twitter
    For Quick Alerts
    ALLOW NOTIFICATIONS  
    For Daily Alerts

    ಸಿಧು ಮೂಸೆವಾಲ ಹತ್ಯೆ: ಗ್ಯಾಂಗ್‌ಸ್ಟರ್‌ಗಳಿಂದ ಪಂಜಾಬ್‌ ಗಾಯಕರಿಗೆ ಆತಂಕ!

    |

    ಪಂಜಾಬಿನ ಗಾಯಕ ಹಾಗೂ ರಾಜಕೀಯ ಮುಖಂಡನಾಗಿದ್ದ ಸಿಧು ಮೂಸೆವಾಲ ಹತ್ಯೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಪಂಜಾಬ್ ಸರ್ಕಾರ ಸಿಧು ಮೂಸೆವಾಲ ಭದ್ರತೆಯನ್ನು ವಾಪಸ್ ಪಡೆದ ಮರುದಿನವೇ ಹತ್ಯೆಯಾಗಿತ್ತು. ಇಡೀ ದೇಶ ಆತಂಕಕ್ಕೆ ಒಳಾಗಾಗುವಂತೆ ಮಾಡಿದೆ. ಅದರಲ್ಲೂ ಪಂಜಾಬಿನ ಮ್ಯೂಸಿಕ್ ಇಂಡಸ್ಟ್ರಿ ಎಲ್ಲಕ್ಕಿಂತ ಹೆಚ್ಚು ಆತಂಕದಲ್ಲಿದೆ ಎಂದು ವರದಿಯಾಗುತ್ತಿದೆ.

    ಸಿಧು ಮೂಸೆವಾಲ ಹತ್ಯೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಆದರೆ, ದೇಶದ ಅತೀ ದೊಡ್ಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಒಂದಾದ ಪಂಜಾಬ್ ಸಂಗೀತ ಕ್ಷೇತ್ರಕ್ಕೆ ಮಾತ್ರ ದೊಡ್ಡ ಶಾಕ್ ಆಗಿದೆ. ಗ್ಯಾಂಗ್‌ಸ್ಟರ್‌ಗಳಿಂದ ಆಗುತ್ತಿರುವ ಹತ್ಯೆ ಗಾಯಕರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

    ಪಂಜಾಬಿನ ವಿವಾದಾತ್ಮಕ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆ ವಾಲಾಗೆ ಗುಂಡಿಕ್ಕಿ ಹತ್ಯೆ! ಪಂಜಾಬಿನ ವಿವಾದಾತ್ಮಕ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆ ವಾಲಾಗೆ ಗುಂಡಿಕ್ಕಿ ಹತ್ಯೆ!

    2021ರ ಆಗಸ್ಟ್‌ನಲ್ಲಿ ಅಕಾಲಿ ದಳದ ಮುಖಂಡ ವಿಕ್ಕಿ ಮಿದ್ದುಖೇರ ಹತ್ಯೆಯಾಗಿತ್ತು. ಸಿಧು ಮೂಸೆವಾಲ ಮ್ಯಾನೇಜರ್ ಆಗಿದ್ದ ಶಗುನ್ ಪ್ರೀತ್ ಹೆಸರು ಈ ಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು. ಬಳಿಕ ಶಗುನ್ ಪ್ರೀತ್ ಆಸ್ಟ್ರೇಲಿಯಾಗೆ ಪರಾರಿಯಾಗಿದ್ದ. ಈ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸಿಧು ಮೂಸೆವಾಲ ಹತ್ಯೆ ಮಾಡಿದ್ದಾಗಿ, ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ ಹೇಳಿಕೊಂಡಿದ್ದಾನೆ. ಆದರೆ, ಈ ಹತ್ಯೆ ಮತ್ತೊಬ್ಬನ ಹತ್ಯೆಯ ಸೇಡಿಗಾಗಿ ನಡೆದಿದ್ದರೂ, ಗಾಯಕರಿಗೆ ಇಂತಹ ಗ್ಯಾಂಗ್‌ಸ್ಟರ್‌ಗಳಿಂದ ಬೆದರಿಕೆ ಕರೆ ಬರುತ್ತಲೇ ಇವೆ. ಈ ಆತಂಕದಿಂದಲೇ ಕೆಲವರು ಈಗಾಗಲೇ ಪಂಜಾಬ್ ಬಿಟ್ಟು ಹೊರಬಂದಿದ್ದಾರೆ.

    ಪಂಜಾಬ್ ಸಂಗೀತ ಕ್ಷೇತ್ರದಲ್ಲಿ ಆತಂಕ

    ಪಂಜಾಬ್ ಸಂಗೀತ ಕ್ಷೇತ್ರದಲ್ಲಿ ಆತಂಕ

    ಸಿಧು ಮೂಸೆವಾಲ ಬಳಿಕ ಪಂಜಾಬ್ ಮ್ಯೂಸಿಕ್ ಇಂಡಸ್ಟ್ರಿ ಬೆಚ್ಚಿಬಿದ್ದಿದೆ ಅನ್ನುವುದಕ್ಕೆ ಇದೊಂದು ಇನ್‌ಸ್ಟಾಗ್ರಾಂ ಪೋಸ್ಟ್ ಸಾಕು ಎನಿಸುತ್ತೆ. ಪಂಜಾಬಿನ ಮ್ಯೂಸಿಕ್ ಇಂಡಸ್ಟ್ರಿ ಅತೀ ವೇಗವಾಗಿ ಬೆಳೆಯುತ್ತಿದೆ. ಅಷ್ಟೇ ವೇಗವಾಗಿ ಆರ್ಟಿಸ್ಟ್ ಹಾಗೂ ಗ್ಯಾಂಗಸ್ಟರ್‌ಗಳ ನಡುವಿನ ಸಾಮಿಪ್ಯ ಕೂಡ ಕಮ್ಮಿಯಾಗುತ್ತಿದೆ. ಭಾರತ ಮೂಲದ ಕೆನಡಾದ ಗಾಯಕ ಎಪಿ ದಿಲ್ಲೋನ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಸಂಗೀತ ಕ್ಷೇತ್ರಕ್ಕೆ ಗ್ಯಾಂಗ್‌ಸ್ಟರ್‌ಗಳಿಂದ ಇರುವ ಆತಂಕವನ್ನು ಹೊರ ಹಾಕಿದ್ದಾರೆ. " ಪಂಜಾಬಿ ಕಲಾವಿದರು ದಿನನಿತ್ಯ ತೆರೆಮರೆಯಲ್ಲಿ ಏನನ್ನು ಎದುರಿಸಬೇಕಾಗುತ್ತದೆ ಎಂಬುದು ಸಾಮಾನ್ಯ ಜನರಿಗೆ ಗೊತ್ತಿಲ್ಲ. ತಾವು ಇಷ್ಟ ಪಟ್ಟಿದ್ದನ್ನು ಪ್ರೀತಿಯಿಂದ ಮಾಡುತ್ತಿರುವ ನಮ್ಮಂತಹವರ ಮೇಲೆ ಈ ತೀರ್ಪು, ದ್ವೇಷದ ಕಾಮೆಂಟ್‌ಗಳು, ಬೆದರಿಕೆಗಳು ಮತ್ತು ನಕಾರಾತ್ಮಕ ಶಕ್ತಿಗಳು ಎದುರಾಗುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

    ಗಾಯಕರಿಗೆ ಬೆದರಿಕೆ

    ಗಾಯಕರಿಗೆ ಬೆದರಿಕೆ

    ಪಂಜಾಬ್‌ನಲ್ಲಿ ಗ್ಯಾಂಗ್‌ವಾರ್ ಏನು ಹೊಸದಲ್ಲ. ಹಲವು ವರ್ಷಗಳಿಂದ ಗ್ಯಾಂಗ್ ವಾರ್ ನಡೆಯುತ್ತಲೇ ಇದೆ. ಇಂತಹ ಗ್ಯಾಂಗ್‌ಗಳು ಸಂಗೀತ ಕ್ಷೇತ್ರದ ಕಡೆ ತಿರುಗಿವೆ. " ಕಳೆದ 5 ವರ್ಷಗಳಿಂದ ಇಂತಹ ಗ್ಯಾಂಗ್‌ ವಾರ್‌ಗಳು ಹೆಚ್ಚಾಗುತ್ತಿರುವುದನ್ನು ಕೇಳಿದ್ದೇನೆ. ಗ್ಯಾಂಗ್‌ಸ್ಟರ್‌ಗಳು ಗಾಯಕರಿಗೆ ಹಣಕ್ಕಾಗಿ ಬೇಡಿಕೆಯಿಡುತ್ತಾರೆ. ಗಾಯಕರು ಒಪ್ಪಿಕೊಳ್ಳುತ್ತಾರೆ. ನಟರು ಕೂಡ ಇದೇ ಮಾಡುತ್ತಾರೆ." ಎಂದು ಗಾಯಕ ಮಿಕಾ ಸಿಂಗ್ ಟಿಟೈಮ್ಸ್‌ಗೆ ಹೇಳಿಕೆ ನೀಡಿದ್ದಾರೆ.

    ಪಂಜಾಬಿ ಆರ್ಟಿಸ್ಟ್ ಮೇಲೆ ಅಟ್ಯಾಕ್

    ಪಂಜಾಬಿ ಆರ್ಟಿಸ್ಟ್ ಮೇಲೆ ಅಟ್ಯಾಕ್

    ಪಂಜಾಬ್‌ನಲ್ಲಿ ಗಾಯಕರು ಹಾಗೂ ನಟರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಹಲವು ಬಾರಿ ಹಲ್ಲೆಗಳು ಕೂಡ ಆಗಿವೆ. 2018ರಲ್ಲಿ ಪಂಜಾಬಿ ಗಾಯಕ ಪರ್ಮಿಶ್ ವರ್ಮಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ತೊಡೆಗೆ ಗುಂಡು ತಾಕಿದ ಮೇಲೂ ಆ ಗಾಯಕ ಬದುಕುಳಿದಿದ್ದ. ನಟ ಗಿಪ್ಪಿ ಗ್ರೆವಾಲ್‌ಗೂ ಬೆದರಿಕೆ ಕರೆ ಬಂದಿತ್ತು. ಗಾಯಕ ಪ್ರೇಮ್ ಧಿಲ್ಲೊನ್‌ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಇಂತಹ ಹಲವು ಘಟನೆಗಳು ಪಂಜಾಬಿ ಇಂಡಸ್ಟ್ರಿಯಲ್ಲಿ ಬೆಳಕಿಗೆ ಬಂದಿದೆ.

    ಗಾಯಕರಲ್ಲಿ ಬೆದರಿಕೆ ಭಯ

    ಗಾಯಕರಲ್ಲಿ ಬೆದರಿಕೆ ಭಯ

    ಸಿಧು ಮೂಸೆವಾಲ ಹತ್ಯೆ ಮಾಡಿದ ದುಷ್ಕರ್ಮಿಗಳ ಮೇಲೆ ದಾವೀಂದರ್ ಬಾಂಬಿಹಾ ಎನ್ನುವ ಗ್ಯಾಂಗ್ ನಿಗಾ ಇಟ್ಟಿದೆ ಎನ್ನಲಾಗಿದೆ. ಪಂಜಾಬಿ ಗಾಯಕ ಮನ್ಕೀರ್ತ್ ಔಲಾಖ್ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಇದೇ ಗ್ಯಾಂಗ್ ಕೊಲೆ ಬೆದರಿಕೆ ಹಾಕಿದೆ ಎಂದೂ ವರದಿಯಾಗಿದೆ. ಹೀಗೆ ಒಂದಲ್ಲಾ ಒಂದು ಗ್ಯಾಂಗ್ ಒಂದಲ್ಲ ಒಂದು ರೀತಿ ಗಾಯಕರ ಮೇಲೆ ಬೆದರಿಕೆ ಹಾಕುತ್ತಲೇ ಇದೆ. ಇಂತಹ ಕರೆಗಳು ಬಂದ ಕೂಡಲೇ ಪಂಜಾಬಿ ಗಾಯಕರು ಹೆದರು ಮುಂಬೈ ಇಲ್ಲವೇ ವಿದೇಶದಲ್ಲಿ ನೆಲೆಸಲು ಶುರು ಮಾಡಿದ್ದಾರೆ.

    ಸಿಧು ಪಂಜಾಬಿನ ಶಾರುಖ್ ಖಾನ್

    ಸಿಧು ಪಂಜಾಬಿನ ಶಾರುಖ್ ಖಾನ್

    ಸಿಧು ಮೂಸೆವಾಲ ಗಾಯನದಿಂದ ರಾಜಕೀಯದ ಕಡೆಗೆ ಮುಖ ಮಾಡಿದ್ದರು. ಆದರೂ, ನೇರ ಹಾಗೂ ಪಾರದರ್ಶನ ವ್ಯಕ್ತಿತ್ವವಿರುವ ವ್ಯಕ್ತಿಯಾಗಿದ್ದರು. ಪಂಜಾಬ್ ಇಂಡಸ್ಟ್ರಿ ಸಿಧು ಮೂಸೆವಾಲರನ್ನು ಪಂಜಾಬಿನ ಶಾರುಖ್ ಖಾನ್ ಎಂದೇ ಕರೆಯುತ್ತಿದ್ದರು. ಆದರೆ, ಜೈಲಿನೊಳಗೆ ಇದ್ದುಕೊಂಡೇ ಪಂಜಾವ್ ಗಾಯನಲೋಕದ ಕಿಂಗ್ ಅನ್ನು ಹತ್ಯೆಗೈದಿದೆ ಎಂದು ಪಂಜಾಬ್ ಚಿತ್ರರಂಗ ಬೇಸರ ವ್ಯಕ್ತಪಡಿಸಿದೆ.

    English summary
    Sidhu Moosewala shot dead: Punjabi Artistes In Danger, Know More.
    Saturday, June 11, 2022, 21:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X