ಸೈಫ್ ಆಲಿ ಖಾನ್ ಭಾವಿ ಪತ್ನಿ ಕರೀನಾ ಗರ್ಭಿಣಿ
ಬಾಲಿವುಡ್‌ನ ಅತ್ಯಂತ ಸೆಕ್ಸಿ ತಾರೆ ಎಂದೇ ಖ್ಯಾತಳಾಗಿರುವ ಕರೀನಾ ಕಪೂರ್ ಮದುವೆ ಫೆಬ್ರವರಿ 10ರಂದು ಸೈಫ್ ಆಲಿ ಖಾನ್ ಜೊತೆ ನೆರವೇರಲಿದೆ. ಆದರೆ ಇದಕ್ಕೂ ಮುನ್ನ ಮತ್ತೊಂದು ಸ್ಫೋಟಕ ಸುದ್ದಿ ಬಾಲಿವುಡ್‌ನಲ್ಲಿ ಬ್ಲಾಸ್ಟ್ ಆಗಿದೆ. ಅದೇನೆಂದರೆ ಕರೀನಾ ಈಗ ಗರ್ಭಿಣಿ ಎಂಬುದು.
ಇತ್ತೀಚೆಗೆ ಆಕೆ ಏರ್‌ಪೋರ್ಟ್‌ನಲ್ಲಿ ದೊಗಲು ದೊಗಲಾದ ಆಲಿವ್‌ಗ್ರೀನ್ ಟಿ-ಶರ್ಟ್‌ನಲ್ಲಿ ಕಾಣಿಸಿಕೊಂಡಿರುವುದೇ ಈ ಅನುಮಾನಕ್ಕೆ ಕಾರಣ. ಸಾಮಾನ್ಯವಾಗಿ ಟೈಟ್ ಜೀನ್ಸ್, ಟಿ-ಶರ್ಟ್ ಹಾಕುವ ಕರೀನಾ, ಮೊನ್ನೆ ಸಡಿಲ ಟಿ-ಶರ್ಟ್ ಹಾಕಿಕೊಂಡಿದ್ದರು. ಹೊಟ್ಟೆ ಭಾಗವನ್ನು ಶಾಲುವಿನಲ್ಲಿ ಮುಚ್ಚಿಕೊಂಡಿದ್ದರು. ನಡಿಗೆಯೂ ನಿಧಾನಗತಿಯಲ್ಲಿತ್ತು. ಇದಿಷ್ಟೇ ಅಲ್ಲದೆ, ಆಕೆಯ ಹೊಟ್ಟೆಯ ಭಾಗ ಸ್ವಲ್ಪ ಮುಂದಕ್ಕೆ ಬಂದಿತ್ತು.
ಇವೆಲ್ಲವನ್ನೂ ನೋಡಿದವರು ಆಕೆ ಗರ್ಭಿಣಿ ಇರಬೇಕು ಎಂದು ಡಿಸೈಡ್ ಮಾಡಿ ಸುದ್ದಿ ಹಬ್ಬಿಸಿದ್ದಾರೆ. ಆದರೆ ಸುದ್ದಿಯ ಸತ್ಯಾಸತ್ಯತೆ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಅಂದಹಾಗೆ ಈ ಚಿತ್ರ ನೋಡಿದರೆ ನಿಮಗೂ ಈಕೆ ಗರ್ಭಿಣಿ ಎಂಬ ಡೌಟು ಬಾರದೆ ಇರದು!? (ಏಜೆನ್ಸೀಸ್)


Click it and Unblock the Notifications











