twitter
    For Quick Alerts
    ALLOW NOTIFICATIONS  
    For Daily Alerts

    ಮೂರು ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಸೌತ್ ಟಾಪ್ ಟೆನ್ ಸಿನಿಮಾಗಳಲ್ಲಿ ನಿಮ್ಮ ಆಯ್ಕೆ ಸಿನಿಮಾ?

    |

    ಫೆಬ್ರವರಿ ಕೊನೆಯ ವಾರದಿಂದ ಅಸಲಿ ಆಟ ಶುರುವಾಗುತ್ತದೆ ಮೇ ವರೆಗೂ ಅದು ಮುಂದುವರಿಯುತ್ತದೆ. ಅದೇ ಸೌತ್ ಸಿನಿಮಾಗಳ ಬಿಡುಗಡೆ. ಈ ಮೂರು ತಿಂಗಳಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 10 ದೊಡ್ಡ ಚಿತ್ರಗಳು ಬಿಡುಗಡೆಗೆ ತಮ್ಮ ದಿನಾಂಕವನ್ನು ಘೋಷಣೆ ಮಾಡಿವೆ. ವಲಿಮೈ, ಎಥರ್ಕ್ಕುಂ ತುನಿಂಧವನ್, RRR, ಬೀಸ್ಟ್, KGF -2, ಜೇಮ್ಸ್ ಹೀಗೆ ಎಲ್ಲಾ ಬಹುತೇಕ ಚಿತ್ರಗಳು ತಮ್ಮ ಬರುವಿಕೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿವೆ. ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌, ಮೇ ನಲ್ಲಿ ನಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗುತ್ತಿರುವ ದಕ್ಷಿಣ ಭಾರತದ ಪ್ರಮುಖ ಚಲನಚಿತ್ರಗಳ ಪಟ್ಟಿ ಇಲ್ಲಿದೆ.

    ವಲಿಮೈ: ಫೆಬ್ರವರಿ 24- ತಮಿಳಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ವಲಿಮೈ ಕೂಡ ಒಂದು. ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರ ಬಹು ನಿರೀಕ್ಷಿತ ಆಕ್ಷನ್ ವಾಲಿಮೈ ಜನವರಿ 14 ರಂದು ಪೊಂಗಲ್ ಹಬ್ಬದ ಜೊತೆಗೆ ತೆರೆಗೆ ಬರಲು ಸಿದ್ಧವಾಗಿತ್ತು. ಆದಾಗ್ಯೂ, ಕೋವಿಡ್ ಸೋಂಕಿನ ಮೂರನೇ ಮೂರನೇ ಅಲೆಯ ಕಾರಣದಿಂದ ಚಿತ್ರ ಮುಂದೂಡಲಾಗಿತ್ತು. ನಿರ್ಮಾಪಕ ಬೋನಿ ಕಪೂರ್ ಫೆಬ್ರವರಿಯಲ್ಲಿ ಚಿತ್ರವನ್ನು ಹೊರತರುತ್ತಾರೆ ಎಂದು ಉದ್ಯಮದ ಮೂಲಗಳಿಂದ ಕೇಳಿಬರುತ್ತಿತ್ತು ಈಗ ಅಧಿಕೃತವಾಗಿ ಚಿತ್ರ 24 ರಂದು ಚಿತ್ರ ತೆರೆಗೆ ಬರಲಿದ್ದು ಇದನ್ನು ಚಿತ್ರತಂಡ ಘೋಷಣೆ ಮಾಡಿದೆ. ಚಿತ್ರ ತಮಿಳು ,ತೆಲುಗು, ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಉಳಿದ ಚಿತ್ರಗಳ ಬಿಡುಗಡೆ ದಿನಾಂಕ ಮುಂದಿದೆ...

     ಭೀಮ್ಲಾ ನಾಯಕ್: ಫೆಬ್ರವರಿ 25

    ಭೀಮ್ಲಾ ನಾಯಕ್: ಫೆಬ್ರವರಿ 25

    ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಚಿತ್ರವು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಜನವರಿ 12 ರಂದು ಚಿತ್ರಮಂದಿರಗಳಿಗೆ ಬರಬೇಕಿತ್ತು. ಆದಾಗ್ಯೂ, ತಯಾರಕರು ಫೆಬ್ರವರಿ 25 ಕ್ಕೆ ಬಿಡುಗಡೆಯನ್ನು ಮುಂದೂಡಿದ್ದರು, ಕೋವಿಡ್-19 ಭಯದಿಂದಾಗಿ ಅಲ್ಲ. ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ಮತ್ತು ಪ್ರಭಾಸ್ ಅವರ 'ರಾಧೆ ಶ್ಯಾಮ್' ಸಂಕ್ರಾಂತಿ ಸಮಯದಲ್ಲಿ ಬರುತ್ತಿರುವುದರಿಂದ ಎರಡು ಕೂಡ ದೊಡ್ಡ ಚಿತ್ರಗಳಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರವನ್ನು ಮುಂದೂಡಲಾಯಿತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಆ ಚಿತ್ರಗಳ ಬಿಡುಗಡೆ ಕೂಡ ಆಗಲಿಲ್ಲ. ಆದರೆ ಈಗ ಭೀಮ್ಲಾ ನಾಯಕ್ ನಿರ್ಮಾಪಕರು ಫೆಬ್ರವರಿ 25 ರಂದು ಚಿತ್ರವನ್ನು ಬಿಡುಗಡೆ ಮಾಡಲು ದೃಢವಾಗಿದ್ದಾರೆ. ಯಾವುದೇ ಅನಿರೀಕ್ಷಿತ ಸವಾಲುಗಳು ಎದುರಾದರೆ, ಚಿತ್ರವು ಏಪ್ರಿಲ್ 1 ರಂದು ಚಿತ್ರಮಂದಿರಗಳಿಗೆ ಬರಲಿದೆ ಎಂದು ಅವರು ಹೇಳುತ್ತಾರೆ.

    ಎತರ್ಕ್ಕುಂ ತೂನಿಂಧವನ್: ಮಾರ್ಚ್ 10

    ಎತರ್ಕ್ಕುಂ ತೂನಿಂಧವನ್: ಮಾರ್ಚ್ 10

    'ಜೈಭೀಮ್' ನಂತರ ನಟ ಸೂರ್ಯ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. 'ಸೂರರೈ ಪೊಟ್ರು', 'ಜೈಭೀಮ್' ಅಂತಹ ವಿಭಿನ್ನ ಕಥಾವಸ್ತುವಿನ ಸದಾಭಿರುಚಿ ಚಿತ್ರಗಳಲ್ಲಿ ನಟಿಸಿದ್ದ ಸೂರ್ಯ ಅವರ ಎರಡು ಚಿತ್ರಗಳು OTTನಲ್ಲಿ ಬಿಡುಗಡೆಯಾಗಿತ್ತು. ಕೊನೆಗೂ ಈಗ ಸೂರ್ಯ ಅವರ ಚಿತ್ರ ನೇರವಾಗಿ ಚಿತ್ರಮಂದಿರದಲ್ಲಿ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ದೊರೆಯುತ್ತಿದೆ. ಸುಮಾರು ಮೂರು ವರ್ಷಗಳ ನಂತರ ಸೂರ್ಯ ಅವರ ಚಿತ್ರವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪಾಂಡಿರಾಜ್ ಬರೆದು ನಿರ್ದೇಶಿಸಿರುವ ಈ ಚಿತ್ರವು ಮುಕ್ತಾಯದ ಹಂತದಲ್ಲಿದೆ. ಚಿತ್ರ ಮಾರ್ಚ್ 10 ರಂದು ಚಿತ್ರಮಂದಿರಗಳಲ್ಲಿ ಬರಲಿದೆ.

     ರಾಧೆ ಶ್ಯಾಮ್: ಮಾರ್ಚ್ 11

    ರಾಧೆ ಶ್ಯಾಮ್: ಮಾರ್ಚ್ 11

    'ರಾಧೆ ಶ್ಯಾಮ್' ಚಿತ್ರವನ್ನು ರಾಧಾ ಕೃಷ್ಣ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಪ್ರಭಾಸ್ ಅಭಿನಯದ ಚಿತ್ರವು ಎರಡು ವರ್ಷಗಳಿಂದ ತಯಾರಿಕೆಯಲ್ಲಿದೆ. ಮತ್ತು ಅಂತಿಮವಾಗಿ ಮಾರ್ಚ್ 11 ಬಿಡುಗಡೆಯಾಗುತ್ತಿದೆ. ಎಪ್ಪತ್ತರ ದಶಕದ ಕಥಾವಸ್ತುವನ್ನು ಹೊಂದಿರುವ ಈ ಚಿತ್ರ ಸಂಪೂರ್ಣವಾಗಿ ಯುರೋಪ್ ನಲ್ಲಿ ಚಿತ್ರೀಕರಣವಾಗಿದೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಈ ಚಿತ್ರ ಕಳೆದ ಕೆಲವು ತಿಂಗಳುಗಳಿಂದ ಸದ್ದು ಮಾಡುತ್ತಲೇ ಇದೆ. ಸಂಕ್ರಾಂತಿ ಸಮಯದಲ್ಲಿ ಬಿಡುಗಡೆ ಆಗಬೇಕಿದ್ದ ಚಿತ್ರ ಕೊನೆಗೂ ಈಗ ಮಾರ್ಚ್ 11ರಂದು ಕನ್ನಡ- ತೆಲುಗು -ತಮಿಳು- ಹಿಂದಿ -ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

     ಜೇಮ್ಸ್: ಮಾರ್ಚ್ 17

    ಜೇಮ್ಸ್: ಮಾರ್ಚ್ 17

    ಈ ದಿನಕ್ಕಾಗಿ ಇಡೀ ಕರ್ನಾಟಕ ಒಂದೇ ಉಸಿರಿನಲ್ಲಿ ಎದುರುನೋಡುತ್ತಿದೆ. 'ಕರ್ನಾಟಕ ರತ್ನ' ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್.ಅಪ್ಪು ಅವರ ಅಕಾಲಿಕ ನಿಧನದ ನಂತರ ಶೋಕಸಾಗರದಲ್ಲಿ ಮುಳುಗಿರುವ ಅವರ ಅಭಿಮಾನಿಗಳು ತೆರೆಯ ಮೇಲೆ ಮತ್ತೆ ಅವರನ್ನು ನೋಡುವ ದಿನ ಅದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರ ಅಕಾಲಿಕ ಮರಣದ ಮೊದಲು ಇದು ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರವಾಗಿತ್ತು. ಜೇಮ್ಸ್ ಚಿತ್ರಕ್ಕೆ ಐಕಾನ್‌ ಗೌರವವಾಗಿ, ಜೇಮ್ಸ್ ಜೊತೆಗೆ ಬೇರೆ ಯಾವುದೇ ಚಲನಚಿತ್ರಗಳನ್ನು ಬಿಡುಗಡೆ ಮಾಡದಿರಲು ಕನ್ನಡ ಚಲನಚಿತ್ರೋದ್ಯಮ ನಿರ್ಧರಿಸಿದೆ. ಮತ್ತು ನೆರೆಯ ಚಲನಚಿತ್ರ ಮಂಡಳಿಗಳು ಸಹ ಇದನ್ನು ಅನುಸರಿಸುತ್ತವೆ ಎಂದು ನಂಬಲಾಗಿದೆ. ಪುನೀತ್ ಅವರ ಜನ್ಮದಿನವಾದ ಮಾರ್ಚ್ 17 ರಂದು ಜೇಮ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

     RRR: ಮಾರ್ಚ್ 25

    RRR: ಮಾರ್ಚ್ 25

    ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಆರ್‌ಆರ್‌ಆರ್. ಸಂಕ್ರಾಂತಿ ಸಮಯದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದೆ ಹೋಗಿರುವ ಈ ಚಿತ್ರವನ್ನು ಮತ್ತೆ ಬಿಡುಗಡೆ ಮಾಡುವ ವಿಷಯ ಬಂದಾಗ ಆರ್‌ಆರ್‌ಆರ್ ನ ತಯಾರಕರು ಈ ಹಿಂದೆ ಎರಡು ಬಿಡುಗಡೆ ದಿನಾಂಕಗಳನ್ನು ನಿರ್ಬಂಧಿಸಿದ್ದರು - ಮಾರ್ಚ್ 18 ಮತ್ತು ಏಪ್ರಿಲ್ 28. ಈ ದಿನಾಂಕಗಳಲ್ಲಿ ಒಂದರಲ್ಲಿ ಚಲನಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಘೋಷಿಸಿದ್ದರು. ಮಾರ್ಚ್ 17 ರಂದು ಜೇಮ್ಸ್ ಚಿತ್ರ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಕಾಣಿಕೆಯಾಗಿ ಬರುತ್ತಿರುವುದರಿಂದ ಮತ್ತು ಏಪ್ರಿಲ್ ಅಂತ್ಯದ ವೇಳೆಗೆ ಗಲ್ಲಾಪೆಟ್ಟಿಗೆಯಲ್ಲಿ ಇತರ ದೊಡ್ಡ ಚಲನಚಿತ್ರಗಳೊಂದಿಗೆ ಸಾಕಷ್ಟು ಕಿಕ್ಕಿರಿದಿರುವ ಸಾಧ್ಯತೆಯೊಂದಿಗೆ, ಮಾರ್ಚ್ 25 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಮತ್ತು ಅಧಿಕೃತವಾಗಿ ಚಿತ್ರ ಮಾರ್ಚ್ 25ರಂದು 10,000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    ಕೆಜಿಎಫ್-2: ಏಪ್ರಿಲ್ 14

    ಕೆಜಿಎಫ್-2: ಏಪ್ರಿಲ್ 14

    ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ ಮೂಡಿ ಬಂದಿರುವ ಕೆಜಿಎಫ್ ಫ್ರಾಂಚೈಸಿಯ 'ಕೆಜಿಎಫ್ -2' ಅಧಿಕೃತವಾಗಿ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿದೆ. ಭಾರತೀಯರು ಅತಿಹೆಚ್ಚು ನಿರೀಕ್ಷೆಯಿಂದ ಎದುರು ನೋಡುತ್ತಿರುವ ಚಿತ್ರಗಳ ಪೈಕಿ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷದಲ್ಲಿ ಬಿಡುಗಡೆ ಮಾಡಲಾದ ಚಿತ್ರದ ಟೀಸರ್ ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿದೆ. ದೊಡ್ಡ ಸ್ಕೇಲ್ ನಲ್ಲಿ 'ಕೆಜಿಎಫ್ -2'ಚಿತ್ರ ಕನ್ನಡ- ತೆಲುಗು -ತಮಿಳು- ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ದಿನದಂದು ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆ ಕೂಡ ಅಧಿಕೃತವಾಗಿ ಘೋಷಣೆಯಾಗಿದೆ ಅದು ಅಲ್ಲದೆ ತಮಿಳು ಸೂಪರ್ ಸ್ಟಾರ್ ವಿಜಯ್ ಅವರ ಮುಂದಿನ ಚಿತ್ರ 'ಬೀಸ್ಟ್' ಕೂಡ ಇದೇ ದಿನ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದೆ ನಡೆದರೆ ಆ ದಿನ ಇಡೀ ವಿಶ್ವ, ಭಾರತೀಯ ಸಿನಿಮಾರಂಗದ ಈ ಪೈಪೋಟಿಯನ್ನು ನೋಡುತ್ತದೆ.

    ಬೀಸ್ಟ್: ಏಪ್ರಿಲ್ 14 ಅಥವಾ 28

    ಬೀಸ್ಟ್: ಏಪ್ರಿಲ್ 14 ಅಥವಾ 28

    ತಮಿಳು ಸೂಪರ್ ಸ್ಟಾರ್ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಬೀಸ್ಟ್. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದ ಬಗ್ಗೆ ವಿಜಯ್ ಅಭಿಮಾನಿಗಳು ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ವಿಜಯ್ ಕೆರಿಯರ್ ನಲ್ಲಿ ಈ ಚಿತ್ರ ಅತಿ ಹೆಚ್ಚು ಹಣ ಹೂಡಿಕೆ ಮಾಡಿರುವ ಚಿತ್ರವಾಗಿದ್ದು, ಸನ್ ಪಿಚ್ಚರ್ ಚಿತ್ರವನ್ನು ನಿರ್ಮಿಸಿದೆ. ಪ್ರಸ್ತುತ ಚಿತ್ರ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದ್ದು ಏಪ್ರಿಲ್ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ಚಿಂತಿಸುತ್ತಿದೆ, ಒಂದು ವೇಳೆ 14ರಂದು ಸಾಧ್ಯವಾಗದೇ ಹೋದರೆ ಏಪ್ರಿಲ್ 28ರಂದು ಚಿತ್ರ ಬಿಡುಗಡೆ ಮಾಡಲಿದ್ದಾರೆ.

     ಆಚಾರ್ಯ: ಏಪ್ರಿಲ್ 29

    ಆಚಾರ್ಯ: ಏಪ್ರಿಲ್ 29

    ಕೊರಟಾಲ ಶಿವ ನಿರ್ದೇಶನದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರ ಮೂಡಿಬರುತ್ತಿದೆ. ರಾಮ್ ಚರಣ್ ತೇಜ ಈ ಚಿತ್ರವನ್ನು ನಿರ್ಮಿಸುತ್ತಿದ್ದು -ವಿಶೇಷವಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.ಅವರಿಗೆ ಪೂಜಾ ಹೆಗಡೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದಾಗಿದ್ದು ಚಿತ್ರವನ್ನು ಏಪ್ರಿಲ್ 29ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ.ಆದಾಗಿಯೂ ಚಿತ್ರದ ಬಿಡುಗಡೆ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

    ಸರ್ಕಾರು ವಾರಿ ಪಾಟ: ಮೇ 12

    ಸರ್ಕಾರು ವಾರಿ ಪಾಟ: ಮೇ 12

    ಮಹೇಶ್ ಬಾಬು ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ಸರ್ಕಾರು ವಾರಿ ಪಾಟ. 'ಗೀತಾ ಗೋವಿಂದಂ' ಚಿತ್ರದ ನಂತರ ನಿರ್ದೇಶಕ ಪರಶುರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಕೀರ್ತಿ ಸುರೇಶ್ ಮೊದಲ ಬಾರಿಗೆ ಮಹೇಶ್ ಬಾಬು ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮೈತ್ರಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಮೇ 12ರಂದು ಅಧಿಕೃತವಾಗಿ ವಿಶ್ವದಾದ್ಯಂತ ತೆಲುಗು- ಕನ್ನಡ- ಹಿಂದಿ -ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

    English summary
    Here are the list of 10 most anticipated South Indian Movie releasing in the coming months. RRR, Bheemla Nayak, F3, Vikrant Rona, KGF 2, Beats and Other movies. Take a look.
    Friday, February 4, 2022, 14:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X