For Quick Alerts
  ALLOW NOTIFICATIONS  
  For Daily Alerts

  2019 ಫ್ಲ್ಯಾಶ್ ಬ್ಯಾಕ್: ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ವಿವಾದಗಳಿವು

  |
  Sandalwood top most controversies in 2019 | SANDALWOOD | 2019 | FLASHBACK

  ವಿವಾದಗಳು ಯಾವ ಕ್ಷೇತ್ರಗಳಲ್ಲಿ ಇಲ್ಲ ಹೇಳಿ. ಅದರಲ್ಲೂ ಸಿನಿಮಾರಂಗದಲ್ಲಿ ವಿವಾದಗಳು ತುಸು ಹೆಚ್ಚಾಗೆ ಇರುತ್ತೆ. ಕಲಾವಿದರ ವಿವಾದಿತ ಹೇಳಿಕೆಗಳು, ವಿವಾದಕ್ಕೆ ಗುರಿಯಾದ ಸಿನಿಮಾಗಳು, ಪೋಸ್ಟರ್ಸ್, ಕಿತ್ತಾಟ, ಅಭಿಮಾನಿಗಳ ವಾರ್ ಹೀಗೆ ಚಿತ್ರರಂಗದಲ್ಲಿ ಆಗಾಗ ಒಂದಿಷ್ಟು ವಿವಾದಗಳು ಆಗುತ್ತಿರುತ್ತೆ.

  ಈ ವರ್ಷ ವಿವಾದಕ್ಕೆ ಗುರಿಯಾದ ಕಲಾವಿದರು ಯಾರು? ಸಿನಿಮಾ ಯಾವುದು? ಯಾವೆಲ್ಲ ವಿವಾದಗಳು ಗಾಂಧಿನಗರದಲ್ಲಿ ಸದ್ದು ಮಾಡಿದೆ? ಎನ್ನುವುದರ ಬಗ್ಗೆ ಈ ವರ್ಷದ ಟಾಪ್ ವಿವಾದಗಳ ಫ್ಲ್ಯಾಶ್ ಬ್ಯಾಕ್..

  'ಚಂಬಲ್' ಚಿತ್ರದ ವಿವಾದ

  'ಚಂಬಲ್' ಚಿತ್ರದ ವಿವಾದ

  ನೀನಾಸಂ ಸತೀಶ್ ಅಭಿನಯದ ಚಂಬಲ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಇದು ಡಿ.ಕೆ ರವಿಗೆ ಸಂಬಂಧಪಟ್ಟ ಸಿನಿಮಾ ಎನ್ನುವ ಸುದ್ದಿ ಸದ್ದು ಮಾಡಲು ಶುರುವಾಯಿತು. ಆಗ "ನನ್ನ ಮಗನ ಕಥೆಯನ್ನು ನಮ್ಮ ಅನುಮತಿಯಿಲ್ಲದೆ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ನನ್ನ ಮಗನ ಕುರಿತು ಕತೆ ಇದ್ದರೆ ಚಿತ್ರಕ್ಕೆ ತಡೆ ತರುವ ಬಗ್ಗೆ ಮತ್ತು ನಿರ್ಮಾಪಕ-ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕುಟುಂಬಸ್ಥರಿಗೆ ರಾಯಲ್ಟಿ ಪಾವತಿಸಬೇಕಾಗಿ ಕೋರುತ್ತೇನೆ'' ಎಂದು ಡಿ.ಕೆ ರವಿ ತಾಯಿ ಪಟ್ಟು ಹಿಡಿದಿದ್ದರು.

  ಈ ವರ್ಷ ಡಬ್ ಆಗಿ ಕನ್ನಡಕ್ಕೆ ಬಂದ ಪರಭಾಷೆ ಹಿಟ್ ಚಿತ್ರಗಳುಈ ವರ್ಷ ಡಬ್ ಆಗಿ ಕನ್ನಡಕ್ಕೆ ಬಂದ ಪರಭಾಷೆ ಹಿಟ್ ಚಿತ್ರಗಳು

  ಮಂಡ್ಯ ಚುನಾವಣೆ

  ಮಂಡ್ಯ ಚುನಾವಣೆ

  ಈ ವರ್ಷ ಅತೀ ಹೆಚ್ಚು ಮಾಡಿದ ಸುದ್ದಿಗಳಲ್ಲಿ ಮಂಡ್ಯ ಚುನಾವಣೆ ಕೂಡ ಒಂದು. ನಟಿ ಸುಮಲತಾ ಪರ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ಜೋಡೆತ್ತುಗಳಾಗಿ ಅಖಾಡಕ್ಕೆ ಇಳಿಯುತ್ತಿದ್ದಂತೆ ಚುನಾವಣೆಯ ದಿಕ್ಕೆ ಬದಲಾಗಿತ್ತು. ಒಂದೆಡೆ ನಿಖಿಲ್ ಕುಮಾರ್ ಮತ್ತೊಂದೆಡೆ ಎದುರಾಳಿ ಸುಮಲತಾ. ಪ್ರಚಾರವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗಳು, ಅಂಬರೀಶ್ ನಿಧನ, ದರ್ಶನ್ ಅವರ ವೈಯಕ್ತಿಕ ಬದುಕನ್ನು ಜಾಲಾಗಿದ್ದು, ಯಶ್ ಬಾಡಿಗೆ ಮನೆ ವಿಚಾರವನ್ನು ಎಳೆದಾಗಿದ್ದು ಸಿನಿಮಾ ಮತ್ತು ರಾಜಕೀಯ ರಂಗದಲ್ಲೂ ಚರ್ಚೆಗೆ ಕಾರಣವಾಗಿತ್ತು

  ಸುದೀಪ್ ಬಗ್ಗೆ ಬಿಗ್ ಬಾಸ್ ಶಶಿ ಕೆಟ್ಟಮಾತು

  ಸುದೀಪ್ ಬಗ್ಗೆ ಬಿಗ್ ಬಾಸ್ ಶಶಿ ಕೆಟ್ಟಮಾತು

  ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ರನ್ನು 'ನೀವೇ ನನ್ನ ಸ್ಫೂರ್ತಿ... ಸರ್ ನೀವು ಸೂಪರ್..' ಎಂದೆಲ್ಲ ತರಹೇವಾರಿಯಾಗಿ ಹೊಗಳಿದ್ದ ಶಶಿ ನಂತರ ವರಸೆ ಬದಲಿಸಿದ್ದರು. ಕುಡಿತ ಮತ್ತಿನಲ್ಲಿ ಶಶಿ ನಟ ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ "ನಾಯಿ ಕಾಲೆತ್ತಿ ಕಲ್ಲಿನ ಮೇಲೆ ಉಚ್ಚೆ ಮಾಡಿದರೆ, ಕಲ್ಲಿನ ತೂಕ ಕಡಿಮೆ ಆಗುವುದಿಲ್ಲ. ನಾಯಿ ತನ್ನ ಬುದ್ದಿ ತೋರಿಸುತ್ತದೆ. ಕಲ್ಲು ಒಣಗಿದ ಮೇಲೆ ತನ್ನ ವ್ಯಕ್ತಿತ್ವ ತೋರಿಸುತ್ತದೆ'' ಎಂದು ಹೇಳಿ ವಿವಾದಕ್ಕೆ ತೆರೆ ಎಳೆದಿದ್ದರು.

  ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಗಾಯಕಿ ರಾನು ಮೊಂಡಲ್ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಗಾಯಕಿ ರಾನು ಮೊಂಡಲ್

  ಯಶ್ ತಾಯಿ ವಿರುದ್ಧ ಎಫ್ ಐ ಆರ್

  ಯಶ್ ತಾಯಿ ವಿರುದ್ಧ ಎಫ್ ಐ ಆರ್

  ಹೈಕೋರ್ಟ್ ಆದೇಶದಂತೆ ಜೂನ್ 6 ರಂದು ನಟ ಯಶ್ ಕುಟುಂಬ ಬಾಡಿಗೆ ಮನೆಯನ್ನು ಖಾಲಿ ಮಾಡಿದೆ. ಆದರೆ, ಆ ಸಮಯದಲ್ಲಿ ಮನೆಯ ವಸ್ತುಗಳನ್ನು ಹಾನಿ ಮಾಡಿದೆ ಎಂದು ಮನೆ ಮಾಲೀಕರು ಆರೋಪ ಮಾಡಿದ್ದರು. ಮನೆಯಲ್ಲಿ ಇದ್ದ ಲೈಟ್, ಬಾಗಿಲು, ಪೂಜಾ ಕೊಠಡಿ, ಫ್ಯಾನ್, ಡೆಕೋರೇಷನ್ ಲ್ಯಾಂಪ್ ಸೇರಿದಂತೆ ಅನೇಕ ವಸ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ ಎಂದು ಮನೆ ಮಾಲಿಕರು ಯಶ್ ತಾಯಿ ವಿರುದ್ಧ ದೂರು ನೀಡಿದ್ದರು.

  ರಾಷ್ಟ್ರ ಪ್ರಶಸ್ತಿ ವಿವಾದ

  ರಾಷ್ಟ್ರ ಪ್ರಶಸ್ತಿ ವಿವಾದ

  ಶ್ರುತಿ ಹರಿಹರನ್ ನಟಿಸಿರುವ 'ನಾತಿಚರಾಮಿ' ಸಿನಿಮಾದ ವಿರುದ್ಧ ನಿರ್ದೇಶಕ ದಯಾಳ್ ಪದ್ಮನಾಭನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ನಿರ್ದೇಶಕ ಬಿ ಎಸ್ ಲಿಂಗದೇವರು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ನಾತಿಚರಾಮಿ ಸಿನಿಮಾ 5 ಪ್ರಶಸ್ತಿಗಳನ್ನು ಪಡೆದಿತ್ತು. ಆದರೆ, ಈ ಪ್ರಶಸ್ತಿಗಳ ಮೇಲೆ ತೀರ್ಪುಗಾರರ ಸಮಿತಿಯ ಸದಸ್ಯ ಲಿಂಗದೇವರು ಪ್ರಭಾವ ಇದೆ ಎನ್ನುವುದು ದಯಾಳ್ ಆರೋಪ ಆಗಿತ್ತು. ಪ್ರಶಸ್ತಿ ಸಮಿತಿಯಲ್ಲಿ ಇರುವವರು ಯಾವುದೇ ಸಿನಿಮಾಗಳ ಜೊತೆಗೆ ನಂಟು ಹೊಂದಿರಬಾರದು. ಆದರೆ, ಲಿಂಗದೇವರು 'ನಾತಿಚರಾಮಿ' ಸಿನಿಮಾದ ಸಂಕಲನ ಕಾರ್ಯ ನಡೆದ 'ಅಕ್ಕಾ' ಕಮ್ಯುನಿಕೇಷನ್ ಪ್ರೈವೇಟ್ ಲಿ ಎಂಬ ಕಂಪನಿ ಜೊತೆಗೆ ನಂಟು ಹೊಂದಿದ್ದಾರೆ ಎಂದು ದಯಾಳ್ ಆರೋಪ ಮಾಡಿದ್ದರು.

  ಪೈಲ್ವಾನ್ ಪೈರಸಿ

  ಪೈಲ್ವಾನ್ ಪೈರಸಿ

  ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸದ್ದು ಮಾಡಿದ ವಿವಾದ ಅಂದರೆ ಪೈಲ್ವಾನ್ ಪೈರಸಿ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪೈಲ್ವಾನ್ ಸಿನಿಮಾ ಪೈರಸಿ ಕಾಪಿ ಎಲ್ಲಾ ಕಡೆ ವೈರಲ್ ಆಗಿತ್ತು. ಇದು ದರ್ಶನ್ ಅಭಿಮಾನಿಗಳೆ ಮಾಡಿದ್ದು ಎನ್ನುವ ಆರೋಪ ಕೂಡ ಕೇಳಿಬಂದಿತ್ತು. ಕೊನೆಗೆ ಪೊಲೀಸರು ಪೈರಸಿ ಆರೋಪಿಗಳನ್ನು ಬಂದಿಸಿ ವಿಚಾರಣೆ ಮಾಡಿದಾಗ ದರ್ಶನ್ ಅಭಿಮಾನಿ ಎನ್ನುವುದು ಬಹಿರಂಗವಾಗಿತ್ತು. ಆದರೆ ಸುದೀಪ್ ಇದರ ಹಿಂದೆ ಯಾರಿದ್ದಾರೆ ಯಾರು ಮಾಡಿದ್ದಾರೆ ಎನ್ನುವುದು ಗೊತ್ತಾಗುವ ವರೆಗು ಬಿಡುವುದಿಲ್ಲ ಎಂದು ಶಪತ ಮಾಡಿದ್ದರು.

  ''ಪ್ರಚಾರಕ್ಕೆ ಬರುತ್ತಿಲ್ಲ.. ಏನಾಗಿದೆ ಗೊತ್ತಿಲ್ಲ..'' ವಿವಾದದ ಬಗ್ಗೆ ಆರ್ ಜೆ ಮಯೂರ್ ಹೇಳಿದ್ದೇನು?''ಪ್ರಚಾರಕ್ಕೆ ಬರುತ್ತಿಲ್ಲ.. ಏನಾಗಿದೆ ಗೊತ್ತಿಲ್ಲ..'' ವಿವಾದದ ಬಗ್ಗೆ ಆರ್ ಜೆ ಮಯೂರ್ ಹೇಳಿದ್ದೇನು?

  ಸುದೀಪ್-ದರ್ಶನ್ ಅಭಿಮಾನಿಗಳ ವಾರ್

  ಸುದೀಪ್-ದರ್ಶನ್ ಅಭಿಮಾನಿಗಳ ವಾರ್

  ಪೈಲ್ವಾನ್ ಪೈರಸಿಯಾಗುತ್ತಿದ್ದಂತೆ ಇಬ್ಬರು ಸ್ಟಾರ್ ನಟರ ವಾರ್ ತಾರಕ್ಕೇರಿತ್ತು. ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದು ದರ್ಶನ್ ಅಭಿಮಾನಿಗಳು ಎನ್ನುವುದು ಕಿಚ್ಚ ಫ್ಯಾನ್ಸ್ ಆರೋಪ. ಇದರಿಂದ ಸಹಜವಾಗಿ ಕೋಪಗೊಂಡ ದಾಸನ ಭಕ್ತಗಣ, ಅಭಿನಯ ಚಕ್ರವರ್ತಿ ಬಳಗದ ವಿರುದ್ಧ ಸಮರಕ್ಕೆ ನಿಂತಿದ್ದರು. ಇಬ್ಬರು ಅಭಿಮಾನಿಗಳ ವಾರ್ ಎಷ್ಟರ ಮಟ್ಟಿಗೆ ತಾರಕಕ್ಕೇರಿತ್ತು ಎಂದರೆ ಸ್ಟಾರ್ ನಟರೆ ಅಕಾಡಕ್ಕೆ ಇಳಿದಿದ್ದರು. ಅಭಿಮಾನಿಗಳ ತಂಟೆಗೆ, ಅನ್ನದಾತರ ತಂಟೆಗೆ ಬರಬೇಡಿ ಎಂದು ದರ್ಶನ್ ರೊಚ್ಚಿಗೆದ್ದಿದ್ದರು. ಮತ್ತೊಂದು ಸುದೀಪ್ ಕೂಡ ತನ್ನ ಅಭಿಮಾನಿಗಳ ತಂಟೆಗೆ ಬಂದರೆ ಚೆನ್ನಾಗಿರಲ್ಲ ಎಂದು ಹೇಳಿದ್ದರು. ಅಷ್ಟರಲ್ಲೆ ವಾರ್ ತಣ್ಣಗಾಯಿತು.

  ಪರಿಮಳ ಲಾಡ್ಜ್ ವಿವಾದ

  ಪರಿಮಳ ಲಾಡ್ಜ್ ವಿವಾದ

  'ಪರಿಮಳಾ ಲಾಡ್ಜ್' ಟೀಸರ್ ಬಿಡುಗಡೆ ಆಗಿದ್ದೆ ತಡ ದೊಡ್ಡ ವಿವಾದ ಸೃಷ್ಟಿ ಯಾಗಿತ್ತು. ಇತ್ತೀಚಿಗಷ್ಟೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಕೂಡ ಟೀಸರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ನಂತರ ಈ ವಿಷಯ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿತ್ತು. ಟೀಸರ್ ನಲ್ಲಿ ಬಳಸಿರುವ ಅಶ್ಲೀಲ ಸಂಭಾಷಣೆಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯ ಮಾಡಿತ್ತು 'ನಮ್ಮ ಕರ್ನಾಟಕ ರಕ್ಷಣಾ ವೇದಿಕೆ', ಇಲ್ಲದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿತ್ತು.

  ವಿವಾದಕ್ಕೆ ಗುರಿಯಾಗಿದ್ದ ಹರಿಪ್ರಿಯಾ

  ವಿವಾದಕ್ಕೆ ಗುರಿಯಾಗಿದ್ದ ಹರಿಪ್ರಿಯಾ

  ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಚೈತ್ರಾ ಕೋಟೂರ್ (ಈಗಿನ ಬಿಗ್ ಬಾಸ್ ಸ್ಪರ್ಧಿ) ವಿರುದ್ಧ ಗುದ್ದಾಟ ನಡೆದಿತ್ತು. ಈ ಚಿತ್ರದಲ್ಲಿ ಚೈತ್ರಾ ಪಾತ್ರವನ್ನು ಹೆಚ್ಚಿಸಿ, ನನ್ನ ಪಾತ್ರವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದಾರೆ'' ಎಂದು ಹರಿಪ್ರಿಯಾ ನಿರ್ದೇಶಕರ ವಿರುದ್ಧ ಆರೋಪಿಸಿದರು. ಹರಿಪ್ರಿಯಾ ಸರಿಯಾಗಿ ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂದು ಕನ್ನಡ್ ಗೊತ್ತಿಲ್ಲ ಚಿತ್ರದ ನಿರ್ದೇಶಕ ಮಯೂರ್ ರಾಘವೇಂದ್ರ ಆರೋಪ ಮಾಡಿದ್ದಾರೆ.

  ವಿವಾದದ ಪಟ್ಟಿಯಲ್ಲಿ ರಚಿತಾ ರಾಮ್

  ವಿವಾದದ ಪಟ್ಟಿಯಲ್ಲಿ ರಚಿತಾ ರಾಮ್

  ನಟಿ ರಚಿತಾ ರಾಮ್ ಐ ಲವ್ ಯು ಸಿನಿಮಾದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರದ ಒಂದು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ರಚಿತಾ ನಂತರ ಸಿನಿಮಾ ರಿಲೀಸ್ ಆದ ಮೇಲೆ ಬೇಸರಗೊಂಡಿದ್ದರು. ಈ ಹಾಡನ್ನು ಉಪೇಂದ್ರ ಅವರೆ ನಿರ್ದೇಶನ ಮಾಡಿದ್ದರು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಪ್ರಿಯಾಂಕಾ ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ನಟಿ ರಚಿತಾ ರಾಮ್ ಬೋಲ್ಡ್ ಪಾತ್ರ ಮಾಡಿದ್ದರ ವಿರುದ್ಧ ಕಣ್ಣೀರಾಗಿದ್ದರು. ಇನ್ನು ರಚಿತಾ ರಾಮ್ ಇತ್ತೀಚಿಗೆ ಮತ್ತೊಂದು ವಿವಾದ ಮಾಡಿಕೊಂಡಿದ್ದರು 'ಆಯುಷ್ಮಾನ್ ಭವ' ಚಿತ್ರದ ಪ್ರೆಸ್ ಮೀಟ್ ಮಾತನಾಡುವಾಗ ''ನೀವು (ಪಿ ವಾಸು) ಏನು ಹೇಳುತ್ತಿರೋ ಅದನ್ನು ಮಾಡುತ್ತೇನೆ. ನಾನು ತಪ್ಪು ಮಾಡಿದ್ದರೆ, ವಾಸು ಸರ್ ಗೆ ಸೇರುತ್ತದೆ. ಸಖತ್ ಆಗಿ ಮಾಡಿದ್ದರೂ ಅದು ವಾಸು ಸರ್ ಗೆ ಸೇರುತ್ತದೆ.'' ಎಂದು ಹೇಳಿದ್ದರು. ಈ ಹೇಳಿಕೆಯಿಂದ ಪಿ ವಾಸು ಬೇಸರಗೊಂಡಿದ್ದರು. ನಂತರ ರಚಿತಾ ಪ್ರಚಾರಕ್ಕೆ ಬಂದಿರಲಿಲ್ಲ.

  ವಿವಾದಗಳ ರಾಣಿ ರಶ್ಮಿಕಾ

  ವಿವಾದಗಳ ರಾಣಿ ರಶ್ಮಿಕಾ

  ವಿವಾದ ಪಟ್ಟಿಯಲ್ಲಿ ಅತೀ ಹೆಚ್ಚು ವಿವಾದ ಮಾಡಿಕೊಂಡ ನಟಿ ರಶ್ಮಿಕಾ ಮಂದಣ್ಣ. ಒಂದಲ್ಲೊಂದು ವಿಚಾರದ ಮೂಲಕ ಸದ್ದು ಮಾಡುತ್ತಲೆ ಇರುವ ರಶ್ಮಿಕಾ ಕನ್ನಡ ಬರಲ್ಲ, ಮಾತನಾಡಲು ಕಷ್ಟ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು, ಇನ್ನು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಮತ್ತೆ ಲಿಪ್ ಲಾಕ್ ಮಾಡಿ ಸಂಚಲನ ಸೃಷ್ಟಿಸಿದ್ದರು. ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ರಶ್ಮಿಕಾ ಏನು ಗೊತ್ತಿಲ್ಲ ಎನ್ನುವ ವಿವಾದ ಇತ್ತೀಚಿಗೆ ಬಾಲ್ಯದ ಫೋಟೋಗೆ ಕೆಟ್ಟದಾಗಿ ಟ್ರೋಲ್ ಮಾಡಿದ್ದು ಹೀಗೆ ರಶ್ಮಿಕಾ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದು ಕೊಂಡಿದ್ದರು.

  Read more about: best of 2019 flashback 2019
  English summary
  Sandalwood top most controversies in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X