»   » ರಾಣಾ ಬಿಪ್ಸ್ ಇನ್ನೇನು ಶುರು ಹಚ್ಕೋಬೇಕು, ತ್ರಿಷಾ ಪ್ರತ್ಯಕ್ಷ

ರಾಣಾ ಬಿಪ್ಸ್ ಇನ್ನೇನು ಶುರು ಹಚ್ಕೋಬೇಕು, ತ್ರಿಷಾ ಪ್ರತ್ಯಕ್ಷ

Posted By:
Subscribe to Filmibeat Kannada

ಪ್ಯಾರೀಸ್ ಹಿಲ್ಟನ್ ಪಾರ್ಟಿಯಲ್ಲಿ ಖುಲ್ಲಂಖುಲ್ಲ ಲವ್ ಮಾಡು ಒಮ್ಮೆ ನನ್ನನ್ನಾ.. ಐಯಾಮ್ ರೆಡಿ ಎಂದು ಬಿಪ್ಸ್ ರಾಗ ಹಾಡಿ ತೆಲುಗು ನಟ ರಾಣಾ ದಗ್ಗುಬಾತಿ ಜೊತೆ ಕುಣಿದಿದ್ದಳು.

ನಂತರ ಈ 'ಧಮ್ ಮಾರೋ ಧಮ್' ಜೋಡಿ ಲೇಟ್ ನೈಟ್ ಪಾರ್ಟಿಗಳಲ್ಲಿ ಚಕ್ಕಂದವಾಡೋದು ಕಾಮನ್ ಆಗಿತ್ತು. ಜಾನ್ ಕೂಡಾ ಪ್ರಿಯಾ ಎಂಬ ಹೊಸ ಹುಡುಗಿಯ ಕೈ ಹಿಡಿಯುವ ಮಾತುಗಳು ಕೇಳಿ ಬಂದಾಗ ಬಿಪ್ಸ್ ಕೂಡ ರಾಣಾ ಜೊತೆ ಹೆಚ್ಚಿಗೆ ಕಾಣಿಸಿಕೊಂಡು ತನ್ನ ಉರಿ ತಣಿಸಿಕೊಂಡಿದ್ದಳು

ಆದರೆ, ಇತ್ತೀಚೆಗೆ ನಡೆದಿದ್ದೇ ಬೇರೆ. ಗೋವಾದಲ್ಲಿ ರಜೆಯ ಮೋಜು ಮಸ್ತಿಯಲ್ಲಿ ತೊಡಗಿದ್ದ ಈ ಜೋಡಿ ಇನ್ನೇನು ಪ್ರಣಯ ಶುರು ಹಚ್ಚಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೊಂದು ಕ್ಯಾರೆಕ್ಟರ್ ಎಂಟ್ರಿ ಕೊಟ್ಟಿದೆ.

ಪತ್ರಕರ್ತರ ಕೆಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುವ ಕಲೆ ಕಲಿತ ಕಪ್ಪು ಸುಂದರಿ ಬಿಪ್ಸ್ ಗಿಂತಲೂ ರಾಣಾ ಚಾಲಾಕಿ ಎಂಬುದು ಸಾಬೀತಾಗಿದೆ. ಬಿಪ್ಸ್ ಕಡೆಗಾಣಿಸಿದ ರಾಣಾ ದಕ್ಷಿಣ ಭಾರತದ ಅನಭಿಷಕ್ತ ರಾಣಿ ತ್ರಿಷಾ ಹಿಂದೆ ಮುಂದೆ ಸುತ್ತುತ್ತಿದ್ದನಂತೆ.

ಇಷ್ಟಕ್ಕೂ ತ್ರಿಷಾ ಗೋವಾಗೆ ಬಂದಿದ್ದು ಯಾಕೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ, ಈ ಘಟನೆಯಿಂದ ಬಿಪಾಶಾ ಸಹಜವಾಗಿಯೇ ಸಿಟ್ಟಾಗಿದ್ದು ಸುಳ್ಳಲ್ಲ.

ಜಾನ್ ಅಬ್ರಹಾಂ ಕೈ ಕೊಟ್ಟ ಮೇಲೆ ಸಿಕ್ಕಿದ್ದ ಎತ್ತರದ ಹುಡುಗ ರಾಣಾ ಮಾಡಿದ ಕೃತ್ಯದಿಂದ ಬೇಸರಗೊಂಡ ಬಿಪ್ಸ್, ಸಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ರಾಣಾನನ್ನು ಹಿಂಬಾಲಿಸುವುದನ್ನು ಬಿಟ್ಟಿದ್ದಾಳೆ. ಅದರೆ, ಸ್ನೇಹದ ಸಂಕೋಲೆ ಇನ್ನೂ ಕಳಚಿಕೊಂಡಿಲ್ಲ.

English summary
After a disastrous heart-break due to ex-boyfriend John Abraham. Bipasha says Rana Daggubati is good friend. But, Rana snubs and dumps Bipasha for new girl, a southern star Trisha during the holiday bash at Goa says report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada