For Quick Alerts
  ALLOW NOTIFICATIONS  
  For Daily Alerts

  ಈ ವರ್ಷ IMBD ರೇಟಿಂಗ್‌ನಲ್ಲಿ ಯಾವ ವೆಬ್ ಸಿರೀಸ್‌ಗೆ ಮೊದಲ ಸ್ಥಾನ?

  |

  ಧಾರಾವಾಹಿ ಮತ್ತು ಸಿನಿಮಾಗಳ ಜೊತೆ ಜೊತೆಯಲ್ಲಿ ವೆಬ್ ಸಿರೀಸ್‌ಗಳ ಪ್ರಭಾವವೂ ಹೆಚ್ಚಾಗಿದೆ. ಆನ್‌ಲೈನ್ ವೇದಿಕೆಗಳಲ್ಲಿ ವೆಬ್ ಸಿರೀಸ್‌ಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಹಾಗಾಗಿ, 2020ನೇ ವರ್ಷದಲ್ಲಿ ಪ್ರದರ್ಶನ ಕಂಡ ವೆಬ್ ಸಿರೀಸ್‌ಗಳ ಪೈಕಿ ಯಾವ ಚಿತ್ರಕ್ಕೆ ಹೆಚ್ಚು ಜನ ಮನ್ನಣೆ ಸಿಕ್ಕಿರಬಹುದು ಎಂಬ ಕುತೂಹಲ ಸಹಜ.

  ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವೆಬ್ ಸಿರೀಸ್ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ಗೂಗಲ್ ಇಂಡಿಯಾ ಪ್ರಕಟ ಮಾಡಿರುವ ಪ್ರಕಾರ ಮೊದಲ ಸ್ಥಾನ Money Heist ವೆಬ್ ಸಿರೀಸ್ ಪಡೆದುಕೊಂಡಿದೆ. ಇದೀಗ, ಭಾರತೀಯ ಚಿತ್ರಗಳನ್ನು ರೇಟಿಂಗ್ ಮಾಡುವ ಖ್ಯಾತ ಸಂಸ್ಥೆ ಐಎಂಡಿಬಿ ಈ ವರ್ಷದ ಟಾಪ್ ವೆಬ್ ಸಿರೀಸ್ ಯಾವುದು ಎಂದು ಘೋಷಿಸಿದೆ. ಈ ವರ್ಷ ಐಎಂಡಿಬಿಯಲ್ಲಿ ಹೆಚ್ಚು ರೇಟಿಂಗ್ ಪಡೆದಿರುವ ವೆಬ್ ಸಿರೀಸ್ ಯಾವುದು? ಮುಂದೆ ಓದಿ....

  1 ಸ್ಕ್ಯಾಮ್ 1992: ಹರ್ಷದ್ ಮೆಹ್ತಾ ಸ್ಟೋರಿ

  1 ಸ್ಕ್ಯಾಮ್ 1992: ಹರ್ಷದ್ ಮೆಹ್ತಾ ಸ್ಟೋರಿ

  ಹನ್ಸಲ್ ಮೆಹ್ತಾ, ಜೈ ಮೆಹ್ತಾ ನಿರ್ದೇಶನದ 'ಸ್ಕ್ಯಾಮ್ 1992: ಹರ್ಷದ್ ಮೆಹ್ತಾ ಸ್ಟೋರಿ' ಈ ವರ್ಷದ ಐಎಂಡಿಬಿಯ ಟಾಪ್ ವೆಬ್ ಸಿರೀಸ್ ಎನಿಸಿಕೊಂಡಿದೆ. 1992 ಷೇರು ಮಾರುಕಟ್ಟೆ ಭ್ರಷ್ಟಾಚಾರ ಹಾಗೂ ಅದರ ಹಿಂದಿದ್ದ ಹರ್ಷದ್ ಮೆಹ್ತಾ ಕತೆಯನ್ನು ಅತ್ಯಂತ ಸುಂದರವಾಗಿ ವೆಬ್ ಸರಣಿ ಮಾಡಿದ್ದಾರೆ ನಿರ್ದೇಶಕರು.

  2020: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವೆಬ್ ಸೀರಿಸ್ ಯಾವುದು?

  2 ಪಂಚಾಯತ್

  2 ಪಂಚಾಯತ್

  ಐಎಂಡಿಬಿ ಟಾಪ್ ವೆಬ್ ಸಿರೀಸ್ ಪಟ್ಟಿಯಲ್ಲಿ ಪಂಚಾಯತ್ ಎರಡನೇ ಸ್ಥಾನ ಪಡೆದಿದೆ. ಇಂಜಿನಿಯರ್ ಪದವಿಧರನೊಬ್ಬ ಕುಗ್ರಾಮದಲ್ಲಿ ಪಂಚಾಯತಿ ಕಾರ್ಯದರ್ಶಿ ಆಯ್ಕೆಯಾಗುತ್ತಾನೆ. ಆತನ ಜೀವನದಲ್ಲಿ ನಡೆಯುವ ಹಾಸ್ಯಮಯ ಕಥಾಹಂದರ ಈ ಚಿತ್ರ ಒಳಗೊಂಡಿದೆ.

  3 SPECIAL OPS

  3 SPECIAL OPS

  ನೀರಜ್ ಪಾಂಡೆ, ಶಿವಮ್ ನಾಯರ್ ನಿರ್ದೇಶನದ SPECIAL OPS ಭಾರತದ ಇಂಟೆಲಿಜೆನ್ಸ್ ಸಂಸ್ಥೆ, ರಾ ಏಜೆಂಟ್‌ಗಳ ಕುರಿತು ತಯರಾಗಿರುವ ಚಿತ್ರ. ರಾ ಏಜೆಂಟ್‌ಗಳು ವಿಶೇಷ ಆಪರೇಷನ್‌ಗಳನ್ನು ಮಾಡಿ ದೇಶವನ್ನು ಅಪಾಯಗಳಿಂದ ಕಾಪಾಡುವ ಕತೆ ಹೊಂದಿರುವ ಈ ಸಿನಿಮಾ ಐಎಂಡಿಬಿ ರೇಟಿಂಗ್‌ನಲ್ಲಿ ಮೂರನೇ ಸ್ಥಾನ ಪಡೆದಿದೆ.

  2020; ಕೊರೊನಾ ವರ್ಷದಲ್ಲೂ ಗಮನ ಸೆಳೆದ ಕನ್ನಡದ ಸಿನಿಮಾಗಳಿವು

  4 BANDISH BANDITS

  4 BANDISH BANDITS

  ಆನಂದ್ ತಿವಾರಿ ನಿರ್ದೇಶನದ BANDISH BANDITS ವೆಬ್ ಸರಣಿ ಐಎಂಡಿಬಿ ರೇಟಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ರೊಮಾನ್ಸ್, ಲವ್, ಭಾವನಾತ್ಮಕ ಅಂಶಗಳನ್ನು ಪ್ರಧಾನ ಒಳಗೊಂಡಿರುವ ವೆಬ್ ಸರಣಿ ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗಿತ್ತು. ಈ ವೆಬ್ ಸರಣಿ ಇದೇ ವರ್ಷದ ಆಗಸ್ಟ್‌ನಿಂದ ಆರಂಭವಾಗಿದೆ.

  5 ಮಿರ್ಜಾಪುರ್ 2

  5 ಮಿರ್ಜಾಪುರ್ 2

  ಮಿರ್ಜಾಪುರ್ ವೆಬ್ ಸರಣಿಯ ಮುಂದುವರೆದ ಭಾಗ ಮಿರ್ಜಾಪುರ್ 2 ಈ ವರ್ಷ ಹೆಚ್ಚು ಸದ್ದು ಮಾಡಿದೆ. ಪಂಕಜ್ ತಿಪಾಠಿ ಹಾಗೂ ಹಲವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಐಎಂಡಿಬಿ ರೇಟಿಂಗ್‌ನಲ್ಲಿ ಐದನೇ ಸ್ಥಾನ ಪಡೆದಿದೆ. ಮಿರ್ಜಾಪುರದ ರಕ್ತ-ಸಿಕ್ತ ರಾಜಕೀಯದ ಮುಂದುವರೆದ ಭಾಗವಾಗಿದ್ದು, ಹೆಚ್ಚು ಚರ್ಚೆಯಲ್ಲಿತ್ತು.

  ಈ ವರ್ಷ ಟ್ವಿಟ್ಟರ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳು, ಯಾವುದು ಟಾಪ್?

  ಹತ್ತನೇ ಸ್ಥಾನದಲ್ಲಿ ಯಾವುದಿದೆ?

  ಹತ್ತನೇ ಸ್ಥಾನದಲ್ಲಿ ಯಾವುದಿದೆ?

  6 ಅಸುರ್: ವೆಲ್ ಕಮ್ ಟು ಯುವರ್ ಡಾರ್ಕ್ ಸೈಡ್

  7 ಪಾತಳ್ ಲೋಕ್

  8 ಹೈ

  9 ಅಭಯ್ 2

  10 ಆರ್ಯ

  English summary
  Year Ender 2020: Top 10 Indian Web Series of 2020 list with 9.2 rating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X