For Quick Alerts
  ALLOW NOTIFICATIONS  
  For Daily Alerts

  ಸ್ವರ್ಣ ಕಮಲ ಪಡೆದ 'ಬ್ಯಾರಿ' ಚಿತ್ರ ಕೃತಿ ಚೌರ್ಯವೇ?

  By Rajendra
  |

  2011ನೇ ಸಾಲಿನಲ್ಲಿ ಸ್ವರ್ಣ ಕಮಲ ಪ್ರಶಸ್ತಿ ಪಡೆದಿರುವ 'ಬ್ಯಾರಿ' ಚಿತ್ರದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಚಿತ್ರ ಕೃತಿ ಚೌರ್ಯದ ಆರೋಪಕ್ಕೆ ಗುರಿಯಾಗಿದೆ. ಚಿತ್ರದ ನಿರ್ದೇಶಕರು ಈ ಬಗ್ಗೆ ಏನನ್ನೂ ಹೇಳದೆ ಇರುವುದು ಇನ್ನಷ್ಟು ಅನುಮಾನಗಳಿಗೂ ಕಾರಣವಾಗಿದೆ.

  ಸಾ.ರಾ.ಅಬೂಬಕ್ಕರ್ ಅವರ 'ಚಂದ್ರಗಿರಿಯ ತೀರದಲ್ಲಿ' ಕಾದಂಬರಿಯ ಕಥಾವಸ್ತುವೇ 'ಬ್ಯಾರಿ' ಚಿತ್ರ ಎನ್ನಲಾಗಿದೆ. ಚಿತ್ರದ ನಿರ್ದೇಶಕರು ಈ ಕೃತಿಯನ್ನು ಬಳಸಿಕೊಂಡೇ ಚಿತ್ರ ಮಾಡಿದ್ದು, ಇದಕ್ಕೆ ಸೂಕ್ತ ಉತ್ತರ ನೀಡಬೇಕೆಂದು ಹಲವರು ಆಗ್ರಹಿಸಿದ್ದಾರೆ. ಆದರೆ ಚಿತ್ರದ ನಿರ್ದೇಶಕ ಸುವೀರನ್ ಮಾತ್ರ ಇದುವರೆಗೂ ಈ ಬಗ್ಗೆ ಸ್ಪಷ್ಟೀಕರಣ ನೀಡಿಲ್ಲ.

  ಅಲ್ತಾಫ್ ಹುಸೈನ್ ಚೊಕ್ಕಬೆಟ್ಟು ನಿರ್ಮಿಸಿರುವ ಈ ಚಿತ್ರ ಕರಾವಳಿ ಕರ್ನಾಟಕದ 'ಬ್ಯಾರಿ' ಜನಾಂಗದ ಸಾಮಾಜಿಕ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲುತ್ತದೆ. ಇರ್ಫಾನ್ ಚೊಕ್ಕಬೆಟ್ಟು ಕಥೆ ಆಧಾರಿತ ಈ ಚಲನಚಿತ್ರದ ನಾಯಕ ನಟನಾಗಿಯೂ ಅಲ್ತಾಫ್ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ಮಲಯಾಳಂ ನಟ ಮಮ್ಮುಕೊಯಾ, ತಮಿಳು ನಟಿ ಮಲ್ಲಿಕಾ ನಟಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  A Golden Lotus award winning movie Byari caught in plagiarism row. It is said that, the movie is copied from renowned novelist Sara Abubakar's Chandragiriya Teeradalli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X