twitter
    For Quick Alerts
    ALLOW NOTIFICATIONS  
    For Daily Alerts

    ಲೆಕ್ಕಾಚಾರವಿಲ್ಲದ 'ಪ್ಯಾನ್ ಇಂಡಿಯಾ ಸಿನಿಮಾ' ಬಾಕ್ಸಾಫೀಸಿನಲ್ಲಿ ಗೋತಾ ಪಕ್ಕಾ!

    |

    ದಕ್ಷಿಣ ಭಾರತದ ಸಿನಿಮಾಗಳು ಈಗ ಬಾಲಿವುಡ್ ಮಾರುಕಟ್ಟೆಯನ್ನು ಅಲ್ಲಾಡಿಸುತ್ತಿರುವುದು ಗೊತ್ತಿರುವ ವಿಚಾರ. ಇಡೀ ದೇಶದ ಮನೋರಂಜನಾ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದ ಹಿಂದಿ ಸಿನಿಮಾಗಳು ಈಗ ನಿಧಾನವಾಗಿ ದಕ್ಷಿಣದ ಚಿತ್ರಗಳ ಹೊಡೆತಕ್ಕೆ ಪತರುಗುಟ್ಟುತ್ತಿವೆ.

    2015ರಲ್ಲಿ ತೆಲುಗು ಸಿನಿಮಾ ಬಾಹುಬಲಿ ದಿ ಬಿಗಿನಿಂಗ್ ಏಕಕಾಲದಲ್ಲಿ ಕನ್ನಡ ಹೊರತಾದ ದಕ್ಷಿಣ ಭಾರತದ ಭಾಷೆಗಳು ಮತ್ತು ಹಿಂದಿಯಲ್ಲಿ ರಿಲೀಸ್ ಆಗಿ ಭಾರೀ ಸದ್ದನ್ನು ಮಾಡಿತ್ತು. ತಮ್ಮತಮ್ಮ ಚಿತ್ರಗಳಿಗೆ ಹೆಚ್ಚಿನ ಆದಾಯ/ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶದಿಂದ ಪ್ಯಾನ್ ಇಂಡಿಯಾ ರಿಲೀಸ್ ಎನ್ನುವ ಕಾನ್ಸೆಪ್ಟ್ ಅನ್ನು ಚಿತ್ರತಂಡ ಆರಂಭಿಸಿದೆ.

     'ಕನ್ನಡ ಸಿನಿಮಾ ಮಾರ್ಕೆಟ್ ಏನೆಂದು ಅಪ್ಪು ಪರಿಚಯಿಸಿದ್ದಾರೆ, ಉಳಿಸುವ ಜವಾಬ್ದಾರಿ ನಿಮ್ಮದು' 'ಕನ್ನಡ ಸಿನಿಮಾ ಮಾರ್ಕೆಟ್ ಏನೆಂದು ಅಪ್ಪು ಪರಿಚಯಿಸಿದ್ದಾರೆ, ಉಳಿಸುವ ಜವಾಬ್ದಾರಿ ನಿಮ್ಮದು'

    ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದು, ದಕ್ಷಿಣ ಭಾರತದ ಸಿನಿಮಾ ನಿರ್ಮಾಪಕರಿಗೆ ಆಲ್ ಇಂಡಿಯಾ ರಿಲೀಸ್ ಮಾಡಲು ಹುಮ್ಮಸ್ಸು ನೀಡಿದ್ದಂತೂ ಹೌದು.

    ಆದರೆ, ದೇಶಾದ್ಯಂತ ಬಿಡುಗಡೆ ಮಾಡಲು ಸರಿಯಾದ ಪೂರ್ವ ತಯಾರಿ/ಪ್ರಚಾರ ಇಲ್ಲದಿದ್ದರೆ ಚಿತ್ರ ಬಂದದ್ದೂ, ಹೋಗಿದ್ದೂ ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕೆ, ಇತ್ತೀಚಿನ ಮೂರು ದಕ್ಷಿಣ ಭಾರತದ ಸಿನಿಮಾಗಳು ಸಾಕ್ಷಿ. ಅದರಲ್ಲಿ ಜೇಮ್ಸ್ ಕೂಡಾ ಒಂದು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

    ಶಿವಣ್ಣನ ಕಾರ್ಯಕ್ರಮಕ್ಕೆ ಕರೆಸಿ ನೋಯಿಸಿ ಯಾಕೆ ಕಳುಹಿಸುತ್ತೀರಾ? ಶಿವಣ್ಣನ ಕಾರ್ಯಕ್ರಮಕ್ಕೆ ಕರೆಸಿ ನೋಯಿಸಿ ಯಾಕೆ ಕಳುಹಿಸುತ್ತೀರಾ?

     RRR ಸಿನಿಮಾದ ಬಗ್ಗೆ ದೇಶಾದ್ಯಂತ ಭಾರೀ ಕುತೂಹಲ ಎದುರಾಗಿದೆ

    RRR ಸಿನಿಮಾದ ಬಗ್ಗೆ ದೇಶಾದ್ಯಂತ ಭಾರೀ ಕುತೂಹಲ ಎದುರಾಗಿದೆ

    ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಸಿನಿಮಾವನ್ನು ತೆರೆಗೆ ತರುವ ಸ್ಟೈಲೇ ಬೇರೆ. ಚಿತ್ರ ಬಿಡುಗಡೆಗೆ ಮುನ್ನ ಭರ್ಜರಿ ಪ್ರಚಾರಕ್ಕೆ ಆದ್ಯತೆ ನೀಡುವ ರಾಜಮೌಳಿ, ಈಗ ತಮ್ಮ RRR ಸಿನಿಮಾಕ್ಕೂ ಅದನ್ನೇ ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರಕ್ಕೆಂದು ಇಡೀ ಸಿನಿಮಾ ತಂಡವನ್ನು ಕಟ್ಟಿಕೊಂಡು ನಿರ್ದೇಶಕರು ಹದಿನಾಲ್ಕು ನಗರಗಳಿಗೆ ಪ್ರದಕ್ಷಿಣೆಯನ್ನು ಹಾಕುತ್ತಿದ್ದಾರೆ. ಹಾಗಾಗಿ, ಈ ಸಿನಿಮಾದ ಬಗ್ಗೆ ದೇಶಾದ್ಯಂತ ಭಾರೀ ಕುತೂಹಲ ಎದುರಾಗಿದೆ.

     ಕನ್ನಡಿಗರು ತುಂಬಾ ಸಂಖ್ಯೆಯಲ್ಲಿರುವ ಮುಂಬೈನಲ್ಲಿ ಕೇವಲ ಒಂದು ಶೋ ಸಿಕ್ಕಿತ್ತು

    ಕನ್ನಡಿಗರು ತುಂಬಾ ಸಂಖ್ಯೆಯಲ್ಲಿರುವ ಮುಂಬೈನಲ್ಲಿ ಕೇವಲ ಒಂದು ಶೋ ಸಿಕ್ಕಿತ್ತು

    ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಕರ್ನಾಟಕದಲ್ಲಿ ಇದುವರೆಗೆ ಸಿಗದಷ್ಟು ಚಿತ್ರಮಂದಿರಗಳು ಮತ್ತು ಶೋಗಳು ಲಭ್ಯವಾಗಿದ್ದವು. ದಕ್ಷಿಣ ಭಾರತದ ಇತರ ಕೇಂದ್ರಗಳಲ್ಲೂ ಚಿತ್ರಕ್ಕೆ ಸ್ಕ್ರೀನ್ಸ್ ಗಳು ಸಿಕ್ಕಿದ್ದವು. ಆದರೆ, ಉತ್ತರ ಭಾರತದಲ್ಲಿ ಚಿತ್ರಕ್ಕೆ ಎಲ್ಲೋ ಕೆಲವೊಂದು ಸಿನಿಮಾ ಮಂದಿರಗಳು ಮಾತ್ರ ಲಭ್ಯವಾಗಿದ್ದವು. ವಿತರಕರ ಪ್ರಕಾರ ಸೂಕ್ತವಾದ ಪ್ರಚಾರದ ಕೊರತೆಯಿಂದ ಶೋಗಳು ಸಿಕ್ಕಿಲ್ಲ ಎನ್ನುವುದು. ಉದಾಹರಣೆಗೆ, ಕನ್ನಡಿಗರು ತುಂಬಾ ಸಂಖ್ಯೆಯಲ್ಲಿರುವ ಮುಂಬೈನಲ್ಲಿ ಕೇವಲ ಒಂದು ಶೋ ಜೇಮ್ಸ್ ಚಿತ್ರಕ್ಕೆ ಸಿಕ್ಕಿದೆ. ಅದೂ, ಐವತ್ತು ಸೀಟು ಸಾಮರ್ಥ್ಯದ ಚಿತ್ರಮಂದಿರ.

     ಮೋಹನ್ ಲಾಲ್ ಅಭಿನಯದ ಮರಕ್ಕರ್ ಮುಂತಾದ ಸಿನಿಮಾ

    ಮೋಹನ್ ಲಾಲ್ ಅಭಿನಯದ ಮರಕ್ಕರ್ ಮುಂತಾದ ಸಿನಿಮಾ

    ಈ ರೀತಿ ಪ್ರಚಾರದ ಕೊರತೆಯಿಂದ ಚಿತ್ರಮಂದಿರ ಲಭ್ಯವಾಗದ ಉದಾಹರಣೆಗಳು ದಕ್ಷಿಣ ಭಾರತದ ಹಲವು ಸಿನಿಮಾಗಳಿಗಾಗಿವೆ ಎನ್ನುವುದು ವಿತರಕರ ಅಭಿಪ್ರಾಯ. ತಮಿಳು ನಟ ಅಜಿತ್ ಅವರ ವಾಲಿಮೈ ಅಂತಹ ದೊಡ್ಡ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾದ ಮೇಲಷ್ಟೇ ಇಲ್ಲಿನ ಪ್ರೇಕ್ಷಕರಿಗೆ ಗೊತ್ತಾಗಿದೆ. ಇದೇ ರೀತಿ ತಮಿಳು ನಟ ವಿಶಾಲ್ ಅವರ ಚಕ್ರಾ ಕಾ ರಕ್ಷಕ್, ದುಲ್ಕರ್ ಸಲ್ಮಾನ್ ಅವರ ಕುರುಪ್, ಮೋಹನ್ ಲಾಲ್ ಅಭಿನಯದ ಮರಕ್ಕರ್ ಮುಂತಾದ ಸಿನಿಮಾಗಳು ಹಿಂದಿ ಮಾರುಕಟ್ಟೆಯಲ್ಲಿ ಪ್ರಾಭಲ್ಯ ಮೆರೆಯಲು ಸಾಧ್ಯವಾಗಿಲ್ಲ.

     ಸರಿಯಾದ ಪ್ರಚಾರವಿದ್ದರೆ ಮಾತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಯಶಸ್ಸು

    ಸರಿಯಾದ ಪ್ರಚಾರವಿದ್ದರೆ ಮಾತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಯಶಸ್ಸು

    ಪ್ರಮೋಶನ್ ಕೊರತೆಯಿಂದಾಗಿ ದಕ್ಷಿಣದ ಸಿನಿಮಾಗಳು ಯಶಸ್ಸನ್ನು ಸಾಧಿಸಿಲ್ಲ. ಬಾಹುಬಲಿ, ಕೆಜಿಎಫ್, ಪುಷ್ಪ ಮುಂತಾದ ಚಿತ್ರದವರು ಭರ್ಜರಿಯಾಗಿ ಪ್ರಮೋಶನ್ ಆಗಿದ್ದರಿಂದ ಪ್ಯಾನ್ ಇಂಡಿಯಾ ಲೆವೆಲಿನಲ್ಲೂ ಚಿತ್ರ ಗಳಿಕೆಯನ್ನು ಕಂಡಿತು. ಈಗ, RRR ಸಿನಿಮಾ, ಇದಾದ ನಂತರ ಕೆಜಿಎಫ್- ಚ್ಯಾಪ್ಟರ್ 2, ವಿಕ್ರಾಂತ್ ರೋಣ ಸಿನಿಮಾಗಳೂ ಈಗಾಗಲೇ ಪ್ರಚಾರವನ್ನು ಆರಂಭಿಸಿದೆ. ಹಾಗಾಗಿ, ಜನರಿಗೆ ನಿರೀಕ್ಷಿಯೂ ಇದೆ. ಸರಿಯಾದ ರೂಪುರೇಷೆ ಮತ್ತು ಪ್ರಚಾರವಿದ್ದರೆ ಮಾತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಯಶಸ್ಸನ್ನು ಪಡೆಯುತ್ತದೆ ಇಲ್ಲಾಂದರೆ ಗೋತಾ ಗ್ಯಾರಂಟಿ.

    English summary
    South Film Makers Need To Promote Their Movies Before Going For PAN India Release. Know More
    Monday, March 21, 2022, 17:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X