»   » ಜೋಗಯ್ಯ ಪ್ರೇಮ್, ಸುಮಿತ್ ಕೌರ್ ಅಫೇರ್ ನಿಜವೇ?

ಜೋಗಯ್ಯ ಪ್ರೇಮ್, ಸುಮಿತ್ ಕೌರ್ ಅಫೇರ್ ನಿಜವೇ?

Posted By:
Subscribe to Filmibeat Kannada
Director Prem
ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಪ್ರೇಮ್ ಹಾಗೂ ಜೋಗಯ್ಯ ಚಿತ್ರದ ನಾಯಕಿ ಸುಮಿತ್ ಕೌರ್ ನಡುವೆ ಅಫೇರ್ ಇದೆ. ಪ್ರೇಮ್ ದಾಂಪತ್ಯಜೀವನದಲ್ಲಿ ಬಿರುಕು ಮೂಡಿದೆ. ಪತ್ನಿ ರಕ್ಷಿತಾಗೆ ಡಿವೋರ್ಸ್ ನೀಡಲು ಪ್ರೇಮ್ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಸುನಾಮಿಯಂತೆ ಅಪ್ಪಳಿಸಿತ್ತು.

ಪ್ರೇಮ್ ಈ ಬಗ್ಗೆ ಪತ್ರಿಕೆಯೊಂದರ ಜತೆ ಮಾತನಾಡುತ್ತಾ, ಇನ್ನು ಮುಂದೆ ತೆರೆಯ ಮೇಲೆ ಕೂಡ ಡಿವೋರ್ಸ್, ಅಫೇರ್ ಇರುವ ದೃಶ್ಯಗಳನ್ನು ಸಂಯೋಜಿಸುವ ಗೊಡವೆಗೆ ಕೈಹಾಕಲ್ಲ ಎಂದಿದ್ದಾರೆ. ಈ ರೀತಿಯ ಅಂತೆಕಂತೆ ಸುದ್ದಿಗಳಿಗೆ ಅವರು ಬೇಸತ್ತು ಹೀಗೆ ಉತ್ತರಿಸಿದ್ದಾರೆ.

ಗಂಡ ಹೆಂಡಗಿ ಅವರ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಸಿನಿಮಾ ಮಾಡಿಕೊಡಿ ಎಂದು ಯಾರಾದರು ಕೇಳಿದರೆ, ಕೈಮುಗಿದು ಅವರನ್ನು ಸಾಗಹಾಕುತ್ತೇನೆ ಎಂದಿದ್ದಾರೆ. ಇದೆಲ್ಲಾ ಸರಿ ಪ್ರೇಮ್ ಹಾಗೂ ಉಪೇಂದ್ರ ಒಟ್ಟಿಗೆ ನಟಿಸಲಿರುವ ಚಿತ್ರದ ಕತೆ ಏನಾಯಿತು?

ಆ ಚಿತ್ರದಲ್ಲಿ ಪ್ರೇಮ್ ಅವರದು ಕಂಡೋರ ಹೆಂಡಿರ ಮೇಲೆ ಕಣ್ಣಾಕುವ ಪಾತ್ರವಂತೆ. ಕಂಡೋರ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿದರೆ ಪರಪ್ಪನ ಅಗ್ರಹಾರ ಗ್ಯಾರಂಟಿ. ಹಾಗಾಗಿ ಆ ಪಾತ್ರವನ್ನು ಒಲ್ಲೆ ಎಂದೆ. ತೆರೆಯ ಮೇಲೂ ಬೇಡ ರಿಯಲ್ ಲೈಫಲ್ಲೂ ಬೇಡಪ್ಪ ಎಂದಿದ್ದಾರೆ. ಒಟ್ಟಿನಲ್ಲಿ ಪ್ರೇಮ್ ತುಂಬ ಜಾಗ್ರತ್ತೆಯಲ್ಲಿದ್ದಾರೆ. (ಏಜೆನ್ಸೀಸ್)

English summary
A couple of days back, there were reports suggesting Jogayya director Prem and the actress Sumit Kaur Atwal's love affair, but the same have now been refuted by the actor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada