For Quick Alerts
  ALLOW NOTIFICATIONS  
  For Daily Alerts

  ವೈರಲ್ ಆಗುತ್ತಿರುವ ಈ 'ಶವಪೆಟ್ಟಿಗೆ ನೃತ್ಯ'ದ ಮೀಮ್ಸ್ ಹಿಂದಿನ ಆಸಕ್ತಿಕರ ಕಥೆ ಗೊತ್ತೇ?

  |

  ಬಿಳಿಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕೋಟ್ ಮತ್ತು ಟೊಪ್ಪಿ ಧರಿಸಿ ಹೆಗಲ ಮೇಲೆ ಶವಪೆಟ್ಟಿಗೆ ಹೊತ್ತುಕೊಂಡು ಸಂಗೀತದ ನಾದಕ್ಕೆ ನರ್ತಿಸುವ ವಿಡಿಯೋ ನೋಡಿದ್ದೀರಾ? ನೋಡಿರಲೇಬೇಕು. ಏಕೆಂದರೆ ಈಗ ಒಂದೆರಡು ತಿಂಗಳಿಂದೀಚೆಗೆ ಈ ಸಂಗೀತ ಮತ್ತು ಡ್ಯಾನ್ಸ್ ಹೊಂದಿರುವ ನೂರಾರು ಮೀಮ್‌ಗಳು ಬಂದಿವೆ. ಬಹುತೇಕ ಎಲ್ಲ ಟ್ರೋಲ್ ಮತ್ತು ಮೀಮ್ ಪುಟಗಳಲ್ಲಿಯೂ ಈ ಮಜಾ ಡ್ಯಾನ್ಸ್ ನೋಡಿರುತ್ತೀರಿ.

  ಚಂದನ್ ಹಾಡೋದನ್ನು ಬಿಟ್ಟು ನಿವೇದಿತಾರಿಂದ ಹಾಡು ಹಾಡಿಸ್ತಿದ್ದಾರೆ | Chandan & Niveditha Singing | Filmibeat

  ದುರಂತ ಅಂತ್ಯ ಕಾಣುವ ವಿವಿಧ ವಿಡಿಯೋಗಳಿಗೆ ಈ ನೃತ್ಯದ ವಿಡಿಯೋ ಸೇರಿಸುತ್ತಿದ್ದಾರೆ. ಈ ಸಂಗೀತ ಮತ್ತು ನೃತ್ಯ ತಮಾಷೆಯಾಗಿದ್ದು, ನೋಡುವವರಿಗೆ ಮುದ ನೀಡುತ್ತದೆ. ನಮ್ಮಲ್ಲಿಯೂ ಶವದ ಮೆರವಣಿಗೆ ವೇಳೆ ತಮಟೆ ಬಾರಿಸುತ್ತಾ ಸಂಪ್ರದಾಯ ಕೆಲವೆಡೆ ಬೆಳೆದುಬಂದಿದೆ. ಅದು ಹುಟ್ಟಿದ್ದು ಹೇಗೋ ಗೊತ್ತಿಲ್ಲ. ಆದರೆ ಶವದ ಮೆರವಣಿಗೆಯಲ್ಲಿ ಬಾರಿಸುವ ತಮಟೆಗೆ ಭವ್ಯ ಇತಿಹಾಸವಿದೆ. ಹಾಗೆಯೇ ಈಗ ಎಲ್ಲೆಡೆ ವೈರಲ್ ಆಗುತ್ತಿರುವ 'ಶವಪೆಟ್ಟಿಗೆ ಮ್ಯೂಸಿಕ್ ಮತ್ತು ಡ್ಯಾನ್ಸ್‌' ಹಿಂದೆಯೂ ಒಂದು ಕಥೆಯಿದೆ. ಮುಂದೆ ಓದಿ...

  ವೈರಲ್ ಆಗುತ್ತಿವೆ ನೃತ್ಯ ಮೀಮ್‌ಗಳು

  ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್ ಟಾಕ್ ಆಪ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಂತ್ಯಸಂಸ್ಕಾರದ ಶವಪೆಟ್ಟಿಗೆ ನೃತ್ಯ ಬಹಳ ಸದ್ದು ಮಾಡುತ್ತಿದೆ. ಕೊರೊನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಈ ನೃತ್ಯ ಮೀಮ್‌ಗಳಿಗೆ ಆಹಾರ ಒದಗಿಸುತ್ತಿದೆ. ಜನರು ಮುಗ್ಗರಿಸಿ ಬೀಳುವುದು, ಅಪಘಾತಗಳು ಮುಂತಾದ ಹಳೆಯ ವಿಡಿಯೋಗಳಿಗೆ 'ಶವಪೆಟ್ಟಿಗೆಯ ನೃತ್ಯ' ಜೋಡಣೆಯಾಗುತ್ತಿದೆ.

  'ಈ ಬಾಲಕ ಇವತ್ತಿನವರೆಗೂ ಹಾಡುತ್ತಲೇ ಇದ್ದಾನೆ': ಸ್ಟಾರ್ ಗಾಯಕನ ಅಪರೂಪದ ವಿಡಿಯೋ ಹಂಚಿಕೊಂಡ ಭಟ್ರು

  ಆಫ್ರಿಕಾದ ಘಾನಾ ದೇಶದ್ದು

  ವಾಸ್ತವವಾಗಿ ಈ ವಿಡಿಯೋದ ಮೂಲ ಪಶ್ಚಿಮ ಆಫ್ರಿಕಾದ ಘಾನಾ ದೇಶ. ಇಲ್ಲಿ ಸಾವನ್ನು ಮತ್ತು ಮೃತರ ಮತ್ತೊಂದು ಜಗತ್ತಿನ ಪಯಣವನ್ನು (ಮರುಜನ್ಮ) ಸಂಭ್ರಮಿಸುವ ಸಂಪ್ರದಾಯ ಇತಿಹಾಸದಲ್ಲಿದೆ. 2015ರಲ್ಲಿ ಟ್ರಾವೆಲಿನ್ ಸಿಸ್ಟರ್ ಎಂಬ ಯೂಟ್ಯೂಬರ್ ಘಾನಾದಲ್ಲಿನ ತನ್ನ ಅತ್ತೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಳು. ಅಲ್ಲಿ ಆಕೆ ಈ ಅಚ್ಚರಿದಾಯಕ ನೃತ್ಯ ಪ್ರದರ್ಶನ ಕಂಡಿದ್ದಳು.

  ಶವಪೆಟ್ಟಿಗೆ ಹೊತ್ತು ನೃತ್ಯ

  ಶವಪೆಟ್ಟಿಗೆ ಹೊತ್ತು ನೃತ್ಯ

  ವೃತ್ತಿಪರ ನೃತ್ಯಪಟುಗಳು ಅಜ್ಜಿಯ 'ಮರಳಿ ಮಣ್ಣಿಗೆ' ಸಮಯದಲ್ಲಿ ಅವರಿಗೆ ಹೆಮ್ಮೆಯಿಂದ ಗೌರವ ಸಲ್ಲಿಸುತ್ತಿದ್ದರು. ಅವರ ದೇಹದ ಚಲನೆಗಳು, ಸಂಗೀತಕ್ಕೆ ತಕ್ಕಂತ ಹೆಜ್ಜೆಗಳು, ಮೃತದೇಹ ಹೊತ್ತಿದ್ದರೂ ಲೀಲಾಜಾಲವಾಗಿ ನರ್ತಿಸುವ ಶಕ್ತಿ ಅವರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತ್ತು.

  ಲಾಕ್‌ಡೌನ್ ಸಂಕಟ ಮರೆಯಲು ಈ ಐದು ಬೊಂಬಾಟ್ ಸಿನಿಮಾಗಳನ್ನು ನೋಡಿ

  ಬಿಬಿಸಿಯಲ್ಲಿ ಸಾಕ್ಷ್ಯಚಿತ್ರ

  ಬಿಬಿಸಿಯಲ್ಲಿ ಸಾಕ್ಷ್ಯಚಿತ್ರ

  ಶವಪೆಟ್ಟಿಗೆಗೆ ಹೆಗಲು ಕೊಟ್ಟು ನರ್ತಿಸುವ ಈ ಪ್ರತಿಭೆಗಳು ಬೆಳಕಿಗೆ ಬಂದಿದ್ದು 2017ರಲ್ಲಿ. ಬಿಬಿಸಿ ನ್ಯೂಸ್ ಆಫ್ರಿಕಾ ಅವರ ಕುರಿತು ಒಂದು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ತಮ್ಮ ಪ್ರೀತಿಪಾತ್ರರು ಮರಣ ಹೊಂದಿದಾಗ ಘಾನಾದ ಕುಟುಂಬಗಳು ಈ ಶವಪೆಟ್ಟಿಗೆ ಹೊರುವವರನ್ನು ಕರೆಸುತ್ತಾರೆ. ಮೃತರನ್ನು ಸಂತೋಷದಿಂದ ಕಳುಹಿಸಬೇಕೆಂಬ ನಂಬಿಕೆ ಅವರದು. ನಾಲ್ಕರಿಂದ ಆರು ಜನರ ತಂಡ ಅದ್ಭುತ ನೃತ್ಯದ ಮೂಲಕ ಗಮನ ಸೆಳೆಯುತ್ತದೆ.

  ಆಸ್ಟ್ರೋನೋಮಿಯಾ ಇಡಿಎಂ ಸಂಗೀತ

  ಆದರೆ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಸಂಗೀತ ಘಾನಾದ್ದಲ್ಲ. ಇದು 2010ರಲ್ಲಿ ಟೋನಿ ಇಜಿ ಮತ್ತು ವೈಸ್‌ಟೋನ್ ಎಂಬುವವರು ನಿರ್ಮಿಸಿದ 'ಆಸ್ಟ್ರೋನೋಮಿಯಾ' ಎಲೆಕ್ಟ್ರಿಕ್ ಡ್ಯಾನ್ಸ್ ಮ್ಯೂಸಿಕ್ (ಇಡಿಎಂ). ಆ ಸಂಗೀತವನ್ನು 'ಶವಪೆಟ್ಟಿಗೆ ನೃತ್ಯ'ದ ಲಯಕ್ಕೆ ತಕ್ಕಂತೆ ಹೊಂದಿಸಲಾಗಿತ್ತು. ಅದೀಗ ಮೀಮ್ಸ್‌ಗಳ ಮೆಚ್ಚಿನ ವಿಡಿಯೋ ಆಗಿದೆ.

  ಹಿಟ್ ಹಾಡು ಮಸಕಲಿಯ 2.0 ವರ್ಷನ್ ಕೇಳಿ ನಮ್ಮ ಭವಿಷ್ಯದಷ್ಟೇ ಕೆಟ್ಟದಾಗಿದೆ ಎಂದು ರೊಚ್ಚಿಗೆದ್ದ ಫ್ಯಾನ್ಸ್

  ಟಿಕ್ ಟಾಕ್ ಯೂಸರ್‌ನಿಂದ ಜನಪ್ರಿಯ

  ಈಗಿನ ಮೀಮ್‌ಗಳ ಟ್ರೆಂಡ್ 2020ರ ಫೆಬ್ರವರಿಯಿಂದೀಚೆಗಷ್ಟೇ ಶುರುವಾಗಿದ್ದು. ಟಿಕ್ ಟಾಕ್ ಬಳಕೆದಾರನೊಬ್ಬ ಎತ್ತರದಿಂದ ಜಿಗಿಯುವ ತನ್ನ ಸ್ಟಂಟ್‌ ಪ್ರಯತ್ನದಲ್ಲಿ ವಿಫಲವಾಗುವುದನ್ನು ಘಾನಾದ ಶವಪೆಟ್ಟಿಗೆಯ ನೃತ್ಯದ ವಿಡಿಯೋ ಕ್ಲಿಪ್ ಜತೆಗೆ ಜೋಡಿಸಿ ಶೇರ್ ಮಾಡಿದ್ದ. ಅಲ್ಲಿಂದ ಇದು ಜನಪ್ರಿಯವಾಯಿತು. ಮೀಮ್ ಪುಟಗಳು ಇದನ್ನು ಬಳಸಿಕೊಳ್ಳತೊಡಗಿದವು.

  ಇದು ಅಣಕಿಸುವ ಸಂಪ್ರದಾಯವಲ್ಲ....

  ನಾವು ಟ್ರೋಲ್ ಪುಟಗಳು ಸೃಷ್ಟಿಸುವ ಮೀಮ್‌ಗಳನ್ನು ಕಂಡು ನಗುತ್ತೇವೆ. ನಮ್ಮೊಳಗೆ ಈ ನೃತ್ಯ ನಗು ಮೂಡಿಸುತ್ತದೆ. ಅದರ ಹಿಂದಿನ ಪರಂಪರೆಯ ಮಾಹಿತಿ ಇಲ್ಲದಿದ್ದಾಗ ಈ ನೃತ್ಯವೂ ಅಣಕಕ್ಕೆ ಒಳಗಾಗುತ್ತದೆ. ಇದೇನು ಸಂಸ್ಕೃತಿ ಎಂದು ಲೇವಡಿ ಮಾಡುತ್ತಾರೆ. ಈ 'ಅಸಂಪ್ರದಾಯಿಕ' ಅಂತ್ಯಸಂಸ್ಕಾರ ಪದ್ಧತಿ ಜನರ ನಗುವಿನ ಮದ್ದಾಗುತ್ತಿದೆ. ಆದರೆ ಇದು ಮೃತಪಟ್ಟವರನ್ನು ಖುಷಿಯಿಂದ ಕಳುಹಿಸುವ ಸಂಪ್ರದಾಯ ಎನ್ನುವುದನ್ನು ಮರೆಯಬಾರದು.

  English summary
  The funeral coffin dance video went viral through memes in recent times. You may not know the origin of this dance. Here we explained it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X