For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗಕ್ಕೆ ಇಂದು ಬಹಳ ವಿಶೇಷ ದಿನ: ಯಾಕೆ ಗೊತ್ತೇ?

  |

  ಕನ್ನಡ ಚಿತ್ರರಂಗ ಅಸ್ತಿತ್ವ ಕಂಡುಕೊಂಡು 87 ವರ್ಷಗಳೇ ಉರುಳಿವೆ. ಈ ಸರಿ ಸುಮಾರು 9 ದಶಕಗಳಲ್ಲಿ ಚಿತ್ರರಂಗ ಆರಂಭದ ಎಡರು ತೊಡರುಗಳನ್ನು ಮೀರಿ ಬೃಹತ್ತಾಗಿ ಬೆಳೆದಿದೆ. ಸಾವಿರಾರು ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರರಂಗದ ಇತರೆ ವಿಭಾಗಗಳಲ್ಲಿ ದುಡಿದು ಚಿತ್ರರಂಗದ ಉನ್ನತಿಗೆ ಶ್ರಮಿಸಿದ್ದಾರೆ.

  ಮಳೆಯಲ್ಲಿ ಮಗನ ಜೊತೆ ವಿಶೇಷ ವಿಡಿಯೋ ಹಂಚಿಕೊಂಡ ಶ್ರೀಮುರಳಿ | Sri Murali & son

  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಡಾ. ರಾಜ್ ಕುಮಾರ್ ಅವರ ಕೊಡುಗೆಯನ್ನು ಪ್ರತ್ಯೇಕವಾಗಿ ಗುರುತಿಸಬಹುದು. ಚಿತ್ರರಂಗದ ಬೆಳವಣಿಗೆಯಲ್ಲಿ ರಾಜ್ ಕುಮಾರ್ ಕಾಣಿಕೆ ಅನನ್ಯ. ಅವರಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ ಹಾಗೆಯೇ ಗಾಯನದಲ್ಲಿಯೂ ರಾಷ್ಟ್ರಪ್ರಶಸ್ತಿ ಪಡೆದ ಮತ್ತೊಬ್ಬ ನಟ ಇಲ್ಲ. ಅಭಿನಯ, ವ್ಯಕ್ತಿತ್ವ, ಸಾಧನೆ ಮುಂತಾದ ಕಾರಣಗಳಿಂದಾಗಿ ರಾಜ್ ಕುಮಾರ್ ಎಂದಿಗೂ ಚಿತ್ರರಂಗದ ಹೆಮ್ಮೆಯಾಗಿ ಉಳಿಯುತ್ತಾರೆ. ಈ ಮೇರು ನಟ ನಾಯಕರಾಗಿ ಇಂದಿಗೆ (ಮೇ 7) 66 ವರ್ಷ. ಮುಂದೆ ಓದಿ...

  ರಾಜ್ ಕುಮಾರ್ ಒಬ್ಬ ಆಕ್ಟರ್‌ ಏನ್ರೀ? ಎಂದಿದ್ದರು ಎಸ್.ಎಲ್. ಭೈರಪ್ಪ: ವಿವಾದ ಸೃಷ್ಟಿಸಿದ ವಿಡಿಯೋರಾಜ್ ಕುಮಾರ್ ಒಬ್ಬ ಆಕ್ಟರ್‌ ಏನ್ರೀ? ಎಂದಿದ್ದರು ಎಸ್.ಎಲ್. ಭೈರಪ್ಪ: ವಿವಾದ ಸೃಷ್ಟಿಸಿದ ವಿಡಿಯೋ

  ಬೇಡರ ಕಣ್ಣಪ್ಪ ಬಿಡುಗಡೆ

  ಬೇಡರ ಕಣ್ಣಪ್ಪ ಬಿಡುಗಡೆ

  ಡಾ. ರಾಜ್ ಕುಮಾರ್ ನಾಯಕನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ. ಈ ಚಿತ್ರ ಬಿಡುಗಡೆಯಾಗಿದ್ದು 1954ರ ಮೇ 7ರಂದು. ಅಂದರೆ ಸರಿಯಾಗಿ 66 ವರ್ಷಗಳ ಹಿಂದೆ. ಹೀಗೆ 66 ವರ್ಷಗಳ ಹಿಂದೆ ಭಾರತೀಯ ಚಿತ್ರರಂಗವೇ ಬೆರಗಿನಿಂದ ನೋಡುವಂತಹ ತಾರೆಯೊಬ್ಬರು ಉದಯಿಸಿದ್ದು ಈ ದಿನದಂದು.

  ಮೊದಲ ಚಿತ್ರವಲ್ಲ

  ಮೊದಲ ಚಿತ್ರವಲ್ಲ

  'ಬೇಡರ ಕಣ್ಣಪ್ಪ' ರಾಜ್ ಕುಮಾರ್ ಅವರ ಮೊದಲ ಚಿತ್ರವೇನಲ್ಲ. ಆದರೆ ಅವರು ನಾಯಕರಾಗಿ ನಟಿಸಿದ ಪ್ರಥಮ ಚಿತ್ರ. ಇದಕ್ಕೂ ಮೊದಲು ಅವರು ಬಾಲ ಕಲಾವಿದನಾಗಿ 1942ರಲ್ಲಿ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಹಾಗೂ 1952ರಲ್ಲಿ 'ಶ್ರೀ ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ನಟಿಸಿದ್ದರು.

  ರಾಜ್‌ಕುಮಾರ್ ಮೊದಲ ಸಿನಿಮಾ ಹಾಡು ಹಾಡುವಂತೆ ಮಾಡಿದ್ದು ಇವರೇರಾಜ್‌ಕುಮಾರ್ ಮೊದಲ ಸಿನಿಮಾ ಹಾಡು ಹಾಡುವಂತೆ ಮಾಡಿದ್ದು ಇವರೇ

  ನರಸಿಂಹ ರಾಜು ಪಾದಾರ್ಪಣೆ

  ನರಸಿಂಹ ರಾಜು ಪಾದಾರ್ಪಣೆ

  'ಬೇಡರ ಕಣ್ಣಪ್ಪ' ಚಿತ್ರದ ಬಳಿಕ ಅವರು 208 ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದರು. ರಾಜ್ ಕುಮಾರ್ ಅವರೊಂದಿಗೆ ನರಸಿಂಹರಾಜು ಕೂಡ ಚಿತ್ರರಂಗಕ್ಕೆ ಪರಿಚಿತರಾದರು. 1953ರಲ್ಲಿ ಆಗಸ್ಟ್ ತಿಂಗಳಲ್ಲಿ ಬೇಡರ ಕಣ್ಣಪ್ಪ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಸುಮಾರು ಆರು ತಿಂಗಳು ಚಿತ್ರೀಕರಣ ನಡೆದಿತ್ತು. ಈ ಚಿತ್ರದ ನಟನೆಗೆ ರಾಜ್ ಕುಮಾರ್ ಅವರಿಗೆ 1,800 ರೂ ಸಂಭಾವನೆ ನೀಡಲಾಗಿತ್ತು ಎನ್ನಲಾಗಿದೆ.

  20 ಚಿತ್ರಮಂದಿರಗಳಲ್ಲಿ ಬಿಡುಗಡೆ

  20 ಚಿತ್ರಮಂದಿರಗಳಲ್ಲಿ ಬಿಡುಗಡೆ

  ಎಚ್ ಎಲ್ ಎನ್ ಸಿಂಹ ನಿರ್ದೇಶನದ ಈ ಚಿತ್ರದಲ್ಲಿ ಪಂಡರಿ ಬಾಯಿ, ರಾಜಾ ಸುಲೋಚನಾ, ಜಿವಿ ಅಯ್ಯರ್, ಕುಶಲಾ ಕುಮಾರಿ ಮುಂತಾದವರು ನಟಿಸಿದ್ದರು. ಈ ಚಿತ್ರ 1954ರ ಮೇ 7ರಂದು 20 ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಇಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಇದೇ ಮೊದಲು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ರಾಜ್ ಕುಮಾರ್ ಅವರ ಮೊಮ್ಮಗ (ರಾಘವೇಂದ್ರ ರಾಜ್ ಕುಮಾರ್ ಮಗ), ನಟ ವಿನಯ್ ರಾಜ್ ಕುಮಾರ್ ಜನಿಸಿದ್ದೂ ಇದೇ ದಿನಾಂಕದಂದು (ಮೇ 7, 1989)

  ತೆಲುಗಿನಲ್ಲಿ ರಾಜ್ ಕುಮಾರ್

  ತೆಲುಗಿನಲ್ಲಿ ರಾಜ್ ಕುಮಾರ್

  ಇದೇ ಸಿನಿಮಾವನ್ನು ಎಚ್ ಎಲ್ ಎನ್ ಸಿಂಹ ಅವರು ತೆಲುಗಿನಲ್ಲಿಯೂ ನಿರ್ದೇಶಿಸಿದರು. 'ಶ್ರೀ ಕಾಳಹಸ್ತಿ ಮಹಾತ್ಯಂ' ಚಿತ್ರವು ಅದೇ ವರ್ಷ ನವೆಂಬರ್ 12ರಂದು ತೆರೆಕಂಡಿತು. ವಿಶೇಷವೆಂದರೆ ಈ ರೀಮೇಕ್ ಚಿತ್ರದಲ್ಲಿ ರಾಜ್ ಕುಮಾರ್ ಅವರೇ ಕಣ್ಣಪ್ಪನ ಪಾತ್ರ ನಿರ್ವಹಿಸಿದ್ದರು. ಇದು ರಾಜ್ ಕುಮಾರ್ ಅವರ ಮೊದಲ ಹಾಗೂ ಕೊನೆಯ ಪರಭಾಷಾ ಚಿತ್ರ.

  English summary
  Dr Rajkumar was introduced as a hero from Bedara Kannappa movie on this day, that is 7th May, 1954.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X