For Quick Alerts
  ALLOW NOTIFICATIONS  
  For Daily Alerts

  KGF ಚಾಪ್ಟರ್ - 2 ಮೀರಿಸಿದ 'ಕಾಂತಾರ': ಅಚ್ಚರಿ ಅನಿಸಿದರೂ ಇದೇ ಸತ್ಯ!

  |

  ಟೈಟಲ್ ನೋಡಿ ಇದೇನ್ ಹೀಗೆ ಬರೆದಿದ್ದಾರೆ ಎಂದು ನಿಮಗೆ ಅನ್ನಿಸಬಹುದು. 1250 ಕೋಟಿ ರೂ. ಗಳಿಸಿದ KGF - 2 ಎಲ್ಲಿ? 400 ಕೋಟಿ ರೂ. ಗಡಿಯಲ್ಲಿರುವ 'ಕಾಂತಾರ' ಎಲ್ಲಿ? ಅದು ಹೇಗೆ ರಿಷಬ್ ಶೆಟ್ಟಿ ಸಿನಿಮಾ ಯಶ್ ಸಿನಿಮಾ ಮೀರಿಸೋಕೆ ಸಾಧ್ಯ ಅನ್ನಿಸಬಹುದು.

  ಕಲೆಕ್ಷನ್ ವಿಚಾರದಲ್ಲಿ KGF - 2 ನಂಬರ್ ವನ್ ಸಿನಿಮಾ. ಅದರಲ್ಲಿ ದೂಸ್ರಾ ಮಾತಿಲ್ಲ. 1250 ಕೋಟಿ ರೂ. ಕಲೆಕ್ಷನ್ ಮಾಡಿ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ KGF ಚಾಪ್ಟರ್- 2 ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಸಂಸ್ಥೆಯ ಧೈರ್ಯ, ರಾಕಿಂಗ್ ಸ್ಟಾರ್ ಯಶ್ ಪರ್ಫಾರ್ಮೆನ್ಸ್ ಬಗ್ಗೆ ಎಷ್ಟು ಮಾತನಾಡಿದರೂ ಕಮ್ಮಿನೇ. ಕನ್ನಡ ಸಿನಿಮಾ ಕೂಡ 1000 ಕೋಟಿ ರೂ. ಕಲೆಕ್ಷನ್ ಮಾಡಬಲ್ಲದು ಎಂದು ಸಾಬೀತು ಮಾಡಿ ತೋರಿಸಿದ ಸಿನಿಮಾ ಇದು. ಆದರೆ ಕೆಲವೊಂದು ವಿಚಾರಗಳಲ್ಲಿ 'ಕಾಂತಾರ' ನಿಜಕ್ಕೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

  ಸಿದ್ದರಾಮಯ್ಯ ಟ್ವೀಟ್‌ನಲ್ಲಿ 'ಕಾಂತಾರ', 'ಕೆಜಿಎಫ್'! ಹೊಂಬಾಳೆಗೆ ಎಚ್ಚರಿಕೆ ಕೊಟ್ಟ ಟಗರು!ಸಿದ್ದರಾಮಯ್ಯ ಟ್ವೀಟ್‌ನಲ್ಲಿ 'ಕಾಂತಾರ', 'ಕೆಜಿಎಫ್'! ಹೊಂಬಾಳೆಗೆ ಎಚ್ಚರಿಕೆ ಕೊಟ್ಟ ಟಗರು!

  ಮೀಡಿಯಂ ಬಜೆಟ್ ಸಿನಿಮಾವೊಂದು 360 ಕೋಟಿ ರೂ. ಕಲೆಕ್ಷನ್ ಮಾಡುವುದು ಅಂದರೆ ತಮಾಷೆಯ ಮಾತಲ್ಲ. ಆ ಲೆಕ್ಕದಲ್ಲಿ KGF ಚಾಪ್ಟರ್- 1 ದಾಖಲೆ ಕೂಡ ಪುಡಿಪುಡಿಯಾಗಿದೆ. ನಿಜಕ್ಕೂ 'ಕಾಂತಾರ' ಡಿವೈನ್ ಬ್ಲಾಕ್ ಬಸ್ಟರ್ ಸಿನಿಮಾವೇ ಸರಿ.

  ಪ್ಯಾನ್ ಇಂಡಿಯಾ ಮಾಡಿದ್ದಲ್ಲ, ಆಗಿದ್ದು

  ಪ್ಯಾನ್ ಇಂಡಿಯಾ ಮಾಡಿದ್ದಲ್ಲ, ಆಗಿದ್ದು

  ಅದಾಗಲೇ KGF ಫಸ್ಟ್ ಚಾಪ್ಟರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಚಾಪ್ಟರ್-2 ಗಾಗಿ ಪ್ರೇಕ್ಷಕರು ಚಾತಕ ಪಕ್ಷಗಳಂತೆ ಕಾಯುತ್ತಿದ್ದರು. ಓಟಿಟಿಯಲ್ಲಿ ಸಿನಿಮಾ ನೋಡಿದವರು ಸೀಕ್ವೆಲ್ ಥಿಯೇಟರ್‌ನಲ್ಲಿ ನೋಡೋಕೆ ಕಾಯುತ್ತಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು. ಪರಿಣಾಮ ಕಲೆಕ್ಷನ್ 1000 ಕೋಟಿ ದಾಟಿತ್ತು. ಆದರೆ 'ಕಾಂತಾರ' ಚಿತ್ರವನ್ನು ಕನ್ನಡದಲ್ಲಿ ಮಾತ್ರ ಮಾಡಬೇಕು ಎಂದುಕೊಂಡಿದ್ದರು ರಿಷಬ್ ಶೆಟ್ಟಿ. ಆದರೆ ಒಂದೇ ವಾರಕ್ಕೆ ಪರಭಾಷಿಕರು ಒತ್ತಡ ತಂದು ಸಿನಿಮಾ ಡಬ್ ಮಾಡಿಸಿಕೊಂಡರು. ನೋಡಿ ಬೆರಗಾದರು. ಇದಕ್ಕಿಂತ ದೊಡ್ಡ ಸಕ್ಸಸ್ ಬೇಕಾ ಹೇಳಿ?

  KGF - 2ಗಿಂತ 'ಕಾಂತಾರ' ಇಂಪ್ಯಾಕ್ಟ್ ಹೆಚ್ಚು

  KGF - 2ಗಿಂತ 'ಕಾಂತಾರ' ಇಂಪ್ಯಾಕ್ಟ್ ಹೆಚ್ಚು

  ಕರಾವಳಿಯ ನಂಬಿಕೆ ಹಾಗೂ ಸಂಸ್ಕೃತಿಯನ್ನು ಅನಾವರಣ ಮಾಡಿರುವ 'ಕಾಂತಾರ' ಸಿನಿಮಾ ಇಂಪ್ಯಾಕ್ಟ್ ನಿಜಕ್ಕೂ ದೊಡ್ಡದು. KGF ಚಿತ್ರದಲ್ಲಿ ಒಂದು ಕಾಲ್ಪನಿಕ ಕಥೆ ಹೇಳಿದ್ದರು. ಮಾಸ್ ಮಸಾಲಾ ಅಂಶಗಳು ಹೆಚ್ಚಾಗಿತ್ತು. ಆದರೆ 'ಕಾಂತಾರ' ಚಿತ್ರದಲ್ಲಿ ಜನರಿಗೆ ಬಹಳ ಹತ್ತಿರ ಅನ್ನಿಸುವ ಕಥೆ ಇದೆ. ಅದರಲ್ಲೂ ಕ್ಲೈಮ್ಯಾಕ್ಸ್ ಬಹಳ ರೋಚಕವಾಗಿದೆ. ನೋಡುವವರಿಗೆ ಮೈ ಜುಮ್ ಅನ್ನಿಸುತ್ತದೆ. ಸಿನಿಮಾ ನೋಡಿದ ಎಲ್ಲರಿಗೂ ಈ ಅನುಭವ ಆಗಿತ್ತು. ಗುಳಿಗ ಹಾಗೂ ಪಂಜುರ್ಲಿ ದೈವ ಆವಾಹನೆ ಆದಾಗ ರಿಷಬ್ ಶೆಟ್ಟಿ ಅಭಿನಯ ನಿಜಕ್ಕೂ ಬೆರಗು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಬಹುತೇಕರಿಗೆ ವರ್ಣಿಸಲಾಗದಂತಹ ವಿಶಿಷ್ಟ ಅನುಭವ ನೀಡಿತ್ತು. ಕೆಲವರು ಇನ್ನು ಆ ಗುಂಗಿನಿಂದ ಹೊರ ಬಂದಿಲ್ಲ.

  ಜನರೇ ಮೆಚ್ಚಿ ರೇಟಿಂಗ್ ಕೊಟ್ಟರು

  ಜನರೇ ಮೆಚ್ಚಿ ರೇಟಿಂಗ್ ಕೊಟ್ಟರು

  ಬುಕ್ ಮೈ ಶೋ, IMDb ರೇಟಿಂಗ್‌ನಲ್ಲಿ 'ಕಾಂತಾರ' ಸಿನಿಮಾ ಹೊಸ ದಾಖಲೆ ಬರೆದಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈ ರೇಟಿಂಗ್ ಇನ್ಯಾವುದೇ ಚಿತ್ರಕ್ಕೆ ಸಿಕ್ಕಿರಲಿಲ್ಲ. KGF - 2 ಕೂಡ ಈ ವಿಚಾರದಲ್ಲಿ ಡಲ್ ಆಗಿಬಿಟ್ಟಿದೆ. KGF ಸೀಕ್ವೆಲ್ ನೋಡಿ ಅಂಥಾದ್ದೇನಿಲ್ಲ ಎಂದು ಅಲ್ಲೊಬ್ಬರು ಇಲ್ಲೊಬ್ಬರು ಹೇಳಿದುಂಟು. ಆದರೆ 'ಕಾಂತಾರ' ಸಿನಿಮಾ ವಿಚಾರದಲ್ಲಿ ಯಾರೊಬ್ಬರೂ ಕೂಡ ಈ ಮಾತನ್ನು ಹೇಳಲಿಲ್ಲ. ಅಷ್ಟರಮಟ್ಟಿಗೆ ಸಿನಿಮಾ ನೋಡುಗರನ್ನು ಆವರಿಸಿಕೊಂಡಿತ್ತು. ಅದಕ್ಕೆ ಹೇಳಿದ್ದು ಕೆಲ ವಿಚಾರಗಳಲ್ಲಿ 'ಕಾಂತಾರ' ನಿಜಕ್ಕೂ KGF - 2 ಚಿತ್ರವನ್ನು ಮೀರಿಸಿದೆ ಎಂದು.

  ಪ್ರೇಕ್ಷಕರೇ ಅಪ್ಪಿ ಒಪ್ಪಿದ ಸಿನಿಮಾ

  ಪ್ರೇಕ್ಷಕರೇ ಅಪ್ಪಿ ಒಪ್ಪಿದ ಸಿನಿಮಾ

  KGF ಫಸ್ಟ್ ಚಾಪ್ಟರ್ ಹಿಟ್ ಆಗಿದ್ರಿಂದ ಸಹಜವಾಗಿಯೇ ಸೆಕೆಂಡ್ ಚಾಪ್ಟರ್‌ ಮೇಲೆ ನಿರೀಕ್ಷೆ ಇತ್ತು. ಚಿತ್ರತಂಡ ಬೇರೆ ಬೇರೆ ನಗರಗಳಿಗೆ ಹೋಗಿ ಸುದ್ದಿಗೋಷ್ಟಿ ನಡೆಸಿತ್ತು. ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ 'ಕಾಂತಾರ' ಕನ್ನಡದಲ್ಲಿ ಮಾತ್ರ ವ್ಯವಸ್ಥಿತವಾಗಿ ರಿಲೀಸ್ ಆಗಿತ್ತು. ಉಳಿದೆಡೆ ಕೊನೆ ಕ್ಷಣದಲ್ಲಿ ರಿಲೀಸ್ ಮಾಡುವಂತಾಗಿತ್ತು. ಸರಿಯಾದ ಪ್ರಮೋಷನ್ ಇರಲಿಲ್ಲ. ಆದರೆ ಪ್ರೇಕ್ಷಕರು ಸಿನಿಮಾ ಕೈ ಬಿಡಲಿಲ್ಲ. ನೋಡಿದ ಒಬ್ಬರು 4 ಜನಕ್ಕೆ ಹೇಳಿದ್ದರು. ಆ ನಾಲ್ಕು 8, 16 ಹೀಗೆ ಬೆಳೆಯುತ್ತಾ ಹೋಯಿತು. ಪ್ರೇಕ್ಷಕರೇ ಸೋಶಿಯಲ್‌ ಮೀಡಿಯಾದಲ್ಲಿ ಪ್ರಚಾರ ಮಾಡಿದರು. ಹೀಗೆ ಜನರೇ ಅಪ್ಪಿ ಒಪ್ಪಿ ಚಿತ್ರವನ್ನು ಗೆಲ್ಲಿಸಿದರು. ಚಾಪ್ಟರ್-2 ಹೊತ್ತಿಗೆ ಯಶ್ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿದ್ದರು. ಆದರೆ ರಿಷಬ್ ಶೆಟ್ಟಿ ಅಂದರೆ ಯಾರು ಅಂತಲೂ ಪರಭಾಷಿಕರಿಗೆ ಗೊತ್ತಿರಲಿಲ್ಲ. ಬಾಲಿವುಡ್‌ನಲ್ಲಂತೂ ಸಿನಿಮಾ ಡಾರ್ಕ್ ಹಾರ್ಸ್ ಆಗಿ ಹೊರಹೊಮ್ಮಿದೆ.

  ಕರ್ನಾಟಕದಲ್ಲಿ ಕೋಟಿ ಟಿಕೆಟ್ ಸೇಲ್

  ಕರ್ನಾಟಕದಲ್ಲಿ ಕೋಟಿ ಟಿಕೆಟ್ ಸೇಲ್

  ಬರೀ 16 ಕೋಟಿ ಬಜೆಟ್ 'ಕಾಂತಾರ' 360 ಕೋಟಿ ಕಲೆಕ್ಷನ್ ಮಾಡಿದೆ. KGF -2 ಬಜೆಟ್ 100 ಕೋಟಿ ಎನ್ನಲಾಗಿತ್ತು. ಆ ಲೆಕ್ಕ ತೆಗೆದುಕೊಂಡರೂ 'ಕಾಂತಾರ' ಸಾಧನೆಯನ್ನು ಒಪ್ಪಿಕೊಳ್ಳಲೇಬೇಕು. ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗಿ 'ಕಾಂತಾರ' ದಾಖಲೆ ಬರೆದಿತ್ತು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಿಸಿರುವ ಸಿನಿಮಾಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಸಿನಿಮಾ ಎನ್ನುವ ದಾಖಲೆ 'ಕಾಂತಾರ' ಪಾಲಾಗಿದೆ. ಇದನ್ನು ಚಿತ್ರತಂಡವೇ ಒಪ್ಪಿಕೊಂಡಿದೆ. ಕರ್ನಾಟಕದ ಕಲೆಕ್ಷನ್ ಲೆಕ್ಕಾಚಾರದಲ್ಲಿ 'ಕಾಂತಾರ' ಈಗ ಮೊದಲ ಸ್ಥಾನದಲ್ಲಿದೆ. ಒಟ್ನಲ್ಲಿ ಎರಡೂ ಕನ್ನಡ ಸಿನಿಮಾಗಳೇ. ಒಂದಕ್ಕಿಂತ ಒಂದು ಸೂಪರ್ ಅನ್ನೋದು ಮಾತ್ರ ಸತ್ಯ.

  English summary
  Rishab shetty Starrer Kantara has surpassed Yash's KGF chapter 2. Kantara beaten KGF Chapter 2 in terms of total footfalls in karnataka, Craze, impact, Rating, ticket Sale and more.
  Friday, November 18, 2022, 19:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X