»   »  ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ

ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ

Posted By:
Subscribe to Filmibeat Kannada
K.Mnaju to return the film award
2007-08ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಈ ಬಾರಿಯೂ ವಿವಾದಕ್ಕೆ ಗುರಿಯಾಗಿದೆ. ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ 'ಮಾತಾಡ್ ಮಾತಾಡು ಮಲ್ಲಿಗೆ' ನಿರ್ಮಾಪಕ ಕೆ.ಮಂಜುಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ತಮ್ಮ ನಿರ್ಮಾಣದ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರಕ್ಕೆ ಮೂರನೇ ಸ್ಥಾನ ದಕ್ಕಿಸಿಕೊಂಡಿರುವುದೇ ಅವರ ಅತೃಪ್ತಿಗೆ ಕಾರಣವಾಗಿದೆ. ಈ ಕಾರಣಕ್ಕೆ ಅವರು ಪ್ರಶಸ್ತಿಯನ್ನು ಒಲ್ಲೆ ಎಂದಿದ್ದಾರೆ. ಆ ದಿನಗಳು ಚಿತ್ರದ ಸಂಭಾಷಣೆಕಾರ ಅಗ್ನಿ ಶ್ರೀಧರ್ ಸಹ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಮಾತಾಡ್ ಮಾತಾಡು ಮಲ್ಲಿಗೆ ಚಿತ್ರಜಾಗತಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಚಿತ್ರವಾಗಿದ್ದು, 5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ್ದೇನೆ ಇಡೀ ರಾಜ್ಯದಲ್ಲೇ ಭಾರೀ ಬಜೆಟ್ ನ ಚಿತ್ರವಾಗಿತ್ತು. ಇಷ್ಟೆಲ್ಲಾ ಕಷ್ಟಪಟ್ಟು ಚಿತ್ರ ನಿರ್ಮಿಸಿದರೂ ತಮ್ಮ ಚಿತ್ರಕ್ಕೆ ಮೂರನೇ ಸ್ಥಾನ ನೀಡಲಾಗಿದೆ ಎಂದು ಮಂಜು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು. ಕೆಲ ವರ್ಗದ ಜನರಿಗಾಗಿ ಪ್ರಶಸ್ತಿಯನ್ನು ಮೀಸಲಿಡುವ ಲಾಬಿ ನಡೆದಿದೆ. ಕೊನೆಯ ಹಂತದವರೆಗೂ ಪ್ರಥಮ ಸ್ಥಾನದಲ್ಲಿದ್ದ ತಮ್ಮ ಚಿತ್ರವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಸಮಿತಿ ಸದಸ್ಯರು ವಂಚನೆ ಮಾಡಿದ್ದಾರೆ. ಜನರು ನೋಡದ ಸಿನಿಮಾಗಳಿಗೆ ಮಣೆ ಹಾಕುವ ಪ್ರವೃತ್ತಿ ನಿಲ್ಲಬೇಕು ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡ ಚಿತ್ರೋದ್ಯಮದಲ್ಲಿ ಉತ್ತಮ ವಿಮರ್ಶೆಗೆ ಪಾತ್ರವಾಗಿದ್ದ 'ಆ ದಿನಗಳು' ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ (ಅತ್ಯುತ್ತಮ ಸಂಭಾಷಣೆ, ಛಾಯಾಗ್ರಹಣ,ಕಂಠದಾನ). ಆ ದಿನಗಳು ಚಿತ್ರಕ್ಕೆ ಸಂಭಾಷಣೆ ಬರೆದ ಅಗ್ನಿ ಶ್ರೀಧರ್ ಅವರಿಗೆ ಈ ಪ್ರಶಸ್ತಿಗಳು ಸಮಾಧಾನ ತಂದಿಲ್ಲ. ನನ್ನನ್ನು ಸಂತೈಸುವ ಉದ್ದೇಶದಿಂದ ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿ ನೀಡಲಾಗಿದೆ. ಸಮಿತಿಯ ಸದಸ್ಯರು ವಶೀಲಿ ಬಾಜಿ ನಡೆಸಿ ಆಯ್ಕೆ ಪಟ್ಟಿ ತಯಾರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆ ದಿನಗಳು ಚಿತ್ರ ಕನ್ನಡ ಚಿತ್ರರಂಗದ ಏಕತಾನತೆಯನ್ನು ಮುರಿದಿದೆ. ಇಂತಹ ವಿಷಯಗಳ ಕಡೆ ಗಮನ ಹರಿಸದ ಸಮಿತಿಯ ಸದಸ್ಯರ ಅರ್ಹತೆಯಾದರೂ ಏನು ಎಂದು ಅಗ್ನಿ ಶ್ರೀಧರ್ ಪ್ರಶ್ನಿಸಿದ್ದಾರೆ. ಮೊದಲನೇ ಅತ್ಯ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿಕೊಂಡಿರುವ 'ಗುಲಾಬಿ ಟಾಕೀಸ್' ಹಾಗೂ ಎರಡನೇ ಅತ್ಯುತ್ತಮ ಪ್ರಶಸ್ತಿ ಪಡೆದಿರುವ 'ಮೊಗ್ಗಿನ ಜಡೆ' ಚಿತ್ರಗಳಿಗಿಂತಲೂ ತಮ್ಮ್ಮ ಚಿತ್ರ ಯಾವುದೇ ವಿಧದಲ್ಲೂ ಕಡಿಮೆ ಇರಲಿಲ್ಲ. ಆ ದಿನಗಳು ಚಿತ್ರಕ್ಕೆ ಸಲ್ಲಬೇಕಾದ ನೈಜ ಗೌರವ ಧಕ್ಕಿಲ್ಲ. ಆದ ಕಾರಣ ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗುಲಾಬಿ ಟಾಕೀಸ್ ಶ್ರೇಷ್ಠ ಚಿತ್ರ; ಪುನೀತ್ ಶ್ರೇಷ್ಠ ನಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada