Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Rajinikanth Birthday: ಟಿಕೆಟ್ ಇಲ್ದೆ ಟಿಸಿ ಬಳಿ ಸಿಕ್ಕಿಬಿದ್ದಿದ್ದ ತಲೈವಾ: ಯಾವ ಸಿನ್ಮಾ ಸೀನ್‌ಗಿಂತ ಕಮ್ಮಿಯಿಲ್ಲ ಈ ನೈಜಘಟನೆ
ಸೂಪರ್ ಸ್ಟಾರ್ ರಜನಿಕಾಂತ್. ಕೋಟ್ಯಾಂತರ ಅಭಿಮಾನಿಗಳ ಆರಾಧ್ಯದೈವ. ತಲೈವಾ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಮತ್ತು ಆಪ್ತರಿಂದ ಶಿವಾಜಿರಾವ್ ಗಾಯಕ್‌ವಾಡ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ತಮ್ಮ ವಿಭಿನ್ನ ಮ್ಯಾನರಿಸಂ, ಸ್ಟೈಲ್, ಆಕ್ಟಿಂಗ್ ಹಾಗೂ ಸರಳ ಸಜ್ಜನ ಸೇವಾ ಮನೋಭಾವದಿಂದ ರಜನಿಕಾಂತ್ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ.
ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಮುಂದೆ ಸೂಪರ್ ಸ್ಟಾರ್ ಆಗಿದ್ದು ಬಹಳ ರೋಚಕ. 160ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ತಲೈವಾ ಗೆದ್ದಿದ್ದಾರೆ. ಇವತ್ತಿಗೂ ದಕ್ಷಿಣಭಾರತ ಚಿತ್ರರಂಗದ ನಂಬರ್ ವನ್ ನಟನಾಗಿ ರಜನಿಕಾಂತ್ ಮಿಂಚುತ್ತಿದ್ದಾರೆ. ಸಂಭಾವನೆ ವಿಚಾರದಲ್ಲೂ ತಲೈವಾ ಮೊದಲಸ್ಥಾನದಲ್ಲಿ ಇದ್ದಾರೆ. ಈ ಸಾಧನೆ ಹಿಂದೆ ರಜಿನಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ನೋವು, ಅವಮಾನ ಎದುರಿಸಿದ್ದಾರೆ. ನಿಜ ಜೀವನದಲ್ಲಿ ನಡೆದ ಇಂತದ್ದೇ ಒಂದು ಎಮೋಷನಲ್ ಸನ್ನಿವೇಶವನ್ನು ತಲೈವಾ ಕೆಲ ದಿನಗಳ ಹಿಂದೆ ಹಂಚಿಕೊಂಡಿದ್ದರು.
ರಜನಿಕಾಂತ್
24
ವರ್ಷಗಳ
ಹಿಂದಿನ
ದಾಖಲೆ
ಮುರಿದ
ಚರಣ್-
ತಾರಕ್!
ಆ ಘಟನೆ ರಜಿನಿಕಾಂತ್ ಮಾತಿನಲ್ಲೇ "10ನೇ ತರಗತಿ ನಂತರ ನನಗೆ ಓದಲು ಇಷ್ಟವಿರಲಿಲ್ಲ. ಆದರೆ ಅಣ್ಣ ಕೇಳದೇ ನೀನು ಚೆನ್ನಾಗಿ ಓದಬೇಕು ಎಂದು ಹೇಳಿ ಒಂದು ಕಾಲೇಜಿಗೆ ಸೇರಿಸಿದ್ದರು. ಪರೀಕ್ಷೆ ಬರೆದರೆ ಫೇಲ್ ಆಗುತ್ತೀನಿ ಎಂದು ಗೊತ್ತಾದಾಗ ಬೇಡ ಎಂದು ನಿರ್ಧರಿಸಿ ಮನೆಯಲ್ಲಿ ಯಾರಿಗೂ ಹೇಳದೇ ಮೆಜೆಸ್ಟಿಕ್ ಸಿಟಿ ಸೆಂಟ್ರಲ್ ರೈಲ್ವೆ ಸ್ಟೇಷನ್‌ಗೆ ಹೋದೆ" ಮುಂದೆ ಏನಾಯಿತು ಎನ್ನುವುದನ್ನು ವಿವರಿಸಿದ್ದಾರೆ.

ಟಿಕೆಟ್ ಕಳೆದು ಹೋಗಿತ್ತು
"ಅಣ್ಣ ಪರೀಕ್ಷೆಗೆ ಕಟ್ಟಲು ಕೊಟ್ಟ 150 ರೂ. ಹಣವನ್ನು ತೆಗೆದುಕೊಂಡು ರಾತ್ರಿ 10.45ರ ಸುಮಾರಿಗೆ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ಗೆ ಹೋದೆ. ಅಲ್ಲಿ ನಿಂತಿದ್ದ ರೈಲನ್ನು ನೋಡಿ ಇದು ಎಲ್ಲಿಗೆ ಹೋಗುತ್ತೆ ಎಂದಾಗ ಮದ್ರಾಸ್‌ಗೆ ಹೋಗುತ್ತೆ ಎಂದು ಹೇಳಿದ್ದರು. ಸೀದಾ ಹೋಗಿ ಟಿಕೆಟ್ ಖರೀದಿಸಿ ರೈಲು ಹತ್ತಿ ಮಲಗಿಬಿಟ್ಟೆ. ಟಿಕೆಟ್ ಪ್ರಯಾಣದ ವೇಳೆ ಎಲ್ಲೋ ಕಳೆದುಕೊಂಡಿದ್ದೆ. ನೋಡಿಕೊಂಡಿರಲಿಲ್ಲ. ಅಂದು ಚೆನ್ನೈಗೆ ಕಾಲಿಟ್ಟಾಗ ಫ್ಲಾಟ್‌ಫಾರ್ಮ್‌ನಲ್ಲಿ ಟಿಸಿ ಟಿಕೆಟ್ ಕೇಳಿದಾಗ ಟಿಕೆಟ್ ಇರಲಿಲ್ಲ. ಏನು ಮಾಡಬೇಕೆಂದು ತಿಳಿಯಲಿಲ್ಲ. ನನ್ನ ಬಳಿ ಟಿಕೆಟ್ ಇಲ್ಲ ಎಂದು ತಿಳಿದು ಟಿಸಿ ಪಕ್ಕದಲ್ಲಿ ನಿಲ್ಲುವಂತೆ ಹೇಳಿ ಉಳಿದ ಪ್ರಯಾಣಿಕರ ಟಿಕೆಟ್ ಪರಿಶೀಲಿಸಿದರು"
20
ವರ್ಷಗಳ
ಬಳಿಕ
ರೀ-ರಿಲೀಸ್
ಆಗುತ್ತಿರೋ
'ಬಾಬಾ'
ಸಿನಿಮಾಗೆ
ಡಬ್
ಮಾಡಿದ
ರಜನಿಕಾಂತ್!

ರೈಲ್ವೆ ಟಿಸಿ ನನ್ನ ಮಾತು ನಂಬಲಿಲ್ಲ
ಬೇರೆ ಎಲ್ಲರ ಟಿಕೆಟ್ ಪರಿಶೀಲನೆ ಮುಗಿದ ನಂತರ ಮತ್ತೆ ಟಿಸಿ ನನ್ನ ಬಳಿ ಬಂದರು. "ನಾನು ಸಾರ್.. ನೋಡಿ ನನ್ನ ಬಳಿ ಹಣವಿದೆ. ಹಣ ಇದ್ದು ಟಿಕೆಟ್ ಕೊಳ್ಳದೇ ಇರುತ್ತಿದ್ದೆನೇ? ನಿಜವಾಗಿಯೂ ನಾನು ಟಿಕೆಟ್ ಖರೀದಿಸಿದ್ದೆ. ಆದರೆ ಎಲ್ಲೋ ಕಳೆದುಕೊಂಡಿದ್ದೇನೆ. ನನ್ನನ್ನು ನಂಬಿ' ಎಂದೆ. ಆದರೆ ಅವರು ಕೇಳಲಿಲ್ಲ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಆಗ ಅಲ್ಲಿಗೆ ನಾಲ್ವರು ರೈಲ್ವೆ ಕೂಲಿ ಕಾರ್ಮಿಕರು ಬಂದರು. 'ಸಾರ್.. ಅವರ ಬಳಿ ಹಣ ಇದೆ. ಟಿಕೆಟ್ ಖರೀದಿಸಿದ್ದು ಎಲ್ಲೋ ಕಳೆದು ಹೋಗಿ ಎನ್ನುತ್ತಿದ್ದಾರೆ ಅಲ್ಲವೇ ಬಿಟ್ಟುಬಿಡಿ. ಆತನ ಮುಖ ನೋಡಿದರೆ ಮೋಸ ಮಾಡುವವನಂತೆ ಕಾಣುತ್ತಿಲ್ಲ. ಒಂದು ವೇಳೆ ಆತನಿಗೆ ದಂಡ ಹಾಕಬೇಕು ಎನಿಸಿದರೆ ಹೇಳಿ ನಾವು ಕಟ್ಟುತ್ತೇವೆ ಎಂದರು".

ಬದುಕಿದ್ಯಾ ಬಡಜೀವ ಎಂದುಕೊಂಡೆ
ರೈಲ್ವೇ ಕೂಲಿ ಕಾರ್ಮಿಕರು ಆ ರೀತಿ ಹೇಳಿದಾಗ ಟಿಸಿಗೆ ಏನನ್ನಿಸಿತೋ ಗೊತ್ತಿಲ್ಲ, ಒಮ್ಮೆ ನನ್ನತ್ತ ನೋಡಿ, 'ಸರಿ! ನಾನು ನಿನ್ನನ್ನು ನಂಬುತ್ತೇನೆ, ಹೋಗು ಎಂದರು. ನಾನು ಬದುಕಿದೆ ಬಡಜೀವ ಎಂದುಕೊಂಡು ಮುಂದೆ ಹೋಗಿ ಹಿಂತಿರುಗಿ ನೋಡಿದೆ. ಸ್ಟೇಷನ್ ಮಾಸ್ಟರ್ ಮತ್ತು ರೈಲ್ವೆ ಕಾರ್ಮಿಕರು ಎಲ್ಲರೂ ಅವರವರ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಆ ದೃಶ್ಯ ನನಗೆ ಈಗಲೂ ನೆನಪಿದೆ. ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ನಿನ್ನನ್ನು ನಂಬುತ್ತೇನೆ ಎನ್ನುವ ಆ ಟಿಸಿಯ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಗುಯ್ಗುಡುತ್ತಿದೆ'' ಎಂದು ಶಿವಾಜಿರಾವ್ ಗಾಯಕ್‌ವಾಡ್ ಮೊದಲ ಬಾರಿ ಮದ್ರಾಸ್‌ಗೆ ಹೋಗಿ ಇಳಿದ ಸನ್ನಿವೇಶವನ್ನು 'ದರ್ಬಾರ್' ಸಿನಿಮಾ ಆಡಿಯೋ ಲಾಂಚ್ ವೇದಿಕೆಯಲ್ಲಿ ರಜಿನಿಕಾಂತ್ ವಿವರಿಸಿದ್ದರು.

'ಜೈಲರ್' ಚಿತ್ರದಲ್ಲಿ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯರಂಗಕ್ಕೆ ಧುಮುಕಿ ತಮಿಳುನಾಡಿನ ಜನರಸೇವೆ ಮಾಡಲು ನಿರ್ಧರಿಸಿದ್ದರು. ಹೊಸ ಪಕ್ಷ ಸ್ಥಾಪನೆಗೆ ಎಲ್ಲಾ ಸಿದ್ದತೆ ನಡೆದಿತ್ತು. ಆದರೆ ಅದೇ ಸಮಯದಲ್ಲಿ ಆರೋಗ್ಯ ಕೈಕೊಟ್ಟಿತ್ತು. ಹಾಗಾಗಿ ತಮ್ಮ ನಿರ್ಣಯದಿಂದ ಹಿಂದೆ ಸರಿದರು. ಆದರೆ ಸಾಲು ಸಾಲು ಸಿನಿಮಾಗಳಲ್ಲಿ ತಲೈವಾ ನಟಿಸುತ್ತಿದ್ದಾರೆ. ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ಸೂಪರ್ ಸ್ಟಾರ್ ನಟಿಸುತ್ತಿದ್ದಾರೆ.