈರಸ್ ವಿರುದ್ಧದ ಹೋರಾಟ ನಡೆಸುತ್ತಿರುವ ಪ್ಯಾರಾ ಮೆಡಿಕಲ್ ತಂಡಗಳು ಬಳಸಿಕೊಳ್ಳಬಹುದು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೋನು ಆಫರ್ ನೀಡಿದ್ದಾರೆ.

  ನಟರಾಗುವ ಬಯಕೆ

  ನಟರಾಗುವ ಬಯಕೆ

  ಸೋನು ತಂದೆ, ಜವಳಿ ಉದ್ಯಮ ನಡೆಸುತ್ತಿದ್ದರೆ, ತಾಯಿ ಶಿಕ್ಷಕಿಯಾಗಿದ್ದರು. ನಾಗಪುರದಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಅವರು ನಟರಾಗುವ ಬಯಕೆಯಿಂದ ಮುಂಬೈಗೆ ಬಂದರು. ಆರಂಭದ ದಿನಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದರು. ಹೆಚ್ಚಿನ ಕಲಾವಿದರಂತೆ ಫೋಟೊಗಳನ್ನು ಹಿಡಿದುಕೊಂಡು ಸಿನಿಮಾ ಸ್ಟುಡಿಯೋಗಳಿಗೆ ತೆರಳುತ್ತಿದ್ದರು. ಆಗ ಅವರನ್ನು ಗುರುತಿಸಿ ಅವಕಾಶ ನೀಡಿದ್ದು ತಮಿಳು ಚಿತ್ರರಂಗ.

  ಪತ್ನಿ ಸೋನಾಲಿ ಬೆಂಬಲ

  ಪತ್ನಿ ಸೋನಾಲಿ ಬೆಂಬಲ

  ಸೋನು ಸೂದ್ ಅವಕಾಶಕ್ಕಾಗಿ ಪರದಾಡುತ್ತಿದ್ದ ಆರಂಭದ ದಿನಗಳಿಂದಲೂ ಜತೆಗಿದ್ದವರು ಅವರ ಸಹಪಾಠಿ ಸೋನಾಲಿ. ನಾಗಪುರದ ಕಾಲೇಜಿನಲ್ಲಿಯೇ ಇಬ್ಬರ ಪ್ರೀತಿ ಚಿಗುರಿತ್ತು. 1996ರಲ್ಲಿ ನ್ಯಾಯಾಲಯವೊಂದರಲ್ಲಿ ಒಬ್ಬರ ಮದುವೆ ನಡೆದಿತ್ತು. ಬಣ್ಣದ ಬದುಕಿನಲ್ಲಿದ್ದರೂ ಸೋನು ಸೂದ್ ಡೇಟಿಂಗ್ ನಡೆಸಿದ ಏಕೈಕ ಮಹಿಳೆಯೆಂದರೆ ಅವರ ಪತ್ನು ಸೋನಾಲಿಯಂತೆ. ಈ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.

  English summary
  Actor Sonu Sood has spend more than Rs 10 crores to help people in need during this lockdown period. What is his property value? Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X