Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತ ಚಿತ್ರರಂಗವನ್ನು ಮುನ್ನಡೆಸಿದ್ದು ಸ್ಯಾಂಡಲ್‌ವುಡ್! 2022 ರಲ್ಲಿ ಕನ್ನಡ ಚಿತ್ರರಂಗ ಗಳಿಸಿದ್ದೆಷ್ಟು?
2022 ಭಾರತೀಯ ಚಿತ್ರರಂಗಕ್ಕೆ ಬಹಳ ಮುಖ್ಯ ವರ್ಷ. ಭಾರತದ ಅತಿ ದೊಡ್ಡ ಚಿತ್ರರಂಗ ಎನಿಸಿಕೊಂಡಿದ್ದ ಬಾಲಿವುಡ್ ಮುಗ್ಗರಿಸಿದರೂ ಸಹ ಭಾರತೀಯ ಚಿತ್ರರಂಗ 2022 ರಲ್ಲಿ ಮಾಡಿದಷ್ಟು ಕಲೆಕ್ಷನ್ ಅನ್ನು ಈ ಹಿಂದಿನ ವರ್ಷಗಳಲ್ಲಿ ಮಾಡಿಲ್ಲ!
ಆದರೆ 2022 ರ ವಿಶೇಷತೆಯೆಂದರೆ ಇಡೀ ಭಾರತೀಯ ಚಿತ್ರರಂಗವೇ ನಿರ್ಲಕ್ಷ್ಯದಿಂದ ಕಂಡಿದ್ದ ಸ್ಯಾಂಡಲ್‌ವುಡ್ ಈ ಬಾರಿ ಭಾರತೀಯ ಚಿತ್ರರಂಗವನ್ನು ಮುಂದೆ ನಿಂತು ನಡೆಸಿದೆ.
2022 ರಲ್ಲಿ ಭಾರತೀಯ ಚಿತ್ರರಂಗದ ಒಟ್ಟಾರೆ ಯಶಸ್ಸಿನ ಅರ್ಧಕ್ಕಿಂತಲೂ ಹೆಚ್ಚು ಭಾಗ ಯಶಸ್ಸು ಕನ್ನಡ ಚಿತ್ರರಂಗದ್ದೇ ಆಗಿದೆ. ದಕ್ಷಿಣದಲ್ಲಿ ತೆಲುಗು ಹೊರತಾಗಿ ಇನ್ನಾವ ಚಿತ್ರರಂಗವೂ ಇಂಥಹದ್ದೊಂದು ದಾಖಲೆಯನ್ನು ಮಾಡಿರಲಿಲ್ಲ. ಇಷ್ಟು ವರ್ಷ ಮುಂಚೂಣಿಯಲ್ಲಿದ್ದಿದ್ದು ಬಾಲಿವುಡ್ ಮಾತ್ರವೇ.

2022 ರಲ್ಲಿ ಕನ್ನಡ ಚಿತ್ರರಂಗ ಗಳಿಸಿದ್ದೆಷ್ಟು?
2022 ರಲ್ಲಿ ಕನ್ನಡದ 210 ಸಿನಿಮಾಗಳು ಬಿಡುಗಡೆ ಆಗಿವೆ. ಒಟ್ಟಾರೆ ಯಶಸ್ಸಿನ ಅನುಪಾತ ಕಡಿಮೆಯೇ ಆಗಿದ್ದರೂ ಗೆದ್ದ ಸಿನಿಮಾಗಳು ಮಾಡಿದ ಕಲೆಕ್ಷನ್ ಅದ್ಭುತ. ಇನ್ಯಾವ ಚಿತ್ರರಂಗದ ಸಿನಿಮಾಗಳೂ ಮಾಡದಷ್ಟು ಕಲೆಕ್ಷನ್ ಅನ್ನು ಕನ್ನಡ ಸಿನಿಮಾಗಳು ಈ ವರ್ಷ ಮಾಡಿವೆ. 2022 ರಲ್ಲಿ ಕನ್ನಡ ಚಿತ್ರರಂಗ 1690 ಕೋಟಿ ಹಣ ಕಲೆಕ್ಷನ್ ಮಾಡಿವೆ ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತವನ್ನು 2022 ರಲ್ಲಿ ಭಾರತದ ಇನ್ನಾವುದೇ ಚಿತ್ರರಂಗ ಮಾಡಿಲ್ಲ.

ಈ ಸಾಧನೆ ಮಾಡಿರುವುದು ಇದೇ ಮೊದಲು!
ಮತ್ತೊಂದು ಪ್ರಮುಖ ವಿಷಯವೆಂದರೆ ಚಂದನವನ ಇದೇ ಮೊದಲ ಬಾರಿಗೆ 1000 ಕೋಟಿ ಕಲೆಕ್ಷನ್ ಅನ್ನು ದಾಟಿದೆ. ಈ ಹಿಂದೆ, ತೆಲುಗು ಹಾಗೂ ತಮಿಳು ಚಿತ್ರರಂಗಗಳ ವಾರ್ಷಿಕ ಕಲೆಕ್ಷನ್ 1000 ಕೋಟಿ ದಾಟಿತ್ತು. ಆದರೆ ಇದು ಮೊದಲ ಬಾರಿಗೆ ಕನ್ನಡ ಚಿತ್ರರಂಗದ ವಾರ್ಷಿಕ ಕಲೆಕ್ಷನ್ 1000 ಕೋಟಿ ದಾಟಿದೆ. ಮಾತ್ರವಲ್ಲ ತೆಲುಗು ಹಾಗೂ ತಮಿಳು ಚಿತ್ರರಂಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಕನ್ನಡ ಚಿತ್ರರಂಗ ಏರಿದೆ. ಇದಕ್ಕೆ ಮುಖ್ಯ ಕಾರಣವೆಂದರೆ 'ಕೆಜಿಎಫ್ 2' ಹಾಗೂ 'ಕಾಂತಾರ'ದ ಬಹುದೊಡ್ಡ ಯಶಸ್ಸು.

2022 ರಲ್ಲಿ ಹಿಟ್ ಆದ ಸಿನಿಮಾಗಳ್ಯಾವುವು?
ಹಾಗೆಂದು 2022ರಲ್ಲಿ ಕನ್ನಡದ 'ಕೆಜಿಎಫ್ 2', 'ಕಾಂತಾರ' ಸಿನಿಮಾಗಳು ಮಾತ್ರವೇ ಗೆದ್ದಿವೆ ಎಂದೇನೂ ಅಲ್ಲ. ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ', ಸುದೀಪ್ ನಟನೆಯ 'ವಿಕ್ರಾಂತ್ ರೋಣ', ಅಪ್ಪು ನಟನೆಯ 'ಜೇಮ್ಸ್' ಹಾಗೂ 'ಗಂಧದ ಗುಡಿ', ಗಣೇಶ್ ನಟನೆಯ 'ಗಾಳಿಪಟ 2', ಶಿವಣ್ಣನ 'ವೇದ', ಡಾರ್ಲಿಂಗ್ ಕೃಷ್ಣ ನಿರ್ದೇಶೀಸಿ ನಟಿಸಿದ್ದ 'ಲವ್ ಮಾಕ್ಟೆಲ್ 2, 'ಲಕ್ಕಿ ಮ್ಯಾನ್' ಇನ್ನೂ ಕೆಲವು ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿ ಹಿಟ್ ಆದವು. ದೊಡ್ಡ ಮಟ್ಟದ ಕಲೆಕ್ಷನ್ ಅನ್ನು ಸಹ ಮಾಡಿವೆ.

ಯಾವ ಸಿನಿಮಾ ಎಷ್ಟು ಗಳಿಸಿದೆ?
ಭಾರತದಲ್ಲಿ 'ಕೆಜಿಎಫ್ 2' ಸಿನಿಮಾ 981 ಕೋಟಿ ಹಣ ಗಳಿಸಿದೆ. 'ಕಾಂತಾರ' ಸಿನಿಮಾ 362 ಕೋಟಿ ಹಣ ಗಳಿಸಿದೆ. '777 ಚಾರ್ಲಿ' ಸಿನಿಮಾ 72 ಕೋಟಿ ಗಳಿಸಿದೆ, ಸುದೀಪ್ ನಟನೆಯ 'ವಿಕ್ರಾಂತ್ ರೋಣ' 64 ಕೋಟಿ ಗಳಿಸಿದೆ, ಅಪ್ಪು ನಟನೆಯ 'ಜೇಮ್ಸ್' 55 ಕೋಟಿ ಹಾಗೂ 'ಗಂಧದ ಗುಡಿ' ಸಿನಿಮಾ 26 ಕೋಟಿ ಗಳಿಸಿದೆ, ಗಣೇಶ್ ನಟನೆಯ 'ಗಾಳಿಪಟ 2' ಸಿನಿಮಾ 22 ಕೋಟಿ ಗಳಿಸಿದ್ದರೆ, ಶಿವಣ್ಣನ 'ವೇದ' 15 ಕೋಟಿ, ಡಾರ್ಲಿಂಗ್ ಕೃಷ್ಣ ನಿರ್ದೇಶೀಸಿ ನಟಿಸಿದ್ದ 'ಲವ್ ಮಾಕ್ಟೆಲ್ 2' ಸಿನಿಮಾ 21 ಕೋಟಿ, 'ಲಕ್ಕಿ ಮ್ಯಾನ್' 7 ಕೋಟಿ ಹಣ ಗಳಿಸಿದೆ. ಇನ್ನೂ ಕೆಲವು ಕನ್ನಡ ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡಿ ಗೆದ್ದಿವೆ.