twitter
    For Quick Alerts
    ALLOW NOTIFICATIONS  
    For Daily Alerts

    'ಈ' ಸಿನಿಮಾ ಸುದೀಪ್ ಗೆ ಎಷ್ಟು ಇಷ್ಟ ಅಂದ್ರೆ, ಪ್ರಿಂಟ್ ಹಾಕಿಸಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ.!

    |

    ಬಣ್ಣದ ಬದುಕಿಗೆ ಸುದೀಪ್ ಕಾಲಿಟ್ಟು 25 ವರ್ಷಗಳು ತುಂಬಿವೆ. ಈ 25 ವರ್ಷಗಳಲ್ಲಿ ಸುದೀಪ್ ಹಲವು ಸಿನಿಮಾಗಳಲ್ಲಿ ಭಿನ್ನ-ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಾವು ಅಭಿನಯಿಸಿರುವ ಸಿನಿಮಾಗಳ ಪೈಕಿ ಸುದೀಪ್ ಅಚ್ಚುಮೆಚ್ಚಿನ ಚಿತ್ರ ಯಾವುದು ಗೊತ್ತಾ.?

    2001 ರಲ್ಲಿ ತೆರೆಗೆ ಬಂದ 'ವಾಲಿ' ಚಿತ್ರ ಸುದೀಪ್ ಗೆ ಸಿಕ್ಕಾಪಟ್ಟೆ ಇಷ್ಟ.! 'ವಾಲಿ' ಸಿನಿಮಾ ಸುದೀಪ್ ಗೆ ಎಷ್ಟು ಇಷ್ಟ ಅಂದ್ರೆ, ಅದನ್ನ ಪ್ರಿಂಟ್ ಹಾಕಿಸಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ.!

    ಹೌದು, ಕನ್ನಡ ಚಿತ್ರರಂಗದಲ್ಲಿ ಸುದೀಪ್ ಗಟ್ಟಿಯಾಗಿ ನೆಲೆಯೂರಲು ಆರಂಭಿಸುತ್ತಿದ್ದ ದಿನಗಳಲ್ಲಿ ತೆರೆಗೆ ಬಂದ ಚಿತ್ರ 'ವಾಲಿ'. ತಮಿಳಿನ 'ವಾಲಿ' ಚಿತ್ರವನ್ನು ನೋಡಿ, ಅದರ ರೀಮೇಕ್ ರೈಟ್ಸ್ ತಂದಿದ್ದ ಸುದೀಪ್ ಕನ್ನಡದಲ್ಲಿ ಪ್ರಯೋಗ ಮಾಡಲು ಮುಂದಾದರು. ಆಗಷ್ಟೇ ಸುದೀಪ್ ಅಭಿನಯದ 'ಸ್ಪರ್ಶ' ಮತ್ತು 'ಹುಚ್ಚ' ತೆರೆಗೆ ಬಂದು, ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಈ ಸಂದರ್ಭದಲ್ಲಿ ಡಬಲ್ ಆಕ್ಟಿಂಗ್ ಮತ್ತು ನೆಗೆಟಿವ್ ಶೇಡ್ ಪಾತ್ರದಲ್ಲಿ ಮಿಂಚುವ ಪ್ರಯೋಗಕ್ಕೆ ಸುದೀಪ್ ಕೈಹಾಕಿದರು.

    ಈಗ ಸುದೀಪ್ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ನೀರು ಕುಡಿದಷ್ಟೇ ಸಲೀಸಾಗಿ ಅಭಿನಯಿಸುವುದನ್ನ ನೀವೆಲ್ಲ ನೋಡಿದ್ದೀರಾ. ಆದ್ರೆ, ತಮ್ಮ ವೃತ್ತಿ ಜೀವನದಲ್ಲಿಯೇ ನೆಗೆಟಿವ್ ಪಾತ್ರದಲ್ಲಿ ಸುದೀಪ್ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 'ವಾಲಿ' ಚಿತ್ರದಲ್ಲಿ.! ಸುದೀಪ್ ಒಳಗಿನ ನಿಜವಾದ ಕಲಾವಿದ ಹೊರಗೆ ಬಂದಿದ್ದು ಈ ಚಿತ್ರದಲ್ಲೇ.!

    ಒಂದೇ ಸಿನಿಮಾದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಶೇಡ್ ಇರುವ ಡಬಲ್ ಆಕ್ಟಿಂಗ್ ಮಾಡಿ ಅಂದು ಸುದೀಪ್ ಕನ್ನಡ ಸಿನಿ ಪ್ರಿಯರ ಮನ ಗೆದ್ದಿದ್ದರು. ರಮೇಶ್ ಯಾದವ್ ನಿರ್ಮಾಣದಲ್ಲಿ, ಎಸ್.ಮಹೇಂದರ್ ನಿರ್ದೇಶನದಲ್ಲಿ ತೆರೆಗೆ ಬಂದ 'ವಾಲಿ' ಹಿಟ್ ಆಯ್ತು. ನಿರ್ಮಾಪಕ ರಮೇಶ್ ಯಾದವ್ ಗೆ ಲಾಭ ಆಯ್ತು. ಸುದೀಪ್ ಪ್ರಯೋಗ ಕ್ಲಿಕ್ ಆಯ್ತು.

    2001 ಅಕ್ಟೋಬರ್ 19 ರಂದು ತೆರೆಗೆ ಬಂದ 'ವಾಲಿ' ಚಿತ್ರದ ಬಗ್ಗೆ ಎಸ್.ಮಹೇಂದರ್ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿರುವ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ, ಓದಿರಿ...

    ತುಂಬಾ ಕಷ್ಟದ ಪಾತ್ರ

    ತುಂಬಾ ಕಷ್ಟದ ಪಾತ್ರ

    ''ವಾಲಿ' ಚಿತ್ರದಲ್ಲಿ ಮೊದಲ ಬಾರಿಗೆ ಸುದೀಪ್ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಮಿಂಚಿದ್ದರು. ಒಂದೇ ಸಿನಿಮಾದಲ್ಲಿ, ಒಂದೇ ವಯೋಮಾನದ ಎರಡು ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿಭಾಯಿಸುವುದು ತುಂಬಾ ಕಷ್ಟ. ಅದನ್ನ ಸುದೀಪ್ ತುಂಬಾ ಚೆನ್ನಾಗಿ ನಿಭಾಯಿಸಿದರು'' - ಎಸ್.ಮಹೇಂದರ್, ನಿರ್ದೇಶಕ

    ಸುನೀಲ್ ಕುಮಾರ್ ದೇಸಾಯಿ ಜೊತೆ ಮತ್ತೆ ಕೈ ಜೋಡಿಸುತ್ತಾರಾ ಸುದೀಪ್.?ಸುನೀಲ್ ಕುಮಾರ್ ದೇಸಾಯಿ ಜೊತೆ ಮತ್ತೆ ಕೈ ಜೋಡಿಸುತ್ತಾರಾ ಸುದೀಪ್.?

    ಸುದೀಪ್ ನಟನೆ ಬಗ್ಗೆ ಎಸ್.ಮಹೇಂದರ್ ಮಾತು

    ಸುದೀಪ್ ನಟನೆ ಬಗ್ಗೆ ಎಸ್.ಮಹೇಂದರ್ ಮಾತು

    ''ವಾಲಿ' ಚಿತ್ರದಲ್ಲಿ ಅಭಿನಯ ಅಂದ್ರೇನೇ ಸೈಲೆನ್ಸ್. ನಟನೆಯಲ್ಲಿ ಸೈಲೆನ್ಸ್ ನ ಫಿಲಪ್ ಮಾಡುವುದು ಕಷ್ಟದ ಕೆಲಸ. ಒಂದು ಪಾತ್ರ ಮಾತಾಡುತ್ತೆ (ಶಿವ), ಇನ್ನೊಂದು ಪಾತ್ರ ಮಾತನಾಡುವುದಿಲ್ಲ (ದೇವ). ಕಣ್ಣುಗಳೇ ಮಾತನಾಡಬೇಕು. ಆ (ದೇವ) ಪಾತ್ರಕ್ಕೆ ತುಂಬಾ ಫಿಸಿಕಲ್ ಮೂಮೆಂಟ್ ಕೂಡ ಇರಲಿಲ್ಲ. ಭಾವನೆಗಳಲ್ಲೇ ಎಲ್ಲವೂ ವ್ಯಕ್ತ ಆಗಬೇಕು. ಅದನ್ನ ಜಾಗರೂಕವಾಗಿ ಸುದೀಪ್ ಆಕ್ಟ್ ಮಾಡಿ ತೋರಿಸಿದರು'' - ಎಸ್.ಮಹೇಂದರ್, ನಿರ್ದೇಶಕ

    ಸುದೀಪ್ ಮುಚ್ಚಿಟ್ಟಿದ್ದ 'ಆ' ವಿಷಯವನ್ನು ಬಿಚ್ಚಿಟ್ಟ ಸುನೀಲ್ ಕುಮಾರ್ ದೇಸಾಯಿ.!ಸುದೀಪ್ ಮುಚ್ಚಿಟ್ಟಿದ್ದ 'ಆ' ವಿಷಯವನ್ನು ಬಿಚ್ಚಿಟ್ಟ ಸುನೀಲ್ ಕುಮಾರ್ ದೇಸಾಯಿ.!

    ಕಷ್ಟ ಪಟ್ಟು ಮಾಡಿದ ಸಿನಿಮಾ

    ಕಷ್ಟ ಪಟ್ಟು ಮಾಡಿದ ಸಿನಿಮಾ

    ''ವಾಲಿ' ಚಿತ್ರದ ಪೂಜೆ ದಿನವೇ ನಾವು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ವಿ. 90 ದಿನ ಶೂಟಿಂಗ್ ಪ್ಲಾನ್ ಆಗಿತ್ತು. ಈಗ ಬ್ಲೂ ಮ್ಯಾಟ್, ಗ್ರೀನ್ ಮ್ಯಾಟ್ ಅಂತೆಲ್ಲಾ ಬಂದಿದೆ. ಆದ್ರೆ, ಆಗ ಅದೆಲ್ಲ ಇರಲಿಲ್ಲ. ನಾವು ಎಲ್ಲವೂ ಸ್ಪಾಟ್ ನಲ್ಲಿ ಮಾಡಿದ್ದು. ಕ್ಯಾಮರಾಮ್ಯಾನ್, ಆರ್ಟಿಸ್ಟ್, ನಿರ್ದೇಶಕ.. ಎಲ್ಲರೂ ಕಷ್ಟ ಪಟ್ಟು ಸಿನಿಮಾ ಮಾಡಿದ್ವಿ'' - ಎಸ್.ಮಹೇಂದರ್, ನಿರ್ದೇಶಕ

    ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರುಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರು

    ಪ್ರಿಂಟ್ ಹಾಕಿಸಿ, ಮನೆಯಲ್ಲಿ ಇಟ್ಟುಕೊಂಡಿದ್ದಾರೆ.!

    ಪ್ರಿಂಟ್ ಹಾಕಿಸಿ, ಮನೆಯಲ್ಲಿ ಇಟ್ಟುಕೊಂಡಿದ್ದಾರೆ.!

    ''ಒಂದು ಸಾರಿ ಸುದೀಪ್ ಸಿಕ್ಕಿದ್ದಾಗ ನನಗೆ ಒಂದು ಮಾತು ಹೇಳಿದ್ದರು. 'ವಾಲಿ' ಚಿತ್ರ ನನಗೆ ಎಷ್ಟು ಇಷ್ಟ ಅಂದ್ರೆ, ನಾನು ಅದನ್ನ ಪ್ರಿಂಟ್ ಹಾಕಿಸಿ ಮನೆಯಲ್ಲಿ ಇಟ್ಟುಕೊಂಡಿದ್ದೇನೆ'' ಅಂತ. ಇವತ್ತು ಲ್ಯಾಪ್ ಟಾಪ್, ಪೆನ್ ಡ್ರೈವ್ ನಲ್ಲಿ ಸಿನಿಮಾನ ಇಟ್ಟುಕೊಳ್ಳಬಹುದು. ಆದ್ರೆ, ಆಗ ಲ್ಯಾಬ್ ನಿಂದಲೇ ಪ್ರಿಂಟ್ ಹಾಕಿಸಿ ಇಟ್ಟುಕೊಳ್ಳಬೇಕಿತ್ತು'' ಅಂತ 'ಫಿಲ್ಮಿಬೀಟ್ ಕನ್ನಡ'ಕ್ಕೆ ಎಸ್.ಮಹೇಂದರ್ ತಿಳಿಸಿದ್ದಾರೆ.

    English summary
    Kannada Actor Kiccha Sudeep has a print of Kannada Movie Vaali at home.
    Wednesday, February 12, 2020, 14:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X