twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವದ ಟಾಪ್ ಹತ್ತು ಸಿನಿಮಾಗಳು ಯಾವುವು? ಅವುಗಳ ವಿಶೇಷತೆಯೇನು?

    |

    ಐಎಂಡಿಬಿ ರೇಟಿಂಗ್ ಎನ್ನುವುದು ಬಹುತೇಕ ವಿಶ್ವಮಾನ್ಯ. ವಿಶ್ವದ ಹಲವಾರು ಭಾಷೆಗಳಲ್ಲಿ ಬಿಡುಗಡೆ ಆಗುವ ಸಿನಿಮಾಗಳಿಗೆ ಅದರ ಗುಣಮಟ್ಟಕ್ಕೆ ತಕ್ಕಂತೆ ಐಎಂಡಿಬಿ ರೇಟಿಂಗ್ ನೀಡುತ್ತದೆ. ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕೆಲವೇ ಸಿನಿಮಾ ರೇಟಿಂಗ್‌ ಸಂಸ್ಥೆಗಳಲ್ಲಿ ಅತ್ಯುತ್ತಮ ಮತ್ತು ವಿಶ್ವಾಸಾರ್ಹ ರೇಟಿಂಗ್ ಸಂಸ್ಥೆ ಐಎಂಡಿಬಿ ಎನ್ನಲಾಗುತ್ತದೆ.

    ಐಎಂಡಿಬಿಯು ಜನರ ಪ್ರತಿಕ್ರಿಯೆ ಹಾಗೂ ವಿಷಯ ತಜ್ಞರ ಪ್ರತಿಕ್ರೆಯೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆದು ಸರಾಸರಿ ಲೆಕ್ಕದಲ್ಲಿ ಸಿನಿಮಾಗಳಿಗೆ ರೇಟಿಂಗ್ ನೀಡುತ್ತದೆ. ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಐಎಂಡಿಬಿ ರೇಟಿಂಗ್ ಅನುಸರಿಸಿ ಸಿನಿಮಾಗಳ ಗುಣಮಟ್ಟ ಅಳೆದು ವೀಕ್ಷಣೆಗೆ ಆಯ್ದುಕೊಳ್ಳುವ ಪದ್ಧತಿ ಇದೆ.

    ಒಂದೊಂದು ಸಿನಿಮಾಗಳು ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಹೆಚ್ಚು ಇಷ್ಟವಾಗುತ್ತವೆ. ಇಷ್ಟವಾಗದಿರಲೂ ಬಹುದು. ಆದರೆ ಐಎಂಡಿಬಿಯು ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳ ಹಾಗೂ ಸಿನಿಮಾ ಪಂಡಿತರ ಅಭಿಪ್ರಾಯ ಒಟ್ಟು ಮಾಡಿ ರೇಟಿಂಗ್ ನೀಡುವ ಕಾರಣ ಐಎಂಡಿಬಿಯ ವಿಶ್ವದ ಟಾಪ್ ಸಿನಿಮಾಗಳ ಪಟ್ಟಿ ನಿಜವಾಗಿಯೂ ಟಾಪ್ ಸಿನಿಮಾ ಅಥವಾ ಸಾರ್ವಕಾಲಿಕ ಶ್ರೇಷ್ಟ ಸಿನಿಮಾ ಎಂದು ಬಹು ಮಟ್ಟಿಗೆ ಒಪ್ಪಬಹುದು. ಇಲ್ಲಿದೆ ಐಎಂಡಿಬಿ ಪ್ರಕಾರ ವಿಶ್ವದ ಸಾರ್ವಕಾಲಿಕ ಶ್ರೇಷ್ಟ ಹತ್ತು ಸಿನಿಮಾಗಳ ಪಟ್ಟಿ.

    ಟಾಪ್ ಹತ್ತನೇ ಸಿನಿಮಾ

    ಟಾಪ್ ಹತ್ತನೇ ಸಿನಿಮಾ

    'ದಿ ಲಾರ್ಡ್ ಆಫ್ ದಿ ರಿಂಗ್ಸ್; ಫೆಲೊಶಿಪ್ ಆಫ್‌ ದಿ ಕಿಂಗ್' ಒಂದು ಉಂಗುರದ ಸುತ್ತ ಹೆಣೆದ ಕತೆ. ನ್ಯೂಜಿಲೆಂಡ್ ಹಾಗೂ ಅಮೆರಿಕದ ಹಾಲಿವುಡ್ ಜಂಟಿ ಪಾಲುದಾರಿಕೆಯಲ್ಲಿ ತಯಾರಾದ 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ಸರಣಿಯ ಮೊದಲ ಸಿನಿಮಾ 'ದಿ ಲಾರ್ಡ್ ಆಫ್ ದಿ ರಿಂಗ್ಸ್; ಫೆಲೊಶಿಪ್ ಆಫ್‌ ದಿ ಕಿಂಗ್' ಸಿನಿಮಾ. ಈ ಸಿನಿಮಾಕ್ಕೆ ನಾಲ್ಕು ಆಸ್ಪರ್ ಪ್ರಶಸ್ತಿಗಳು ಸಂದಿವೆ.

    ಟಾಪ್ ಒಂಬತ್ತನೇ ಸಿನಿಮಾ

    ಟಾಪ್ ಒಂಬತ್ತನೇ ಸಿನಿಮಾ

    1966 ರಲ್ಲಿ ಬಿಡುಗಡೆ ಆದ 'ದಿ ಗುಡ್ ದಿ ಬ್ಯಾಡ್ ಆಂಡ್ ದಿ ಅಗ್ಲಿ' ಹಲವು ಆಯಾಮಗಳಿಂದ ಸುಂದರ ಸಿನಿಮಾ. ಈ ಸಿನಿಮಾದ ಹೆಸರು ಕೇಳದವರೂ ಸಹ ಥೀಮ್ ಮ್ಯೂಸಿಕ್ ಅಂತೂ ಕೇಳಿಯೇ ಇರುತ್ತಾರೆ. ಅತ್ಯುತ್ತಮ ಹಿನ್ನೆಲೆ ಸಂಗೀತ, ಡೈಲಾಗ್‌ಗಳನ್ನು ಹೊಂದಿರುವ ಈ ಸಿನಿಮಾ, ಮೂವರು ವ್ಯಕ್ತಿಗಳು ಚಿನ್ನದ ನಿಧಿಯ ಹಿಂದೆ ಬಿದ್ದು ಕೊನೆಗೆ ಆ ನಿಧಿ ಯಾರ ಪಾಲಾಗುತ್ತದೆ ಎಂಬ ಕತೆಯನ್ನು ಹೊಂದಿದೆ.

    ಎಂಟನೇ ಸ್ಥಾನದಲ್ಲಿರುವ ಸಿನಿಮಾ

    ಎಂಟನೇ ಸ್ಥಾನದಲ್ಲಿರುವ ಸಿನಿಮಾ

    1994 ರಲ್ಲಿ ಬಿಡುಗಡೆ ಆದ 'ಪಲ್ಪ್ ಫಿಕ್ಷನ್' ಬಹಳ ಭಿನ್ನವಾದ ಸಿನಿಮಾ. ಇಬ್ಬರು ಕೊಲೆಗಾರರು. ಒಬ್ಬ ಬಾಕ್ಸರ್, ಇಬ್ಬರು ಕಳ್ಳರು, ಪೊಲೀಸ್ ಅಧಿಕಾರಿ ಸುತ್ತ ಸುತ್ತುವ ಕತೆಯನ್ನು ಹೊಂದಿರುವ ಈ ಸಿನಿಮಾ. ಹಾಲಿವುಡ್‌ ಕಲ್ಟ್ ಸಿನಿಮಾಗಳಲ್ಲಿ ಒಂದು.

    ಟಾಪ್ ಏಳನೇ ಸ್ಥಾನದಲ್ಲಿರುವ ಸಿನಿಮಾ

    ಟಾಪ್ ಏಳನೇ ಸ್ಥಾನದಲ್ಲಿರುವ ಸಿನಿಮಾ

    'ದಿ ಲಾರ್ಡ್ ಆಫ್‌ ದಿ ರಿಂಗ್ಸ್' ಸರಣಿಯ ಕೊನೆಯ ಸಿನಿಮಾ 'ದಿ ಲಾರ್ಡ್ ಆಫ್‌ ದಿ ರಿಂಗ್ಸ್: ರಿಟರ್ನ್ ಆಫ್ ದಿ ಕಿಂಗ್' ಐಎಂಡಿಬಿಯ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಈ ಸಿನಿಮಾಕ್ಕೆ ಸಹ ನಾಲ್ಕು ಆಸ್ಕರ್ ಪ್ರಶಸ್ತಿಗಳು ದೊರೆತಿವೆ.

    ಟಾಪ್ ಆರನೇ ಸಿನಿಮಾ

    ಟಾಪ್ ಆರನೇ ಸಿನಿಮಾ

    ಜರ್ಮನಿಯಲ್ಲಿ ನಡೆದ ಜೂಯಿಷ್ ಜನರ ನರಮೇಧ ಅವರೊಟ್ಟಿಗೆ ಆದ ಅನ್ಯಾಯಗಳನ್ನು ದಾಖಲಿಸುವ ಸಿನಿಮಾ 'ಶಿಂಡ್ಲರ್ಸ್ ಲಿಸ್ಟ್' ಸಿನಿಮಾ ಆರನೇ ಸಿನಿಮಾ. ಶಿಂಡ್ಲರ್ಸ್ ಎಂಬ ವ್ಯಾಪಾರಿ ತನ್ನ ಕಾರ್ಖಾನೆಯಲ್ಲಿ ಜೂ ಜನಗಳಿಗೆ ಕೆಲಸಕೊಟ್ಟು ನಾಜಿಗಳಿಂದ ಬಚಾವ್ ಮಾಡುತ್ತಾನೆ. ಸಿನಿಮಾವನ್ನು ಅತ್ಯುತ್ತಮ ನಿರ್ದೇಶಕ ಸ್ಟೀಫನ್ ಸ್ಪೀಲ್‌ಬರ್ಗ್ ನಿರ್ದೇಶನ ಮಾಡಿದ್ದಾರೆ.

    ಟಾಪ್ ಐದನೇ ಸಿನಿಮಾ

    ಟಾಪ್ ಐದನೇ ಸಿನಿಮಾ

    1957 ರಲ್ಲಿ ಬಿಡುಗಡೆ ಆದ '12 ಆಂಗ್ರಿ ಮೆನ್' ಸಿನಿಮಾ ಐದನೇ ಸ್ಥಾನದಲ್ಲಿದೆ. ಕೇವಲ ಒಂದು ಸಣ್ಣ ಕೊಠಡಿಯಲ್ಲಿ 12 ಜನರ ಮಧ್ಯೆ ನಡೆಯುವ ಸಂಭಾಷಣೆಯೇ '12 ಆಂಗ್ರಿ ಮೆನ್' ಸಿನಿಮಾ. ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗಿರುವ ಯುವಕನ ಪ್ರಕರಣವೊಂದರ ಬಗ್ಗೆ ಚರ್ಚಿಸಿ ಶಿಕ್ಷೆಯನ್ನು ಖಾಯಂಗೊಳಿಸುವ ಅಥವಾ ರದ್ದು ಮಾಡಲು ಆ 12 ಜನರನ್ನು ಒಂದು ಕೊಠಡಿಯಲ್ಲಿ ಸೇರಿಸಲಾಗಿರುತ್ತದೆ. ಸಿನಿಮಾವು ಅತ್ಯುತ್ತಮವಾಗಿದ್ದು ಇದು ಕನ್ನಡದಲ್ಲಿ 'ದಶಮುಖ' ಹೆಸರಲ್ಲಿ ಇತ್ತೀಚೆಗೆ ರೀಮೇಕ್ ಆಗಿದೆ.

    ನಾಲ್ಕನೇ ಅತ್ಯುತ್ತಮ ಸಿನಿಮಾ

    ನಾಲ್ಕನೇ ಅತ್ಯುತ್ತಮ ಸಿನಿಮಾ

    2008 ರಲ್ಲಿ ಬಿಡುಗಡೆ ಆದ 'ದಿ ಡಾರ್ಕ್ ನೈಟ್' ಹಲವು ಕಾರಣಗಳಿಗೆ ಅತ್ಯುತ್ತಮ ಸಿನಿಮಾ. ಮನುಷ್ಯನ ಎರಡು ಮುಖಗಳನ್ನು ಎರಡು ಪಾತ್ರಗಳಾಗಿ ವಿಂಗಡಿಸಿ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅದ್ಭುತವಾಗಿ ಸಿನಿಮಾ ಕಟ್ಟಿದ್ದಾರೆ. ಸಿನಿಮಾದಲ್ಲಿನ ಜೋಕರ್ ಪಾತ್ರ ಸಾರ್ವಕಾಲಿಕ ಶ್ರೇಷ್ಟ ವಿಲನ್‌ ಪಾತ್ರಗಳಿಗೆ ಸೇರಿಹೋಗಿದೆ. ಜೋಕರ್‌ನ ಸಂಭಾಷಣೆಗಳು ಈಗಲೂ ವೈರಲ್ ಮೀಮ್‌ಗಳು.

    ಮೂರನೇ ಅತ್ಯುತ್ತಮ ಸಿನಿಮಾ

    ಮೂರನೇ ಅತ್ಯುತ್ತಮ ಸಿನಿಮಾ

    1974 ರಲ್ಲಿ ಬಿಡುಗಡೆ ಆದ 'ದಿ ಗಾಡ್‌ ಫಾದರ್ 2' ಸಿನಿಮಾ ಮೂರನೇ ಅತ್ಯುತ್ತಮ ಸಿನಿಮಾ ಆಗಿ ಪಟ್ಟಿಯಲ್ಲಿದೆ. ಮಾರಿಯೊ ಪುಜೊನ 'ದಿ ಗಾಡ್ ಫಾದರ್' ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದ್ದು, 'ದಿ ಗಾಡ್ ಫಾದರ್'ಸಿನಿಮಾದ ಮುಂದುವರೆದ ಭಾಗ. ಡಾನ್ ವಿಟೊ ಕಾರ್ಲಿಯೊ ಮರಣದ ಬಳಿಕ ನಡೆದ ಕೊಲೆಗಳು ಆ ನಂತರ ಕಾರ್ಲಿಯೋ ಪುತ್ರ ಮೈಕೆಲ್ ಮತ್ತೆ ಡಾನ್ ಆಗುವುದರ ಕತೆಯನ್ನು ಸಿನಿಮಾ ಹೊಂದಿದೆ.

    ಎರಡನೇ ಅತ್ಯುತ್ತಮ ಸಿನಿಮಾ

    ಎರಡನೇ ಅತ್ಯುತ್ತಮ ಸಿನಿಮಾ

    1972 ರಲ್ಲಿ ಬಿಡುಗಡೆ ಆದ 'ದಿ ಗಾಡ್ ಫಾದರ್' ಸಿನಿಮಾ ವಿಶ್ವದ ಎರಡನೇ ಅತ್ಯುತ್ತಮ ಸಿನಿಮಾ. ಫ್ರಾನ್ಸಿಸ್ ಫೋರ್ಡ್ ಕೊಪ್ಪಾಲೊ ನಿರ್ದೇಶಿಸಿರುವ ಈ ಸಿನಿಮಾ ಹಲವು ಸಿನಿಮಾ ನಿರ್ದೇಶಕರಿಗೆ ಪ್ರೇರಣೆ ನೀಡಿದ ಸಿನಿಮಾ. ಅತ್ಯುತ್ತಮ ಸಂಭಾಷಣೆ, ನೆರಳು-ಬೆಳಕು ಸಂಯೋಜನೆ, ಚಿತ್ರಕತೆ ಹೊಂದಿರುವ ಈ ಸಿನಿಮಾದ ಡಾನ್ ವಿಟೊ ಕಾರ್ಲಿಯೊ ಪಾತ್ರ ಸಾರ್ವಕಾಲಿಕ ಶ್ರೇಷ್ಟ ಪಾತ್ರಗಳಲ್ಲಿ ಒಂದು.

    Recommended Video

    ನ್ಯೂಸ್ ಚಾನೆಲ್ ಗಳು ಈ ರೀತಿ ಮಾಡುವುದನ್ನು ಮೊದಲು ನಿಲ್ಲಿಸಬೇಕು | Filmibeat Kannada
    ವಿಶ್ವದ ಅತ್ಯುತ್ತಮ ಸಿನಿಮಾ

    ವಿಶ್ವದ ಅತ್ಯುತ್ತಮ ಸಿನಿಮಾ

    1994 ರಲ್ಲಿ ಬಿಡುಗಡೆ ಆದ 'ದಿ ಶಾಷಾಂಕ್ ರಿಡಂಪ್ಷನ್' ಐಎಂಡಿಬಿ ಪ್ರಕಾರ ವಿಶ್ವದ ಅತ್ಯುತ್ತಮ ಸಿನಿಮಾ. ಪತ್ನಿ ಮತ್ತು ಗೆಳತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಶಾಷಾಂಕ್‌ನ ಜೈಲಿಗೆ ಬರುವ ಬ್ಯಾಂಕರ್ ಒಬ್ಬ 19 ವರ್ಷಗಳ ಬಳಿಕ ಜೈಲಿನಿಂದ ಪರಾರಿಯಾಗುವ ಆ ನಡುವೆ ಜೈಲಿನಲ್ಲಿ ಆತ ಮಾಡುವ ಬದಲಾವಣೆ ಕಾರ್ಯಗಳು ಸಿನಿಮಾದ ಕತೆ. ಸಿನಿಮಾದ ಕೆಲವು ದೃಶ್ಯಗಳು ಸಂಭಾಷಣೆಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿವೆ. ಸಿನಿಮಾವನ್ನು ಫ್ರಾಂಕ್ ಡಾರಾಬೊಂಟ್ ನಿರ್ದೇಶನ ಮಾಡಿದ್ದಾರೆ.

    English summary
    Here is the list of worlds top ten best rated movie according to IMDb. the shawshank redemption is in top place.
    Wednesday, May 19, 2021, 9:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X