For Quick Alerts
  ALLOW NOTIFICATIONS  
  For Daily Alerts

  ಕೇವಲ ಸಿನಿಮಾಗಾಗಿ ದುಬಾರಿ ಸಂಭಾವನೆ ಬಿಟ್ಟು ನಟಿಸಿದ ಬಾಲಿವುಡ್ ತಾರೆಯರು ಯಾರು?

  |

  ಬಾಲಿವುಡ್ ತಾರೆಯರ ಒಂದು ಸಿನಿಮಾ ಹಿಟ್ ಆದರೆ ಸಾಕು, ಅವರನ್ನು ಹಿಡಿಯೋದು ಕಷ್ಟ. ಮೊದಲ ಸಿನಿಮಾ ಹಿಟ್ ಆದರೆ ಮುಗೀತು ಸ್ಟಾರ್ ಗಿರಿ ಬಂದು ಬಿಡುತ್ತೆ. ಆ ಬಳಿಕ ದುಬಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಾರೆ.

  ಇತ್ತೀಚೆಗೆ ಕಾಲ ಬದಲಾಗಿದೆ. ಕೊರೊನಾ ಬಳಿಕ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿಲ್ಲ. ದುಬಾರಿ ಬಜೆಟ್ ಸಿನಿಮಾಗಳು 500 ಕೋಟಿ ರೂ. ಕ್ಲಬ್ ಸೇರಲು ಪರದಾಡುತ್ತಿವೆ. ಹೀಗಾಗಿ ಬಾಲಿವುಡ್‌ನ ಸ್ಟಾರ್ ನಟರೆಲ್ಲರೂ ಗೆಲ್ಲಲು ಹರಸಾಹಸ ಮಾಡುತ್ತಿದ್ದಾರೆ.

  ನಾಗಾರ್ಜುನ ಹಾಗೂ ಟಬು ಅಫೇರ್ ಬಗ್ಗೆ ಅಮಲಾ ಅಕ್ಕಿನೇನಿ ಅಭಿಪ್ರಾಯವೇನಿತ್ತು?ನಾಗಾರ್ಜುನ ಹಾಗೂ ಟಬು ಅಫೇರ್ ಬಗ್ಗೆ ಅಮಲಾ ಅಕ್ಕಿನೇನಿ ಅಭಿಪ್ರಾಯವೇನಿತ್ತು?

  ಬಾಕ್ಸಾಫೀಸ್‌ ಕಲೆಕ್ಷನ್ ಅನ್ನೋದು ಪ್ರತಿಯೊಬ್ಬ ನಟನ ವೃತ್ತಿ ಬದುಕಿನಲ್ಲೂ ಪ್ರಮುಖ ಪಾತ್ರವಹಿಸುತ್ತಿದೆ. ಸಿನಿಮಾದ ಗಳಿಕೆ ಹಾಗೂ ಲಾಭವನ್ನು ಕಲೆಹಾಕುತ್ತಲೇ ಇರುತ್ತಾರೆ. ಕೆಲವು ಬಾಲಿವುಡ್ ತಾರೆಯರು ಸಿನಿಮಾದ ಕಲೆಕ್ಷನ್‌ನಿಂದ ಲಾಭದಲ್ಲಿ ಪ್ರಾಫಿಟ್ ಪಡೆಯುತ್ತಾರೆ. ಇಂತಹ ಸಂದರ್ಭದಲ್ಲಿಯೂ ಬಾಲಿವುಡ್‌ನ ಎ ಲಿಸ್ಟ್‌ನಲ್ಲಿರುವ ತಾರೆಯರು ತಮ್ಮ ಸಂಭಾವನೆಯನ್ನೇ ಬಿಟ್ಟು ಸಿನಿಮಾ ಮಾಡಿದ ಉದಾಹರಣೆಗಳು ಇವೆ.

  ರಣ್‌ಬೀರ್ ಬ್ರಹ್ಮಾಸ್ತ್ರ

  ರಣ್‌ಬೀರ್ ಬ್ರಹ್ಮಾಸ್ತ್ರ

  ರಣ್‌ಬೀರ್ ಕಪೂರ್ ಸಿನಿಮಾ 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಆದರೆ, "ಈ ಸಿನಿಮಾ ಸಂಭಾವನೆಯನ್ನೇ ಪಡೆದಿಲ್ಲ. ಇದು ತನ್ನ ವೃತ್ತಿ ಬದುಕಿಗೆ ಹೊಸ ದಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಲಾಭ ತಂದುಕೊಡಲಿದೆ." ಎಂದು ಹೇಳಿದ್ದಾರೆ. ಆದರೆ, ರಣ್‌ಬೀರ್ ಕಪೂರ್ ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು. ಹೀಗಾಗಿ ಸಿನಿಮಾ ಲಾಭ ಬಂದ ಬಳಿಕ ಪ್ರಾಫಿಟ್ ಶೇರ್ ಆಗಲಿದೆ. ಸದ್ಯ 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್‌ನಲ್ಲಿ 200 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

  ಜಾತಕ ದೋಷ, ಮರದೊಂದಿಗೆ ಐಶ್ವರ್ಯಾ ರೈ ಮೊದಲ ಮದುವೆ: ವಿದೇಶದಲ್ಲಿ ಮಾಜಿ ವಿಶ್ವಸುಂದರಿ ಉತ್ತರ!ಜಾತಕ ದೋಷ, ಮರದೊಂದಿಗೆ ಐಶ್ವರ್ಯಾ ರೈ ಮೊದಲ ಮದುವೆ: ವಿದೇಶದಲ್ಲಿ ಮಾಜಿ ವಿಶ್ವಸುಂದರಿ ಉತ್ತರ!

  ಶಾಹಿದ್ ಕಪೂರ್ 'ಹೈದರ್'

  ಶಾಹಿದ್ ಕಪೂರ್ 'ಹೈದರ್'

  ಶಾಹಿದ್ ಕಪೂರ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ 'ಹೈದರ್'. ಈ ಸಿನಿಮಾ 2015ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದೆ. ನಿರ್ದೇಶಕ ವಿಶಾಲ್ ಭಾರದ್ವಾಜ್‌ಗೆ ಈ ಸಿನಿಮಾ ಮಾಡುವಾಗ ಇದೊಂದು ಬಿಗ್ ಬಜೆಟ್ ಸಿನಿಮಾ ಆಗುತ್ತೆ ಅರಿವಿಗೆ ಬಂದಿತ್ತು. ಕಾಶ್ಮೀರದಲ್ಲಿ ಸಿನಿಮಾ ಪ್ಲ್ಯಾನ್ ಮಾಡಿದ್ದರಿಂದ ಬಜೆಟ್ ಹೆಚ್ಚಾಗಿತ್ತು. ತಮ್ಮ ಸಂಭಾವನೆಯಿಂದ ಸಿನಿಮಾಗೆ ತೊಂದರೆ ಆಗಬಾರದು ಅಂತ ಶಾಹಿದ್ ಕಪೂರ್ ಹಾಗೂ ವಿಶಾಲ್ ಭಾರದ್ವಾಜ್ ಅಂದುಕೊಂಡಿದ್ದರು. ಹೀಗಾಗಿ ಸಂಭಾವನೆ ಪಡೆಯದೆ ಕೆಲಸ ಮಾಡಿದ್ದರು.

  ಬಿಗ್ ಬಿ ಅಭಿನಯದ 'ಬ್ಲ್ಯಾಕ್'

  ಬಿಗ್ ಬಿ ಅಭಿನಯದ 'ಬ್ಲ್ಯಾಕ್'

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಬ್ಲ್ಯಾಕ್' ಸಿನಿಮಾ 2005ರಲ್ಲಿ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡದೆ ಹೋದರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಬೇಕು ಅನ್ನೋ ಏಕೈಕ ಕಾರಣಕ್ಕೆ ಅಮಿತಾಬ್ ಬಚ್ಚನ್ ಸಂಭಾವನೆಯನ್ನುಪಡೆದಿರಲಿಲ್ಲ.

  ದೀಪಿಕಾ ಪಡುಕೋಣೆ 'ಓಂ ಶಾಂತಿ ಓಂ'

  ದೀಪಿಕಾ ಪಡುಕೋಣೆ 'ಓಂ ಶಾಂತಿ ಓಂ'

  ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಲಾಂಚ್ ಆದ ಸಿನಿಮಾ 'ಓಂ ಶಾಂತಿ ಓಂ'. ಕಿಂಗ್ ಖಾನ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡೋದು ದೀಪಿಕಾಗೆ ದೊಡ್ಡ ವಿಷಯವಾಗಿತ್ತು. ಹೀಗಾಗಿ ದೀಪಿಕಾ ಸಂಭಾವನೆಯನ್ನು ಪಡೆದಿರಲಿಲ್ಲ. 'ಓಂ ಶಾಂತಿ ಓಂ' ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

  English summary
  Ranbir Kapoor In Brahmastra, Shahid Kapoor, Deepika Padukone, Amithabh Bachchan Did Films For Free, Know More.
  Sunday, September 25, 2022, 12:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X