For Quick Alerts
  ALLOW NOTIFICATIONS  
  For Daily Alerts

  ಯುವ ನಟಿಯ ನಗುವಿಗೆ ನಾಚಿ ನೀರಾದ ನಾಗಚೈತನ್ಯ: ವೈರಲ್ ಆಗುತ್ತಿದೆ ವಿಡಿಯೋ

  |

  ನಾಗಚೈತನ್ಯ ಹಾಗೂ ನಟಿ ಸಮಂತಾ ನಡುವಿನ ಮನಸ್ತಾಪ. ಇಬ್ಬರು ವಿಚ್ಚೇದನ ನೀಡಲು ನಿರ್ಧರಿಸಿದ ಸಂಗತಿ, ಇವೆಲ್ಲವೂ ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ನಾಗಚೈತನ್ಯರಿಂದ ಬೇರೆಯಾಗಿರುವ ಸಮಂತಾ ರೊಚ್ಚಿಗೆದ್ದು ಸಿನಿಮಾ ಮಾಡುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳು, ಪ್ಯಾನ್ ಇಂಡಿಯಾ ಸಿನಿಮಾ, ಹಾಲಿವುಡ್ ಸಿನಿಮಾ ಅಂತ ವೃತ್ತಿ ಬದುಕಿನ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅತ್ತ ನಾಗಚೈತನ್ಯ ಕೂಡ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಬೇರೆ ವಿಷಯಕ್ಕೆ ಚೈತನ್ಯ ಸುದ್ದಿಯಾಗುತ್ತಿದ್ದಾರೆ.

  ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಬಗ್ಗೆನೇ ಚರ್ಚೆಯಾಗುತ್ತಿತ್ತು. ಆದ್ರೀಗ ನಾಗಚೈತನ್ಯ ಬಗ್ಗೆನೇ ಟಾಕ್ ಶುರುವಾಗಿದೆ. ಅಷ್ಟಕ್ಕೂ ಟಾಲಿವುಡ್ ಮನ್ಮಥ ನಾಗಾರ್ಜುನ ಪುತ್ರನ ಬಗ್ಗೆ ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣ ಹೊಸ 'ಬಂಗಾರ್‌ರಾಜು' ಆಗಿದ್ದರೂ ಒಂದು ವಿಡಿಯೋ ಬೇಜಾನ್ ವೈರಲ್ ಆಗುತ್ತಿದೆ. ಇದೇ ವಿಡಿಯೋ ಈಗ ಟಾಲಿವುಡ್‌ ಗುಸು ಗುಸು ಅಂತ ಮಾತಾಡಿಕೊಳ್ಳುತ್ತಿದೆ. ಅತ್ತ ನೆಟ್ಟಿಗರು ಗಂಡಸರು ಬುದ್ಧಿ ಎಲ್ಲಿಗೆ ಹೋಗುತ್ತೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ.

  ನಟಿ ನಗುವಿಗೆ ಕರಗಿದ ನಾಗಚೈತನ್ಯ

  ನಟಿ ನಗುವಿಗೆ ಕರಗಿದ ನಾಗಚೈತನ್ಯ

  ಸಂಕ್ರಾಂತಿ ಹಬ್ಬಕ್ಕೆ ಅಪ್ಪ-ಮಗನ ಜೋಡಿ ತೆರೆಮೇಲೆ ಮೋಡಿ ಮಾಡಲು ಸಜ್ಜಾಗಿ ನಿಂತಿದೆ. ಥಿಯೇಟರ್ 50 ಪರ್ಸೆಂಟ್ ಇರಲಿ. ಟಿಕೆಟ್ ಬೆಲೆ ಕಡಿಮೆ ಆಗಲಿ. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಅಂತ ಅಪ್ಪ- ಮಗ ನಿರ್ಧರಿಸಿದಂತಿದೆ. ಅದಕ್ಕೆ ನಾಗಾರ್ಜುನ ಹಾಗೂ ನಾಗಚೈತನ್ಯ ಇಬ್ಬರೂ ತಮ್ಮ ಹೊಸ ಸಿನಿಮಾ 'ಬಂಗಾರ್‌ರಾಜು' ಚಿತ್ರವನ್ನು ಬಿಡದ ಹಾಗೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆನೇ ನೆಟ್ಟಿಗರಿಗೆ ತೆರೆಮೇಲಿನ ಲವ್ ಸ್ಟೋರಿ ತೆರೆ ಹಿಂದೆನೂ ಶುರುವಾಗಿದೆ ಅಂತ ಅನಿಸಿದೆ. ಅದಕ್ಕೆ ಕಾರಣ ಒಂದು ವಿಡಿಯೋ. ಇದೇ ವಿಡಿಯೋವನ್ನು ಬಿಡದಂಗೆ ವೈರಲ್ ಮಾಡುತ್ತಿದ್ದಾರೆ.

  ನಟಿ ನಗುವಿಗೆ ನಾಗಚೈತನ್ಯ ಬೋಲ್ಡ್

  ಇದು ಬಂಗಾರ್‌ರಾಜು ನಟಿ ದಕ್ಷ ನಗರ್ಕರ್ ಹಾಗೂ ನಟ ನಾಗಚೈತನ್ಯ ನಡುವಿನ ಕಹಾನಿ. ಸಿನಿಮಾ ಪ್ರಚಾರಕ್ಕೆ ಅಂತ ವೇದಿಕೆ ಏರಿದ್ದೇನೋ ನಿಜ. ಆದರೆ, ಅಲ್ಲಿ ಸಿನಿಮಾ ಪ್ರಚಾರ ಮಾಡಿದರೋ ಇಲ್ಲವೋ ಗೊತ್ತಿಲ್ಲ. ಇಬ್ಬರ ಕಣ್ಣಿನ ನೋಟಗಳು ಬದಲಾದವು. ನಾಗಚೈತನ್ಯ ನೋಡಿ ದಕ್ಷ ಸ್ಮೈಲ್ ಕೊಟ್ಟಿದ್ದರು. ಆ ನಗು ನೋಡಿ ನಾಗಚೈತನ್ಯ ಕರಿಗಿ ನೀರಾಗಿ ಬಿಟ್ಟರು. ಇನ್ನು ವೇದಿಕೆ ಅಂದಮೇಲೆ ಈ ಅಮೂಲ್ಯ ಕ್ಷಣಗಳು ಸೆರೆಯಾಗದೆ ಇರುತ್ತಾ? ಆ ವಿಡಿಯೋ ನೆಟ್ಟಿಗರ ಕಣ್ಣಿಗೆ ಬೀಳದೆ ಇರುತ್ತಾ? ನೋಡ ನೋಡುತ್ತಿದ್ದಂತೆ ಇಬ್ಬರ ವಿಡಿಯೋ ವೈರಲ್ ಆಗಿಬಿಟ್ಟಿದೆ.

  ನಾಗಚೈತನ್ಯಗೆ ಏನಂದರು ನೆಟ್ಟಿಗರು?

  ನಾಗಚೈತನ್ಯಗೆ ಏನಂದರು ನೆಟ್ಟಿಗರು?

  ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಅಖಾಡಕ್ಕಿಳಿದಿದ್ದಾರೆ. ಗಂಡಸರ ಬುದ್ಧಿ ಎಲ್ಲಿಗೆ ಹೋಗುತ್ತೆ ಅಂತ ಕೆಲವರು ನಾಗಚೈತನ್ಯ ಕಾಲೆಳೆಯುತ್ತಿದ್ದಾರೆ. ಮತ್ತೆ ಕೆಲವು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ಬಗ್ಗೆ ಮಾತಾಡುತ್ತಿದ್ದಾರೆ. ಹೀಗಾಗಿ ನಾಗಚೈತನ್ಯ ಸದ್ಯ ಟಾಲಿವುಡ್‌ನಲ್ಲಿ 'ಟಾಕ್ ಆಫ್ ದಿ ಟೌನ್' ಆಗಿರುವುದಂತೂ ಸತ್ಯ. ಆದರೆ, ಇಬ್ಬರು ಗಂಭೀರವಾಗಿ ಡೇಟಿಂಗ್ ಮಾಡುತ್ತಿದ್ದಾರಾ? ಅನ್ನುವ ಬಗ್ಗೆ ಇಬ್ಬರು ಸುಳಿವು ನೀಡಿಲ್ಲ.

  ನಟಿ ದಕ್ಷ ನಗರ್ಕರ್ ಹಿನ್ನೆಲೆ ಏನು?

  ನಟಿ ದಕ್ಷ ನಗರ್ಕರ್ ಹಿನ್ನೆಲೆ ಏನು?

  26 ವರ್ಷದ ನಟಿ ದಕ್ಷ ನಗರ್ಕರ್ ಹುಟ್ಟೂರು ಮುಂಬೈ. ಆದ್ರೀಗ ದೆಹಲಿಯ ನಿವಾಸಿಯಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅದರಲ್ಲೂ ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿರುವ ನಟಿ. 2015ರಲ್ಲಿ ಹೋರಾ ಹೋರಿ ಎನ್ನುವ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ 2018ರಲ್ಲಿ ಹುಷಾರು ಸಿನಿಮಾ ಹೊಸ ಇಮೇಜ್ ತಂದುಕೊಟ್ಟಿದೆ. 2021ರಲ್ಲಿ ಹಿಟ್ ಚಿತ್ರ ಜೋಂಬಿ ರೆಡ್ಡಿಗೆ ನಾಯಕಿಯಾಗಿದ್ದರು. ಈಗ ಬಂಗಾರ್‌ರಾಜು ಚಿತ್ರದಲ್ಲಿ ನಟಿಸಿದ್ದು, ಟಾಲಿವುಡ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

  English summary
  Samantha ex husband Naga Chaitanya Caught With The New Girl Daksha video goes viral. In the events of Bangarraju, Daksha Nagarkar and Naga Chaitanya exchanged pleasantries.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X