Don't Miss!
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಾರು ಈ ರಿಯಾ ಚಕ್ರವರ್ತಿ? ಬೆಂಗಳೂರಿಗೆ ಇರುವ ನಂಟು ಏನು ಗೊತ್ತೇ?
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಎಲ್ಲರ ಗಮನ ಇರುವುದು ರಿಯಾ ಚಕ್ರವರ್ತಿ ಅವರೆಡೆಗೆ. ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂಬ ಆರೋಪ ಕೇಳಿಬಂದಿದೆ. ಸುಶಾಂತ್ ಸಿಂಗ್ ಅವರಲ್ಲಿ ಮಾನಸಿಕ ಖಿನ್ನತೆ ಇದೆ ಎಂಬ ಸುದ್ದಿ ಹರಡಿಸಿದ್ದು, ಅದಕ್ಕೆ ಪೂರಕವಾಗಿ ಅವರಿಗೆ ಒತ್ತಾಯಪೂರ್ವಕವಾಗಿ ಮಾತ್ರೆಗಳನ್ನು ನೀಡಿದ್ದು, ಪದೇ ಪದೇ ನಂಬರ್‌ಗಳನ್ನು ಬದಲಿಸುವ ಮೂಲಕ ಸ್ನೇಹಿತರು ಮತ್ತು ಕುಟುಂಬದವರಿಂದ ದೂರ ಇರುವಂತೆ ಮಾಡಿದ್ದು, ಅವರ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಬಳಸಿಕೊಂಡಿದ್ದು, ಸುಶಾಂತ್ ಸಿಬ್ಬಂದಿಯನ್ನು ಬದಲಿಸಿದ್ದು.. ಹೀಗೆ ಅನೇಕ ವಾದಗಳು ರಿಯಾ ವಿರುದ್ಧ ಅನುಮಾನ ಹೆಚ್ಚಿಸುತ್ತಿದೆ.
ಸುಶಾಂತ್ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಿಯಾ ವಿರುದ್ಧ ಆರೋಪಗಳು ಕೇಳಿಬರತೊಡಗಿದ ಬಳಿಕ ರಿಯಾ ಕೂಡ ಸಿಬಿಐ ತನಿಖೆ ನಡೆಸಲಿ ಎಂದು ಹೇಳಿದ್ದರು. ಆದರೆ ಸುಶಾಂತ್ ತಂದೆ ರಿಯಾ ವಿರುದ್ಧ ಬಿಹಾರದಲ್ಲಿ ದೂರು ನೀಡಿದ ಬಳಿಕ ಅನೇಕ ಸಂಗತಿಗಳು ಹೊರಬಿದ್ದಿವೆ. ರಿಯಾ ಈ ದೂರಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗೆ ಅನೇಕ ಸಂಗತಿಗಳು ರಿಯಾ ವಿರುದ್ಧ ಸುತ್ತುತ್ತಿವೆ. ಇಷ್ಟು ಚರ್ಚೆಗೆ ಒಳಗಾಗಿರುವ ರಿಯಾ ಯಾರು? ಅವರ ಹಿನ್ನೆಲೆ ಏನು? ಮುಂದೆ ಓದಿ...

ಹುಟ್ಟಿದ್ದು ಬೆಂಗಳೂರು
ರಿಯಾ ಚಕ್ರವರ್ತಿ ಮೂಲತಃ ಪಶ್ಚಿಮ ಬಂಗಾಳಕ್ಕೆ ಸೇರಿದವರು. ಆದರೆ ಅವರು ಜನಿಸಿದ್ದು 1992ರ ಜುಲೈ 1ರಂದು ಬೆಂಗಳೂರಿನಲ್ಲಿ. ಅವರ ತಂದೆ ಇಂದ್ರಜಿತ್ ಚಕ್ರವರ್ತಿ ಭಾರತೀಯ ಸೇನೆಯಲ್ಲಿದ್ದವರು. ಅವರ ತಾಯಿ ಸಂಧ್ಯಾ ಚಕ್ರವರ್ತಿ. ಅವರು ಕೊಂಕಣಿ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ತಮ್ಮ ಶೌವಿಕ್ ಚಕ್ರವರ್ತಿ ವಿದ್ಯಾರ್ಥಿಯಾಗಿದ್ದು, ಸುಶಾಂತ್ ಸಿಂಗ್ ವ್ಯವಹಾರದಲ್ಲಿಯೂ ಪಾಲುದಾರನಾಗಿದ್ದಾನೆ.
ದಿಶಾ
ಸಾವಿಗೂ
ಸುಶಾಂತ್
ಸಾವಿಗೂ
ಸಂಬಂಧವಿದೆಯೇ?:
ಕರಾವಳಿ
ಯುವತಿಯ
ಅಮ್ಮ
ಹೇಳಿದ್ದೇನು?

ಹರಿಯಾಣದಲ್ಲಿ ಓದಿದ್ದು
ರಿಯಾ ತಂದೆ ಬೇರೆ ಬೇರೆ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ರಿಯಾ ಬೆಂಗಳೂರಿನಲ್ಲಿ ಜನಿಸಿದ್ದರೂ ಬೆಳೆದಿದ್ದು ಬೇರೆ ಕಡೆ. ಅವರು ಶಿಕ್ಷಣ ಪಡೆದಿದ್ದು ಹರಿಯಾಣದ ಅಂಬಾಲಾದ ಸೇನಾ ಶಾಲೆಯಲ್ಲಿ. ಹೀಗಾಗಿ ಆಕೆಯನ್ನು ಪಂಜಾಬಿ ಯುವತಿ ಎಂದೇ ಆರಂಭದಲ್ಲಿ ಗುರುತಿಸಲಾಗುತ್ತಿತ್ತು.

ಎಂಟಿಯಲ್ಲಿ ರಿಯಾ ಉದ್ಯೋಗ
ನೋಡಲು ಸುಂದರವಾಗಿದ್ದ ರಿಯಾರನ್ನು ಬಣ್ಣದ ಲೋಕ ಸುಲಭವಾಗಿ ಆಕರ್ಷಿಸಿತು. ಅದರ ಮೊದಲ ಹೆಜ್ಜೆ ಎಂಟಿವಿ. ಟಿವಿಎಸ್ ಸ್ಕೂಟಿ ಟೀನ್ ದಿವಾ ಕಾರ್ಯಕ್ರಮದಲ್ಲಿ ರಿಯಾ ಮೊದಲ ರನ್ನರ್ ಅಪ್ ಆಗಿದ್ದರು. ಬಳಿಕ ಎಂಟಿವಿಯ ವಿಡಿಯೋ ಜಾಕಿ ಕೆಲಸಕ್ಕೆ ಆಡಿಷನ್ ನೀಡಿ ಆಯ್ಕೆಯೂ ಆದರು. ಎಂಟಿವಿ ವಾಸ್ಸಪ್, ಟಿಕ್ ಟಕ್ ಕಾಲೇಜ್ ಬೀಟ್, ಎಂಟಿವಿ ಗಾನ್ ಇನ್ 60 ಸೆಕೆಂಡ್ಸ್ ಮುಂತಾದ ಕಾರ್ಯಕ್ರಮಗಳ ನಿರೂಪಣೆ ನಿಭಾಯಿಸಿದ್ದರು.
ಸುಶಾಂತ್ಗೆ
ಬೈಪೊಲಾರ್
ಡಿಸಾರ್ಡರ್
ಇತ್ತು,
ರಿಯಾ
ಅಮ್ಮನಂತೆ
ನೋಡಿಕೊಳ್ಳುತ್ತಿದ್ದರು
ಎಂದ
ವೈದ್ಯೆ

ತೆಲುಗು ಚಿತ್ರದ ಮೂಲಕ ಪ್ರವೇಶ
ರಿಯಾ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ತೆಲುಗು ಚಿತ್ರದ ಮೂಲಕ. 2012ರಲ್ಲಿ ಎಂಎಸ್ ರಾಜು ನಿರ್ದೇಶನದ ತುನೀಗಾ ತುನೀಗಾ ಚಿತ್ರದಲ್ಲಿ ಸುಮಂತ್ ಅಶ್ವಿನ್ ಜತೆ ರಿಯಾ ನಟಿಸಿದ್ದರು. 2013ರಲ್ಲಿ ಅಶಿಮಾ ಚಿಬ್ಬರ್ ನಿರ್ದೇಶನದ 'ಮೆರೆ ಡ್ಯಾಡ್ ಕಿ ಮಾರುತಿ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು.

ಜಲೇಬಿ ಚಿತ್ರದಲ್ಲಿ ನಟನೆ
ಸೊನಾಲಿ ಕೇಬಲ್, ದೊಬಾರಾ: ಸೀ ಯುವರ್ ಈವಿಲ್, ಹಾಫ್ ಗರ್ಲ್‌ಫ್ರೆಂಡ್, ಬ್ಯಾಂಕ್ ಚೋರ್ ಚಿತ್ರಗಳಲ್ಲಿ ನಾಯಕಿ ಮತ್ತು ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು. ಅವರು ಮಹೇಶ್ ಭಟ್ ತಂಡದೊಂದಿಗೆ ಪ್ರವೇಶಿಸಿದ್ದು 2018ರಲ್ಲಿ 'ಜಲೇಬಿ' ಚಿತ್ರದ ಮೂಲಕ. ಇದರಲ್ಲಿ ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ ಮುಖ್ಯ ಪಾತ್ರದಲ್ಲಿ ನಟಿಸಿರುವ ರೂಮಿ ಜಾಫ್ರಿ ನಿರ್ದೇಶನದ 'ಚೆಹ್ರೆ'ಯಲ್ಲಿ ರಿಯಾ ನಟಿಸಿದ್ದಾರೆ. ಈ ಚಿತ್ರದ ಮತ್ತೊಂದು ನಾಯಕಿ ಪಾತ್ರದಲ್ಲಿ ನಟಿಸಬೇಕಿದ್ದ ಕೃತಿ ಕರಬಂಧ ಚಿತ್ರದಿಂದ ಹೊರ ನಡೆದಿದ್ದರು. ಬಳಿಕ ಈ ಪಾತ್ರದಲ್ಲಿ ನಟಿಸಲು ಮೌನಿ ರಾಯ್ ಮತ್ತು ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ನಿರಾಕರಿಸಿದ್ದರು. ನಂತರ ಕ್ರಿಸ್ಟಲ್ ಡಿಸೋಜಾ ಆಯ್ಕೆಯಾಗಿದ್ದರು.
ಸುಶಾಂತ್
ನನ್ನ
ಕೈಗೊಂಬೆ
ಎಂದಿದ್ದ
ರಿಯಾ:
ಹಳೆ
ವಿಡಿಯೋ
ವೈರಲ್

ಸುಶಾಂತ್ ಜತೆ ನಂಟು ಬೆಸೆದಿದ್ದು ಹೇಗೆ?
2016ರವರೆಗೂ ಸುಶಾಂತ್ ಮತ್ತು ಅಂಕಿತಾ ಲೋಖಂಡೆ ಲಿವ್ ಇನ್ ರಿಲೇಷನ್‌ನಲ್ಲಿದ್ದರು. ನಂತರ ಪರಸ್ಪರ ಒಪ್ಪಂದ ಮಾಡಿಕೊಂಡು ದೂರಾಗಿದ್ದರು. ನಂತರದ ನಾಲ್ಕು ವರ್ಷಗಳಲ್ಲಿ ಸುಶಾಂತ್ ಜತೆ ಯಾವುದೇ ರೀತಿ ಮಾತುಕತೆ ಮಾಡಿರಲಿಲ್ಲ ಎಂದು ಅಂಕಿತಾ ತಿಳಿಸಿದ್ದರು. ಅಂಕಿತಾರಿಂದ ದೂರವಾದ ಬಳಿಕ ಕೃತಿ ಸನೊನ್ ಜತೆ ಸುಶಾಂತ್ ಹೆಸರು ಕೇಳಿಬಂದಿತ್ತು. ರಿಯಾ ಚಕ್ರವರ್ತಿ, ಸುಶಾಂತ್ ಜೀವನದಲ್ಲಿ ಹೇಗೆ ಮತ್ತು ಯಾವಾಗ ಪ್ರವೇಶಿಸಿದರು ಎನ್ನುವುದು ಅವರ ಆಪ್ತರಿಗೆ ಮಾತ್ರ ತಿಳಿದಿದೆ. ಅಂಕಿತಾ ಕುರಿತು ಸುಶಾಂತ್ ಕುಟುಂಬಕ್ಕೆ ಚೆನ್ನಾಗಿ ತಿಳಿದಿದೆ. ಆದರೆ ರಿಯಾ ಬಗ್ಗೆ ಏನೂ ತಿಳಿದಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.

ಒಂದು ವರ್ಷದಿಂದ ಸಂಬಂಧ
ರಿಯಾ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ತಮ್ಮ ಸಂಬಂಧದ ಬಗ್ಗೆ ಒಮ್ಮೆಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ತಾನು ಮತ್ತು ಸುಶಾಂತ್ ಸ್ನೇಹಿತರಷ್ಟೇ ಎಂದು ರಿಯಾ ಹೇಳಿಕೊಂಡಿದ್ದರು. ಆದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಸಂದರ್ಭದಲ್ಲಿ ತಾನು ಅವರ ಪ್ರೇಯಸಿ ಎಂದು ಒಪ್ಪಿಕೊಂಡಿದ್ದಾರೆ. ಸುಶಾಂತ್ ಜತೆ ಒಂದು ವರ್ಷದಿಂದ ಲಿವ್ ಇನ್ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ. ಸುಶಾಂತ್ ಅತ್ಮಹತ್ಯೆ ಮಾಡಿಕೊಳ್ಳುವ ನಾಲ್ಕೈದು ದಿನಗಳ ಮುಂಚೆಯಷ್ಟೇ ಮನೆ ಬಿಟ್ಟು ಹೋಗಿದ್ದಾರೆ. ಸುಶಾಂತ್ ವ್ಯವಹಾರ, ಖಾಸಗಿ ಬದುಕು ಎಲ್ಲವೂ ರಿಯಾ ನಿಯಂತ್ರಣದಲ್ಲಿತ್ತು ಎಂದು ಹೇಳಲಾಗುತ್ತಿದೆ.

ಮಹೇಶ್ ಭಟ್ ಜತೆ ಸಂಬಂಧವೇನು?
ಇನ್ನೊಂದೆಡೆ ರಿಯಾ ಚಕ್ರವರ್ತಿ ಮತ್ತು ಮಹೇಶ್ ಭಟ್ ಸಂಬಂಧವೂ ಚರ್ಚೆಯಲ್ಲಿದೆ. ಇಬ್ಬರೂ ಸಲುಗೆಯಿಂದ ವರ್ತಿಸುವ ವಿಡಿಯೋ ಮತ್ತು ಫೋಟೊಗಳು ವೈರಲ್ ಆಗಿವೆ. ರಿಯಾ ತನ್ನನ್ನು ಗುರುವಿನಂತೆ ನೋಡುತ್ತಿದ್ದರು ಎಂದು ಮಹೇಶ್ ಭಟ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರೂ, ಅವರಿಬ್ಬರ ಫೋಟೊಗಳು ಗುರು-ಶಿಷ್ಯರ ಸಂಬಂಧವನ್ನು ಮೀರಿದೆ ಎಂದು ಟೀಕಿಸಲಾಗಿದೆ. 2017ರಿಂದಲೇ ಭಟ್ ಕುಟುಂಬದೊಂದಿಗೆ ರಿಯಾ ಆತ್ಮೀಯತೆಯಿಂದ ಇದ್ದಾರೆ ಎನ್ನಲಾಗಿದೆ. ಸುಶಾಂತ್ ಜತೆ ಸಂಬಂಧ ಬೆಳೆಸಲು, ಅವರ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರಲು ಮತ್ತು ಈ ಸನ್ನಿವೇಶದಲ್ಲಿ ಅವರನ್ನು ತೊರೆದು ಬರಲು ಮಹೇಶ್ ಭಟ್ ಸಂಚು ಕಾರಣ ಎಂದು ಆರೋಪಿಸಲಾಗಿದೆ.