For Quick Alerts
  ALLOW NOTIFICATIONS  
  For Daily Alerts

  ನಟಿ ಮೀರಾ ಜೊತೆ ವೇಗಿ ಶೋಯೆಬ್ ಅಖ್ತರ್ ಲಫ್ಡಾ

  By Rajendra
  |

  ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್‌ನ ಲವ್ ಸೆಕ್ಸ್ ಧೋಖಾ ಪ್ರಸಂಗವಿದು. ಹಾಗಂತ ಆರೋಪಿಸುತ್ತಿರುವವರು ನಟಿ ಮೀರಾ. ಎರಡು ವರ್ಷ ತನ್ನೊಂದಿಗೆ ಕಣ್ಣಾಮುಚ್ಚಾಲೆ ಆಡಿದ್ದಾನೆ ಎಂದು ಪಾಕ್ ನಟಿ ಮೀರಾ ಆರೋಪಿಸಿದ್ದಾರೆ. ಈ ಮೂಲಕ ಶೋಯೆಬ್ ಮತ್ತೊಂದು ವಿವಾದಕ್ಕೆ ಸಿಲುಕಿದಂತಾಗಿದೆ.

  ನನ್ನ ಮತ್ತು ಶೋಯೆಬ್ ನಡುವೆ ಎರಡು ವರ್ಷಗಳಿಂದ ಸಂಬಂಧವಿತ್ತು. ನಮ್ಮಿಬ್ಬರ ಸಂಬಂಧ ತುಂಬ ಆತ್ಮೀಯವಾಗಿತ್ತು. ಆತನಿಗಾಗಿ ಒಂದು ವರ್ಷ ಕಾದು ಜೀವನ ಹಾಳು ಮಾಡಿಕೊಂಡೆ ಎಂದು ತಮ್ಮ ಅಳಲನ್ನು ಮೀರಾ ತೋಡಿಕೊಂಡಿದ್ದಾರೆ.

  ಎರಡು ವರ್ಷಗಳ ಹಿಂದೆ ನನಗೆ ಪ್ರೇಮ ನಿವೇದನೆ ಮಾಡಿದ್ದ. ಅಂದೇ ಆತ ನನ್ನ ಸೋದರ ಸಂಬಂಧಿ ಬಳಿಯೂ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಈ ವಿಷಯ ತಿಳಿದ ಬಳಿಕ ನಾನು ಆತನೊಂದಿಗೆ ಸಂಬಂಧ ಕಳೆದುಕೊಂಡೆ. ಇದೆಲ್ಲವನ್ನೂ ಆಕೆ ಸುದ್ದಿ ವಾಹಿನಿಯೊಂದಕ್ಕೆ ಹೇಳಿದ್ದಾರೆ.

  ಆದರೆ ಮೀರಾರ ಆರೋಪಗಳನ್ನು ಅಖ್ತರ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ನನ್ನಂತಹ ಜನಪ್ರಿಯ ಕ್ರಿಕೆಟಿಗನೊಬ್ಬ ಹುಡುಗಿಯರ ಕಡೆ ನಗೆ ಬೀರಿದರೂ ತಪ್ಪಾಗಿ ಭಾವಿಸುತ್ತಾರೆ. ನನ್ನನ್ನು ಪ್ರೇಮಿಸುತ್ತಿದ್ದಾನೆ ಎಂದೇ ತಿಳಿದುಕೊಳ್ಳುತ್ತಾರೆ. ಮೀರಾಗೂ ನನಗೂ ಯಾವುದೇ ಒಡನಾಟ ಇಲ್ಲವೇ ಇಲ್ಲ ಎಂದಿದ್ದಾನೆ ಅಖ್ತರ್. (ಏಜೆನ್ಸೀಸ್)

  English summary
  Pakistan's popular and well known actress Meera said that the affair took place two years back while Shoaib Akhtar was still playing for the national team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X