»   » ಗಾಯಕಿ ಆಶಾ ಮನೆ ಕಬಳಿಸಿದ ನಟಿ ಸಾಧನಾ

ಗಾಯಕಿ ಆಶಾ ಮನೆ ಕಬಳಿಸಿದ ನಟಿ ಸಾಧನಾ

Posted By:
Subscribe to Filmibeat Kannada
Asha Bhosle Legal Complaint
ಖ್ಯಾತ ಗಾಯಕಿ ಆಶಾ ಭೋಂಸ್ಲೆ ಮನೆ ವಿವಾದ ಕಡೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗಾಯಕಿ ಆಶಾ ಭೋಂಸ್ಲೆ ಅವರು ಒಂದು ಕಾಲದ ಜನಪ್ರಿಯ ನಟಿ ಸಾಧನಾ ಮೇಲೆ ಮನೆ ಭಾಗ ಕಬಳಿಸಿದ ಆರೋಪ ಹೊರೆಸಿದ್ದಾರೆ.

ಆಶಾ ಅವರ ಬಂಗಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ವರ್ಷ ಬಾಡಿಗೆಯಲ್ಲಿರುವ ಸಾಧನಾ ಅವರು ಬಂಗಲೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಆಶಾ ಆರೋಪಿಸಿದ್ದಾರೆ.

ನನ್ನ ಖರ್ ಬಂಗಲೆಯ ಗಾರ್ಡನ್ ಹತ್ತಿರ ಹೋಗಲು ನನಗೆ ಬಿಡುತ್ತಿಲ್ಲ. ನಾನು ಕಾಯೋ ತನಕ ಕಾದೆ ಆದರೆ, ಈಗ ಕಾನೂನಿನ ಪ್ರಕಾರ ಬುದ್ಧಿ ಕಲಿಸಲು ಇಚ್ಛಿಸಿದ್ದೇನೆ ಎಂದು ಗಾಯಕಿ ಆಶಾ ಹೇಳಿದ್ದಾರೆ.

ಮೇರಾ ಸಾಯಾ, ವೋ ಕೌನ್ ಥಿ ಮತ್ತು ಹಮ್ ದೋನೋ ಮುಂತಾದ ಚಿತ್ರಗಳಲ್ಲಿ ಸಾಧನಾ ನಟಿಸಿದ್ದಾರೆ. ಆಗಿನ ಕಾಲಕ್ಕೆ ಸಾಧನಾ ಅವರ ಹೇರ್ ಸ್ಟೈಲ್ 'ಸಾಧನಾ ಕಟ್' ಸಕತ್ ಕ್ರೇಜ್ ಹುಟ್ಟಿಸಿತ್ತು. ಖರ್ ಬಂಗಲೆಯ ಹೂದೋಟದ ಭಾಗ ಪೂರ್ತಿ ಸಾಧನಾ ವಾಸಿಸುವ ಭಾಗಕ್ಕೆ ಸೇರುತ್ತದೆ.

2010ರ ಆಗಸ್ಟ್ ನಲ್ಲಿ ಯೂಸುಫ್ ಲಕ್ಡಾವಾಲಾ ಎಂಬ ಬಿಲ್ಡರ್ ಅವರು ಸಾಧನಾ ಅವರಿಗೆ ಬೆದರಿಕೆ ಕರೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಈಗ ಅನಗತ್ಯವಾಗಿ ವಿವಾದ ಎಬ್ಬಿಸಿ ಮನೆ ಬಿಡಿಸಲು ಆಶಾ ಅವರು ಮುಂದಾಗಿರುವುದು ಅಚ್ಚರಿ ತಂದಿದೆ ಎಂದು ಸಾಧನಾ ಹೇಳಿದ್ದಾರೆ.

English summary
Singer Asha Bhosle has recently lodged a written complaint against yesteryear star Sadhana alleging that the actress had encroached upon her Khar bunglow. Sadhana has been Bhosle's tenant for over 50 years.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X