For Quick Alerts
  ALLOW NOTIFICATIONS  
  For Daily Alerts

  ಶ್ರೀನಗರ ಕಿಟ್ಟಿಗೆ ಅಂಬಿ ಅರ್ಧಚಂದ್ರ ಪ್ರಯೋಗ ನಿಜವೆ?

  By Rajendra
  |

  ರೆಬಲ್ ಸ್ಟಾರ್ ಅಂಬರೀಷ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ನಟ ಶ್ರೀನಗರ ಕಿಟ್ಟಿ ಸಿಕ್ಕಾಪಟ್ಟೆ ಟೈಟಾಗಿದ್ದರಂತೆ. ಕಂಠಪೂರ್ತಿ ಕುಡಿದು ಅನುಚಿತವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಕಿಟ್ಟಿಗೆ ಅಂಬಿ ಅರ್ಧಚಂದ್ರ ಪ್ರಯೋಗ ಮಾಡಿದರು ಎಂಬ ಸುದ್ದಿ ಇದೆ. ಆದರೆ ಇದನ್ನು ಸಾರಾಸಗಟಾಗಿ ಶ್ರೀನಗರ ಕಿಟ್ಟಿ ತಳ್ಳಿ ಹಾಕಿದ್ದಾರೆ.

  "ನಾನು ಬರ್ತ್ ಡೇ ಪಾರ್ಟಿಗೇ ಹೋಗಿಲ್ಲ. ಇನ್ನು ತಳ್ಳುವುದು ಎಲ್ಲಿಂದ ಬಂತು. ಅಂಬಿಯೊಂದಿಗೆ ನನಗೆ ಒಳ್ಳೆಯ ಸಂಬಂಧವಿದೆ. ಅಂಬರೀಷ್ ಆ ರೀತಿ ನಡೆದುಕೊಳ್ಳುವವರು ಅಲ್ಲ. ನನ್ನನ್ನು ಹೊರಗೆ ತಳ್ಳಿದರು ಎಂದು ಕೆಲವು ಮಾಧ್ಯಮಗಳಲ್ಲಿ ಬಂದ ಸುದ್ದಿ ಸತ್ಯಕ್ಕೆ ದೂರವಾದುದು" ಎಂದಿದ್ದಾರೆ ಶ್ರೀನಗರ ಕಿಟ್ಟಿ. [ದಟ್ಸ್ ಕನ್ನಡ ಕಟ್ಟೆಯ ಮೇಲೆ ಕಿಟ್ಟಿ ಸಂದರ್ಶನ]

  ಅಂಬಿ ಬರ್ತ್ ಡೇ ಪಾರ್ಟಿಯಲ್ಲಿ ಗುಂಡು ಜಾಸ್ತಿಯಾದ ಕಾರಣ, ಹಿರಿಯ ಕಲಾವಿದರ ಬಗ್ಗೆ ಮನಬಂದಂತೆ ಮಾತನಾಡಿದ್ದಾರೆ. ಎಷ್ಟು ಬಾರಿ ಎಚ್ಚರಿಸಿದರೂ ಕಿಟ್ಟಿ ಮಾತುಗಳಿಗೆ ಲಗಾಮು ಹಾಕಲು ಸಾಧ್ಯವಾಗಿಲ್ಲ. ಬೇಸತ್ತ ಅಂಬಿ ಅವರನ್ನು ಕತ್ತುಹಿಡಿದು ತಳ್ಳಿದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

  ಇದನ್ನು ಅಲ್ಲಗಳೆದಿರುವ ಕಿಟ್ಟಿ, ಅಂಬರೀಷ್ ಬರ್ತ್ ಡೇ ಪಾರ್ಟಿಗೆ ನಾನು ಹೋಗೆ ಇಲ್ಲ. ನಮ್ಮಿಬ್ಬರ ಸಂಬಂಧಕ್ಕೆ ಕಲ್ಲು ಹಾಕುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ. ಅಂಬರೀಷ್ ಅವರು ಅಜಾತಶತ್ರು ಇದ್ದಂತೆ. ನನ್ನನ್ನು ಮನೆಯಿಂದ ಹೊರತಳ್ಳಿದರು ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ. (ಏಜೆನ್ಸೀಸ್)

  English summary
  Actor Srinagar Kitty has denied being kicked out of Rebel star Ambareesh's birthday party after he showed indecent behaviour stating that those reports are false. He says that he shares good relationship with Ambi, but he was not present at the party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X