twitter
    For Quick Alerts
    ALLOW NOTIFICATIONS  
    For Daily Alerts

    ಮನುವಾದಿ ಪ್ರಕಾಶ್ ಝಾ ಬಂಧಿಸಿ, ಆರಕ್ಷಣ್ ನಿಷೇಧಿಸಿ

    By Mahesh
    |

    ಶೋಷಿತವರ್ಗಗಳಿಗೆ ನೀಡಿರುವ ಮೀಸಲಾತಿ ಕುರಿತು ಅಪಹಾಸ್ಯ, ಅವಮಾನ ಮಾಡಿರುವ ಆರಕ್ಷಣ್ ಚಿತ್ರವನ್ನು ಈ ಕೂಡಲೇ ರಾಜ್ಯದಾದ್ಯ್ಂತ ನಿಷೇಧಿಸಬೇಕು. ಮನುವಾದಿಯಾದ ಚಿತ್ರ ನಿರ್ದೇಶಕ ಪ್ರಕಾಶ್ ಝಾರನ್ನು ತಕ್ಷಣವೇ ಬಂಧಿಸಿ ಶಿಕ್ಷಿಸಬೇಕು ಇಲ್ಲವೇ ಗಡಿಪಾರು ಮಾಡಬೇಕು ಎಂದು ಮಾದಿಗ ದಂಡೋರ ಸಂಘಟನೆಗಳು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದೆ.

    ದಲಿತ ವಿದ್ಯಾರ್ಥಿಗಳು ವಿದ್ಯೆ ಕಲಿಯುವುದರ ಬದಲು ಶೂ ಸ್ವಚ್ಚಗೊಳಿಸುವುದು ಮೇಲು ಎಂದು'ಆರಕ್ಷಣ್" ಚಿತ್ರದಲ್ಲಿ ಬಿಂಬಿಸಿರುವುದನ್ನು ಸಂಘಟನೆಯ ಅಧ್ಯಕ್ಷ ಪಾವಗಡ ಶ್ರೀರಾಮ್ ಖಂಡಿಸಿದ್ದಾರೆ.

    ಇಂಥ ಚಿತ್ರಗಳು ಸಮಾಜದ ಶಾಂತಿ ಕದಡುತ್ತದೆ. ಜನರು ವಿದ್ಯಾವಂತರಾದಂತೆ ಅಸ್ಪೃಶ್ಯತೆ ಕಡಿಮೆಯಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಎಲ್ಲರ ಭಾವನೆಗೆ ಧಕ್ಕೆ ತರುವಂತಹ ವಿಚಾರಗಳನ್ನು ಒಳಗೊಂಡ ಸಿನೆಮಾವನ್ನು ಎಲ್ಲ ನಾಗರಿಕರು ವಿರೋಧಿಸಬೇಕು ಎಂದು ಶ್ರೀರಾಮ್ ಆಗ್ರಹಿಸಿದ್ದಾರೆ.

    ರಾಜ್ಯದ ಚಿತ್ರಮಂದಿ ರಗಳಲ್ಲಿ ಆರಕ್ಷಣ್ ಚಿತ್ರ ಪ್ರದರ್ಶನ ರದ್ದು ಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ್ ತಿಳಿಸಿದ್ದಾರೆ.

    ಚಿತ್ರದಲ್ಲಿ ಮೀಸಲಾತಿ ಕುರಿತಂತೆ ಇರುವ ವಿವಾದಿತ ಸಂಭಾಷಣೆಯನ್ನು ತೆಗೆಯುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷೆ ಪಿ.ಎಲ್. ಪುನಿಯಾ, ಸೆನ್ಸಾರ್ ಮಂಡಳಿಗೆ ಸೂಚಿಸಿದ್ದರೂ ನಿರ್ಲಕ್ಷ ತೋರಲಾಗಿದೆ. ಇದು ಸಾಲದೆಂಬಂತೆ ಮೂರ್ನಾಲ್ಕು ರಾಜ್ಯಗಳಲ್ಲಿ ಚಿತ್ರಕ್ಕೆ ನಿಷೇಧ ಹೇರಿರುವುದರ ವಿರುದ್ಧ ಝಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

    English summary
    The Dalit activists of Madiga Dandora Tumkur staged a protest against the bollywood movie Aarakshan. They demanded that to impose ban on the movie in entire Karnataka and arrest director Prakash Jha.
    Saturday, August 13, 2011, 10:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X